ಮಕರ ರಾಶಿಗೆ ಶನೀಶ್ವರ: ಯಾರಿಗೆ ಏಳೂವರೆ ಬಾಧೆ?

By Suvarna NewsFirst Published May 6, 2021, 12:05 PM IST
Highlights

ಇದೇ ತಿಂಗಳು ಶನಿದೇವನು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೂರು ರಾಶಿಗಳವರಿಗೆ ಏಳೂವರೆ ಶನಿಯ ಬಾಧೆ ಹೆಚ್ಚಲಿದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಶನಿ ದೇವರ ಪ್ರಭಾವವನ್ನು ಸಹಿಸಬೇಕಾಗುತ್ತದೆ. ಭಗವಾನ್ ಶನಿ ತನ್ನ ಸಂಚಾರಕ್ಕೆ ಅನುಗುಣವಾಗಿ ಎಲ್ಲರಿಗೂ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತಾನೆ. ಮೇ 23ರಂದು ಶನಿಯು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಚಲನೆಯಿಂದ ಜಾತಕರ ಮೇಲೆ ಆಗುವ ಪರಿಣಾಮಗಳು ಯಾವುವು?

ಶನಿಯ ಏಳೂವರೆ ದೆಸೆಯ ಪರಿಣಾಮಗಳು ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರ ಮೇಲೆ ಉಂಟಾಗುತ್ತದೆ. ಅದೇ ಸಮಯದಲ್ಲಿ, ಶನಿಯ ಮಹಾದೆಸೆಯು ಮಿಥುನ ಮತ್ತು ತುಲಾ ರಾಶಿಗಳಿಗೆ ಉಂಟಾಗುತ್ತದೆ. ಶನಿಯ ಈ ಏಳರಾಟ ಹಾಗೂ ಮಹಾದೆಸೆಯ ಪರಿಣಾಮಗಳ ನಿವಾರಣೆ ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಳೂವರೆ ಶನಿಯ ಪ್ರಭಾವ ಜನ್ಮರಾಶಿಯ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ದ್ವಾದಶ ಸ್ಥಾನಗಳಿಗೆ ಉಂಟಾಗುತ್ತದೆ. ಅಂದರೆ ಈಗ ಪ್ರಥಮ ಸ್ಥಾನದಲ್ಲಿರುವ ಮಕರ ರಾಶಿ, ದ್ವಿತೀಯ ಕುಂಭ ರಾಶಿ ಹಾಗೂ ದ್ವಾದಶ ರಾಶಿಯಾದ ಧನು ರಾಶಿಯ ಮೇಲೆ ಪ್ರಭಾವ ಉಂಟಾಗುತ್ತದೆ. ಇದೇ ಸಂದರ್ಭದಲ್ಲಿ ಶನಿದೇವನು ರಾಶಿಚಕ್ರದಿಂದ ನಾಲ್ಕನೇ ಮತ್ತು ಎಂಟನೇ ಮನೆಯಲ್ಲಿದ್ದರೆ ಅದನ್ನು ಶನಿ ಮಹಾದೆಸೆ ಎನ್ನಲಾಗುತ್ತದೆ.

ಶನಿ ಸಾಡೇಸಾತಿಯಲ್ಲಿ ಮೂರು ಹಂತಗಳಿವೆ. ಶನಿಯ ಮೂರನೇ ಹಂತ ಧನು ರಾಶಿಯಲ್ಲಿ, ಎರಡನೇ ಹಂತ ಮಕರ ರಾಶಿಯಲ್ಲಿ, ಮೊದಲ ಹಂತ ಕುಂಭ ರಾಶಿಯಲ್ಲಿ ನಡೆಯಲಿದೆ. ಎರಡನೇ ಹಂತ ಅತ್ಯಂತ ಕಠಿಣವಾದುದು. ಕೊನೆಯ ಹಂತದಲ್ಲಿ ಶನಿದೇವನು ಜಾತಕನಿಗೆ ಆಶೀರ್ವಾದವನ್ನು ಮಾಡುತ್ತಾನೆ.



​ಧನು
ಏಳೂವರೆಯ ಕೊನೆಯ ಹಂತವು ಗುರುಗ್ರಹದ ರಾಶಿಯಾದ ಧನುರಾಶಿಯಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನಾ ಕಷ್ಟನಷ್ಟಗಳು ತಲೆದೋರಬಹುದು. ಆದರೆ ದೇವರು ಕೈಹಿಸಿದು ಮುನ್ನಡೆಸುತ್ತಾನೆ. 2022ರಲ್ಲಿ ಸಾಡೇಸಾತಿ ಪೂರ್ಣಗೊಳ್ಳುತ್ತದೆ. ಏಪ್ರಿಲ್‌ 29, 2022ರಂದು ಶನಿಯು ಕುಂಭ ರಾಶಿ ಪ್ರವೇಶಿಸಿದಾಗ ಧನು ರಾಶಿಯವರು ಶನಿದೃಷ್ಟಿಯಿಂದ ಮುಕ್ತರಾಗುತ್ತಾರೆ. ಆದರೆ 2022ರ ಜುಲೈ 12ರಂದು ಶನಿಯು ಕುಂಭ ರಾಶಿಯಿಂದ ಮಕರ ರಾಶಿಗೆ ವಕ್ರಿಯಾಗುತ್ತಾನೆ. 2023ರ ಜನವರಿ 17ರಂದು ಮತ್ತೆ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿದಾಗ ಸಾಡೇಸಾತಿ ನಿವಾರಣೆಯಾಗುವುದು.

