Liver Disease: ಆಹಾರವೋ ಮತ್ತೇನಕ್ಕೋ ಕಾಡೋದಲ್ಲ, ರಾಶಿ ದೋಷವೂ ರೋಗಕ್ಕೆ ಆಗ್ಬಹುದು ಕಾರಣ!

By Suvarna News  |  First Published Nov 24, 2022, 3:59 PM IST

ನಮ್ಮ ದೇಹ ಹಾಗೂ ಜೀವನ ಎರಡೂ ಗ್ರಹಗಳ ಮೇಲೆ ನಿಂತಿದೆ. ಗ್ರಹಗಳ ಸ್ಥಿತಿ ನಮ್ಮ ಜೀವನದಲ್ಲಿ ಅನೇಕ ಬದಲಾವಣೆ ತರುತ್ತದೆ. ಜಾತಕದಲ್ಲಿ ಕೆಲ ಗ್ರಹಗಳು ದುರ್ಬಲವಾಗಿದ್ದರೆ ಲಿವರ್ ಸಮಸ್ಯೆ ನಮ್ಮನ್ನು ಕಾಡುತ್ತದೆ.  
 


ಆರೋಗ್ಯಕರವಾಗಿರಲು ನಮ್ಮ ದೇಹದ ಪ್ರತಿಯೊಂದು ಅಂಗಗಳೂ ಮುಖ್ಯವಾಗುತ್ತದೆ. ಒಂದು ಅಂಗದಲ್ಲಿ ಏರುಪೇರಾದ್ರೂ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆರೋಗ್ಯಕರ ಯಕೃತ್ತು ಕೂಡ ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಯಕೃತ್ತಿನ ಆರೋಗ್ಯ ನಮ್ಮ ಜಾತಕವನ್ನು ಅವಲಂಬಿಸಿದೆ. ನಮ್ಮ ಜಾತಕದಲ್ಲಿ ಆಗುವ ಕೆಲ ಏರುಪೇರಿನಿಂದಾಗಿ ಯಕೃತ್ತಿನ ಆರೋಗ್ಯದಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಲಿವರ್ ಗೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಲಿವರ್ ಅನಾರೋಗ್ಯಕ್ಕೊಳಗಾಗಲು ಯಾವುದು ಕಾರಣ ಎಂಬುದನ್ನು ಕೂಡ ಹೇಳಲಾಗಿದೆ. ನಾವಿಂದು ಲಿವರ್ ಹಾಗೂ ಗ್ರಹ, ಜಾತಕದ ಬಗ್ಗೆ ಒಂದಿಷ್ಟು ಮಾಹಿತಿ ನೀಡ್ತೇವೆ.

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಯಕೃತ್ತು ವ್ಯಕ್ತಿಯ ಜಾತಕ (Horoscope) ದಲ್ಲಿ ಐದನೇ ಮನೆಯ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಲಿವರ್, ಮೇದೋಜ್ಜೀರಕ ಗ್ರಂಥಿಗೆ ಬಹಳ ಹತ್ತಿರದಲ್ಲಿದೆ. ಹಾಗಾಗಿ ಇದು ಜೀರ್ಣಕ್ರಿಯೆ (Digestion) ಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಯಕೃತ್ತು (Liver) ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ  ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಆರೋಗ್ಯ ಹದಗೆಡಲು ಶುರುವಾಗುತ್ತದೆ. ಮಾನಸಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

NEW YEAR 2023: ಮನೆಯಲ್ಲಿ ವರ್ಷವಿಡೀ ಹಣವಿರಬೇಕಂದ್ರೆ ಈ ವಸ್ತುಗಳನ್ನು ಹೊರ ಹಾಕಿ!

Latest Videos

undefined

ಯಕೃತ್ತಿನ ಅನಾರೋಗ್ಯ (Illness) ಕ್ಕೆ ಈ ಗ್ರಹ ಕಾರಣ :  
ಗುರು ಜಾತಕದಲ್ಲಿ ದುರ್ಬಲವಾಗಿದ್ದರೆ ಯಕೃತ್ತಿನ ಆರೋಗ್ಯ ಕೆಡುತ್ತದೆ. ಜಾಂಡೀಸ್, ಬೊಜ್ಜು, ಕ್ಯಾನ್ಸರ್ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆ ಕೂಡ ಕಾಡುತ್ತದೆ.  ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯನ್ನು ಆಳುತ್ತದೆ. ಆದ್ದರಿಂದ ಈ ಅಂಗಗಳು ಐದನೇ ಮನೆ ಮತ್ತು ಗುರುವಿನ ಅಧಿಕಾರದ ಅಡಿಯಲ್ಲಿ ಬರುತ್ತವೆ.  ಒಂಭತ್ತು ಮತ್ತು ಐದನೇ ಮನೆ ಯಕೃತ್ತಿನ ಕಾಯಿಲೆಗೆ ಕಾರಣವಾಗಿದೆ. ಸಿಂಹ ಮತ್ತು ಧನು ರಾಶಿಯ ಜನರಿಗೆ ಲಿವರ್ ಸಮಸ್ಯೆ ಕಾಡೋದು ಹೆಚ್ಚು ಎನ್ನುತ್ತದೆ ಶಾಸ್ತ್ರ.

