ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಎಲ್ಲವೂ ಜ್ಯೋತಿಷ್ಯದ ವ್ಯಾಪ್ತಿಗೆ ಬರುತ್ತದೆ. ದೇಹದ ಮೇಲೆ ಟ್ಯಾಟೂ ಹಾಕಬಾರದೇ? ಜ್ಯೋತಿಷ್ಯ ಏನು ಹೇಳುತ್ತದೆ ಎಂದು ತಿಳಿಯಿರಿ..
ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಎಲ್ಲವೂ ಜ್ಯೋತಿಷ್ಯದ ವ್ಯಾಪ್ತಿಗೆ ಬರುತ್ತದೆ. ನಾವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು, ಯಾವ ಮಾಲೆಯನ್ನು ಧರಿಸಬೇಕು ಅಥವಾ ಯಾವ ಲೋಹವು ನಮಗೆ ಮಂಗಳಕರವಾಗಿರುತ್ತದೆ? ಇವೆಲ್ಲವೂ ಗ್ರಹಗಳಿಗೆ ಸಂಬಂಧಿಸಿದೆ.
ಇತ್ತೀಚಿನ ದಿನಗಳಲ್ಲಿ ನಾವು ಅನೇಕ ಜನರು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡುತ್ತೇವೆ. ಫ್ಯಾಷನ್ ಮತ್ತು ಶೈಲಿಗಾಗಿ, ಜನರು ದೇಹದ ಮೇಲೆ ಅನೇಕ ರೀತಿಯ ಚಿಹ್ನೆಗಳನ್ನು ಹಚ್ಚೆ ಹಾಕುತ್ತಾರೆ. ಕೆಲವರು ತಮ್ಮ ದೇಹದ ಮೇಲೆ ಧಾರ್ಮಿಕ ಚಿಹ್ನೆಗಳನ್ನು ಹಚ್ಚೆಗಳ ರೂಪದಲ್ಲಿ ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ದೇಹದ ಮೇಲೆ ಯಾವ ರೀತಿಯ ಹಚ್ಚೆ ಹಾಕಿಸಿಕೊಳ್ಳುತ್ತಾನೆ ಎಂಬುದು ಅವನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಚ್ಚೆ ಕೂಡ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ. ಅದು ನಮ್ಮ ಮನಸ್ಸು ಮತ್ತು ಹಣೆ ಬರಹದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಎಂದು ತಿಳಿಯೋಣ.
ಇವರಿಗೆ ಹಾನಿ
ಯಾವುದೇ ಧಾರ್ಮಿಕ ಹಚ್ಚೆಯ ಒಳ್ಳೆಯ ಮತ್ತು ಕೆಟ್ಟ ಪರಿಣಾಮವು ಅದರ ಗಾತ್ರ, ವಿನ್ಯಾಸವನ್ನು ಅವಲಂಬಿಸಿರುತ್ತದೆ ಎಂದು ಜ್ಯೋತಿಷ್ಯವು ನಂಬುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಧಾರ್ಮಿಕ ಹಚ್ಚೆ ಹೊಂದಿದ್ದರೆ, ಅದರ ಗಾತ್ರ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಸ್ಟೈಲ್ ಮತ್ತು ಫ್ಯಾಶನ್ ಅನುಸರಿಸಿ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಹಾಳು ಮಾಡಬಾರದು. ಧಾರ್ಮಿಕ ಚಿಹ್ನೆಗಳಲ್ಲಿ ಯಾವುದೇ ತಪ್ಪು ಮಾಡಬಾರದು, ಹಾಗೆ ಮಾಡುವುದರಿಂದ ವ್ಯಕ್ತಿಗೆ ಹಾನಿಯಾಗುತ್ತದೆ.
ಈ ರಾಶಿಯ ಜನರು ಕೆಂಪು ತಿಲಕವಿಟ್ಟರೆ ಕಷ್ಟಗಳು ಹೆಚ್ಚುತ್ತವೆ!
ಹಚ್ಚೆ ಸರಿಯಾಗಿರಬೇಕು
ಜ್ಯೋತಿಷ್ಯದ ಪ್ರಕಾರ, ತಪ್ಪು ಗಾತ್ರದ ಹಚ್ಚೆ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ತಪ್ಪು ವಿನ್ಯಾಸವು ಲಾಭದ ಬದಲು ವ್ಯಕ್ತಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಓಂ, ಸ್ವಸ್ತಿಕ್ ಮುಂತಾದ ಧಾರ್ಮಿಕ ಚಿಹ್ನೆಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವಾಗ ಅವುಗಳ ಗಾತ್ರ ಸರಿಯಾಗಿರುವಂತೆ ವಿಶೇಷ ಕಾಳಜಿ ವಹಿಸಬೇಕು. ನೀವು ಯಾವುದೇ ಮಂತ್ರವನ್ನು ಹಚ್ಚೆಯಾಗಿ ಬರೆಯಲು ಬಯಸಿದರೆ, ಅದರಲ್ಲಿ ಸಣ್ಣ ತಪ್ಪೂ ಇಣುಕಬಾರದು.
ಈ ಸ್ಥಳದಲ್ಲಿ ಹಚ್ಚೆ ಬೇಡ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ನಿಮ್ಮ ದೇಹದ ಮೇಲೆ ಧಾರ್ಮಿಕ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರೆ, ಅದರ ಪಾವಿತ್ರ್ಯತೆಗೆ ಧಕ್ಕೆಯಾಗದಂಥ ದೇಹದ ಭಾಗದಲ್ಲಿ ಅದನ್ನು ಹಾಕಿಸಿ. ಜ್ಯೋತಿಷ್ಯದ ಪ್ರಕಾರ, ಧಾರ್ಮಿಕ ಚಿಹ್ನೆಗಳು, ಮಂತ್ರಗಳು ಅಥವಾ ದೇವರ ಹಚ್ಚೆಗಳನ್ನು ಅಂಗೈ, ಪಾದಗಳ ಮೇಲೆ ಹಾಕಿಸಿಕೊಳ್ಳಬಾರದು. ಇಂತಹ ಪರಿಸ್ಥಿತಿಯಲ್ಲಿ ಧರ್ಮಕ್ಕೆ ಸಂಬಂಧಿಸಿದ ಹಚ್ಚೆ ಹಾಕಿಸಿಕೊಳ್ಳುವುದು ಅದನ್ನು ಅವಮಾನಿಸಿದಂತೆ ಪರಿಗಣಿಸಲಾಗುತ್ತದೆ.
ಈ ರಾಶಿಗಳಿಗೆ ಮಾತೇ ಮಾಣಿಕ್ಯ, ಮಾತೇ ಮನೆದೇವ್ರು!
ಈ ಸ್ಥಳದಲ್ಲಿ ಹಚ್ಚೆ ಮಾಡಬಹುದು
ಜ್ಯೋತಿಷ್ಯದ ಪ್ರಕಾರ, ದೇಹದ ಕೆಲವು ಭಾಗಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹಾಕಿಸಿಕೊಳ್ಳಬಹುದು. ತೋಳು ಅಥವಾ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಪರವಾಗಿಲ್ಲ, ಹಣೆಯೂ ಪರವಾಗಿಲ್ಲ. ಆದರೆ ಅದು ಸರಿಯಾದ ಗಾತ್ರ ಮತ್ತು ಸರಿಯಾದ ಸ್ಥಳವಾಗಿರಬೇಕು. ಇಂತಹ ಸ್ಥಳದಲ್ಲಿ ಧಾರ್ಮಿಕ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ ಮತ್ತು ಮಾನಸಿಕ ಧನಾತ್ಮಕತೆಯೂ ಹೆಚ್ಚುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.