ಬಲಗೈಯ್ಯನ್ನೇ ಮಂಗಳಕರ ಕೆಲಸಕ್ಕೆ, ಊಟಕ್ಕೆ ಬಳಸೋದು ಏಕೆ?

By Suvarna NewsFirst Published Nov 15, 2022, 2:38 PM IST
Highlights

ನಮ್ಮ ಎರಡೂ ಕೈಗಳು ಒಂದೇ ರೀತಿ ಇರುತ್ತವೆ. ಆದರೂ ಮಂಗಳಕರ ಕೆಲಸಗಳಿಗೆ ಬಲಗೈ ಬಳಸಲೇ ಸಲಹೆ ನೀಡಲಾಗುತ್ತದೆ. ಕ್ರಮೇಣ ಅದೇ ಅಭ್ಯಾಸವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಮುಖ್ಯ ಕೆಲಸಗಳಿಗೆ ಬಲಗೈ ಬಳಸವುದು ಏಕೆ?

ನಮ್ಮ ಎರಡೂ ಕೈಗಳು ಒಂದೇ ರೀತಿ ಇರುತ್ತವೆ. ಆದರೂ ದೇವರನ್ನು ಪೂಜಿಸಲು ಬಲಗೈ ಬಳಸಲು ಅಭ್ಯಾಸ ಮಾಡಿಕೊಳ್ಳುತ್ತೇವೆ. ಊಟ ಬಲಗೈಯಿಂದಲೇ ಮಾಡುತ್ತೇವೆ. ಯಾರಿಗಾದರೂ ಏನನ್ನಾದರೂ ಕೊಡಬೇಕೆಂದರೆ ಬಲಗೈಯ್ಯಲ್ಲೇ ಕೊಡಬೇಕೆಂಬ ಅಲಿಖಿತ ನಿಯಮವಿದೆ. ಎಲ್ಲ ಮಂಗಳಕಾರ್ಯಗಳಿಗೂ ಬಲಗೈ ಮಾತ್ರ ಬಳಸುತ್ತೇವೆ. ಎಡಗೈ ಸುಮ್ಮನೆ ಡಮ್ಮಿಯಂತೆ ಇದ್ದು ಬಿಡುತ್ತದೆ. ಎಡಗೈ ಪ್ರಧಾನವಾಗಿ ಬಳಸುವವರು ಕೂಡಾ ಬಲಗೈನಲ್ಲೇ ತಿನ್ನಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ಕೇವಲ ಕೈ ವಿಷಯವಲ್ಲ, ಮನೆಯಿಂದ ಹೊರಗೆ ಹೋಗುವಾಗ ಅಥವಾ ನವವಿವಾಹಿತ ವಧು ಪತಿಯ ಮನೆಗೆ ಬರುವಾಗಲೂ ಬಲ ಪಾದವನ್ನು ಬಳಸಲಾಗುತ್ತದೆ. 
ಏಕೆ ಈ ತಾರತಮ್ಯ? ಬಲಗೈಗಿರುವ ಪ್ರಾಶಸ್ತ್ಯ ಎಡಗೈಗೇಕಿಲ್ಲ? 

ಹಿಂದೂ ಧರ್ಮದಲ್ಲಿ, ದೇಹದ ಬಲಭಾಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರ ಧಾರ್ಮಿಕ ಮಹತ್ವವೇನು ತಿಳಿಯೋಣ..

Latest Videos

ಅರ್ಧನಾರೀಶ್ವರ ರೂಪ
ಧರ್ಮಗ್ರಂಥಗಳ ಪ್ರಕಾರ, ಮಾನವ ದೇಹದ ಎಡಭಾಗವು ಮಹಿಳೆಯರನ್ನು ಪ್ರತಿನಿಧಿಸುತ್ತದೆ ಮತ್ತು ಬಲಭಾಗವನ್ನು ಪುರುಷರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸ್ವತಃ ಶಿವನೇ ಅರ್ಧನಾರೀಶ್ವರನ ರೂಪ ತಳೆದಿದ್ದ. ಈ ರೂಪದಲ್ಲಿ ಶಿವನು ಬಲಭಾಗದಲ್ಲಿ ಮತ್ತು ಮತ್ತು ಎಡಭಾಗದಲ್ಲಿ ತಾಯಿ ಪಾರ್ವತಿ ಇರುತ್ತಾಳೆ. ಇದೇ ಕಾರಣಕ್ಕೆ ವಿವಾಹದಲ್ಲಿ ಕೂಡಾ ವಧುವು ವರನ ಎಡಭಾಗದಲ್ಲಿ ಕೂರಲು ಹೇಳಲಾಗುತ್ತದೆ.  ಅಂದರೆ, ಎಡವು ನಮ್ಮೊಳಗಿನ ಸ್ತ್ರೀ ಸ್ವಭಾವಕ್ಕೆ ಸಂಬಂಧಿಸಿದೆ. ಅದು ಮಾತೃಸ್ವಭಾವವಾಗಿದ್ದು, ಅದನ್ನು ರಕ್ಷಿಸಿ ಬೆಳೆಸಬೇಕಿದೆ. ಹಾಗಾಗಿ, ಬಲವೆಂದರೆ ಹೆಚ್ಚು ಆಕ್ರಮಣಕಾರಿ, ಶಕ್ತಿಶಾಲಿಯಾಗಿದ್ದು, ಎಡವು ಸೂಕ್ಷ್ಮವಾಗಿದೆ. ಹಾಗಾಗಿ, ಸಾಮಾನ್ಯ ಎಲ್ಲ ಕೆಲಸಕ್ಕೆ ಬಲ ಗೈ ಬಳಸುತ್ತೇವೆ. 

