Vastu Tips For Success: ಯಶಸ್ಸಿನ ಹಾದಿಗೆ ಇಲ್ಲಿದೆ ಸಿಂಪಲ್‌ ವಾಸ್ತು ಟಿಪ್ಸ್‌

By Suvarna NewsFirst Published Nov 28, 2022, 4:47 PM IST
Highlights

ಯಶಸ್ಸು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಬಯಸುತ್ತಾರೆ, ಅದು ವೃತ್ತಿ ಜೀವನದಲ್ಲಿಯೂ ಹೌದು ಜೊತೆಗೆ ವೈಯಕ್ತಿಕ ಜೀವನಕ್ಕೂ ಯಶಸ್ಸು ಮುಖ್ಯ. ಈ ಯಶಸ್ಸಿನ ಹಾದಿ ಹಿಡಿದು ಮುಂದೆ ಸಾಗಲು ನೀವು ಅನುಸರಿಸಬೇಕಾದ ವಾಸ್ತುವಿನ ಸರಳ ಸಲಹೆಗಳು ಇಲ್ಲಿವೆ ನೋಡಿ!

ಯಶಸ್ಸಿನ ಹಾದಿ ಹಿಡಿಯಲು ನಾವು ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗೂ ನಮ್ಮ ನಿಲುವುಗಳು ಎಷ್ಟು ದೃಢವಾಗಿದೆ ಎಂಬುದು ಮುಖ್ಯ. ಆದರೆ, ಇದು ಮಾತ್ರವಲ್ಲದೆ ನಿಮ್ಮ ರಾಶಿ ನಕ್ಷತ್ರಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬ ವಿಚಾರ ಕೂಡ ಅಷ್ಟೇ ಮುಖ್ಯ ಹಾಗೂ ವಾಸ್ತು ನಿಯಮಗಳನ್ನು ನಿಮ್ಮ ಜೀವನದಲ್ಲಿ ಅನುಸರಿಸುವುದು ಕೂಡ ಜೀವನದಲ್ಲಿ ನೀವು ಯಶಸ್ವಿಯಾಗುವ ಮಾರ್ಗವಾಗಿದೆ. ಸುಮಾರು ಶೇಕಡ 25 ರಷ್ಟು ಬೆಳವಣಿಗೆ (Development) ಮತ್ತು ಯಶಸ್ಸು ನಿಮ್ಮ ಮನೆಯ ವಾಸ್ತು ಮೇಲೆ ಅವಲಂಬಿತವಾಗಿದೆ ಮತ್ತು ಉಳಿದ 25 ಶೇಕಡ ಜನನ, 25 ಶೇಕಡ ಅದೃಷ್ಟ ಮತ್ತು ಉಳಿದ 25 ಶೇಕಡ ನಿಮ್ಮ ಕಠಿಣ ಪರಿಶ್ರಮದ ಮೇಲೆ ಅವಲಂಬಿತವಾಗಿರುವುದರಿಂದ ವಾಸ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. 

ಧನಾತ್ಮಕ (Positive) ಫಲಿತಾಂಶಗಳನ್ನು ನೀಡಲು ಮತ್ತು ಯಶಸ್ಸನ್ನು ಕೊನೆಗೊಳಿಸಲು ಮನೆಯಲ್ಲಿ ಮತ್ತು ಕಾರ್ಯಸ್ಥಳದಲ್ಲಿ (Working place) ಪರಿಣಾಮಕಾರಿಯಾಗಿ ಅನುಸರಿಸಬೇಕಾದ ಕೆಲವು ನಿಯಮಗಳು ಮತ್ತು ತತ್ವಗಳನ್ನು ವಾಸ್ತು ತಿಳಿಸುತ್ತದೆ. ಗುರುದೇವ್ ಶ್ರೀ ಕಶ್ಯಪ್, ಅಖಿಲ ಭಾರತ ಇನ್‌ಸ್ಟಿಟ್ಯೂಟ್ ಆಫ್ ಆಕ್ಲ್ಟ್ ಸೈನ್ಸ್ ಮತ್ತು ಟ್ರೂ ವಾಸ್ತುವಿನ ಅಧ್ಯಕ್ಷ/ಸಂಸ್ಥಾಪಕರು ವಾಸ್ತು ಯಶಸ್ಸಿನ ಕೆಲವು ಮೂಲಭೂತ ಸಲಹೆಗಳನ್ನು ಬಹಿರಂಗಪಡಿಸಿದ್ದಾರೆ. ಅದರ ಮಾಹಿತಿ ಇಲ್ಲಿದೆ..

