ಈ ರಾಶಿಯವರು ಪ್ರೀತಿಯಲ್ಲಿ ಅನ್ ಲಕ್ಕಿ: ಪರಿಹಾರ ಏನು ಗೊತ್ತಾ?

By Sushma Hegde  |  First Published Jun 21, 2023, 10:12 AM IST

ಪ್ರೀತಿಯು ಒಂದು ಮಧುರವಾದ ಭಾವನೆ. ಪ್ರತಿಯೊಬ್ಬರೂ ಕೂಡ ಪ್ರೀತಿಗಾಗಿ ಹಂಬಲಿಸುತ್ತಾರೆ. ಇತಿಹಾಸದುದ್ದಕ್ಕೂ ಲೆಕ್ಕವಿಲ್ಲದಷ್ಟು ಪ್ರೇಮ ಕಥೆಗಳಿವೆ. ಆದರೆ ಕೆಲವರು ಪ್ರೀತಿ ವಿಚಾರದಲ್ಲಿ ದುರಾದೃಷ್ಟವಂತರು ಆಗಿರುತ್ತಾರೆ. ಅದಕ್ಕೆ ಕಾರಣ ಅವರ ರಾಶಿ ಚಕ್ರ.


ಪ್ರೀತಿಯು ಒಂದು ಮಧುರವಾದ ಭಾವನೆ. ಪ್ರತಿಯೊಬ್ಬರೂ ಕೂಡ ಪ್ರೀತಿ (love) ಗಾಗಿ ಹಂಬಲಿಸುತ್ತಾರೆ. ಇತಿಹಾಸದುದ್ದಕ್ಕೂ ಲೆಕ್ಕವಿಲ್ಲದಷ್ಟು ಪ್ರೇಮ ಕಥೆಗಳಿವೆ. ಆದರೆ ಕೆಲವರು ಪ್ರೀತಿ ವಿಚಾರದಲ್ಲಿ ದುರಾದೃಷ್ಟವಂತರು ಆಗಿರುತ್ತಾರೆ. ಅದಕ್ಕೆ ಕಾರಣ ಅವರ ರಾಶಿ ಚಕ್ರ.

ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳು ಪ್ರೀತಿಯ ವಿಚಾರದಲ್ಲಿ ಅನ್ ಲಕ್ಕಿ ಎಂದು ನಂಬಲಾಗಿದೆ. ಈ ಚಿಹ್ನೆಗಳು ತಮಗೆ ಹೊಂದಾಣಿಕೆ ಆಗುವ ಸಂಗಾತಿಯನ್ನು ಹುಡುಕುವಲ್ಲಿ ವಿಫಲ ಆಗಬಹುದು. ಪ್ರೀತಿಯಲ್ಲಿ ದುರದೃಷ್ಟ (bad luck) ಕರವೆಂದು ಪರಿಗಣಿಸುವ ರಾಶಿಚಕ್ರದ ಚಿಹ್ನೆಗಳು ಯಾವುವು? ಪ್ರೀತಿಯನ್ನು ಕಂಡುಕೊಳ್ಳಲು ಆ ರಾಶಿಯವರು ಹೇಗೆ ಅವಕಾಶಗಳನ್ನು ಪಡೆಯಬಹುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ..

Tap to resize

Latest Videos

ಮೇಷ ರಾಶಿ (Aries) 

ಇವರು ಆತ್ಮವಿಶ್ವಾಸ, ಧೈರ್ಯ ಮತ್ತು ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ ಪ್ರೀತಿಯ ವಿಚಾರದಲ್ಲಿ ಬದ್ಧತೆಗಾಗಿ ಹೋರಾಡಬಹುದು. ಮತ್ತು ಇವರಿಗೆ ದೀರ್ಘಾವಧಿಯ ಸಂಬಂಧ (long term relationship) ಗಳನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಬಹುದು. ಮೇಷ ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿ ಬಗ್ಗೆ ತಿಳಿದುಕೊಳ್ಳಲು ಸಮಯ (time)  ಮೀಸಲಿಡಬೇಕು. ಅವರ ಜೊತೆ ಹೆಚ್ಚಾಗಿ ಬೆರೆಯಬೇಕು.

Daily Horoscope: ಈ ರಾಶಿಗೆ ಆದಾಯ ಕಡಿಮೆಯಿಂದ ಕದಡುವ ಮನಃಶಾಂತಿ

 

ವೃಷಭ ರಾಶಿ (Taurus) 

ಇವರು ತಮ್ಮ ನಿಷ್ಠೆ, ಸ್ಥಿರತೆ ಮತ್ತು ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ಮೊಂಡುತನ ಹೆಚ್ಚು. ಇದರಿಂದ ಹೊಸ ಸಂಬಂಧ ಬೆಳೆಸಲು ತೊಡಕು ಉಂಟಾಗುತ್ತದೆ. ಇವರು ಪ್ರೀತಿಸುವ ವ್ಯಕ್ತಿಗಳಿಗೆ ತಮ್ಮ ಭಾವನೆ (feeling) ಗಳನ್ನು ವ್ಯಕ್ತಪಡಿಸಲು ಸಹ ಹೆಣಗಾಡಬಹುದು. ತುಂಬಾ ಭಾವನಾತ್ಮಕವಾಗಿ ತಮ್ಮ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಇವರಿಗೆ ಕಷ್ಟವಾಗುತ್ತದೆ. ವೃಷಭ ರಾಶಿಯ ವ್ಯಕ್ತಿಗಳು ಮುಕ್ತವಾಗಿ ಬದುಕಲು ಕಲಿಯಬೇಕು.  ಹೆಚ್ಚು ಸಂವಹನಶೀಲ (Communicative) ರಾಗಿ ಮತ್ತು ತಮ್ಮ ಭಾವನೆಗಳನ್ನು ಹೆಚ್ಚು ಮುಕ್ತವಾಗಿ ವ್ಯಕ್ತಪಡಿಸಬೇಕು.