12 ವರ್ಷಗಳ ಬಳಿಕ ನವಪಂಚಮ ರಾಜಯೋಗ; ಮೂರು ರಾಶಿಗಳಿಗೆ ಬಂಪರ್

ಬಲಗೈ ಈ ಗ್ರಹವನ್ನು ಪ್ರತಿನಿಧಿಸುತ್ತದೆ
ಬಲಗೈ ಸೂರ್ಯ ನಾಡಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಬಲಗೈಯಿಂದ ತಿನ್ನುವ ಮತ್ತು ಪೂಜಿಸುವ ಕಾರಣವನ್ನು ಒತ್ತಿ ಹೇಳಲಾಗುತ್ತದೆ. ಇದರಿಂದ ದೇಹವು ಗರಿಷ್ಠ ಶಕ್ತಿಯನ್ನು ಪಡೆಯುತ್ತದೆ. ಇದರೊಂದಿಗೆ ಈ ಕೈಯಿಂದ ಆಹಾರ ಸೇವಿಸುವುದರಿಂದ ಬೇಗ ಜೀರ್ಣವಾಗುತ್ತದೆ. ಮತ್ತೊಂದೆಡೆ, ಶುಭ ಕಾರ್ಯವು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಇದರಿಂದ ದೇವಾನುದೇವತೆಗಳ ಅನಂತ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಇದೆ. 

ಸಹಜ ಪ್ರಕೃತಿ
ಯಾವುದೇ ಚಟುವಟಿಕೆಯನ್ನು ಮಾಡಲು, ಬಲಗೈಯು ಮೊದಲು ಬರುತ್ತದೆ. ಏಕೆಂದರೆ ಮೆದುಳು ಬಲಗೈಗೆ 'ಪ್ರತಿಫಲಿತ ಕ್ರಿಯೆ'ಯಲ್ಲಿ ಗೊತ್ತಿದ್ದೂ ಮತ್ತು ಹಠಾತ್ತಾಗಿ ಕಾರ್ಯ ನಿರ್ವಹಿಸಲು 'ಸೂಚನೆ' ನೀಡುತ್ತದೆ. ಬಲಗೈಯ ನರವೈಜ್ಞಾನಿಕ ನಿಯಂತ್ರಣವು ಮೆದುಳಿನ ಎಡಭಾಗದಲ್ಲಿದೆ. ಈ ಭಾಗವು ಮಾನವ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ತಲೆತಲಾಂತರದಿಂದಲೂ ಶೇ.85ಕ್ಕೂ ಹೆಚ್ಚು ಮನುಷ್ಯರ ದೈಹಿಕ ರಚನೆಯು ಬಲ ಗೈಯನ್ನೇ ಪ್ರಮುಖವಾಗಿ ಬಳಸುವಂತೆ ಉಂಟಾಗುತ್ತಿದೆ. ಹಾಗಾಗಿ, ನೈಸರ್ಗಿಕವಾಗಿಯೇ ಎಲ್ಲ ಪ್ರಮುಖ ಕಾರ್ಯಗಳನ್ನು ನಾವು ಬಲಗೈಯಿಂದ ಮಾಡುವುದರಿಂದ, ಇದೇ ನಮಗೆ ಅನುಕೂಲವೆನಿಸುವುದರಿಂದ ಈ ಕೈಯೇ ಶ್ರೇಷ್ಠವೆಂಬ ಭಾವನೆ ಸಹಜವಾಗಿಯೇ ಬೆಳೆದು ಬಂದಿದೆ.

Lucky gemstone: ನವೆಂಬರ್‌ನಲ್ಲಿ ಹುಟ್ಟಿದವರ ಅದೃಷ್ಟ ರತ್ನವಿದು, ಧರಿಸಿದ್ರೆ ಲೈಫ್ ಜಿಂಗಾಲಾಲಾ

ನೀವು ನಿಮ್ಮ ಎಡಗೈಯನ್ನು ಏಕೆ ಬಳಸಬಾರದು?
ವೈಜ್ಞಾನಿಕ ದೃಷ್ಟಿಕೋನದ ಬಗ್ಗೆ ಮಾತನಾಡುವುದಾದರೆ, ವ್ಯಕ್ತಿಯ ದೇಹದ ಬಲಭಾಗವು ಎಡ ಭಾಗಕ್ಕಿಂತ ಹೆಚ್ಚು ಬಲವಾಗಿರುತ್ತದೆ. ಏಕೆಂದರೆ ಅವರ ಹೃದಯವು ಎಡಭಾಗದಲ್ಲಿರುವುದರಿಂದ ಆ ಭಾಗವು ತುಂಬಾ ಮೃದುವಾಗಿರುತ್ತದೆ. ಅದಕ್ಕಾಗಿಯೇ ಎಡಗೈಯಿಂದ ಸರಳವಾದ ಕಾರ್ಯಗಳನ್ನು ಮಾತ್ರ ಮಾಡಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ಅದೃಷ್ಟ ರತ್ನಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!