​ಮಕರ
ಜ್ಯೋತಿಷ್ಯದ ಪ್ರಕಾರ, ಶನಿದೇವ ಮಕರ ರಾಶಿಯಲ್ಲಿ ಸ್ಥಿತನಾಗಿದ್ದಾನೆ ಮತ್ತು ಸಾಡೇಸಾತಿಯ ಎರಡನೇ ಹಂತವು ಈ ರಾಶಿಚಕ್ರದಲ್ಲಿ ನಡೆಯುತ್ತಿದೆ. ಈ ರಾಶಿಚಕ್ರದ ಅಧಿಪತಿ ಶನಿ. ಈ ರಾಶಿಯವರಿಗೆ ಮಾರ್ಚ್ 29, 2025ರಂದು ಸಾಡೇಸಾತಿಯಿಂದ ಮುಕ್ತಿ ದೊರೆಯುತ್ತದೆ. ಏಕೆಂದರೆ ಶನಿದೇವನು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಶನಿಯ ಪ್ರಭಾವವು ಈ ರಾಶಿಯವರಿಗೆ ಕೊನೆಯಾಗುತ್ತದೆ. ಸಾಡೇಸಾತಿಯ ಮಧ್ಯಮ ಹಂತದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ ಮತ್ತು ಬದಲಾವಣೆಗಳನ್ನೂ ಸಹ ಕಾಣುವಿರಿ.



​ಕುಂಭ
ಜ್ಯೋತಿಷ್ಯದ ಪ್ರಕಾರ, ಮಕರ ರಾಶಿಯಂತೆ ಕುಂಭ ರಾಶಿಯ ಅಧಿಪತಿ ಕೂಡಾ ಶನಿ. ಸಾಡೇಸಾತಿಯ ಮೊದಲ ಹಂತವು ಈ ರಾಶಿಚಕ್ರದಲ್ಲಿ ನಡೆಯುತ್ತಿದೆ. ಈ ರಾಶಿಯವರು 23 ಫೆಬ್ರವರಿ 2028ರಂದು ಶನಿಯ ದೃಷ್ಟಿಯಿಂದ ಸಂಪೂರ್ಣ ವಿಮೋಚನೆ ಪಡೆಯಲಿರುವರು. ಅಲ್ಲಿಯವರೆಗೆ ಜೀವನದ ನಾನಾ ಹಂತಗಳಲ್ಲಿ ಹಲವು ಪರೀಕ್ಷೆಗಳು ಎದುರಾಗಲಿವೆ. ಆದರೆ ವೃತ್ತಿರಂಗ ಹಾಗೂ ಕೌಟುಂಬಿಕ ಜೀವನದಲ್ಲಿ ಉನ್ನತಿಯನ್ನು ಕಾಣಲಿದ್ದೀರಿ.

ಪರಿಹಾರಗಳು
ಅಮಾವಾಸ್ಯೆಯ ದಿನದಂದು ಸಂಜೆ ಶನಿದೇವನನ್ನು ಪೂಜಿಸುವುದು ಮತ್ತು ಜಪಿಸುವುದು ಸಾಡೇಸಾತಿಯ ದುಷ್ಪರಿಣಾಮಗಳಿಂದ ಮುಕ್ತವಾಗಲು ಉತ್ತಮ. ಪಶ್ಚಿಮ ದಿಕ್ಕಿಗೆ ಎದುರಾಗಿ ಶನಿಯನ್ನು ಪೂಜಿಸಿ ಮತ್ತು ಕಪ್ಪು ಕಂಬಳಿಯ ಮೇಲೆ ಕುಳಿತು ಶನೈಶ್ಚರನನ್ನು ಪೂಜಿಸುವುದು ಒಳ್ಳೆಯದು. ರಾಮಾಯಣದ ಸುಂದರ ಕಾಂಡ ಓದಿ ಮತ್ತು ಸಂಜೆ, ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿ. ಇದು ಪೂಜೆಯ ಪೂರ್ಣ ಫಲವನ್ನು ನೀಡುತ್ತದೆ.



 

 

click me!