ಜಾತಕದ ಯಾವುದೇ ಭಾಗದಲ್ಲಿ ಗುರು ದುರ್ಬಲನಾಗಿದ್ದರೆ ಲಿವರ್ ಸಮಸ್ಯೆ ಜನರನ್ನು ಕಾಡಲು ಶುರುವಾಗುತ್ತದೆ. ಒಂಭತ್ತು ಮತ್ತು ಐದನೇ ಮನೆಯಲ್ಲಿ ದುಃಖದ ಪರಿಸ್ಥಿತಿ ಇದ್ದರೂ ಯಕೃತ್ತಿನ ಸಮಸ್ಯೆ ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ.  

ಒಂಭತ್ತನೇ ಮನೆಯಲ್ಲಿ ಗುರು ಮತ್ತು ಶನಿಯ ಇದ್ದಾಗ ಕೂಡ ಯಕೃತ್ತಿನ ರೋಗಗಳ ಅಪಾಯವಿರುತ್ತದೆ. ಆರನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಐದನೇ ಮನೆಯ ಅಧಿಪತಿಯ ಉಪಸ್ಥಿತಿ ಕೂಡ ರೋಗಕ್ಕೆ ಕಾರಣವಾಗುತ್ತದೆ. ಇದು ಅಲ್ಪಾವಧಿಯಾಗಿರಲಿ ಇಲ್ಲ ದೀರ್ಘಾವಧಿಯಾಗಿರಲಿ ಯಕೃತ್ತಿನ ಸಮಸ್ಯೆ ಉಂಟಾಗುತ್ತದೆ.

ಐದನೇ ಅಥವಾ ಒಂಬತ್ತನೇ ಮನೆಯ ಅಧಿಪತಿ ಶನಿ, ಮಂಗಳ, ರಾಹು ಅಥವಾ ಕೇತುಗಳೊಂದಿಗೆ ಸೇರಿದ್ರೆ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಕಾಡುತ್ತದೆ. 

ಆರನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಶನಿ ಮತ್ತು ಮಂಗಳನಿಂದ ಗುರು ಬಾಧಿತನಾಗಿದ್ದರೂ ಯಕೃತ್ತಿನ ರೋಗ ತಪ್ಪಿದ್ದಲ್ಲ. 

ಮಾರಕ ಕಾಯಿಲೆಗೆ ಕಾರಣವಾಗೋ ಐದು ಬ್ಯಾಕ್ಟಿರೀಯಾ; ಎಲ್ಲೆಲ್ಲಿ ಇರುತ್ತವೆ ತಿಳ್ಕೊಳ್ಳಿ

ಯಕೃತ್ತಿನ ಆರೋಗ್ಯ ಕಾಪಾಡಲು ಹೀಗೆ ಮಾಡಿ : ನಿಮ್ಮ ಯಕೃತ್ತಿನ ಆರೋಗ್ಯ ಹದಗೆಡಲು ಗುರು ಗ್ರಹ ಕಾರಣ ಎಂಬುದು ನಿಮಗೆ ತಿಳಿದಿದೆ. ಲಿವರ್ ಆರೋಗ್ಯವಾಗಿರಬೇಕೆಂದ್ರೆ ಗುರು ಗ್ರಹವನ್ನು ಬಲಪಡಿಸಬೇಕಾಗುತ್ತದೆ. ಜಾತಕದಲ್ಲಿ ಗುರು ಗ್ರಹದ ದೋಷ ಕಾಣ್ತಿದೆ ಎನ್ನುವವರು ಗುರುವಾರ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಪ್ರತಿ ಗುರುವಾರ ಉಪವಾಸ ಮಾಡಬೇಕಾಗುತ್ತದೆ. ಮನೆ ಅಥವಾ ಮನೆಯ ಸುತ್ತಮುತ್ತ ಬಾಳೆಗಿಡ ನೆಡುವುದ್ರಿಂದಲೂ ಗುರು ಬಲ ಪಡೆಯುತ್ತಾನೆ. ಇದಲ್ಲದೆ ಹಸುವಿಗೆ ನೀವು ಬೇಳೆಕಾಳುಗಳನ್ನು ತಿನ್ನಿಸಬೇಕು. ಗುರುವಿನ ಬೀಜ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿದ್ರೆ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಗುರು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು.

click me!