ಪೋಷಕರು ತಮ್ಮ ಮಗುವಿಗೆ ಹೆಸರಿಡುವುದು ಬಹಳ ವಿಶೇಷವಾದ ಕ್ಷಣವಾಗಿದೆ. ಮಗುವಿಗೆ ಎ ಅಕ್ಷರದಿಂದ ಹೆಸರು ಇಡಲು ತುಂಬಾ ಜನರು ಇಷ್ಟ ಪಡುತ್ತಾರೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಮಗುವಿಗೆ ಹೆಸರಿಡುವುದು ಒಂದು ದೊಡ್ಡ ನಿರ್ಧಾರ (decision) . ಮಗುವಿನ ಹೆಸರನ್ನು ಇಡುವುದು ಅತ್ಯಂತ ವಿಶೇಷ ವಿಷಯವಾಗಿದೆ. ಹೆಸರಿಡುವಾಗ ಅನೇಕ ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕದಾದ, ಚೊಕ್ಕದಾದ, ಒತ್ತು, ಇಳಿ ಇಲ್ಲದ ಹೆಸರು (name) ಬೇಕೆಂದು ಬಯಸುತ್ತಾರೆ. ಇದರಿಂದ ಆ ಹೆಸರನ್ನು ಯಾರೂ ಮೊಟಕುಗೊಳಿಸಿ ಕಟಕ ಕರೆಯಬಾರದು, ತಪ್ಪಾಗಿ ಕರೆಯಬಾರದು ಎಂಬುದು ಅವರ ಇಂಗಿತ. ಮತ್ತೆ ಕೆಲವರು ದೊಡ್ಡದಾಗಿದ್ದರೂ ಅರ್ಥಬದ್ಧವಾಗಿ, ವಿಶಿಷ್ಠವಾಗಿರಬೇಕೆಂದುಕೊಳ್ಳುತ್ತಾರೆ.
ಇವೆಲ್ಲ ಏನೇ ಇದ್ದರೂ, ಹುಟ್ಟಿದ ಸಮಯ, ನಕ್ಷತ್ರಕ್ಕೆ ಹೊಂದುವ ಅಕ್ಷರ (letter) ದಿಂದ ಹೆಸರಿಡಬೇಕೆಂದು ಬಹುತೇಕ ಹಿಂದೂಗಳು ನಂಬುತ್ತಾರೆ. ದೇವರ ಹೆಸರು ಬೇಕೆಂದು ಕೆಲವರು ಬಯಸಿದರೆ, ಕಾವ್ಯಮಯವಾಗಿರಬೇಕೆಂದು ಆಶಿಸುವವರು ಕೆಲವರು. ಮಗುವಿನ ಹೆಸರು ತಂದೆ ತಾಯಿಯ ಹೆಸರಿನ ಮಿಳಿತವಾಗಿರುವಂತೆ ಹುಡುಕುವವರು ಮತ್ತೆ ಕೆಲವರು. ಆದರೆ ಇದೆಲ್ಲದರ ನಡುವೆ A ಅಕ್ಷರದಿಂದ ಆರಂಭವಾಗುವ ಹೆಸರನ್ನು ತಮ್ಮ ಮಕ್ಕಳಿಗೆ ಇಡಲು ಅನೇಕ ಪೋಷಕರು (parents) ಇಷ್ಟ ಪಡುತ್ತಾರೆ. ಇದಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.
ಇವರು ವಿಶ್ವಾಸಕ್ಕೆ ಇನ್ನೊಂದು ಹೆಸರು
ಎ ಅಕ್ಷರದಿಂದ ಆರಂಭವಾಗುವ ಹೆಸರಿನವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಆದ್ದರಿಂದ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಎ ಅಕ್ಷರದಿಂದ ಆರಂಭವಾಗುವ ಹೆಸರನ್ನು ಜಾಸ್ತಿ ಇಡುತ್ತಾರೆ. ಇವರು ಜನರ ನಡುವೆ ಅಗತ್ಯವಿರುವ ವಿಶ್ವಾಸವನ್ನು ಸಂಪಾದಿಸುತ್ತಾರೆ.
ಇವರು ಸಾಹಸಿ ವ್ಯಕ್ತಿಗಳು ಆಗುತ್ತಾರೆ
ಎ ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳು ತುಂಬಾ ಸಾಹಸಿಗಳು ಆಗಿರುತ್ತಾರೆ. ಇವರು ಯಾವುದೇ ಕೆಲಸ ಮಾಡಲು ಧೈರ್ಯವಾಗಿ ಮುನ್ನುಗುತ್ತಾರೆ. ಇವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರಜ್ಞೆಯು ಅಂತರ್ಗತವಾಗಿರುತ್ತದೆ. ಇತರರು ತಮ್ಮನ್ನು ಧೈರ್ಯಶಾಲಿಯಾಗಿ ನೋಡಬೇಕೆಂದು ಬಯಸುತ್ತಾರೆ. ಆದ್ದರಿಂದ ಎಲ್ಲಾ ಸಾಹಸ ಕಾರ್ಯ ಮಾಡುತ್ತಿರುತ್ತಾರೆ. ಅದಕ್ಕಾಗಿ ಪಾಲಕರು ಮಕ್ಕಳಿಗೆ ಈ ಹೆಸರಿಡಲು ಇಷ್ಟ ಪಡುತ್ತಾರೆ.
ಗುಟ್ಟಾಗಿ ವಿವಾಹೇತರ ಸಂಬಂಧ; ಜನ್ಮ ಕುಂಡಲಿ ಹೇಳುತ್ತೆ ನಿಮ್ಮ ಸಂಗಾತಿಯ ರಹಸ್ಯ..!
ಎಲ್ಲರಿಗೂ ಇವರೇ ಲೀಡರ್
ಎ ಅಕ್ಷರದಿಂದ ಶುರುವಾಗುವ ಹೆಸರಿನಲ್ಲಿ ಇತರರನ್ನು ಮುನ್ನಡೆಸಲು ನಾಯಕತ್ವದ ಗುಣ ಇರುತ್ತದೆ. ಇವರು ವಾಣಿಜ್ಯೋದ್ಯಮಿ, ಶಿಕ್ಷಕ, ಸಂಶೋಧಕ ಅಥವಾ ಯಾವುದೇ ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಾರೆ. ಇವರಿಗೆ ನಾಯಕನಾಗುವ ಎಲ್ಲಾ ಲಕ್ಷಣಗಳು ಇರಲಿವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಎ ಅಕ್ಷರದಿಂದ ಶುರುವಾಗುವ ಹೆಸರು ಇಡಲು ಇಷ್ಟ ಪಡುತ್ತಾರೆ.