ಶನಿ ಪೂಜೆಯಲ್ಲಿ ಸಾಸಿವೆ ಎಣ್ಣೆ ಬಳಸುವುದು ಗೊತ್ತೇ ಇದೆ. ಶನಿಗೂ ಸಾಸಿವೆ ಎಣ್ಣೆಗೂ ಇರುವ ನಂಟಿಗೆ ಒಂದು ಪೌರಾಣಿಕ ಕತೆ ಇದೆ. ಆ ಆಸಕ್ತಿದಾಯಕ ಕತೆಯೇನು ನೋಡೋಣ..
ಶನಿ ನ್ಯಾಯದ ದೇವರು. ಶನಿಯ ಕ್ರೂರ ದೃಷ್ಟಿಗೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಹೆದರುತ್ತಾರೆ. ಶನಿದೇವನು ಮಾತ್ರ ಜನರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಖಾತೆಯನ್ನು ಇಡುತ್ತಾನೆ. ಶನಿವಾರ ಶನಿ ದೇವರಿಗೆ ಮೀಸಲಾಗಿದೆ. ಶನಿವಾರದಂದು ಶನಿದೇವನನ್ನು ನಿಜವಾದ ಹೃದಯದಿಂದ ಪೂಜಿಸುವುದರಿಂದ ಶನಿದೇವನ ಆಶೀರ್ವಾದ ದೊರೆಯುತ್ತದೆ. ಈ ದಿನ ಶನಿಯನ್ನು ಪೂಜಿಸುವಾಗ ಸಾಸಿವೆ ಎಣ್ಣೆ ನೀಡುವ ಆಚರಣೆ ನಡೆದು ಬಂದಿದೆ. ಇಷ್ಟಕ್ಕೂ ಶನಿಗೆ ಸಾಸಿವೆ ಎಣ್ಣೆಯನ್ನೇ ಅರ್ಪಿಸುವುದೇಕೆ? ಅವನಿಗೆ ಸಾಸಿವೆ ಎಣ್ಣೆ ಇಷ್ಟವಾಗಿರಲು ಕಾರಣವೇನು?
ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಮಾತ್ರ ಅರ್ಪಿಸಲಾಗುತ್ತದೆ. ಶನಿ ದೇವರಿಗೆ ಸಾಸಿವೆ ಎಣ್ಣೆ(Mustard oil)ಯನ್ನು ಮಾತ್ರ ಏಕೆ ಅರ್ಪಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ, ಹಾಗಾದರೆ ಶನಿದೇವ(Shani Dev)ನಿಗೆ ಸಾಸಿವೆ ಎಣ್ಣೆ ಏಕೆ ಇಷ್ಟ ಎಂದು ತಿಳಿಯೋಣ? ಅದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯ ಬಗ್ಗೆ ತಿಳಿಯೋಣ.
ಪೌರಾಣಿಕ ಕತೆ(Mythological story)
ರಾಮಾಯಣ ಕಾಲದಲ್ಲಿ, ಶನಿ ದೇವನು ತನ್ನ ಶಕ್ತಿ ಮತ್ತು ಪರಾಕ್ರಮದ ಬಗ್ಗೆ ಹೆಮ್ಮೆಪಟ್ಟನು. ಅದು ಕೊಂಚ ಅಹಂಕಾರಕ್ಕೆ ತಿರುಗಿತ್ತು. ಅದೇ ಸಮಯದಲ್ಲಿ ಹನುಮಂತನ ಶಕ್ತಿಯ ಖ್ಯಾತಿಯು ಎಲ್ಲಾ ನಾಲ್ಕು ದಿಕ್ಕುಗಳಲ್ಲಿಯೂ ಹರಡಿತು. ಹನುಮಂತ(Hanuman)ನ ಶಕ್ತಿಯ ಬಗ್ಗೆ ತಿಳಿದ ಶನಿದೇವನು ಹನುಮಂತನೊಡನೆ ಯುದ್ಧಕ್ಕೆ ಹೊರಟನು. ಆದರೆ ಶನಿದೇವನು ಹನುಮಂತನ ಬಳಿಗೆ ಹೋದಾಗ, ಅವನು ಶ್ರೀರಾಮನ ಭಕ್ತಿಯಲ್ಲಿ ಮುಳುಗಿ ಶಾಂತ ಸ್ಥಳದಲ್ಲಿ ಕುಳಿತಿರುವುದನ್ನು ನೋಡಿದನು.
ಆಚಾರ್ಯ ಚಾಣಕ್ಯನ ಈ ಮಂತ್ರ ಕೌಟುಂಬಿಕ ಜೀವನವನ್ನು ಚೆನ್ನಾಗಿಡುತ್ತೆ!
