ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶೃಂಗೇರಿ: ಏಕಕಾಲಕ್ಕೆ 75 ಸಾವಿರ ಜನರಿಂದ ಬೃಹತ್ ವೇದಿಕೆಯಲ್ಲಿ ಶ್ಲೋಕ ಪಠಣೆ

By Govindaraj S  |  First Published Jan 11, 2025, 8:58 PM IST

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮತ್ತೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಲುವಾಗಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಅದ್ದೂರಿಯಾಗಿ ನಡೆಯಿತು. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.11): ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮತ್ತೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಲುವಾಗಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಅದ್ದೂರಿಯಾಗಿ ನಡೆಯಿತು. ಜಗದ್ಗುರಗಳು ಸಂನ್ಯಾಸ ಸ್ವೀಕಾರದ ಐವತ್ತನೆಯ ವರ್ಷದ ಸ್ವರ್ಣ ಮಹೋತ್ಸವವನ್ನು 'ಸುವರ್ಣಭಾರತೀ" ಎಂದು ಆಚರಿಸಲಾಯಿತು. ಶ್ರೀಮಠದ ನರಸಿಂಹವನದ ಸುಮಾರು 20 ಎಕರೆಯ ಶ್ರೀಭಾರತೀತೀರ್ಥ ನಗರದಲ್ಲಿ ಅದ್ದೂರಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.

Tap to resize

Latest Videos

75 ಸಾವಿರ ಮಂದಿ ಒಂದೇ ವೇದಿಕೆಯಲ್ಲಿ: ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಮಹಿಳೆಯರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಆಗಮಿಸಿದ್ದ ಶಾಲಾ ಮಕ್ಕಳ ಸಹಿತ 75 ಸಾವಿರ ಮಂದಿ ಒಂದೇ ವೇದಿಕೆಯಲ್ಲಿ ಏಕಧ್ವನಿಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳನ್ನು ಪಠಿಸಲಾಯಿತು.

ಅಧ್ಯಾತ್ಮದಿಂದ ದೃಢತೆ: ಮಾನಸಿಕ ಮತ್ತು ದೈಹಿಕ ದೃಢತೆಗೆ ಅಧ್ಯಾತ್ಮ ಪೂರಕ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಹೇಳಿದರು.ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಸನ್ನಿದಧಾನಂಗಳು ಎಳೆಹರೆಯದಲ್ಲಿಯೇ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೂ ಆ ಬಗ್ಗೆ ಒಲವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.ಅಖಿಲವಾಗುತ್ತಿದ್ದ ಸನಾತನ ಧರ್ಮವನ್ನು ಉದ್ಧರಿಸಿದವರು ಆಚಾರ್ಯ ಶಂಕರರು. ಅವರು ತೋರಿದ ಮಾರ್ಗದಲ್ಲಿ ನಡೆಯುವುದು ಶ್ರೇಯಸ್ಕರ ಎಂದು ಶ್ರೀಗಳು ಹೇಳಿದರು.

ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ ಶಾರದಾ ಪೀಠ: ಬೃಹತ್ ವೇದಿಕೆಯಲ್ಲಿ 50 ಸಾವಿರ ಜನರಿಂದ ಶ್ಲೋಕ ಪಠಣ

ಮಠಗಳಿಂದ ಸಂಸ್ಕೃತಿ ಸಂಸ್ಕಾರ ಬೆಳೆಯಲು ಸಾಧ್ಯ ಡಿಕೆಶಿ: ದೇಶದ ಆಸ್ತಿ ಸಂಸ್ಕೃತಿ ಮತ್ತು ಸಂಸ್ಕಾರ. ಸಂಸ್ಕೃತಿ ಹಾಗೂಸಂಸ್ಕಾರವನ್ನು ಕಾಪಾಡಿಕೊಂಡು ಹೋಗುವ ಮಹತ್ವದ ಕಾರ್ಯಮಠಗಳಿಂದ ಆಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಮರ್ಪಣೆ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಸ್ವಾಮೀಜಿಯವರಿಂದಆಶೀರ್ವಾದ ಪಡೆದು ಮಾತನಾಡಿದ ಅವರು ಭಕ್ತರಾದ ನಾವುಗಳು ಕೂಡ ನಮ್ಮ ಮನೆಗಳನ್ನುಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಮಠಗಳಿಗೆ ಮನ್ನ ಕೈಲಾದ ನೆರವನ್ನು ನೀಡಬೇಕು. ಇದು ನಮ್ಮೆಲ್ಲರ ಕರ್ತವ್ಯ. ಆಗ ಮಠಗಳು ಉಳಿಯಲು ಸಾಧ್ಯ. ಮಠಗಳಿಂದ ಸಂಸ್ಕೃತಿ ಸಂಸ್ಕಾರ ಬೆಳೆಯಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಮೂಲಸೌಕರ್ಯ, ಊಟದ ವ್ಯವಸ್ಥೆ, ವಾಹನ ನಿಲುಗಡೆ, ಸ್ವಚ್ಛತೆ, ಅಲಂಕಾರ ಮಾಡಲಾಗಿತ್ತು. ಪಟ್ಟಣದ ಮುಖ್ಯ ಬೀದಿಯಲ್ಲಿ ಕೇಸರಿ ತೋರಣಗಳು ರಾರಾಜಿಸುತ್ತಿದ್ದವು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೆ.ಎಸ್ ಈಶ್ವರಪ್ಪ, ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕ ರಾಜೇಗೌಡ, ಮಾಜಿ ಸಚಿವ ಜೀವರಾಜ್ ಭಾಗಿಯಾಗಿದ್ದರು.

click me!