Vastu Tips : ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲು ಹೀಗೆ ಮಾಡಿ..

By Suvarna NewsFirst Published Dec 19, 2022, 5:31 PM IST
Highlights

ದಾಂಪತ್ಯದಲ್ಲಿ ಜಗಳ - ಗಲಾಟೆ ಸಾಮಾನ್ಯ. ಆದ್ರೆ ಪ್ರತಿ ದಿನ ಕಿತ್ತಾಟವಾಗ್ತಿದ್ದರೆ ಜೀವನದ ನೆಮ್ಮದಿ ಹಾಳಾಗುತ್ತದೆ. ಇದಕ್ಕೆ ಅನೇಕ ಕಾರಣವಿರುತ್ತದೆ. ಈ ಸಮಸ್ಯೆಯನ್ನು ವಾಸ್ತು ಮೂಲಕ ಕೂಡ ಬಗೆಹರಿಸಬಹುದು
 

ಸಂಸಾರ ಮುನ್ನಡೆಯಬೇಕೆಂದ್ರೆ ಪತಿ – ಪತ್ನಿ ಮಧ್ಯೆ ಪ್ರೀತಿ, ಗೌರವ ಬಹಳ ಮುಖ್ಯವಾಗುತ್ತದೆ. ಪ್ರೀತಿ ಇಲ್ಲದ ಮೇಲೆ ಸಂಸಾರದ ನೊಗ ಎಳೆಯೋದು ಕಷ್ಟವಾಗುತ್ತದೆ. ಅನೇಕ ಬಾರಿ ದಂಪತಿ ಒಟ್ಟಿಗೆ ನಗ್ತಾ ಜೀವನ ನಡೆಸುವುದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅವರ ಕೆಟ್ಟ ಕಣ್ಣು ನಿಮ್ಮ ಮೇಲೆ ಬಿದ್ದಿರುತ್ತದೆ. ಈ ಕಾರಣದಿಂದಾಗಿ ಸಂಬಂಧದಲ್ಲಿ ಅಂತರ ಕಾಣಿಸಿಕೊಳ್ಳಲು ಶುರುವಾಗುತ್ತದೆ.  

ದಂಪತಿ (Couple) ಮಧ್ಯೆ ಪ್ರೀತಿ (Love) ಕಡಿಮೆಯಾಗ್ತಿದೆ ಎಂಬುದು ಗೊತ್ತಾದ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯತೆ ಇದೆ. ಅದನ್ನು ನಿರ್ಲಕ್ಷ್ಯ ಮಾಡಿದ್ರೆ ಇಬ್ಬರು ಮತ್ತಷ್ಟು ದೂರವಾಗ್ತೀರಿ. ಇದ್ರಿಂದ ಸಂಬಂಧ ಮುರಿದುಬೀಳುವ ಸಾಧ್ಯತೆಯಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ದಾಂಪತ್ಯ ಸುಖಕ್ಕೆ ಸಂಬಂಧಿಸಿದಂತೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಸಂತೋಷದ ವೈವಾಹಿಕ ಜೀವನವನ್ನು ನಡೆಸಲು ಮತ್ತು ಸಂಬಂಧಗಳ ನಡುವಿನ ಬಿರುಕು ತುಂಬಲು ಕೆಲ ಪರಿಹಾರಗಳನ್ನು ಕೂಡ ಹೇಳಲಾಗಿದೆ. ನಿಮ್ಮಿಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗ್ತಿದೆ ಎಂದಾದ್ರೆ ವಾಸ್ತು (Vastu ) ಶಾಸ್ತ್ರದಲ್ಲಿ ಹೇಳಿದ ನಿಯಮ ಪಾಲನೆ ಮಾಡಿ. 

Dhanurmas: ಇನ್ನೊಂದು ತಿಂಗಳು ಶುಭ ಕಾರ್ಯಗಳನ್ನು ನಡೆಸುವಂತಿಲ್ಲ!

ದಾಂಪತ್ಯದಲ್ಲಿ ಅಂತರ ಕಾಣಸಿದ್ರೆ ಈ ಟಿಪ್ಸ್ ಫಾಲೋ ಮಾಡಿ : 
ಬೆಡ್ ರೂಮಿ (Bedroom) ನಲ್ಲಿ ಇಡಿ ಈ ವಸ್ತು :
ಬೆಡ್ ರೂಮ್ ದಂಪತಿಯನ್ನು ಒಂದು ಮಾಡುವ ಸ್ಥಳ. ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಅನೇಕರ ಜಗಳ ಮಲಗಿದ ಮೇಲೆ ಶುರುವಾಗುತ್ತದೆ. ಇಬ್ಬರ ಮಧ್ಯೆ ಗಲಾಟೆ ಇರಬಾರದು, ಬೆಡ್ ರೂಮಿನಲ್ಲಿ ಪ್ರೀತಿ ಹರಿಯಬೇಕು ಎಂದಾದ್ರೆ ನೀವು ಒಂದು ಗಾಜಿನ ಪಾತ್ರೆಯಲ್ಲಿ ಸಣ್ಣ ಕಲ್ಲುಗಳು ಅಥವಾ ಹರಳುಗಳನ್ನು ಹಾಕಿ. ಅಲ್ಲಿ ಎರಡು ಕೆಂಪು ಬಣ್ಣದ ಮೇಣದಬತ್ತಿಗಳನ್ನು ಬೆಳಗಿಸಿ. ಈ ಗಾಜಿನ ಪಾತ್ರೆ ಕೋಣೆಯ ನೈಋತ್ಯ ಭಾಗದಲ್ಲಿ ಇರಲಿ. ನೀವು ಬೆಡ್ ರೂಮಿನಲ್ಲಿ ಗಾಜಿನ ಪಾತ್ರೆಯಿಟ್ಟು ಮೇಣದ ಬತ್ತಿ ಬೆಳಗಿಸಿದ್ರೆ ಪತಿ ಮತ್ತು ಪತ್ನಿ ನಡುವೆ ಹೊಂದಾಣಿಕೆ ಶುರುವಾಗುತ್ತದೆ. ಪ್ರೀತಿ ಹೆಚ್ಚಾಗುತ್ತದೆ.

