Zodiac Sign: ಹೆಂಡ್ತಿಯನ್ನು ಸದಾ ರೇಗಿಸ್ತಾರಲ್ಲ, ಆ ಗಂಡಸರ ರಾಶಿ ಇವು!

By Suvarna News  |  First Published Jul 21, 2023, 4:37 PM IST

ವಿನೋದಕ್ಕಾಗಿ, ಹಾಸ್ಯದಿಂದ ಸಂಗಾತಿಯನ್ನು ಛೇಡಿಸುವುದು ಸಾಮಾನ್ಯ. ಕೆಲವು ಪುರುಷರು ಇದರಲ್ಲಿ ಎತ್ತಿದ ಕೈ. ಆರು ರಾಶಿಗಳ ಜನರಲ್ಲಿ ಸಂಗಾತಿಯನ್ನು ವಿನೋದಕ್ಕಾಗಿ ಗೋಳು ಹೊಯ್ದುಕೊಳ್ಳುವ, ರೇಗಿಸುವ ಗುಣ ಧಾರಾಳವಾಗಿರುತ್ತದೆ. 
 


ಸಂಗಾತಿಯನ್ನು ಛೇಡಿಸುವುದು ದಾಂಪತ್ಯದಲ್ಲಿ ಸಾಮಾನ್ಯ ಸಂಗತಿ. ಮೋಜಿಗಾಗಿ, ಸರಸಕ್ಕಾಗಿ ಪರಸ್ಪರ ಛೇಡಿಸುವುದು, ಬೇಕೆಂದೇ ಏನಾದರೊಂದು ಮಾತನಾಡಿ ರೇಗಿಸುವುದು ಕಂಡುಬರುತ್ತದೆ. ಕೆಲವರು ನೀರಸವಾಗಿದ್ದರೆ, ಮತ್ತೆ ಕೆಲವರು ಇದರಲ್ಲಿ ಎತ್ತಿದ ಕೈ. ಕೆಲವರು ಮೋಜಿಗಾಗಿ ಕಿರಿಕಿರಿಯನ್ನೂ ನೀಡುತ್ತಾರೆ. ಅವರು ರೇಗುತ್ತಿದ್ದರೆ ಇವರು ನಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಚಕ್ರಗಳು ನಮ್ಮ ಗುಣಸ್ವಭಾವಗಳನ್ನು ರೂಪಿಸುತ್ತವೆ. ಸಂಗಾತಿಯನ್ನು ಗೋಳು ಹೊಯ್ದುಕೊಳ್ಳುವ ಗುಣವೂ ಕೆಲವು ರಾಶಿಗಳಲ್ಲಿ ಮಾತ್ರ ಕಂಡುಬರುತ್ತದೆ. ಮುಖ್ಯವಾಗಿ ಆರು ರಾಶಿಗಳ ಪುರುಷರು ತಮ್ಮ ಸಂಗಾತಿಗೆ ಇಂತಹ ಕಿರಿಕಿರಿ ನೀಡುವುದರಲ್ಲಿ ಎತ್ತಿದ ಕೈ. ಸೋಷಿಯಲ್‌ ಬಟರ್‌ ಫ್ಲೈ ಎಂದು ಕರೆಯುವ ಮಿಥುನ ರಾಶಿಯವರದ್ದು ಇದರಲ್ಲಿ ಎತ್ತಿದ ಕೈ. ಮೋಜಿಗೆ ಇವರು ಎತ್ತಿದ ಕೈ. ಬುಧ ಗ್ರಹ ಅಧಿಪತಿಯಾಗಿರುವ ಈ ರಾಶಿ ಸಂವಹನಕ್ಕೆ ಹೆಸರು. ಹೀಗಾಗಿ, ಸುಮ್ಮನಿರಲು ಇವರಿಂದ ಸಾಧ್ಯವಾಗುವುದಿಲ್ಲ. ಸಂಗಾತಿಯನ್ನು ಛೇಡಿಸುತ್ತಿರುತ್ತಾರೆ. ಸಂಬಂಧದಲ್ಲಿ ವಿನೋದವಿರಲು ಹೀಗೆ ಮಾಡುತ್ತಾರೆಯೇ ಹೊರತು ನಿಜಕ್ಕೂ ನೋವು ನೀಡುವುದು ಇವರ ಉದ್ದೇಶವಾಗಿರುವುದಿಲ್ಲ. ಇವರಂತೆಯೇ ಇನ್ನೂ ಕೆಲವು ರಾಶಿಗಳ ಪುರುಷರು ಸಂಗಾತಿಯನ್ನು ಗೋಳು ಹೊಯ್ದುಕೊಳ್ಳುತ್ತಾರೆ.

