
ಪ್ರತಿ ದಿನ ನಾವು ಮಾಡುವ ಕೆಲ್ಸ ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಇಂದೊಂದು ದಿನ ಮಾಡಿದ್ರೆ ಏನಾಗಲ್ಲ, ನಾಳೆ ಒಂದು ದಿನ ಮಾಡಿದ್ರೆ ಏನಾಗಲ್ಲ ಎನ್ನುತ್ತ್ಲೆ ಅನೇಕ ತಪ್ಪುಗಳನ್ನು ಮಾಡಿರ್ತೇವೆ. ತಿಳಿದು, ತಿಳಿಯದೇ ಮಾಡಿದ ಈ ತಪ್ಪುಗಳೇ ನಮ್ಮ ಜೀವನದಲ್ಲಿ ಸಾಕಷ್ಟು ನಷ್ಟವನ್ನುಂಟು ಮಾಡುತ್ತೆ. ಲಕ್ಷ್ಮಿ ಕೋಪಕ್ಕೆ ಇದು ಕಾರಣವಾಗುತ್ತೆ. ಮನೆಗೆ ಬಂದ ಲಕ್ಷ್ಮಿ (Lakshmi) ಸದ್ದಿಲ್ಲದೆ ಹೊರಗೆ ಹೋಗಿರ್ತಾಳೆ. ಆರ್ಥಿಕ ನಷ್ಟ ನಮ್ಮನ್ನು ಕಾಡುತ್ತದೆ. ಮನೆಯ ಮಹಿಳೆಯರು ಮಾಡುವ ತಪ್ಪು ಮಾತ್ರವಲ್ಲ ಪುರುಷರು ಮಾಡುವ ಕೆಲ್ಸ ಕೂಡ ಬಡತನ, ಆರ್ಥಿಕ ನಷ್ಟಕ್ಕೆ ಕಾರಣವಾಗುವ ಜೊತೆಗೆ ನಕಾರಾತ್ಮಕತೆ ಹೆಚ್ಚಾಗುತ್ತದೆ. ಸಾಲ ಮೈಮೇಲೆ ಬರುತ್ತದೆ. ಮನೆಯಲ್ಲಿ ಸಂಪತ್ತು ಸದಾ ಇರ್ಬೇಕು, ಯಾವುದೇ ಆರ್ಥಿಕ ಸಮಸ್ಯೆ ಕಾಡಬಾರದು, ಲಕ್ಷ್ಮಿ ಸದಾ ಮನೆಯಲ್ಲಿ ವಾಸ ಮಾಡ್ಬೇಕು ಎಂದಾದ್ರೆ ಮನೆಯಲ್ಲಿರುವ ಪುರುಷರು ಕೆಲ ಎಚ್ಚರಿಕೆ ವಹಿಸಬೇಕು.
• ನಿದ್ರೆ : ಸಂಜೆ ಆಫೀಸ್ ನಿಂದ ಮನೆಗೆ ಬರುವ ಪುರುಷರು ಬಂದ ತಕ್ಷಣ ಮಲಗ್ತಾರೆ. ಗೋಧೂಳಿ ಮುಹೂರ್ತದಲ್ಲಿ ಎಂದೂ ಮಲಗಬಾರದು. ಇದು ಶುಭ ಸಂಕೇತವಲ್ಲ. ಮನೆಗೆ ಬಂದ ನಂತ್ರ ನೀವು ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಆದ್ರೆ ಮಲಗಬಾರದು.
Garuda Purana: ಹೆಂಡತಿ ಅಪರಿಚಿತ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರೆ ನರಕದಲ್ಲಿ ಯಾವ ಶಿಕ್ಷೆ ಗೊತ್ತಾ?
• ಲಕ್ಷ್ಮಿ ಮುನಿಸಿಕೊಳ್ತಾಳೆ : ಪರ್ಸ್ ಹಾಗೂ ಹಣವನ್ನು ಸರಿಯಾಗಿ ಇಡುವ ಅಭ್ಯಾಸ ಮಾಡಿಕೊಳ್ಳಿ. ಅಲ್ಲಿ ಇಲ್ಲಿ ಪರ್ಸ್ ಎಸೆದಿಡಬೇಡಿ. ಕಂಡ ಕಂಡಲ್ಲಿ ಹಣವನ್ನು ಇಡಬೇಡಿ. ಪ್ರತಿ ದಿನ ಪರ್ಸ್ ಇಡಲು ಒಂದೇ ಜಾಗವನ್ನು ನಿಗದಿ ಮಾಡಿಕೊಳ್ಳಿ. ಅದೇ ಜಾಗದಲ್ಲಿ ಪರ್ಸ್ ಇಡಲು ಮರೆಯಬೇಡಿ. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ಎಂದಿಗೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ವಾಸ ಮಾಡೋದಿಲ್ಲ.
