'ನಿನ್ನ ಮಗಳ ಜೊತೆ ಒಂದು ರಾತ್ರಿ ಕಳೆಯಬೇಕು': ಮಗಳಿಗೆ ಕಿರುಕುಳ ನೀಡಿದವನಿಗೆ ಅಪ್ಪನಿಂದ ತಕ್ಕ ಶಾಸ್ತಿ! ವಿಡಿಯೋ ವೈರಲ್

Published : Aug 12, 2026, 04:51 PM IST
Thailand Viral Video

ಸಾರಾಂಶ

ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಮಗಳನ್ನು ಹಿಂಬಾಲಿಸಿದ ಅಪರಿಚಿತನಿಗೆ ತಂದೆಯೊಬ್ಬರು ತಕ್ಕ ಶಾಸ್ತಿ ಮಾಡಿದ್ದಾರೆ. ಮಗಳ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ ಆತನಿಗೆ ತಂದೆ ಒಂದೇ ಏಟಿಗೆ ನೆಲಕ್ಕುರುಳಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಚಿಕ್ಕ ಮಕ್ಕಳ ಸುರಕ್ಷತೆ ಮತ್ತು ಪೋಷಕರ ಜಾಗರೂಕತೆ ಎಷ್ಟು ಮುಖ್ಯ ಎಂಬುದಕ್ಕೆ ಸಾಕ್ಷಿಯಾಗುವಂತಹ ಮೈ ಜುಂ ಎನ್ನುವ ಘಟನೆಯೊಂದು ನಡೆದಿದೆ. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಮಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿರುವುದನ್ನು ಗಮನಿಸಿದ ತಂದೆಯೊಬ್ಬ, ಆತನನ್ನು ತಡೆದು ಪ್ರಶ್ನಿಸಿದಾಗ ಆತ ನೀಡಿದ ಅಸಹ್ಯಕರ ಉತ್ತರಕ್ಕೆ ತಂದೆ ಒಂದೇ ಏಟಿಗೆ ಆತನನ್ನು ನೆಲಕ್ಕುರುಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.

ಘಟನೆಯ ವಿವರ:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಥೈಲ್ಯಾಂಡ್‌ನ ಬಾಲಕಿಯು ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸುತ್ತಿದ್ದನು. ಮಗಳು ಮನೆಯ ಗೇಟಿನಲ್ಲಿ ಓಡಿಕೊಂಡು ಬರುತ್ತಲೇ ಅಪ್ಪನನ್ನು ಜೋರಾಗಿ ಕೂಗಿಕೊಂಡಿದೆ. ಇದನ್ನು ದೂರದಿಂದಲೇ ಗಮನಿಸಿದ ಬಾಲಕಿಯ ತಂದೆಗೆ ಅನುಮಾನ ಮೂಡಿದೆ. ತಕ್ಷಣವೇ ಗೇಟಿನ ಬಳಿ ತಂದೆ, ಆ ವ್ಯಕ್ತಿಯನ್ನು ತಡೆದು 'ನನ್ನ ಮಗಳನ್ನು ಏಕೆ ಹಿಂಬಾಲಿಸುತ್ತಿದ್ದೀಯಾ?' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಪರಿಚಿತನ ಅಸಹ್ಯಕರ ಉತ್ತರ ಹಾಗೂ ತಂದೆಯ ಆಕ್ರೋಶ:

