ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಪ್ರೇಮಿಗಳ ದಿನದಂದು ಪ್ರತಿ ದಂಪತಿಗೂ ಪಾಠವಾಗಿರುವ ಶಿವ-ಪಾರ್ವತಿಯರ ಕಥೆಯನ್ನು ತಿಳಿಯೋಣ. ಇಂದಿನ ಕಾಲದಲ್ಲಿ, ಇದು ಸಂತೋಷದ ವೈವಾಹಿಕ ಜೀವನವನ್ನು ಕಲಿಸುತ್ತದೆ.
ಪ್ರೇಮಿಗಳ ವಾರ, ಪ್ರೀತಿಯ ಹಬ್ಬ, ಫೆಬ್ರವರಿ 7ರಿಂದ ಪ್ರಾರಂಭವಾಗುತ್ತದೆ ಮತ್ತು ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಅಂದ ಹಾಗೆ, ಪ್ರೀತಿಗೆ ಹಲವು ವ್ಯಾಖ್ಯಾನಗಳಿವೆ. ಒಬ್ಬೊಬ್ಬರು ಒಂದೊಂದು ರೀತಿ ಪ್ರೀತಿಯನ್ನು ವಿವರಿಸಬಹುದು. ಆದರೆ ಪ್ರೀತಿ ಏನೆಂದು ಶಿವ ಕೊಟ್ಟ ಉತ್ತರದ ಬಗ್ಗೆ ತಿಳಿದಿದ್ದೀರಾ?
ಶಿವ-ಪಾರ್ವತಿಯರ ದಾಂಪತ್ಯ ಜೀವನವು ನಿಜವಾದ ಪ್ರೀತಿಯ ಸಂಕೇತವಾಗಿದೆ. ಅವರ ಸಂಬಂಧದಲ್ಲಿ ಪ್ರೀತಿ, ಗೌರವ ಮತ್ತು ಸಮರ್ಪಣೆಯ ಭಾವನೆ ಕಂಡುಬರುತ್ತದೆ, ಇದು ಸಂತೋಷದ ದಾಂಪತ್ಯ ಜೀವನಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಒಮ್ಮೆ ಪ್ರೀತಿಯ ಸನ್ನಿವೇಶದಲ್ಲಿ, ತಾಯಿ ಪಾರ್ವತಿ ಒಂದು ದಿನ ತನ್ನ ಪತಿ ಮತ್ತು ಗುರು ಮಹಾದೇವನನ್ನು ಕೇಳಿದಳು - ಪ್ರೀತಿ ಎಂದರೇನು? ಪ್ರೀತಿಯ ರಹಸ್ಯವೇನು? ಅದರ ಭವಿಷ್ಯವೇನು?
ಈ ಪ್ರಶ್ನೆಗೆ ಉತ್ತರವಾಗಿ, ಶಿವನು ಪಾರ್ವತಿ ದೇವಿಗೆ ಪ್ರೀತಿಯ ಪಾಠವನ್ನು ಕಲಿಸಿದನು. ಇದು ಇಂದಿನ ಸಮಯದಲ್ಲಿ ಸಂತೋಷದ ವೈವಾಹಿಕ ಜೀವನವನ್ನು ಕಲಿಸುತ್ತದೆ. ಶಿವನ ಮಾತನ್ನರಿತರೆ ಪ್ರೇಮ ಜೀವನದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರೇಮಿಗಳ ದಿನದಂದು ಶಿವ-ಪಾರ್ವತಿಯರ ಕಥೆಯನ್ನು ತಿಳಿದುಕೊಳ್ಳೋಣ- ಅದು ಪ್ರತಿ ದಂಪತಿಗೆ ಪಾಠವಾಗಿದೆ.
ಪಾರ್ವತಿಯ ಪ್ರಶ್ನೆಗೆ ಭೋಲೇನಾಥನು ನಗುತ್ತಾ ತಾಯಿಗೆ ಹೇಳಿದನು 'ಪಾರ್ವತಿ, ನಿನ್ನ ಪ್ರಶ್ನೆಯಲ್ಲಿಯೇ ಉತ್ತರ ಅಡಗಿದೆ'. ಶಿವನು ಪಾರ್ವತಿಗೆ ಪ್ರೀತಿಯ ವ್ಯಾಖ್ಯಾನವನ್ನು ವಿವರಿಸಿದನು.