ಅನವಶ್ಯಕ ಜಗಳ ತಪ್ಪಿಸಲು ಹೀಗೆ ಮಾಡಿ : ಪತಿ – ಪತ್ನಿ ಮಧ್ಯೆ ಸಣ್ಣಪುಟ್ಟ ಜಗಳ ಮಾಮೂಲಿ. ಆದ್ರೆ ಸಣ್ಣ ಸಣ್ಣ ವಿಷ್ಯಕ್ಕೆ ದೊಡ್ಡ ಜಗಳವಾಗ್ತಿದ್ದರೆ ಇಬ್ಬರ ಮಧ್ಯೆ ಹೊಂದಾಣಿಕೆ ತಪ್ಪುತ್ತಿದೆ ಎಂದೇ ಅರ್ಥೈಸಿಕೊಳ್ಳಬಹುದು. ಮನೆಯಲ್ಲಿ ಪದೇ ಪದೇ ಜಗಳವಾಗ್ತಿದ್ದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಇದ್ರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ನಕಾರಾತ್ಮಕ ಶಕ್ತಿ ಪ್ರವೇಶ ನಿಲ್ಲಬೇಕು, ಇಬ್ಬರ ಮಧ್ಯೆ ಸಾಮರಸ್ಯ ಬೆಳೆಯಬೇಕು ಎಂದಾದ್ರೆ ಮನೆಯನ್ನು ಪ್ರತಿ ದಿನ ಉಪ್ಪು ನೀರಿನಿಂದ ಒರೆಸಬೇಕು. ನೀರಿಗೆ ಚಿಟಕಿ ಉಪ್ಪನ್ನು ಬೆರೆಸಿ ನೀವು ಮನೆ ಕ್ಲೀನ್ ಮಾಡಬೇಕು. ಒಂದ್ವೇಳೆ ಇದು ಸಾಧ್ಯವಿಲ್ಲ ಎಂದಾದ್ರೆ ನೀವು ವಾರದಲ್ಲಿ ಎರಡು ಬಾರಿಯಾದ್ರೂ ಈ ಕೆಲಸ ಮಾಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. 

Flirting ಮಾಡೋದರಲ್ಲಿ ಈ zodiac signನ ಜನರು ನಿಸ್ಸೀಮರು!

ಮಲಗುವ ರೂಮ್ ನಲ್ಲಿರಲಿ ಕನ್ನಡಿ : ನಾವು ಮನೆಯಲ್ಲಿಡುವ ಪ್ರತಿಯೊಂದು ವಸ್ತು ಹಾಗೂ ಆ ವಸ್ತುವನ್ನು ಇಡುವ ದಿಕ್ಕು ಇವೆಲ್ಲವೂ ವಾಸ್ತು ಮೇಲೆ ಪ್ರಭಾವ ಬೀರುತ್ತದೆ. ತಾವು ತಪ್ಪಾದ ಸ್ಥಳದಲ್ಲಿ ತಪ್ಪಾದ ವಸ್ತುವನ್ನು ಇಟ್ಟರೆ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ವೈವಾಹಿಕ ಜೀವನದ ಸುಖಕ್ಕೆ ನೀವು ಬೆಡ್ ರೂಮಿನಲ್ಲಿ ಕನ್ನಡಿಯನ್ನು ಹಾಕಬೇಕು. ಇದು ಮಂಗಳಕರ ಫಲವನ್ನು ನೀಡುತ್ತದೆ. ಬೆಡ್ ರೂಮಿನಲ್ಲಿ ಕನ್ನಡಿ ಎಲ್ಲಿ ಹಾಕಬೇಕು ಎಂಬುದು ತಿಳಿದಿರಬೇಕು. ನೀವು ನಿಮ್ಮ ಹಾಸಿಗೆ ಮುಂದೆ ಕನ್ನಡಿಯನ್ನು ಹಾಕಬೇಡಿ. ನೀವು ಎದ್ದ ರಕ್ಷಣ ಅಥವಾ ರಾತ್ರಿ ಮಲಗಿದ ಸಂದರ್ಭದಲ್ಲಿ ನಿಮ್ಮ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಬಾರದು ಹಾಗೆ ಕನ್ನಡಿಯನ್ನು ಹಾಕಿ .  
 

click me!