• ಪರ್ಸ್ ನಲ್ಲಿ ಇದನ್ನಿಡಬೇಡಿ : ಪರ್ಸ್ ನಲ್ಲಿ ಎಂದಿಗೂ ಬೇಡದ ವಸ್ತುಗಳನ್ನು ಇಡಬೇಡಿ. ಬಿಲ್, ಕಾಗದ, ಕಸ- ಕಡ್ಡಿಗಳನ್ನು ಇಡಬೇಡಿ.
• ಪರ್ಸ್ ಬದಲಿಸಿ : ಪರ್ಸನ್ನು ಆಗಾಗ ಬದಲಿಸುತ್ತಿರಿ. ಹರಿದ, ಹಾಳಾದ, ಬಣ್ಣ ಮಾಸಿದ ಪರ್ಸ್ ಬಳಸಬೇಡಿ.
• ಬಟ್ಟೆ ಬಗ್ಗೆ ಎಚ್ಚರ ಇರಲಿ : ಬಹುತೇಕರು ಮನೆಯಲ್ಲಿದ್ದಾಗ ತಮ್ಮ ಬಟ್ಟೆಗೆ ಗಮನ ನೀಡೋದಿಲ್ಲ. ಹಳೆಯ, ಹರಿದ ಬಟ್ಟೆಯನ್ನು ಧರಿಸ್ತಾರೆ. ಮನೆಯಲ್ಲಿ ಒಬ್ಬರೇ ಇರ್ಲಿ ಇಲ್ಲ ಕುಟುಂಬದ ಜೊತೆ ಇರಿ, ನೀವು ಧರಿಸುವ ಬಟ್ಟೆ ಮೇಲೆ ಕಾಳಜಿವಹಿಸಿ. ಮನೆಯಲ್ಲಿದ್ದಾಗ, ರಜೆಯಿದ್ದಾಗ ಸರಿಯಾದ ಸಮಯಕ್ಕೆ ಸ್ನಾನ ಮಾಡಿ. ಉತ್ತಮ ಬಟ್ಟೆಯನ್ನು ಧರಿಸಿ. ನಿಮ್ಮ ಹಾಗೂ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸರಿಯಾಗಿಟ್ಟುಕೊಳ್ಳಿ. ಸ್ವಚ್ಛತೆಯನ್ನು ಕಾಯ್ದುಕೊಳ್ಳಿ.
ಬುಧನ ಸಂಚಾರ, ಡಿಸೆಂಬರ್‌ನಲ್ಲಿ ಈ ರಾಶಿಗೆ ಲಕ್ ಫುಲ್ ಚೇಂಜ್, ಜಾಕ್‌ಪಾಟ್
• ಮಹಿಳೆಗೆ ಅವಮಾನ ಮಾಡಬೇಡಿ : ಮನೆಯಲ್ಲಿರುವ ಮಹಿಳೆಯರು ದೇವರಿಗೆ ಸಮಾನ ಎಂಬ ನಂಬಿಕೆ ಇದೆ. ಅವರನ್ನು ಗೌರವಿಸುವುದು ಬಹಳ ಮುಖ್ಯ. ಮನೆಯಲ್ಲಿರುವ ಪತ್ನಿ, ತಾಯಿ, ಅಕ್ಕ – ತಂಗಿ ಅಥವಾ ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ಅವರಿಗೆ ಹಿಂಸೆ ನೀಡಬೇಡಿ. ಕೆಟ್ಟ ಶಬ್ಧಗಳ ಬಳಕೆ ಮಾಡಬೇಡಿ. ಅವರ ಕಣ್ಣಲ್ಲಿ ನೀರು ತರಿಸುವ ಕೆಲಸ ಮಾಡಬೇಡಿ. ಇದು ನಿಮಗೆ ಒಳ್ಳೆಯದಲ್ಲ. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ಮನೆಯಲ್ಲಿ ಬಡತನ, ದಾರಿದ್ರ್ಯ ಸದಾ ನೆಲೆ ನಿಲ್ಲಲು ಕಾರಣವಾಗುತ್ತದೆ.
• ಈ ದಿಕ್ಕಿನಲ್ಲಿ ಊಟ ಮಾಡ್ಬೇಡಿ : ಮನೆಯ ಮುಖ್ಯಸ್ಥರು ಎಂದಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ಸೇವಿಸಬಾರದು. ಇದು ನಿಮ್ಮ ವೃತ್ತಿ ಹಾಗೂ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ.