ತಿರುಪತಿ: ಮುಡಿ ಕೊಡುವುದಕ್ಕೂ, ಸಪ್ತಗಿರಿಯ ನೀಲಾದ್ರಿ ಬೆಟ್ಟಕ್ಕೂ ಇದೆ ಲಿಂಕ್!

By Suvarna News  |  First Published Aug 7, 2023, 2:54 PM IST

ತಿರುಪತಿಯ ಸಪ್ತಗಿರಿಯ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ  ಬೆಟ್ಟಗಳಿಗೆ ಆ ಹೆಸರುಗಳು ಬರಲು ಕಾರಣವೇನು ಗೊತ್ತಾ? ಇಲ್ಲಿದೆ ರೋಚಕ ಕಥೆ 


- ಪವನ್‌ ಗೌಡ, ಮೈಸೂರು ವಿಶ್ವವಿದ್ಯಾಲಯ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಿರುಪತಿಯ (Tirupati) ಸಪ್ತಗಿರಿಗಳಲ್ಲಿ (Sapthagiri Hills)  ಶೇಷಾದ್ರಿ ಬೆಟ್ಟ ಮೊದಲನೆಯದು. ಈ ಬೆಟ್ಟಕ್ಕೆ ಶೇಷಾದ್ರಿ (ಶೇಷಗಿರಿ) ಎಂದು ಹೆಸರು ಬರಲು ಕಾರಣವೇನು ತಿಳಿಯೋಣ ಬನ್ನಿ. ಒಮ್ಮೆ ವಾಯುದೇವನು ತಿಮ್ಮಪ್ಪನ ದರ್ಶನಕ್ಕೆ ಬಂದಾಗ ಅಲ್ಲೇ ಇದ್ದ ಆದಿಶೇಷನಿಗೂ, ವಾಯುದೇವನಿಗೂ ಯುದ್ದ ನೆಡೆಯುತ್ತದೆ. ಇದನ್ನು ಬಗೆಹರಿಸಲು ಬಂದ ಮಹಾವಿಷ್ಣು ನಿಮ್ಮಿಬ್ಬರಲ್ಲಿ ಯಾರು ಮಹಾಶಕ್ತಿವಂತರು ಎಂದು ನಿರ್ಧರಿಸಲು ವಾಯುದೇವನಿಗೆ ಆದಿಶೇಷನನ್ನು ಅಲುಗಾಡಿಸಲು ಹೇಳುತ್ತಾನೆ. ಆಗ ವಾಯುದೇವ ತನ್ನ ಬಲವನ್ನೆಲ್ಲ ಬಳಸಿ ಮಲಗಿದ್ದ ಆದಿಶೇಷನನ್ನು ಅಲುಗಾಡಿಸಲು ಪ್ರಯತ್ನ ಪಡುತ್ತಾನೆ. ಆಗ ಬಲವಾಗಿ ಬೀಸಿದ ಗಾಳಿಯನ್ನು ಗಮನಿಸಿ  ಆದಿಶೇಷ ತಾನೇ ಎದ್ದು ನೋಡಿದಾಗ, ಆತ ಎದ್ದಿದ್ದು ತನ್ನ ಶಕ್ತಿಯಿಂದ, ತಾನೇ ಬಲಶಾಲಿ ಎಂದು ವಾಯದೇವ ಬೀಗುತ್ತಾನೆ. 

Tap to resize

Latest Videos

ಇದರಿಂದ ಬೇಸರಗೊಂಡ ಆದಿಶೇಷನನ್ನು ಸಮಾಧಾನ ಪಡಿಸಿದ ತಿಮ್ಮಪ್ಪ, ಚಿಂತೆ ಬೇಡ ನೀನು ಯಾವಾಗಲೂ ನನ್ನ ಆವಾಸಸ್ಥಾದಲ್ಲಿಯೇ ಇರುತ್ತೀ. ನನ್ನ ನೋಡಲು ಬರುವ ಭಕ್ತರು ನಿನ್ನ ಮೂಲಕವೇ ಬರುವಂತೆ ಆಗಲಿ, ಎಂದು ವರ ನೀಡುತ್ತಾನೆ. ಅಂದಿನಿಂದ ಈ ಬೆಟ್ಟಕ್ಕೆ ಶೇಷಾದ್ರಿ (ಶೇಷಗಿರಿ) ಎಂಬ ಹೆಸರು ಬಂದಿದೆ.

