Zodiac Sign: ಇಂಥವರು ನಿಮಗೆ ಸಿಕ್ಕರೆ ಐಡಿಯಲ್ ಕಪಲ್ ಎನಿಸಿಕೊಳ್ತೀರಿ

By Suvarna NewsFirst Published Mar 15, 2024, 5:54 PM IST
Highlights

ಎಲ್ಲ ಸಂಗಾತಿಗಳೂ ಐಡಿಯಲ್ ಕಪಲ್ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಅಂಥದ್ದೊಂದು ಆಳವಾದ ಬಾಂಧವ್ಯ, ಪರಸ್ಪರ ಹೊಂದಾಣಿಕೆ, ಗೌರವ ಏರ್ಪಡಬೇಕಾದರೆ ರಾಶಿಚಕ್ರಗಳ ನಡುವೆಯೂ ಸಮನ್ವಯ ಉಂಟಾಗಬೇಕು. ಕೆಲವು ರಾಶಿಗಳ ನಡುವೆ ಇಂತಹ ಸಂಬಂಧ ಏರ್ಪಡುವುದನ್ನು ಕಾಣಬಹುದು.

ಕೆಲವರ ದಾಂಪತ್ಯ ನೋಡಿ. ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತೆ ಇರುತ್ತಾರೆ. ಎಂದಿಗೂ ಒಬ್ಬರಿಗೊಬ್ಬರು ಬಿಟ್ಟಿರುವುದಿಲ್ಲ. ಪರಸ್ಪರ ಗೌರವ ಹೊಂದಿದ್ದು, ಆಳವಾದ ಸಾಂಗತ್ಯ ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ನಡುವೆ ಅಷ್ಟು ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಅತ್ಯಂತ ಶಕ್ತಿಯುತ ಬಾಂಧವ್ಯ ಹೊಂದಲು ರಾಶಿಚಕ್ರದ ಪ್ರಭಾವದಿಂದಲೇ ಸಾಧ್ಯವಾಗುತ್ತದೆ. ಇವರನ್ನು ನಿಜವಾಗಿಯೂ ಸೋಲ್ ಮೇಟ್ ಎಂದು ಕರೆಯಬಹುದು. ಇವರಲ್ಲಿ ಸಹಜವಾಗಿರುವ ಆಳವಾದ ಭಾವನೆಗಳು ಇವರನ್ನು ಒಂದುಗೂಡಿಸುತ್ತವೆ. ಆಸಕ್ತಿಗಳು ಇವರ ನಡುವೆ ಉತ್ತಮ ಬಾಂಧವ್ಯ ಏರ್ಪಡುವಂತೆ ಮಾಡುತ್ತವೆ. ಕೆಮಿಸ್ಟ್ರಿಯೊಂದು ಇವರ ನಡುವೆ ನಿರ್ಮಾಣವಾಗಿರುತ್ತದೆ. ಅಂತಹ ಕೆಮಿಸ್ಟ್ರಿ ಎಲ್ಲ ದಾಂಪತ್ಯದಲ್ಲೂ ಏರ್ಪಡುವುದಿಲ್ಲ. ವಿಶಿಷ್ಟ ಶಕ್ತಿಯಿಂದಾಗಿ ಸಂಬಂಧಗಳು ವಿಶೇಷವಾಗುತ್ತವೆ. ಅಂತಹ ಸೋಲ್ ಮೇಟ್ ಸಾಂಗತ್ಯ ಯಾವ ಯಾವ ರಾಶಿಗಳ ನಡುವೆ ನಿರ್ಮಾಣವಾಗಬಲ್ಲದು ಎಂದು ಅರಿತುಕೊಳ್ಳುವುದು ಉತ್ತಮ.

