Kukke subramanya Temple: ಶ್ರೀ ರವಿಶಂಕರ ಗುರೂಜಿ ನಾಗಪ್ರತಿಷ್ಠಾ ಸೇವೆ

By Kannadaprabha NewsFirst Published Feb 20, 2023, 9:51 PM IST
Highlights

ಆರ್ಟ್ ಆಫ್‌ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ರವಿಶಂಕರ್‌ ಗುರೂಜಿ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದಲ್ಲಿ ಅವರು ಮಹಾಭಿಷೇಕ ಮತ್ತು ನಾಗಪ್ರತಿಷ್ಠಾ ಸೇವೆ ಸಮರ್ಪಿಸಿದರು.

ಸುಬ್ರಹ್ಮಣ್ಯ (ಫೆ.20): 

ಆರ್ಟ್ ಆಫ್‌ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ರವಿಶಂಕರ್‌ ಗುರೂಜಿ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದಲ್ಲಿ ಅವರು ಮಹಾಭಿಷೇಕ ಮತ್ತು ನಾಗಪ್ರತಿಷ್ಠಾ ಸೇವೆ ಸಮರ್ಪಿಸಿದರು.

ಸೇವಾ ಸಮರ್ಪಣೆ: ಮಧ್ಯಾಹ್ನ ದೇವಳಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ದೇವರ ದರ್ಶನ ಪಡೆದ ಬಳಿಕ ಪಂಚಾಮೃತ ಮಹಾಭಿಷೇಕ(Panchamrita mahabhisheka) ಸೇವೆ ಸಮರ್ಪಿಸಿದರು. ಮಧ್ಯಾಹ್ನದ ಮಹಾಪೂಜೆ ವೀಕ್ಷಿಸಿದರು. ನಂತರ ನಾಗಪ್ರತಿಷ್ಠಾ ಸೇವೆ ನೆರವೇರಿಸಿದರು.

ಸರ್ವರ ಜೀವನದಲ್ಲಿ ಆನಂದ ನೆಲೆಸಲಿ: ಶ್ರೀಶ್ರೀ ರವಿ ಶಂಕರ ಗುರೂಜಿ

ನಾಗಪ್ರತಿಷ್ಠಾ ಮಂಟಪ(Nagapratishtana mantapa)ದಲ್ಲಿ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಉಮಾಮಹೇಶ್ವರ ದೇವರು ಹಾಗೂ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ಮೃತ್ತಿಕಾ ಪ್ರಸಾದ ಸ್ವೀಕರಿಸಿ, ನಂತರ ಪ್ರಸಾದ ಭೋಜನ ಸ್ವೀಕರಿಸಿದರು.

ಸಸಿ ನೆಟ್ಟು ನೀರುಣಿಸಿದ ಗುರೂಜಿ: ಕ್ಷೇತ್ರಕ್ಕೆ ಆಗಮಿಸಿ ಗುರೂಜಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸ್ವಾಗತಿಸಿದರು. ಗುರೂಜಿ ಅವರು ಕಾಶಿಕಟ್ಟೆಯ ಬಂಡಿವಾಳದಲ್ಲಿ ಸಸಿ ನೆಟ್ಟು ನೀರುಣಿಸಿದರು. ಪುರೋಹಿತರು ವಿವಿಧ ವೈಧಿಕ ವಿಧಾನಗಳನ್ನು ನೆರವೇರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್‌, ವನಜಾ ವಿ.ಭಟ್‌, ಮಾಸ್ಟರ್‌ ಪ್ಲಾನ್‌ ಸಮಿತಿಯ ಮನೋಜ್‌ ಸುಬ್ರಹ್ಮಣ್ಯ ಹಾಜರಿದ್ದರು.

ಗುರೂಜಿ(Ravishankara guruji) ಅವರೊಂದಿಗೆ ಆರ್ಟ್ ಆಫ್‌ ಲೀವಿಂಗ್‌(Art of living)ನ ಕೋ ಆರ್ಡಿನೇಟರ್‌ ದಿನೇಶ್‌.ಕೆ ಮತ್ತು ಆರ್ಚ್‌ ಆಪ್‌ ಲೀವಿಂಗ್‌ನ ಪ್ರಮುಖರು ಆಗಮಿಸಿದ್ದರು.

ಗುರೂಜಿ ಸೋಮವಾರ ಹೆಲಿಕಾಪ್ಟರ್‌ ಮೂಲಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್‌ಗೆ ಆಗಮಿಸಿ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯ(Kukke subramanya) ಕ್ಷೇತ್ರಕ್ಕೆ ತೆರಳಿದರು.

ರಾಸಾಯನಿಕ ಮುಕ್ತ ಆಹಾರ ಬೆಳೆಯೋಣ: ಶ್ರೀಶ್ರೀ ರವಿಶಂಕರ ಗುರೂಜಿ

ಆರ್ಟ್ ಆಫ್‌ ಲಿವಿಂಗ್‌ನ ಕೋ ಆರ್ಡಿನೇಟರ್‌ ದಿನೇಶ್‌ ಕೆ., ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ(Subrahmanya Devala)ದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಪ್ರಮುಖರಾದ ಗೋಪಾಲಕೃಷ್ಣ ಬಿ., ಶ್ರೀಕೃಷ್ಣ ಶರ್ಮ, ಗಣಪತಿ ಭಟ್‌, ಸತ್ಯಶಂಕರ ಭಟ್‌, ಹಿರಿಯಣ್ಣ ಗೌಡ, ರಾಜೇಶ್‌ ಎನ್‌.ಎಸ್‌., ಗುರುಪ್ರಸಾದ್‌ ಪಂಜ, ಬಿಪಿನ್‌ ಜಾಕೆ, ಆಕಾಶ್‌ ಕುಮಾರ್‌ ಬೆಳ್ಳಿ, ನಿತಿನ್‌ ಭಟ್‌ ಹಾಜರಿದ್ದರು.

click me!