•    ಧನು (Sagittarius)
ಧನು ರಾಶಿಯ ಪುರುಷರು ಸಾಹಸಮಯ (Adventurous) ಚಟುವಟಿಕೆಯನ್ನು ಇಷ್ಟಪಡುತ್ತಾರೆ. ತಕ್ಷಣಕ್ಕೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ (Mentality) ಹೊಂದಿರುವ ಇವರು ಸಂಬಂಧದಲ್ಲೂ ಮಿತಿ ದಾಟುವ ಯತ್ನ ಮಾಡುತ್ತಾರೆ. ಪರೀಕ್ಷೆ ಮಾಡುತ್ತಾರೆ. ಗುರು ಗ್ರಹಾಧಿಪತಿಯಾಗಿರುವ ಈ ರಾಶಿಯ ಜನ ಸಂಗಾತಿಯ ಪ್ರತಿಕ್ರಿಯೆ ನೋಡಲೆಂದೇ ಅವರನ್ನು ಕಿರಿಕಿರಿಗೆ (Annoy) ಗುರಿ ಮಾಡುತ್ತಾರೆ. ಇವರಲ್ಲಿ ಯಾವುದೇ ದುರುದ್ದೇಶ ಇರುವುದಿಲ್ಲ. ಸಂಗಾತಿಯೊಂದಿಗೇ ತಾವೂ ನಕ್ಕು ಮೈಮರೆಯುತ್ತಾರೆ.

Tap to resize

Latest Videos

Zodiac Sign: ಈ ರಾಶಿಗಳ ಜನ ಕೀಳರಿಮೆಯಿಂದ ಹೊರ ಬರೋದು ಹ್ಯಾಗೆ ಅಂತ ತಿಳ್ಕೊಬೇಕು

•    ಮೇಷ (Aries)
ಖಚಿತತೆ (Assertiveness) ಮತ್ತು ಶಕ್ತಿದಾಯಕ (Energy) ಮೇಷ ರಾಶಿಗೆ ಮಂಗಳ ಗ್ರಹ ಅಧಿಪತಿಯಾಗಿದೆ. ಇದು ಕಾರ್ಯತ್ಪರತೆಯ (Action) ರಾಶಿ. ಈ ಜನ ಸಂಬಂಧದಲ್ಲಿ ರೋಚಕತೆ (Excitement) ಇರಬೇಕೆಂದು ಸಂಗಾತಿಯನ್ನು (Partner) ಟೀಸ್‌ (Tease) ಮಾಡುತ್ತಾರೆ. ಸ್ಪರ್ಧಾತ್ಮಕ (Competitive) ಗುಣವೂ ಇವರಲ್ಲಿ ಇರುವುದಿಂದ ಸೌಹಾರ್ದವಾಗಿ ಸಂಗಾತಿಗೆ ಸವಾಲು ಹಾಕುತ್ತಾರೆ. ಸಂಗಾತಿಯನ್ನು ಪರಿಹಾಸ್ಯ ಮಾಡುವುದನ್ನು ಇಷ್ಟಪಡುತ್ತಾರೆ. 