'ಪಾರ್ವತಿ ನೀನು ಪ್ರೀತಿಯ ಹಲವು ರೂಪಗಳನ್ನು ತೆರೆದಿಟ್ಟಿದ್ದೀಯ. ಪಾರ್ವತಿ ನೀನು ಸತಿಯ ರೂಪದಲ್ಲಿ ನನ್ನ ಗೌರವಕ್ಕಾಗಿ ನಿನ್ನ ಪ್ರಾಣವನ್ನು ತ್ಯಜಿಸಿದಾಗ, ನನ್ನ ಪ್ರಪಂಚ, ಜೀವನ, ಕಟ್ಟುಪಾಡುಗಳು ಎಲ್ಲವೂ ನಿರಾಧಾರವಾದವು. ನನ್ನ ಅಪೂರ್ಣತೆಯ ಪರಮಾವಧಿಯಿಂದ ನೀನಿಲ್ಲದೆ ಈ ಜಗತ್ತು ಅಪೂರ್ಣವಾಗುವುದೇ ನಿಜವಾದ ಪ್ರೀತಿ. ನನ್ನ ಮುಂದಿನ ಜನ್ಮದಲ್ಲಿ ಪಾರ್ವತಿಯಾಗಿ ನನ್ನ ನಿರಾಸಕ್ತಿಯಿಂದ ಹೊರಬರುವಂತೆ ಒತ್ತಾಯಿಸುವುದು ಪ್ರೀತಿ' ಎಂದು ಮಹದೇವ ಹೇಳಿದನು.
ಯಶಸ್ವಿ ಪ್ರೀತಿಯ ಮೂರು ನಿಯಮಗಳು
ಪತಿ-ಪತ್ನಿಯರ ನಡುವಿನ ಪ್ರೀತಿ, ಸಮರ್ಪಣೆ ಮತ್ತು ಗೌರವವು ಸುಖೀ ದಾಂಪತ್ಯ ಜೀವನಕ್ಕೆ ಆಧಾರವಾಗಿದೆ ಎಂಬುದನ್ನು ಶಿವನ ಪ್ರೀತಿಯ ಈ ಪಾಠವು ಜನರಿಗೆ ತಿಳಿಸುತ್ತದೆ. ಶಿವನ ಗೌರವಕ್ಕಾಗಿ ತಾಯಿ ಪಾರ್ವತಿ ತನ್ನ ಪ್ರಾಣವನ್ನೂ ಸಹ ತ್ಯಾಗ ಮಾಡಿದ್ದಾಳೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ. ಅದು ವೈವಾಹಿಕ ಜೀವನವಾಗಲಿ ಅಥವಾ ಪ್ರೇಮ ಸಂಬಂಧವಾಗಲಿ, ಸಂಗಾತಿಗಳ ಪರಸ್ಪರ ಗೌರವವು ಅವರ ಸಂಬಂಧವನ್ನು ಬಲಪಡಿಸುತ್ತದೆ.
Valentine's Day 2023: ಪ್ರೇಮಿಗೆ ಈ ದಿನವನ್ನು ವಿಶೇಷವಾಗಿಸಲು ನೀವೇನು ಮಾಡಬಹುದು?
ಪರಸ್ಪರ ತಿಳಿದುಕೊಳ್ಳುವುದು ಮುಖ್ಯ
ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ಅನೇಕ ಜನ್ಮಗಳಿಗೆ ಜೊತೆಗಾರರಾಗಿದ್ದರು. ಅವರು ಯಾವಾಗಲೂ ಪರಸ್ಪರ ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಪ್ರೀತಿಯ ದಂಪತಿಗಳಿಗೆ ಇದು ತುಂಬಾ ಮುಖ್ಯವಾಗಿದೆ. ಏಕೆಂದರೆ ಇದು ಸಂಬಂಧದಲ್ಲಿ ದೂರವನ್ನು ಕೊನೆಗೊಳಿಸುತ್ತದೆ. ಪ್ರತಿ ದಂಪತಿಯಲ್ಲೂ ಜಗಳ, ಕಲಹಗಳು ನಡೆಯುವುದು ಸಾಮಾನ್ಯ, ಆದರೆ ಅದಕ್ಕೆ ಉತ್ತೇಜನ ನೀಡಬೇಡಿ ಮತ್ತು ಪರಿಹರಿಸಲು ಪ್ರಯತ್ನಿಸಿ. ಸಂಬಂಧಗಳ ಕಹಿಯನ್ನು ಹೋಗಲಾಡಿಸಲು ಒಂದು ಸಣ್ಣ ಅಭಿನಂದನೆ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ದಂಪತಿಗಳ ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.