ತಂದೆಯ ಪ್ರಶ್ನೆಗೆ ಆ ವ್ಯಕ್ತಿ ನೀಡಿದ ಉತ್ತರ ಪ್ರತಿಯೊಬ್ಬ ಪೋಷಕರ ರಕ್ತ ಕುದಿಯುವಂತೆ ಮಾಡುವಂತಿತ್ತು. 'ನನಗೆ ನಿನ್ನ ಮಗಳ ಜೊತೆ ಒಂದು ರಾತ್ರಿ ಕಳೆಯಬೇಕು' (I want to spend a night with her) ಎಂದು ಆ ವ್ಯಕ್ತಿ ಯಾವುದೇ ಹಿಂಜರಿಕೆಯಿಲ್ಲದೆ ಉದ್ಧಟತನದಿಂದ ಹೇಳಿದ್ದಾನೆ. ತನ್ನ ಚಿಕ್ಕ ಮಗಳ ಬಗ್ಗೆ ಇಂತಹ ಕೀಳು ಮತ್ತು ಅಸಹ್ಯಕರ ಮಾತುಗಳನ್ನು ಕೇಳಿದರೂ ತಾಳ್ಮೆ ಕಳೆದುಕೊಳ್ಳದ ಬಾಲಕಿಯ ಅಪ್ಪ ಸುಮ್ಮನೇ ಇಲ್ಲಿಂದ ಹೋಗಿಬಿಡು ಎಂದು ಬುದ್ಧಿ ಹೇಳಿ ಆತನನ್ನು ಸಾಗಹಾಕಲು ಮುಂದಾಗಿದ್ದಾರೆ. ಆದರೂ, ಅಲ್ಲಿಂದ ಹೋಗದ ವ್ಯಕ್ತಿ ನನಗೆ ನಿನ್ನ ಮಗಳು ಬೇಕೇಬೇಕು ಎಂದು ಮತ್ತೆ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ತಂದೆ, ಸಮಯ ವ್ಯರ್ಥ ಮಾಡದೇ ಆತನ ಮುಖಕ್ಕೆ ಬಲವಾಗಿ ಒಂದೇ ಗುದ್ದು ನೀಡಿದ್ದಾರೆ. ತಂದೆಯ ಏಟಿನ ರಭಸಕ್ಕೆ ಆ ಕಾಮುಕ ತಕ್ಷಣವೇ ನೆಲಕ್ಕೆ ಬಿದ್ದಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಕೋಟ್ಯಂತರ ಜನರು ವೀಕ್ಷಿಸಿದ್ದು, ತಂದೆಯ ತಕ್ಷಣದ ಪ್ರತಿಕ್ರಿಯೆಗೆ ಶಹಬ್ಬಾಸ್ ಎಂದಿದ್ದಾರೆ.

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ತಂದೆ ಮಾಡಿದ್ದು ಅತ್ಯಂತ ಸರಿಯಾದ ಕೆಲಸ. ಮಕ್ಕಳ ರಕ್ಷಣೆಗೆ ಪೋಷಕರು ಹೀಗೆಯೇ ಇರಬೇಕು' ಎಂದು ಬೆಂಬಲಿಸಿದ್ದಾರೆ. ಮತ್ತೊಬ್ಬರು, 'ಆ ವ್ಯಕ್ತಿಯ ದುರುದ್ದೇಶ ಏನೆಂದು ತಿಳಿಯಲು ತಂದೆ ಸರಿಯಾದ ಪ್ರಶ್ನೆಗಳನ್ನೇ ಕೇಳಿದ್ದಾರೆ, ನಂತರ ತಕ್ಕ ಶಾಸ್ತಿಯನ್ನೂ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಮಕ್ಕಳ ಸುರಕ್ಷತೆ ಕುರಿತು ತಜ್ಞರ ಜಾಗೃತಿ:

ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮಕ್ಕಳ ಸುರಕ್ಷತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಶಾಲೆಯಿಂದ ಮನೆಗೆ ಬರುವಾಗ ಅಪರಿಚಿತರು ಹಿಂಬಾಲಿಸಿದರೆ ಅಥವಾ ಅಪಾಯದ ಮುನ್ಸೂಚನೆ ಸಿಕ್ಕರೆ ಏನು ಮಾಡಬೇಕು ಎಂಬುದನ್ನು ಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ಕಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅಪರಿಚಿತರು ಹಿಂಬಾಲಿಸಿದರೆ ತಕ್ಷಣವೇ ಜನನಿಬಿಡ ಪ್ರದೇಶಗಳಿಗೆ ಹೋಗುವುದು. ತಕ್ಷಣವೇ ಪೋಷಕರಿಗೆ ಅಥವಾ ಹತ್ತಿರದ ನಂಬಿಕಸ್ಥರಿಗೆ ಕರೆ ಮಾಡುವುದು. ಭಯಪಡದೆ ಜೋರಾಗಿ ಕಿರುಚಿ ಸಾರ್ವಜನಿಕರ ಗಮನ ಸೆಳೆಯುವುದು. ಈ ವಿಡಿಯೋ ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಜಾಗರೂಕರಾಗಿರಲು ದೊಡ್ಡ ಎಚ್ಚರಿಕೆಯ ಸಂದೇಶ ನೀಡಿದೆ.

PREV
Read more Articles on
click me!

Recommended Stories

ಪ್ರಣೀತಾ ಸುಭಾಷ್ ಪಾದಪೂಜೆ: ಗ್ಲಾಮರ್ ಗೊಂಬೆಯಾದರೂ ಮನೆಯಲ್ಲಿ ಗಂಡನ ಪಾದಪೂಜೆ ಮರೆಯದ ನಟಿ
30 ವರ್ಷಗಳ ನಂತರ ಶನಿಯಿಂದ ದೊಡ್ಡ ಪ್ರಗತಿ, 2027 ರವರೆಗೆ 5 ರಾಶಿಗೆ ಜಾಕ್‌ಪಾಟ್