ತಿಮ್ಮಪ್ಪನಿಗೆ ತುಪ್ಪ ಕೊಡ್ತೀವೆಂದು ತಿರುಪತಿಗೆ ಪತ್ರ ಬರೆದ ಕೆಎಂಎಫ್‌

ತಿರುಪತಿಯಲ್ಲಿ ಮುಡಿ ಕೊಡೋದ್ಯಾಕೆ?:
ಎರಡನೆಯದು ನೀಲಾದ್ರಿ ಬೆಟ್ಟ. ನೀಲಾಂಬರಿ ಎಂಬ ಭಕ್ತೆಯೊಬ್ಬರು ತಲೆ ಕೂದಲನ್ನು ಕೊಟ್ಟಿದ್ದು, ವ್ಯಕ್ತಿಯೊಬ್ಬ ತನ್ನ ಅಹಂ ಹಾಗೂ ಸ್ವಪ್ರತಿಷ್ಠೆಯನ್ನು ಸ್ವಾಮಿ ಮುಂದೆ ಕೊಟ್ಟು ತಿಮ್ಮಪ್ಪನಿಗೆ ತೋರಿದ ಭಕ್ತಿಯ ಸಂಕೇತವಾಗಿ ಈ ಹೆಸರಿಡಲಾಗಿದೆ. 

ಮೂರನೆಯದಾದ  ಗರುಡಾದ್ರಿ  ಬಗ್ಗೆ ಹೇಳಬೇಕೆಂದರೆ ವಿಷ್ಣುವಿನ ವಾಹನವಾದ ಗರುಡ ತನ್ನ ಶತ್ರುಗಳಾದ ಕುದ್ರುವಿನ ಮಕ್ಕಳನ್ನು ಹತ್ಯೆ ಮಾಡಿದ ತಪ್ಪಿಗೆ ಮೋಕ್ಷ ಪಡೆಯಲು ತಪಸ್ಸು ಮಾಡಿದ. ದೇವರ ಸಾನಿಧ್ಯವನ್ನು ಬೇಡಿದಾಗ ಶ್ರೀಮಾನ್ ಮಹಾವಿಷ್ಣುವು ಆತನಿಗೆ ಒಲಿದು, ನೀನೂ ನನ್ನ ಬಳಿಯೇ ಇರು ಎಂದು ಹೇಳಿ ಆತನನ್ನು ಒಂದು ಶಿಖರದ ರೂಪದಲ್ಲಿಯೇ ಅಲ್ಲೇ ನೆಲೆಸುವ ಹಾಗೆ ವರ ಕೊಡುತ್ತಾನೆ. ಇದೇ ಇಂದು ಗರುಡಾದ್ರಿ (ಗರುಡಾಚಲ) ಬೆಟ್ಟ. 

ತಿರುಪತಿ ತಿಮ್ಮಪ್ಪನ ಭಕ್ತರ ವಸತಿಗಾಗಿ ಮೊಬೈಲ್ ಕಂಟೇನರ್: ಎಸಿ ಫ್ಯಾನ್ ಲಭ್ಯ

ಆಂಜನೇಯನ ಜನ್ಮಕ್ಕೆ ಕಾರಣವಾದ ಬೆಟ್ಟ:
ನಾಲ್ಕನೆಯದಾಗಿ ಅಂಜನಾದ್ರಿ ಬೆಟ್ಟ. ಪ್ರಾಣದೇವರಾದ ಆಂಜನೇಯನ ತಾಯಿ ಅಂಜನಾದೇವಿ ಕೇಸರಿ ರಾಜನನ್ನು  ಮದುವೆಯಾಗಿ ಎಷ್ಟೋ ವರ್ಷಗಳ ಕಾಲ ಮಕ್ಕಳಾಗದ ಕಾರಣ ಈಕೆ ಈ ಬೆಟ್ಟದ ಮೇಲೆ  ತಪಸ್ಸು ಮಾಡಿದನು. ಆಗ ವಾಯುದೇವ ಈಕೆಯ ತಪಸ್ಸಿಗೆ ಒಲಿದು, ಅಂಜನಾದ್ರಿಗೆ ಈ ಬೆಟ್ಟದಲ್ಲಿ ಬೆಳೆದ ಒಂದು ಗರ್ಭ ಫಲವನ್ನು ನೀಡುತ್ತಾನೆ. ಅದನ್ನು ಸೇವಿಸಿ, ಗರ್ಭವತಿಯಾದ ಅಂಜನಾದೇವಿ ಮುಂದೆ ಆಂಜನೇಯನಿಗೆ ಜನ್ಮ ನೀಡುತ್ತಾಳೆ . ಅಂಜನಾದೇವಿ  ಕುಳಿತು ತhಸ್ಸನ್ನು ಆಚರಿಸಿದ ಜಾಗವನ್ನೇ ಈಗ ಅಂಜನಾದ್ರಿ ಎಂದು ಕರೆಯಲಾಗುತ್ತದೆ.

click me!