ನವರಾತ್ರಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ತಾಯಿಯ 9 ಅವತಾರಗಳನ್ನು ಒಂಭತ್ತು ದಿನ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಬೀಳುವ ಕನಸು ಕೂಡ ಮುಖ್ಯವಾಗುತ್ತದೆ. ಕನಸಿನಲ್ಲಿ ಅಪ್ಪಿತಪ್ಪಿ ಇವು ಕಂಡ್ರೆ ನೀವು ಧಾರಾಳವಾಗಿ ಖುಷಿಪಡಬಹುದು.
ರಾತ್ರಿ ಮಲಗಿದ್ದಾಗ ಮಾತ್ರವಲ್ಲ ಹಗಲಿನಲ್ಲಿ ಮಲಗಿದ್ರೂ ಕೆಲವರಿಗೆ ಕನಸು ಬೀಳುತ್ತೆ. ಭಿನ್ನ ಭಿನ್ನ ಕನಸುಗಳನ್ನು ನಾವು ಕಾಣ್ತೇವೆ. ನಾವು ನೆನಪು ಮಾಡಿಕೊಳ್ಳದ ವ್ಯಕ್ತಿ, ವಿಷ್ಯ, ಪ್ರದೇಶಗಳು ಕನಸಿನಲ್ಲಿ ಬರುತ್ತವೆ. ಕೆಲವೊಮ್ಮೆ ಹಗಲಿನಲ್ಲಿ ನಾವು ನೋಡಿದ, ಮಾತನಾಡಿದ ವಿಷ್ಯಗಳೂ ಸ್ವಪ್ನದ ರೂಪದಲ್ಲಿ ಬರೋದಿದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿಗೆ ವಿಶೇಷ ಅರ್ಥವನ್ನು ನೀಡಲಾಗುತ್ತದೆ. ಕನಸುಗಳು ನಮ್ಮ ಭವಿಷ್ಯದಲ್ಲಾಗುವ ಘಟನೆಗಳ ಮುನ್ಸೂಚನೆಯಾಗಿದೆ. ನಮ್ಮ ಮಾನಸಿಕ ಸ್ಥಿತಿಯನ್ನೂ ಕನಸು ಹೇಳುತ್ತದೆ. ಈಗ ನವರಾತ್ರಿ ನಡೆಯುತ್ತಿದೆ. ನವರಾತ್ರಿ ಸಂದರ್ಭದಲ್ಲಿ ದೇವಿ ದುರ್ಗೆಯನ್ನು ಜನರು ಪೂಜೆ ಮಾಡ್ತಾರೆ. ನವರಾತ್ರಿ ಶುಭ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಕೆಲ ವಸ್ತುಗಳು ಕಂಡ್ರೆ ಅದ್ರ ನಿಮಗೆ ಮಂಗಳಕರವಾಗಿರಲಿದೆ. ನಿಮ್ಮ ಜೀವನದಲ್ಲಿ ಆಗುವ ದೊಡ್ಡ ಬದಲಾವಣೆಯನ್ನು ಆ ಕನಸು ಸೂಚಿಸಲಿದೆ. ನಾವಿಂದು ನವರಾತ್ರಿಯಲ್ಲಿ ಯಾವ ಕನಸು ಬಿದ್ರೆ ಶುಭವೆಂದು ನಿಮಗೆ ಹೇಳ್ತೇವೆ.
ನವರಾತ್ರಿ (Navratri) ಯಲ್ಲಿ ಈ ಕನಸು (Dream) ಬಿದ್ರೆ ಏನರ್ಥ? :
undefined
ಮದುವೆ (Marriage) ಯ ವಸ್ತುಗಳು : ನವರಾತ್ರಿಯಲ್ಲಿ ದೇವಿಗೆ ಮದುವೆಯಲ್ಲಿ ಬಳಸುವ ವಸ್ತುಗಳನ್ನು ಅರ್ಪಿಸಲಾಗುತ್ತದೆ. ತಾಯಿಯನ್ನು 16 ಅಲಂಕಾರಗಳಿಂದ ಅಲಂಕರಿಸಲಾಗುತ್ತದೆ. ಒಂದ್ವೇಳೆ ನವರಾತ್ರಿ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಬಳೆಗಳು, ಸಿಂಧೂರ ಅಥವಾ ಕೆಂಪು ಚುನರಿಗಳಂತಹ ಮದುವೆಯ ಪರಿಕರಗಳನ್ನು ಕಂಡ್ರೆ ಖುಷಿಯಾಗಿದೆ. ಇದು ಮಂಗಳಕರ ಸಂಕೇತವಾಗಿದೆ. ನಿಮ್ಮ ವೈವಾಹಿಕ ಜೀವನದಲ್ಲಿನ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತದೆ ಎಂಬುದನ್ನು ಈ ಕನಸು ಸೂಚಿಸುತ್ತದೆ ನಿಮ್ಮ ಕನಸಿನಲ್ಲಿ ನೀವು ಬಳೆ ಖರೀದಿ ಮಾಡಿದಂತೆ ಕಂಡ್ರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಮದುವೆಯಾಗಲು ಸಮಸ್ಯೆಯಾಗ್ತಿದ್ದವರಿಗೆ ಈ ಕನಸು ಬಿದ್ರೆ ಶೀರ್ಘವೇ ಕಂಕಣಬಲ ಕೂಡಿ ಬರಲಿದೆ ಎಂಬ ಅರ್ಥ.