ಆಂಜನೇಯನು ಶ್ರೀ ರಾಮನ ಹೆಸರನ್ನು ತೆಗೆದುಕೊಳ್ಳುವುದನ್ನು ನೋಡಿ, ಶನಿ ದೇವನು ಅವನನ್ನು ಯುದ್ಧಕ್ಕೆ ಪ್ರಚೋದಿಸಿದನು. ಆದರೆ ಹನುಮಂತ ಸಾವಧಾನದಿಂದ ವಿಷಯಗಳನ್ನು ಶನಿಗೆ ವಿವರಿಸಿದನು ಮತ್ತು ಯುದ್ಧ ಮಾಡಬೇಡ ಎಂದು ಕೇಳಿಕೊಂಡನು. ಆದರೆ ಶನಿ ದೇವನಿಗೆ ತಾನು ಹನುಮಂತನ ವಿರುದ್ಧ ಗೆದ್ದು ತೋರಿಸಿ, ತನ್ನ ಪರಾಕ್ರಮವನ್ನು ಎಲ್ಲರೂ ಹೊಗಳಲಿ ಎಂಬ ಆಸೆಯಿತ್ತು. ಹಾಗಾಗಿ ಯುದ್ಧದ ವಿಷಯದಲ್ಲಿ ಅಚಲವಾಗಿಯೇ ಇದ್ದನು. ಶನಿದೇವನು ತುಂಬಾ ಮಾತನಾಡಿದ ನಂತರ, ಹನುಮಂತನು ಯುದ್ಧಕ್ಕೆ ಸಿದ್ಧನಾದನು ಮತ್ತು ಇಬ್ಬರ ನಡುವೆ ಭೀಕರ ಯುದ್ಧವು ನಡೆಯಿತು.
ಶನಿಯ ಗರ್ವಭಂಗ
ಈ ಯುದ್ಧದ ಕಡೆಯಲ್ಲಿ ಶನಿಯನ್ನು ಹನುಮಂತನು ತನ್ನ ಬಾಲದಿಂದ ಸುತ್ತಿ ಕಟ್ಟಿ ಹಾಕಿದನು. ಶನಿ ಸೋತು ಗರ್ವಭಂಗಗೊಂಡನು. ಹನುಮಂತನ ದಾಳಿಯಿಂದ ಅವನ ದೇಹದ ಮೇಲೆ ಹಲವು ಗಾಯಗಳಾಗಿದ್ದು, ನೋವಿನಿಂದ ಶನಿ ದೇವ ಕಂಗಾಲಾಗಿದ್ದನು. ಈಗ ಹನುಮಂತನು ಶನಿಯನ್ನು ಬಿಡುಗಡೆಗೊಳಿಸಿ ಅವನ ದೇಹಕ್ಕಾದ ಗಾಯಗಳಿಗೆ ತಾನೇ ಸ್ವತಃ ಚಿಕಿತ್ಸೆ ನೀಡಿ ಸಾಸಿವೆ ಎಣ್ಣೆಯನ್ನು ಹಚ್ಚಿದನು. ಇದರಿಂದ ಶನಿಗೆ ಬೇಗ ನೋವುಗಳು ಮಾಯವಾದವು, ಗಾಯಗಳು ಗುಣವಾದವು.
ಇದರಿಂದ ಸಂತಸಗೊಂಡ ಶನಿಯು ಸಾಸಿವೆ ಎಣ್ಣೆಯ ಶಕ್ತಿಯ ಬಗ್ಗೆ ಅಚ್ಚರಿಗೊಂಡನು ಮತ್ತು ಹೇಳಿದನು, 'ಇಂದಿನ ನಂತರ ಯಾರು ನನಗೆ ಸಾಸಿವೆ ಎಣ್ಣೆಯನ್ನು ಮನಃಪೂರ್ವಕವಾಗಿ ಅರ್ಪಿಸುತ್ತಾರೋ ಅವರು ಶನಿಗೆ ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತರಾಗುತ್ತಾರೆ' ಎಂದು ಹೇಳಿದನು. ಅಂದಿನಿಂದ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯ ನಡೆದು ಬಂದಿದೆ.
ಪದೆ ಪದೇ ಮನೆಗೆ ಬೆಕ್ಕು ಬರ್ತಿದ್ದರೆ ಮಾಲೀಕನಿಗೆ ಒಳ್ಳೇದಲ್ಲ!
ಶನಿವಾರ(Saturday) ಶನಿಯ ದಿನವಾದ್ದರಿಂದ ಅಂದು ಸಾಸಿವೆ ಎಣ್ಣೆಯನ್ನು ಶನಿಗೆ ಅರ್ಪಿಸುವ ಮೂಲಕ ಶನಿದೇವನ ವಿಶೇಷವಾದ ಆಶೀರ್ವಾದಕ್ಕೆ ಪಾತ್ರರಾಗಬಹುದು. ಇದರಿಂದ ಜನರ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಹೀಗೆ ಮಾಡುವುದರಿಂದ ಶನಿ ಧೈಯ, ಸಾಡೇ ಸಾತಿ, ಶನಿ ಮಹಾ ದಶಾ ಪ್ರಭಾವ ಕಡಿಮೆಯಾಗುತ್ತದೆ.