ಅಂಬಾನಿ ಕುಟುಂಬ ನಂಬಿರೋ ಈ ದೇವಾಲಯ ಉದ್ಯಮಿಗಳಿಗೆ ತರುತ್ತೆ ಯಶಸ್ಸು..

By Suvarna News  |  First Published Apr 14, 2024, 2:36 PM IST

ಇದು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ 2022ರಲ್ಲಿ ಸಾಂಪ್ರದಾಯಿಕ ರೋಕಾ ಸಮಾರಂಭದಲ್ಲಿ ತೊಡಗಿಸಿಕೊಂಡ ದೇವಾಲಯವಾಗಿದೆ.


ಅಂಬಾನಿ ಕುಟುಂಬವು ವಿಶ್ವ ದರ್ಜೆಯ ವ್ಯಾಪಾರ ಕುಟುಂಬವಾಗುವುದರ ಜೊತೆಗೆ, ಆಳವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆ ಹೊಂದಿದ್ದಾರೆ. ಮುಕೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅವರ ಮಕ್ಕಳು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಕಾಣಬಹುದು. ಇದಲ್ಲದೆ, ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನವು ಅವರ ಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. 
ಅವರು ತಮ್ಮ ಮನೆಯ ಜನ್ಮದಿನ ಸಮಾರಂಭ, ವಾರ್ಷಿಕೋತ್ಸವ ಅಥವಾ ಕಂಪನಿಯು ಹೊಸ ಹೆಜ್ಜೆ ಇರಿಸಬೇಕೆಂದಾಗ ಮೊದಲು ಶ್ರೀನಾಥಜಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. 

ಪುರುಷ ಬಂಜೆತನ: ವೀರ್ಯದ ಸಂಖ್ಯೆ ಹೆಚ್ಚಿಸುತ್ತೆ ಕಲ್ಲಂಗಡಿ!
 

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ರೋಕಾ ಸಮಾರಂಭ ಕೂಡಾ 2022ರಲ್ಲಿ ಇದೇ ದೇವಾಲಯದಲ್ಲಿ ಜರುಗಿತ್ತು ಎಂಬುದು ಗಮನಾರ್ಹ. 

Latest Videos

undefined

2022ರಲ್ಲಿ, ಮುಕೇಶ್ ಅಂಬಾನಿ ಸೆಪ್ಟೆಂಬರ್‌ನಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದರು ಮತ್ತು ದೇವಾಲಯದಿಂದ ರಾಜಸ್ಥಾನದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. 2015ರಲ್ಲಿಯೂ ಅಂಬಾನಿ 4ಜಿ ಸೇವೆಯನ್ನು ಆರಂಭಿಸುವ ಮುನ್ನ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದ ಹಾಗೆ ಈ ದೇವಾಲಯ ಅಂಬಾನಿ ಕುಟುಂಬಕ್ಕೆ ಏಕೆ ಇಷ್ಟೊಂದು ಪ್ರಿಯ ಗೊತ್ತಾ?
ಶ್ರೀನಾಥ್‌ಜಿಯು ಅಂಬಾನಿ ಕುಟುಂಬದ ಮನೆದೇವ್ರು.

ಉರ್ಫಿಯ ತ್ವಚೆ ಹೊಳಪಿಗೆ ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ, ನೀವೇಕೆ ಟ್ರೈ ಮಾಡ್ಬಾರ್ದು?

ಶ್ರೀನಾಥಜೀ ವಿಗ್ರಹ ವಿಶೇಷ
ಶ್ರೀನಾಥಜಿಯ ವಿಗ್ರಹವನ್ನು 1665ರಲ್ಲಿ ವೃಂದಾವನದ ಬಳಿಯ ಗೋವರ್ಧನದಿಂದ ರಾಜಸ್ಥಾನಕ್ಕೆ ತರಲಾಯಿತು ಎಂದು ದೇವಾಲಯದ ವೆಬ್‌ಸೈಟ್ ಹೇಳುತ್ತದೆ. ವಿಗ್ರಹವು ಮೇವಾರ್‌ಗೆ ಪ್ರಯಾಣ ಬೆಳೆಸಿತು, ಅದು ಪೂರ್ಣಗೊಳ್ಳಲು 32 ತಿಂಗಳುಗಳನ್ನು ತೆಗೆದುಕೊಂಡಿತು. 
ನಾಥದ್ವಾರದಲ್ಲಿ ಭಗವಂತನನ್ನು ನೆಲೆಗೊಳಿಸುವ ನಿರ್ಧಾರವು ಆಸಕ್ತಿದಾಯಕ ಕಥೆಯನ್ನು ಒಳಗೊಂಡಿದೆ. ಸಿಹಾರ್ ಎಂಬ ಸ್ಥಳದಲ್ಲಿ ಭಗವಂತನನ್ನು ಹೊತ್ತ ರಥದ ಚಕ್ರವು ಕೆಸರಿನಲ್ಲಿ ಸಿಲುಕಿಕೊಂಡಾಗ, ಅದು ಶ್ರೀಕೃಷ್ಣನು ಇಲ್ಲಿ ನೆಲೆಸಲು ಬಯಸಿದ ದೈವಿಕ ಸಂಕೇತವೆಂದು ತಿಳಿದು ಈ ಸ್ಥಳದಲ್ಲಿ ದೇವಾಲಯವನ್ನು ಮತ್ತು ಪವಿತ್ರ ಪಟ್ಟಣವನ್ನು ನಿರ್ಮಿಸಲಾಯಿತು. 

1672ರಲ್ಲಿ, ಬನಾಸ್ ನದಿಯ ದಡದಲ್ಲಿ ಈಗ ನಾಥದ್ವಾರ ಎಂದು ಕರೆಯಲ್ಪಡುವ ಸಿಹಾದ್ ಗ್ರಾಮದಲ್ಲಿ ನಿರ್ಮಿಸಲಾದ ಹೊಸ ದೇವಾಲಯದಲ್ಲಿ ಭಗವಾನ್ ಶ್ರೀನಾಥಜಿಯನ್ನು ಇರಿಸಲಾಯಿತು. 

ದೇವಾಲಯವು ಉದ್ದಿಮೆದಾರರಿಗೆ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. 

click me!