ಜೂನ್ ತಿಂಗಳಲ್ಲಿ, ಪ್ರೀತಿಯಲ್ಲಿರುವ ಕೆಲವರಿಗೆ ಕೆಲವು ತೊಂದರೆಗಳು ಉಂಟಾಗಬಹುದು, ನೀವು ಎಚ್ಚರಿಕೆಯಿಂದ ಈ ಹಂತದಿಂದ ಹೊರಬರಬೇಕು. ಜೂನ್ ತಿಂಗಳಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳು ಸಮಸ್ಯೆಗಳನ್ನು ಎದುರಿಸುತ್ತವೆ?
ಜೂನ್ ತಿಂಗಳು ಪ್ರೀತಿಯಲ್ಲಿರುವ ಜನರಿಗೆ ಹೆಚ್ಚು ಅನುಕೂಲಕರವಾಗಿಲ್ಲ. ಆಗಾಗ ಬಿಡದೆ ಧೋ ಎಂದು ಸುರಿವ ಮಳೆಯಂತೆ ಈ ತಿಂಗಳು ಕೆಲವು ರಾಶಿಚಕ್ರದ ಚಿಹ್ನೆಗಳು ಈ ಅವಧಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಜೂನ್‌ನಲ್ಲಿ ಪ್ರೀತಿ, ಪ್ರೇಮ ವಿಚಾರವಾಗಿ ಸಮಸ್ಯೆ ಎದುರಿಸುವ ರಾಶಿಗಳು ಯಾವೆಲ್ಲ ನೋಡೋಣ.
ಮೇಷ(Aries)
ಮೇಷ ರಾಶಿಯವರು ಜೂನ್‌ನಲ್ಲಿ, ಪ್ರೀತಿಯ ವಿಷಯದಲ್ಲಿ ಎಚ್ಚರದಿಂದಿರಬೇಕು. ಪ್ರೀತಿಯಲ್ಲಿ ಸಂತೋಷ ಮತ್ತು ಪ್ರೀತಿಯನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ಆದರೆ ನಿಮ್ಮ ಪ್ರಯತ್ನಗಳು ವಿಫಲವಾಗುತ್ತವೆ. ಕೋಪ ಮತ್ತು ದುರಹಂಕಾರವು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟು ಮಾಡಬಹುದು. ನಿಮ್ಮ ಸಂಗಾತಿ ಹೇಳುವ ಎಲ್ಲದಕ್ಕೂ ಪ್ರತಿಕ್ರಿಯಿಸುವುದನ್ನು ತಪ್ಪಿಸಿ. ಇದು ಈ ತಿಂಗಳು ನಿಮ್ಮ ಜೀವನದ ಮುಖ್ಯ ಮಂತ್ರವಾಗಿರಬೇಕು. ಪ್ರೇಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ನೀವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ, ನಿಮ್ಮ ಸಂಗಾತಿಯ ಆಲೋಚನೆಯು ನಿಮ್ಮನ್ನು ಕೆಲವು ದೊಡ್ಡ ತೊಂದರೆಗಳಿಂದ ರಕ್ಷಿಸುತ್ತದೆ.
ವೃಷಭ(Taurus)
ನಿಮ್ಮ ಜೀವನ ಸಂಗಾತಿ ಕೋಪಗೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ನಿಮ್ಮ ಸಂಗಾತಿಯ ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಗಮನ ಕಡಿಮೆ ಇರುತ್ತದೆ, ಇದರಿಂದಾಗಿ ನಿಮ್ಮಿಬ್ಬರ ನಡುವೆ ಬಿರುಕು ಉಂಟಾಗಬಹುದು. ನಿಮ್ಮ ಜೀವನ ಸಂಗಾತಿ ಕೋಪಗೊಳಿಸುವುದನ್ನು ತಪ್ಪಿಸಿ. ನಿಮ್ಮ ಖರ್ಚುಗಳಲ್ಲಿ ಹೆಚ್ಚಳವಾಗಬಹುದು. ನೆನಪಿನಲ್ಲಿಡಿ, ಎಲ್ಲಿಯೂ ಅನಗತ್ಯವಾಗಿ ಖರ್ಚು ಮಾಡಬೇಡಿ.