ಮಿಥುನ ರಾಶಿ (Gemini) 

ಈ ರಾಶಿಯವರನ್ನು ಪ್ರೀತಿಯಲ್ಲಿ ದುರದೃಷ್ಟಕರ ಎಂದು ನಂಬಲಾಗಿದೆ. ತಮ್ಮ ಬುದ್ಧಿವಂತಿಕೆ, ಬುದ್ಧಿ ಮತ್ತು ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದ್ದಾರೆ. ಇವರು ಒಂದು ವಿಷಯದ ಬಗ್ಗೆ ನಿರ್ಣಯ (resolution) ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಮತ್ತು ಸುಲಭವಾಗಿ ವಿಚಲಿತರಾಗುವ ಸಾಧ್ಯತೆ ಇದೆ. ಇದರಿಂದ ನಂಬಿಕೆ (faith) ಯ ಸಮಸ್ಯೆ ಎದುರಾಗಬಹುದು. ಇವರು ಹೆಚ್ಚು ನಿರ್ಣಾಯಕ ಮತ್ತು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಕೆಲಸ ಮಾಡಬೇಕು. ತಮ್ಮ ಸಂಗಾತಿ ಜೊತೆ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿರಬೇಕು. ಇದರಿಂದ ಸಂಬಂಧಗಳಲ್ಲಿ ನಂಬಿಕೆ ಉಳಿಯುತ್ತದೆ.

ದಾವಣಗೆರೆ: ಮಳೆ ಆಗಮನಕ್ಕಾಗಿ ದುಗ್ಗಮ್ಮ ದೇವಿಗೆ ಎಡೆ ಪೂಜೆ

 

ಸಿಂಹ ರಾಶಿ (Leo) 

ಈ ರಾಶಿಚಕ್ರದವರು ಪ್ರೀತಿಯನ್ನು ಹುಡುಕುವಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಸಿಂಹ ರಾಶಿಯವರು ತಮ್ಮ ಆತ್ಮವಿಶ್ವಾಸ (Confidence) , ವರ್ಚಸ್ಸು ಮತ್ತು ಸೃಜನಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ಪ್ರೀತಿಯ ವಿಚಾರದಲ್ಲಿ  ನಂಬಿಕೆಯ ಸಮಸ್ಯೆಗಳು ಎದುರಾಗುತ್ತವೆ. ಈ ವ್ಯಕ್ತಿಗಳು ಹೆಚ್ಚು ನಿಸ್ವಾರ್ಥ (Selfless)  ಮತ್ತು ತಮ್ಮ ಪಾಲುದಾರರ ಅಗತ್ಯತೆಗಳನ್ನು ಪರಿಗಣಿಸುವ ಕೆಲಸ ಮಾಡಬೇಕು. ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಹಾನುಭೂತಿ ಹೆಚ್ಚಿಸುವ ಕೆಲಸ ಮಾಡಬೇಕು.

ಕನ್ಯಾರಾಶಿ (Virgo) 

ಕನ್ಯಾ ರಾಶಿಯವರು  ಪ್ರೀತಿಯನ್ನು ಹುಡುಕುವಲ್ಲಿ ಹೋರಾಡಬೇಕಾಗುತ್ತದೆ. ಕನ್ಯಾರಾಶಿ ವ್ಯಕ್ತಿಗಳು ತಮ್ಮ ಬುದ್ಧಿವಂತಿಕೆ (wisdom) ಗೆ ಹೆಸರುವಾಸಿಯಾಗಿದ್ದಾರೆ. ಅವರ ಪರಿಪೂರ್ಣತೆ ಮತ್ತು ವಿಮರ್ಶಾತ್ಮಕ ಸ್ವಭಾವವು ಪ್ರೀತಿ ವಿಚಾರದಲ್ಲಿ ಸಂಕಷ್ಟ ತರಲಿದೆ. ಕೆಲವೊಮ್ಮೆ ಶಾಶ್ವತ ಸಂಬಂಧಗಳನ್ನು ಬೆಸೆಯಲು ಇವರಿಗೆ ಕಷ್ಟವಾಗಬಹುದು. ಕನ್ಯಾ ರಾಶಿಯವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇವರು ತಮ್ಮ ಭಾವನೆ (feeling) ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ಮಾಡಬೇಕು. ಮತ್ತು ತಮ್ಮ ಪಾಲುದಾರರಿಗೆ ಹೆಚ್ಚು ಪ್ರೀತಿ ತೋರಿಸಲು ಕೆಲಸ ಮಾಡಬೇಕು.

click me!