•    ಸಿಂಹ (Leo)
ಆತ್ಮವಿಶ್ವಾಸದ (Confidence) ಮತ್ತು ವರ್ಚಸ್ಸಿನ ಸಿಂಹ ರಾಶಿಯ ಜನ ಎಲ್ಲರ ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ಸೂರ್ಯ ಗ್ರಹಾಧಿಪತಿಯಾಗಿರುವ ಸಿಂಹ ರಾಶಿಯ ಜನ ಸ್ವಯಂ ಅಭಿವ್ಯಕ್ತಿ ಮಾಡಿಕೊಳ್ಳುತ್ತಾರೆ. ಸುಮ್ಮನೆ ತಮಾಷೆಗಾಗಿ (Fun) ಸಂಗಾತಿಯನ್ನು ಲೇವಡಿ ಮಾಡುತ್ತಾರೆ. ಸಂಗಾತಿಯಿಂದಲೂ ಗಮನ ಮತ್ತು ಪ್ರೀತಿ ಬಯಸುವ ಇವರು ಇತರರನ್ನು ನಗಿಸಲು (Laugh) ಯತ್ನಿಸುತ್ತಾರೆ. ಪ್ರೀತಿಪಾತ್ರರೊಂದಿಗೆ ಖುಷಿಯಾಗಿ ಒಡನಾಡಲು ವಿನೋದವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ.

•    ಕುಂಭ (Aquarius)
ಕುಂಭ ರಾಶಿಯ ಪುರುಷರು ಅನ್ವೇಷಣಾತ್ಮಕ (Innovative) ಮತ್ತು ಸ್ವತಂತ್ರ ಚಿಂತನೆ (Thought) ಹೊಂದಿರುತ್ತಾರೆ. ಯುರೇನಸ್‌ ಗ್ರಹಾಧಿಪತಿಯಾಗಿದ್ದು, ಮೂಲಸತ್ವವನ್ನು ಬಿಂಬಿಸುವಂಥದ್ದು. ಅತ್ಯಂತ ಚುರುಕಾಗಿ (Quick) ವಿನೋದ ಮಾಡುವ ಗುಣ ಹೊಂದಿದ್ದು, ಸಂಗಾತಿಯನ್ನು ಅನಿರೀಕ್ಷಿತ ಜೋಕ್‌ (Joke) ಮತ್ತು ಭಾವಗಳಿಂದ ಚಕಿತಗೊಳಿಸುತ್ತಲೇ ಇರುತ್ತಾರೆ. ಇವರು ಸಂಗಾತಿಗೆ ಕಿರಿಕಿರಿ ಮಾಡದೇ ಹಾಸ್ಯ ಮಾಡುತ್ತಾರೆ. ವಿಲಕ್ಷಣ ಬುದ್ಧಿ ಹೊಂದಿರುವುದರಿಂದ ಸಂಬಂಧದಲ್ಲೂ ವಿಲಕ್ಷಣತೆ ತೋರುತ್ತಾರೆ.

Astrology Tips: ನಿಮ್ಮ ರಾಶಿ ಪ್ರಕಾರ ನೀವು ಯಾವ ರೀತಿ ಕೇರ್‌ಫುಲ್‌ ಆಗಿರ್ಬೇಕು ಗೊತ್ತಾ?

•    ಮಕರ (Capricorn)
ಮಕರ ರಾಶಿಯ ಪುರುಷರು ಮಹತ್ವಾಕಾಂಕ್ಷಿ, ಪ್ರಾಯೋಗಿಕ ಮನಸ್ಥಿತಿ ಹೊಂದಿರುತ್ತಾರೆ. ಶನಿ ಗ್ರಹಾಧಿಪತಿಯಾಗಿರುವ ಮಕರ ರಾಶಿಯ ಜನ ವ್ಯಂಗ್ಯವಾಡುವುದು ಹೆಚ್ಚು. ಒಣ ವಿನೋದ ಮಾಡುತ್ತಾರೆ. ತಮ್ಮ ಒತ್ತಡ (Stress) ಕಡಿಮೆ ಮಾಡಿಕೊಳ್ಳಲು, ಮನಸ್ಥಿತಿ ಹಗುರ ಮಾಡಿಕೊಳ್ಳಲು ಸಂಗಾತಿಯನ್ನು ಛೇಡಿಸುತ್ತಾರೆ. ಕೆಲವೊಮ್ಮೆ ಇವರು ಗಂಭೀರವಾಗಿಯೂ ಹಾಸ್ಯ ಮಾಡಿಬಿಡುತ್ತಾರೆ, ಗಂಭೀರತೆಯೊಂದಿಗೆ ವಿನೋದದ ಬುದ್ಧಿಯೂ ಇರುವುದರಿಂದ ಬ್ಯಾಲೆನ್ಸ್‌ ಮಾಡುತ್ತಾರೆ. 

click me!