ದೇವರು ಮತ್ತವರ ವಾಹನಗಳು; ನಿಮಗೆಷ್ಟು ಗೊತ್ತು?
ಕರ್ಕಾಟಕ(Cancer)
ಕರ್ಕಾಟಕ ರಾಶಿಯವರ ಸಂಬಂಧವು ಈ ತಿಂಗಳಲ್ಲಿ ಸಂಗಾತಿಯೊಂದಿಗೆ ಉತ್ತಮವಾಗಿರುವುದಿಲ್ಲ. ಜೀವನ ಸಂಗಾತಿಯ ತಾಯಿಯೊಂದಿಗಿನ ಸಂಬಂಧವು ಹಾಳಾಗಬಹುದು. ಇದಾಗಬಾರದು ಎಂದರೆ ನಿಮ್ಮ ಮಾತಿನಲ್ಲಿ ಸಂಯಮವನ್ನು ಇಟ್ಟುಕೊಳ್ಳಿ ಮತ್ತು ಕಟುವಾದ ಮಾತುಗಳನ್ನು ಆಡಬೇಡಿ. ವಿಘಟನೆಯ ಪರಿಸ್ಥಿತಿಯೂ ಇರಬಹುದು. ಪ್ರೀತಿಯ ವಿಷಯದಲ್ಲಿ, ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ.
ತುಲಾ(Libra)
ಈ ತಿಂಗಳು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದಿಲ್ಲ, ಇದರಿಂದಾಗಿ ಸಂಘರ್ಷದ ಪರಿಸ್ಥಿತಿಯು ನಿಮ್ಮ ಮನೆಯಲ್ಲಿ ಉಳಿಯುತ್ತದೆ. ವೈವಾಹಿಕ ಜೀವನದಲ್ಲಿ ಅನುಮಾನ ಮತ್ತು ತಪ್ಪು ತಿಳುವಳಿಕೆ ಪ್ರವೇಶಿಸಬಹುದು. ನಿಮ್ಮ ಸಂಬಂಧದಿಂದ ಅನುಮಾನವನ್ನು ದೂರವಿಡಿ, ಅದು ಸಂಬಂಧವನ್ನು ಹದಗೆಡಿಸಬಹುದು. ಪ್ರೇಮಿಗಳ ವಿಘಟನೆಯ ಸಾಧ್ಯತೆಗಳು ಹೆಚ್ಚಾಗಬಹುದು.
ಈ ರಾಶಿಗಳ ಮೇಲೆ ಸದಾ ಇರುತ್ತೆ ಕುಬೇರ ಕೃಪೆ; ಎಂದಿಗೂ ಸಂಪತ್ತಿನ ಕೊರತೆ ಇರೋಲ್ಲ!
ಕುಂಭ(Aquarius)
ಜೂನ್‌ನಲ್ಲಿ ಪ್ರೀತಿ ಮತ್ತು ಸಂಬಂಧದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಖರ್ಚು ಅಗತ್ಯಕ್ಕಿಂತ ಹೆಚ್ಚಾಗಬಹುದು. ವೈವಾಹಿಕ ಜೀವನದಲ್ಲಿ ಪ್ರೇಮ ಸಂಗಾತಿಯ ಆಸಕ್ತಿ ಕಡಿಮೆಯಾಗಬಹುದು, ಇದರಿಂದಾಗಿ ಪ್ರೀತಿ ಮತ್ತು ಪ್ರಣಯದ ಕೊರತೆ ಇರುತ್ತದೆ. ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳ ಹೊರತಾಗಿಯೂ, ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.