•    ಸಿಂಹ ಮತ್ತು ಧನು (Leo and Sagittarius)
ಆಕರ್ಷಕ (Attractive) ಹಾಗೂ ನೇರಾನೇರ ನಡವಳಿಕೆಯ ಸಿಂಹ ರಾಶಿಯವರು ಸಾಹಸಿ (Adventurous) ಪ್ರವೃತ್ತಿಯ ಧನು ರಾಶಿಯರನ್ನು ಭೇಟಿಯಾದಾಗ ಎಲ್ಲ ದಿಕ್ಕಿನಲ್ಲೂ ಬೆಳಕು ಹರಿಯಬಲ್ಲದು. ಇವೆರಡೂ ರಾಶಿಗಳು ಜೀವನದ ಬಗ್ಗೆ ಭಾರೀ ತೀವ್ರವಾದ ಉತ್ಸಾಹ (Passion) ಹೊಂದಿವೆ. ಸಾಹಸವನ್ನು ಬಯಸುತ್ತವೆ. ಇವೆರಡೂ ರಾಶಿಗಳು ಜತೆಯಾದಾಗ ಯಾರೂ ತಡೆದು ನಿಲ್ಲಿಸಲು ಸಾಧ್ಯವಾಗದ ವೇಗವೊಂದು ದಕ್ಕಿ ಉತ್ತಮ ಸಾಂಗತ್ಯ (Relation) ನಿರ್ಮಾಣವಾಗುತ್ತದೆ.

ಸೂರ್ಯ-ಗುರುವಿನಿಂದ ಇವರು ಮುಟ್ಟಿದ್ದೆಲ್ಲಾ ಚಿನ್ನ, ಸುವರ್ಣ ಕಾಲ ಶುರು

ಜೀವನದ ಕುರಿತು ಸಿಂಹ ರಾಶಿಯ ಜನಕ್ಕಿರುವ ಧೈರ್ಯ, ಆತ್ಮವಿಶ್ವಾಸ ಹಾಗೂ ಧನು ರಾಶಿಯ ಜನರಿಗಿರುವ ಆಶಾವಾದಿತನ (Optimism) ಮತ್ತು ಉತ್ಸಾಹ ಜತೆಯಾಗುವುದರಿಂದ ಇವರಿಗೆ ಯಾವುದೇ ಸಂದರ್ಭದಲ್ಲೂ ಜೀವನ ಬೋರೆನಿಸುವುದಿಲ್ಲ. ಇಬ್ಬರೂ ಎಂದಿಗೂ ಉತ್ಸಾಹ ಕಾಯ್ದುಕೊಂಡಿದ್ದು, ಜತೆಯಾಗಿ ಸವಾಲುಗಳನ್ನು ಎದುರಿಸುತ್ತಾರೆ. 

•    ವೃಶ್ಚಿಕ ಮತ್ತು ಮೀನ (Scorpio and Pisces)
ಆಳವಾದ ತೀವ್ರತೆಯ (Intense) ಮತ್ತು ನಿಗೂಢ ವರ್ತನೆಯ ವೃಶ್ಚಿಕ ರಾಶಿಯ ಜನರಿಗೆ ಸೂಕ್ಷ್ಮವಾದ ಹಾಗೂ ಸಹಾನುಭೂತಿಯುಳ್ಳ ಮೀನ ರಾಶಿಯವರು ಅತ್ಯುತ್ತಮವಾಗಿ ಹೊಂದುತ್ತಾರೆ. ಈ ಜಲತತ್ವದ ರಾಶಿ ಆಳವಾದ ಭಾವನಾತ್ಮಕ (Emotional) ಸಂಪರ್ಕ ಹೊಂದುವಲ್ಲಿ ಮುಂದಿದ್ದು, ಇತರರನ್ನು ಆಳವಾದಿ ಅರ್ಥ ಮಾಡಿಕೊಳ್ಳುತ್ತಾರೆ. ಪರಸ್ಪರ ಇವರಿಬ್ಬರೂ ಆಳವಾದ ಭಾವನೆ (Feeling) ಹೊಂದಿರುವುದರಿಂದ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ವೃಶ್ಚಿಕ ರಾಶಿಯ ತೀವ್ರತೆಗೆ ಹಾಗೂ ಮೀನ ರಾಶಿಯ ಅಂತಃಪ್ರಜ್ಞೆ (Intusion), ಪ್ರೀತಿಯ (Love) ನಡುವೆ ಶಕ್ತಿಯುತ ಹಾಗೂ ಪರಿವರ್ತನೆಗೆ ಕಾರಣವಾಗುವಂತ ದೃಢವಾದ ಬಾಂಧವ್ಯ ಏರ್ಪಡುವಲ್ಲಿ ಯಶಸ್ವಿಯಾಗುತ್ತದೆ. ಇಬ್ಬರೂ ಆಳವಾದ ಭಾವನಾತ್ಮಕ ಸಾಂಗತ್ಯ, ಅರ್ಥೈಸಿಕೊಳ್ಳುವಿಕೆಯ ಮೂಲಕ ಅತ್ಯುತ್ತಮ ಮಟ್ಟದಲ್ಲಿ ಕನೆಕ್ಟ್ ಆಗುತ್ತಾರೆ. 

