ಪಂಚಮುಖಿ ಆಂಜನೇಯನನ್ನು ಪೂಜಿಸಲು ಇಲ್ಲಿದೆ 5 ಕಾರಣಗಳು.....ಶಕ್ತಿ, ಧೈರ್ಯ ಮಾತ್ರವಲ್ಲ ಈ ಲಾಭಗಳನ್ನು ಪಡೆಯಿರಿ...
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಆಂಜನೇಯನ ಭಕ್ತರಿದ್ದಾರೆ. ಜೈ ಆಂಜನೇಯ ಎಂದು ಹೇಳಿನೇ ಮಾತು ಶುರು ಮಾಡುವುದು ಹಾಗೂ ಮಾತು ಮುಗಿಸುವುದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಅಪ್ಪಟಾ ಆಂಜನೇಯನ ಭಕ್ತೆ. ಚೆನ್ನೈನಲ್ಲಿರುವ ತೋಟದ ಮನೆಯಲ್ಲಿ ಅರ್ಜುನ್ ಸರ್ಜಾ ಕುಟುಂಬ ಆಂಜನೇಯನ ದೇಗುಲ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಯಾಕೆ ಒಂದು ನಿಮಿಷ ಭಯ ಆದರೆ ಸಾಮಾನ್ಯರು ಕೂಡ ನೆನಪು ಮಾಡಿಕೊಳ್ಳುವುದು ಆಂಜನೇಯನನ್ನೇ.
ರಾಮನ ಭಕ್ತನಾದ ಆಂಜನೇಯ ದೇಗುಲ ಎಲ್ಲ ಕಡೆ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಪಂಚಮುಖಿ ಆಂಜಿನೇಯನ ಗುಡಿ ಅಪರೂಪ ಆದರೆ ಶಕ್ತಿ ಅಪಾರವಾಗಿದೆ. ಭಕ್ತರಿಗೆ ಶಕ್ತಿ, ಜ್ಞಾನ ಮತ್ತು ಕಷ್ಟಗಳಿಂದ ಪಾರು ಮಾಡುವ ಪಂಚಮುಖಿ ಆಂಜನೇಯ ಚೈತ್ರ ಮಾಸದ ಪೌರ್ಣಮಿಯ ದಿನ ಜನಿಸಿದ್ದು. ಒಂದೊಂದು ಮುಖವೂ ವಿಶೇಷತೆಯನ್ನು ಹೊಂದಿದೆ. ಐದು ಮುಖಗಳಲ್ಲಿ ಮೊದಲ ಮುಖ ಕೋತಿಯದ್ದು, ಎರಡನೇ ಮುಖ ಗರುಡ, ಮೂರನೇ ಮುಖ ವರಹಾ, ನಾಲ್ಕನೇ ಮುಖ ನರಸಿಂಹ ಹಾಗೂ ಐದನೇ ಮುಖ ಕುದುರೆ.
undefined
ಮದ್ವೆ ಆದ್ಮೇಲೆ ಮಕ್ಳು ಬೇಡ ಎಂದು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುವವರಿಗೆ ನಟ ಭುವನ್ ಪೊಣ್ಣನ್ನ ಕೊಟ್ಟ ಸಲಹೆ ವೈರಲ್!
ಅಷ್ಟಕ್ಕೂ ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಸಿಗುವ ಲಾಭಗಳು ಏನೆಂದರೆ:
- ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಶತ್ರುಗಳ ಮೇಲೆ ವಿಜಯ ಸಾಧಿಸಲು ಆಂಜನೇಯನ ಮೊದಲ ಕೋತಿ ರೂಪ ಸಹಾಯ ಮಾಡುತ್ತದೆ.
- ನಮಗೆ ಕಾಡುತ್ತಿರುವ ಸಣ್ಣ ಪುಟ್ಟ- ದೊಡ್ಡ ಸಂಕಷ್ಟಗಳನ್ನು ದೂರ ಮಾಡಲು ಎರಡನೇ ಮುಖ ಗರುಡ ಮರೆಯಾಗುವಂತೆ ಮಾಡುತ್ತದೆ.
- ಜೀವನದಲ್ಲಿ ಕೀರ್ತಿ, ಶಕ್ತಿ, ಧೈರ್ಯ ಮತ್ತು ಧೀರ್ಘಾಯುಷ್ಯದ ಶೀರ್ವಾದನ್ನು ಪಡೆಯಲು ಮೂರನೇ ಮುಖ ವರಾಹನನ್ನು ಪೂಜಿಸಬೇಕು.
ಗರ್ಭಿಣಿ ಪತ್ನಿ ಮೇಲೆ 'ನೇತ್ರಾವತಿ' ನಟನಿಂದ ಹಲ್ಲೆ; ಮತ್ತೊಬ್ಬರ ಜೊತೆ ಸೈಲೆಂಟ್ ಆಗಿ ನಿಶ್ಚಿತಾರ್ಥ?
- ಭಯ, ಹತಾಶೆ, ಒತ್ತಡ ಮತ್ತು ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಲು ನರಸಿಂಹ ರೂಪವನ್ನು ಪೂಜಿಸಬೇಕು.
- ನಮ್ಮ ಜೀವನದಲ್ಲಿರುವ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಕುದರೆ ಮುಖವನ್ನು ಪೂಜಿಸಬೇಕು.