ಗಿಳಿ ಮನೆಯಲ್ಲಿದ್ದರೆ, ನಿಮ್ಮ ಅದೃಷ್ಟ ಹೊಳೆಯುವುದು ಗ್ಯಾರಂಟಿ!
ತಾಯಿ ದುರ್ಗೆ ದರ್ಶನ : ದೇವರು ಕನಸಿನಲ್ಲಿ ಬರೋದು ಬಹಳ ಅಪರೂಪ. ಕನಸಿನಲ್ಲಿ ದೇವರು ಬಂದ್ರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅದ್ರಲ್ಲೂ ದುರ್ಗೆ ಕನಸಿನಲ್ಲಿ ಬಂದ್ರೆ ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ನಿಮ್ಮ ಕನಸಿನಲ್ಲಿ ದುರ್ಗೆ ಅಥವಾ ದುರ್ಗೆ ವಿಗ್ರಹ ಕಾಣಿಸಿದರೆ ಅದನ್ನು ಶುಭವೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಅವತಾರದಲ್ಲಿ ದುರ್ಗೆ ಕಾಣಿಸಿದ್ರೆ ಮತ್ತಷ್ಟು ಶುಭ : ನವರಾತ್ರಿ ವೇಳೆ ನೀವು ಸಿಂಹದ ಮೇಲೆ ಸವಾರಿ ಮಾಡಿರುವ ದುರ್ಗೆಯನ್ನು ನೋಡಿದ್ರೆ ಅದನ್ನು ಬಹಳ ವಿಶೇಷವೆಂದು ನಂಬಲಾಗುತ್ತದೆ. ತಾಯಿ ದುರ್ಗೆ ಸಿಂಹದ ಮೇಲೆ ಸವಾರಿ ಮಾಡಿದಂತೆ ಕಂಡ್ರೆ ಜೀವನದಲ್ಲಿ ಧನಾತ್ಮಕ ಬದಲಾವಣೆಯಾಗುತ್ತದೆ. ಪ್ರಗತಿಶೀಲ ಬದಲಾವಣೆಯನ್ನು ನೀವು ನೋಡ್ಬಹುದು. ಇದು ಶತ್ರುಗಳ ಧಮನವನ್ನು ಸೂಚಿಸುತ್ತದೆ. ಅಂದ್ರೆ ನಿಮ್ಮ ಕನಸಿನಲ್ಲಿ ದುರ್ಗೆ ಸಿಂಹದ ಮೇಲೆ ಸವಾರಿ ಮಾಡಿದಂತೆ ಕಂಡ್ರೆ ಶತ್ರುಗಳ ನಾಶವಾಗುತ್ತದೆ.
ನಿಮ್ಮ ಮನೆಯ ವಾಸ್ತು ಹೀಗಿದ್ರೆ ಒಳ್ಳೆದು..!
ಹಾಲಿನ ವಸ್ತುಗಳು : ನವರಾತ್ರಿಯ ಸಮಯದಲ್ಲಿ ತಾಯಿ ದುರ್ಗೆಗೆ ಸಂಬಂಧಿಸಿದ ಹಾಗೂ ಪ್ರಿಯವಾದ ವಸ್ತುಗಳು ಯಾವುದೇ ಕನಸಿನಲ್ಲಿ ಕಂಡ್ರೂ ಶುಭಕರ. ಅದ್ರಲ್ಲೂ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳು ಕಾಣಿಸಿದ್ರೆ, ಅದನ್ನು ತಿಂದಂತೆ ಕಂಡ್ರೆ ಅದನ್ನು ಮಂಗಳವೆಂದು ಹೇಳಲಾಗುತ್ತದೆ. ಬಾಕಿ ಇರುವ ಕೆಲಸ ಇದ್ರಿಂದ ಪೂರ್ಣಗೊಳುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ.
ಗಜರಾಜನ ಮೇಲೆ ತಾಯಿಯ ಸವಾರಿ : ನಿಮ್ಮ ಕನಸಿನಲ್ಲಿ ಆನೆ ಮೇಲೆ ತಾಯಿ ದುರ್ಗಾದೇವಿ ಸವಾರಿ ಮಾಡಿದಂತೆ ಕಂಡ್ರೂ ಒಳ್ಳೆಯದು. ನಿಮ್ಮ ಜೀವನದಲ್ಲಿ ಎಲ್ಲವೂ ಸುಖಕರಾಗಲಿದೆ. ದೊಡ್ಡದೊಂದು ಯಶಸ್ಸು ನಿಮಗೆ ಲಭಿಸಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ಹಣ್ಣು ಖರೀದಿ : ನಿಮ್ಮ ಕನಸಿನಲ್ಲಿ ಹಣ್ಣು ಖರೀದಿ ಅಥವಾ ಹಣ್ಣನ್ನು ತಿಂದಂತೆ ಸ್ವಪ್ನ ಬಿದ್ರೆ ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದರ್ಥ.