•    ವೃಷಭ ಮತ್ತು ಕನ್ಯಾ (Taurus and Virgo)
ಅತ್ಯಂತ ಸಹಜ ನಡೆನುಡಿಯ (Ground) ವೃಷಭ ರಾಶಿಯ ಜನರು ಪ್ರಾಯೋಗಿಕ (Practical) ಹಾಗೂ ಎಲ್ಲವನ್ನೂ ಅರಿತುಕೊಳ್ಳುವ ಕನ್ಯಾ ರಾಶಿಯ ಜನರಲ್ಲಿ ಸ್ಥಿರವಾದ ಬಾಂಧವ್ಯ ಕಾಣುತ್ತಾರೆ. ವೃಷಭ ರಾಶಿ ಎಂದಿಗೂ ಸಂಬಂಧದಲ್ಲಿ ಸ್ಥಿರತೆಯನ್ನು ಬಯಸುವಂಥದ್ದು. ಇವು ಭೂತತ್ವದ ರಾಶಿಯಾಗಿದ್ದು, ಬದ್ಧತೆ (Commit) ಮತ್ತು ವಿಶ್ವಾಸಾರ್ಹತೆಗೆ ಆದ್ಯತೆ ನೀಡುತ್ತವೆ. ಇವರಿಬ್ಬರ ಸಾಂಗತ್ಯ ಸಹ ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಡೆಯುತ್ತದೆ. ವೃಷಭದ ಅಚಲತೆ ಹಾಗೂ ಕನ್ಯಾದ ವಿಮರ್ಶಾತ್ಮಕ ಗುಣವು ಇಬ್ಬರನ್ನೂ ಸೌಹಾರ್ದವಾಗಿ ಬೆಸೆಯುತ್ತದೆ. ವೃಷಭ ಮತ್ತು ಕನ್ಯಾ ಎರಡೂ ರಾಶಿಯ ಜನ ಬದ್ಧತೆ ಮತ್ತು ವಿಶ್ವಾಸಾರ್ಹತೆ (Reliability) ಬಯಸುವುದರಿಂದ ಅದು ಸಂಬಂಧದಲ್ಲಿ ಇಬ್ಬರಿಗೂ ದೊರೆಯುತ್ತದೆ. 

ಜಾತಕಗಳಲ್ಲಿ ಹೊಂದಾಣಿಕೆ ಇಲ್ವೇ? ಈ ವಿಧಾನಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಬೋದು ನೋಡಿ

•    ಮಿಥುನ ಮತ್ತು ಕುಂಭ (Gemini and Aquarius)
ಚುರುಕು (Intellectual) ಬುದ್ಧಿ ಮಿಥುನ ರಾಶಿಯವರು ಅನ್ವೇಷಣಾತ್ಮಕ (Innovative) ದೃಷ್ಟಿಕೋನ ಹೊಂದಿರುವ ಕುಂಭ ರಾಶಿಯ ಜನರಲ್ಲಿ ತಮ್ಮ ಸಾಂಗತ್ಯ ಕಂಡುಕೊಳ್ಳುತ್ತಾರೆ. ವಾಯುತತ್ವದ ಈ ರಾಶಿಯ ಜನ ಪರಸ್ಪರ ಬೌದ್ಧಿಕ ಪ್ರೀತಿ, ಕ್ರಿಯಾಶೀಲ (Creative) ಅಭಿವ್ಯಕ್ತಿಯಿಂದ ಬೆರೆಯುತ್ತಾರೆ. ಈ ಗುಣವು ಇವರಿಬ್ಬರನ್ನೂ ಆದರ್ಶ ಜೋಡಿಯನ್ನಾಗಿ (Ideal Couple) ರೂಪಿಸುತ್ತದೆ. ಮಿಥುನ ರಾಶಿಯ ಜನರ ಚುರುಕುತನ, ಅಳವಡಿಸಿಕೊಳ್ಳುವ ಗುಣವು ಕುಂಭದವರ ಸಹಜತೆ ಮತ್ತು ಅನ್ವೇಷಣಾತ್ಮಕ ಧೋರಣೆಗೆ ಸರಿಹೊಂದುತ್ತದೆ. 
 

click me!