ಪೂಜಾ ಸಾಮಾಗ್ರಿಗಳು ಉಳಿದರೆ ಏನು ಮಾಡಬಹುದು?

By Suvarna News  |  First Published Nov 14, 2022, 3:04 PM IST

ಪೂಜೆಯಲ್ಲಿ ಅನೇಕ ವಸ್ತುಗಳನ್ನು ಬಳಕೆ ಮಾಡ್ತೇವೆ. ಪೂಜೆ ನಂತ್ರ ಕೆಲ ವಸ್ತುಗಳು ಉಳಿಯುತ್ತವೆ. ಅದನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಅದನ್ನು ಹಾಳು ಮಾಡದೆ ಹೀಗೆ ಬಳಕೆ ಮಾಡಿ.
 


ಹಿಂದೂ ಧರ್ಮದಲ್ಲಿ ಪ್ರತಿ ದಿನ ದೇವರ ಪೂಜೆ ಮಾಡಲಾಗುತ್ತದೆ. ಹಬ್ಬಗಳಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ ದೇವರ ಪೂಜೆ ಮತ್ತಷ್ಟು ಆದ್ಯತೆ ಪಡೆಯುತ್ತದೆ. ದೇವರ ಪೂಜೆಗೆ ಅಕ್ಷತೆ, ಹಣ್ಣು, ಹೂವು, ತೆಂಗಿನಕಾಯಿ, ಅರಿಶಿನ, ಕುಂಕುಮ ಸೇರಿದಂತೆ ಅನೇಕ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ಪೂಜೆಗೆ ಬಳಸುವ ಎಲ್ಲ ವಸ್ತುಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ದೇವರ ಪೂಜೆಗೆ ಪೂಜಾ ಸಾಮಗ್ರಿಗಳು ಬೇಕೇಬೇಕು. ಇವುಗಳೆಲ್ಲವನ್ನು ಬಳಸದೆ ಪೂಜೆ ಮಾಡಿದ್ರೆ ಅದು ಅಪೂರ್ವ.

ಪ್ರತಿ ದಿನ ನಾವು ಪೂಜೆ ಮಾಡ್ತೇವೆ. ಅದಕ್ಕೆ ಅಗತ್ಯವಿರುವ ವಸ್ತು (Material) ಗಳನ್ನು ಬಳಸ್ತೇವೆ. ಆದ್ರೆ ಹೋಮ ಅಥವಾ ವಿಶೇಷ ಪೂಜೆಗೆ ಅಥವಾ ಹಬ್ಬ (Festival) ಕ್ಕೆ ನಾವು ಕೆಲ ವಸ್ತುಗಳನ್ನು ತಂದಿರ್ತೇವೆ. ಸಾಮಾನ್ಯವಾಗಿ ಪೂಜೆಯ ನಂತರ ಪೂಜಾ ಸಾಮಗ್ರಿಯಲ್ಲಿ ಸ್ವಲ್ಪ ಮಾತ್ರ ಉಳಿಯುತ್ತದೆ. ಈ ಪೂಜಾ ವಸ್ತುಗಳನ್ನು ಏನು ಮಾಡ್ಬೇಕು ಎಂಬುದು ಅನೇಕರಿಗೆ ತಿಳಿದಿರೋದಿಲ್ಲ.  ಕೆಲವರು ಪೂಜೆ (Worship) ನಂತ್ರ ಉಳಿದ ವಸ್ತುವನ್ನು ದೇವಾಲಯಕ್ಕೆ ನೀಡ್ತಾರೆ. ಮತ್ತೆ ಕೆಲವರು ಉಳಿದ ವಸ್ತುಗಳನ್ನು ನೀರಿನಲ್ಲಿ ಹರಿಯಲು ಬಿಡುತ್ತಾರೆ. ಉಳಿದ ಪೂಜಾ ಸಾಮಗ್ರಿಗಳನ್ನು ನೀವು ನೀರಿನಲ್ಲಿ ಬಿಡಬೇಕೆಂದೇನಿಲ್ಲ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ನೀವು ಇದನ್ನು ಬಳಸಬಹುದು. ನಾವಿಂದು ಉಳಿದ ಪೂಜಾ ಸಾಮಗ್ರಿಗಳನ್ನು ಏನು ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

TATTOO ASTROLOGY: ತಪ್ಪಿಯೂ ದೇಹದ ಈ ಭಾಗದಲ್ಲಿ ಇಂಥ ಟ್ಯಾಟೂ ಹಾಕಿಸ್ಬೇಡಿ!