ಕೆಲಸದ ಜೀವನದಲ್ಲಿ ಯಶಸ್ಸು (Success) ಮತ್ತು ಬೆಳವಣಿಗೆ ಸಾಧಿಸಲು ವಾಸ್ತುವಿನಲ್ಲಿ ಅಳವಡಿಸಿಕೊಳ್ಳಬಹುದಾದ ಸಲಹೆಗಳು:

  • ವಾಸ್ತು ಪ್ರಕಾರ, ನಿಮ್ಮ ಮನೆಯ ಈಶಾನ್ಯ ಭಾಗವನ್ನು (Northeast) ಯಾವಾಗಲೂ ಸ್ವಚ್ಛವಾಗಿ ಮತ್ತು ಹಿತಕರವಾಗಿರುವಂತೆ ನೋಡಿಕೊಳ್ಳಿ, ಏಕೆಂದರೆ ಈ ದಿಕ್ಕು ಬೆಳವಣಿಗೆ, ಯಶಸ್ಸು, ಸಮೃದ್ಧಿ ಮತ್ತು ಸಂತೋಷಕ್ಕೆ ಸಂಬಂಧಿಸಿದೆ. ಹಾಗಾಗಿ ಮನೆಯ ಈಶಾನ್ಯ ಭಾಗ ಶುದ್ಧವಾಗಿ ಇರುವುದು ಮುಖ್ಯ.

ಇದನ್ನೂ ಓದಿ: ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!

  • ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ (Fountain) ಇಡಬಹುದು. ಇದು ನಿಮ್ಮ ಬೆಳವಣಿಗೆ ಮತ್ತು ಯಶಸ್ಸನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ನೀರಿನ ಕಾರಂಜಿಯು ದೀಪಗಳಿಲ್ಲದೆ ಇರುವಂತೆ (Without Light) ನೋಡಿಕೊಳ್ಳುವುದು ಮುಖ್ಯ ಎಂಬುದು ನಿಮ್ಮ ಗಮನದಲ್ಲಿ ಇರಲಿ.
  • ನಿಮ್ಮ ಹಣ, ಒಡವೆ, ಆಭರಣಗಳು ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳನ್ನು ಮನೆಯ ಉತ್ತರ ದಿಕ್ಕಿನಲ್ಲಿ ಅಲ್ಮಿರಾ (Almirah) ಇರಿಸಿ ಅದರೊಳಗೆ ಇವುಗಳನ್ನು ಇಡುವುದು ಉತ್ತಮ.
  • ನಿಮ್ಮ ಜೀವನದಲ್ಲಿ ಬೆಳವಣಿಗೆ ಮತ್ತು ಯಶಸ್ಸಿನ ಹಾದಿಯಲ್ಲಿ ಸಾಗುವುದಕ್ಕೆ ವಾಸ್ತುವಿನ ಪ್ರಕಾರ ಈಶಾನ್ಯ ದಿಕ್ಕು ಪ್ರಮುಖ ದಿಕ್ಕುಗಳಲ್ಲಿ ಒಂದಾಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ.
  • ಮನೆಯಲ್ಲಿ ದೇವರ ಪೂಜಾ ಕೋಣೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಮತ್ತು ಈ ಭಾಗವನ್ನು ಶುದ್ಧವಾಗಿ ನೋಡಿಕೊಳ್ಳಬೇಕು ಇದು ಆ ಮನೆಗೆ ಹಾಗೂ ಮನೆಯ ಜನರಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಸಾಲಮುಕ್ತರಾಗಲು 10 vastu ಸಲಹೆಗಳು

  • ಮಲಗುವಾಗ, ನಿಮ್ಮ ತಲೆಯನ್ನು ಪೂರ್ವ ದಿಕ್ಕಿಗೆ (East) ಇರಿಸಿ. ಇದು ಉತ್ತಮ ವೃತ್ತಿ ಬೆಳವಣಿಗೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ವ್ಯಕ್ತಿಯ ಏಕಾಗ್ರತೆಯ ಮಟ್ಟ ಮತ್ತು ಮಾನಸಿಕ ಸ್ಥಿರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ನಿಮ್ಮ ಕೆಲಸದ ಸ್ಥಳದ ಪೀಠೋಪಕರಣಗಳು ಮರದಿಂದ ಮಾಡಿರಬೇಕು ಮತ್ತು ಮೇಜಿನ ವಿನ್ಯಾಸವು ಆಯತಾಕಾರದದ್ದಾಗಿರಬೇಕು, ಇದು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ನಿಮ್ಮ ಕೆಲಸದ ಸ್ಥಳ ಮತ್ತು ಮನೆಯಲ್ಲಿ ಟ್ಯಾಪ್‌ಗಳು ಅಥವಾ ಸೀಲಿಂಗ್‌ನಿಂದ ಯಾವುದೇ ಸೋರಿಕೆಯಾಗದಂತೆ  (Leakage) ನೋಡಿಕೊಳ್ಳಿ, ಟ್ಯಾಪ್‌ಗಳು ಸೋರಿಕೆ ಅಥವಾ ಇನ್ಯಾವುದೇ ನೀರಿನ ಸೋರಿಕೆ ಹಣದ ನಷ್ಟಕ್ಕೆ ಕಾರಣವಾಗುತ್ತದೆ.
click me!