Tap to resize

Latest Videos

ಉಳಿದ ಪೂಜಾ ಸಾಮಗ್ರಿಯನ್ನು ಹೀಗೆ ಬಳಸಿ : 
ಉಳಿದ ಕುಂಕುಮವನ್ನು ಹೀಗೆ ಬಳಸಿ :
ಪೂಜೆಗೆಂದು ಕುಂಕುಮವನ್ನು ನಾವು ತಂದಿರ್ತೇವೆ. ಪೂಜೆಯ ನಂತರ ಈ ಕುಂಕುಮವನ್ನು ಮನೆಯ ವಿವಾಹಿತ (Married) ಮಹಿಳೆಯರು ಬಳಕೆ ಮಾಡಬಹುದು. ಈ ಕುಂಕುಮವನ್ನು ಮಹಿಳೆಯರು ಹಚ್ಚೋದ್ರಿಂದ ಅಖಂಡ ಸೌಭಾಗ್ಯ ದೊರೆಯುತ್ತದೆ. ಮನೆಗೆ ಯಾವುದೇ ಹೊಸ ವಸ್ತುವನ್ನು ತಂದಿದ್ದರೆ ಅದನ್ನು ಪೂಜೆ ಮಾಡಲು ನೀವು ಈ ಕುಂಕುಮವನ್ನು  ಬಳಕೆ ಮಾಡಬಹುದು. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

ಹೂ ಬಳಕೆ ಹೀಗಿರಲಿ : ಪೂಜೆಗೆಂದು ಹೂವುಗಳನ್ನು ತರಲಾಗುತ್ತದೆ. ಪೂಜೆಗೆ ಬಳಸಿ ಕೆಲ ಹೂ ಉಳಿಯುತ್ತದೆ. ಅವುಗಳನ್ನು ಅಲ್ಲಿ ಇಲ್ಲಿ ಎಸೆಯಬಾರದು. ಪೂಜೆಯ ಹೂವನ್ನು ಕಂಡ ಕಂಡಲ್ಲಿ ಎಸೆಯುವುದು ಅಶುಭವೆಂದು ಪರಿಗಣಿಸಲಾಗಿದೆ. ಪೂಜೆಯಲ್ಲಿ ಉಳಿದ ಹೂವುಗಳನ್ನು ಮಾಲೆ ಮಾಡಿ ಮನೆಯ ಮುಖ್ಯ ಬಾಗಿಲಿಗೆ ಕಟ್ಟಿಕೊಳ್ಳಿ. ಈ ಹೂವುಗಳು ಸಂಪೂರ್ಣವಾಗಿ ಒಣಗಿದ ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ಇಡಬೇಕು. ನಂತ್ರ ಅದನ್ನು ಗೊಬ್ಬರಕ್ಕೆ ಬಳಕೆ ಮಾಡಬಹುದು.

ಅಕ್ಷತೆಯನ್ನು ಇಲ್ಲಿ ಬಳಸಿ : ಪೂಜೆಯಲ್ಲಿ ಅಕ್ಷತೆಯನ್ನು ಬಳಕೆ ಮಾಡಲಾಗುತ್ತದೆ. ಅಕ್ಕಿಗೆ ಅರಿಶಿನ ಹಾಗೂ ಕುಂಕುಮ ಬೆರೆಸಿ ಅಕ್ಷತೆ ತಯಾರಿಸಲಾಗುತ್ತದೆ. ಪೂಜೆ ಮುಗಿದ ನಂತ್ರ ತಟ್ಟೆಯಲ್ಲಿ ಅಕ್ಷತೆ ಬಿಟ್ಟರೆ ಅದನ್ನು ಕಸಕ್ಕೆ ಎಸೆಯಬಾರದು. ಅದನ್ನು ಪ್ರತಿದಿನ ಬಳಸುವ ಗೋಧಿ ಅಥವಾ ಅಕ್ಕಿಯೊಂದಿಗೆ ಬೆರೆಸಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಆಶೀರ್ವಾದ ಎಲ್ಲರ ಮೇಲೆ ಇರುತ್ತದೆ ಎಂದು ನಂಬಲಾಗಿದೆ. 

ಈ ರಾಶಿಯ ಜನರು ಕೆಂಪು ತಿಲಕವಿಟ್ಟರೆ ಕಷ್ಟಗಳು ಹೆಚ್ಚುತ್ತವೆ!

ಹಣದ ಕೊರೆತೆ ಆಗಬಾರದು ಅಂದ್ರೆ ವೀಳ್ಯದೆಲೆ ಹೀಗೆ ಬಳಸಿ : ಹಿಂದೂ ಧರ್ಮದ  ಪೂಜೆಯಲ್ಲಿ ವೀಳ್ಯದೆಲೆ ಆದ್ಯತೆ ಪಡೆದಿದೆ. ಪೂಜೆಯಲ್ಲಿ ವೀಳ್ಯದೆಲೆ ಇಲ್ಲವೆಂದ್ರೆ ಅದು ಪೂಜೆಯಾಗೋದಿಲ್ಲ. ಪೂಜೆಯ ಸಮಯದಲ್ಲಿ ವೀಳ್ಯದೆಲೆಯ ಮೇಲೆ ಅಡಿಕೆ ಇಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆ ಮುಗಿದ ನಂತರ ಈ ವೀಳ್ಯದೆಲೆಯನ್ನು ಎಸೆಯಬಾರದು. ಪೂಜೆ ಮುಗಿದ ನಂತ್ರ ವೀಳ್ಯದೆಲೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ಹಣ ಇಡುವ ಕಪಾಟಿನೊಳಗೆ ಇಡಬೇಕು. ಹೀಗೆ ಮಾಡಿದ್ರೆ ಎಂದೂ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ. 
 

click me!