Akshaya Tritiya 2023ಕ್ಕೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ, ಇಲ್ಲಾಂದ್ರೆ ಲಕ್ಷ್ಮೀ ಮನೆಗೆ ಕಾಲಿಡೋಲ್ಲ!

Published : Apr 15, 2023, 10:51 AM IST
Akshaya Tritiya 2023ಕ್ಕೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ, ಇಲ್ಲಾಂದ್ರೆ ಲಕ್ಷ್ಮೀ ಮನೆಗೆ ಕಾಲಿಡೋಲ್ಲ!

ಸಾರಾಂಶ

ಅಕ್ಷಯ ತೃತೀಯ 22 ಏಪ್ರಿಲ್ 2023ರಂದು. ಈ ದಿನ ಕೆಲವು ಬೆಲೆ ಬಾಳುವ ವಸ್ತುಗಳನ್ನು ಮನೆಗೆ ತಂದರೆ ಸಮೃದ್ಧಿ ಬರುತ್ತದೆ. ಆದರೆ ಈ ದಿನದೊಳಗೆ ಮನೆಯಿಂದ ಕೆಲವು ವಸ್ತುಗಳನ್ನು ಹೊರಗೆ ಎಸೆಯಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ.

ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಈ ಬಾರಿ  ಏಪ್ರಿಲ್ 22 ರಂದು ಅಕ್ಷಯ ತೃತೀಯ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಬಹಳ ಮಂಗಳಕರವಾಗಿದೆ. ಈ ದಿನ ದಿನಾಂಕ ಮತ್ತು ಸಮಯ ನೋಡದೆ ಯಾವುದೇ ಶುಭ ಕಾರ್ಯವನ್ನು ಮಾಡಬಹುದು. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಶುಭ. ಈ ದಿನ ಸಂಪತ್ತಿನ ಅಧಿದೇವತೆ ಮಾ ಲಕ್ಷ್ಮಿ ಮತ್ತು ಭಗವಾನ್ ಶ್ರೀ ಹರಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನೀವು ಸಹ ಪಡೆಯಬೇಕೆಂದಿದ್ದರೆ, ಅಕ್ಷಯ ತೃತೀಯಕ್ಕೂ ಮೊದಲು ಮನೆಯಲ್ಲಿ ಬಿದ್ದಿರುವ ಈ ಅನುಪಯುಕ್ತ ವಸ್ತುಗಳನ್ನು ಹೊರ ಹಾಕಿ..

  • ನೀವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಅಕ್ಷಯ ತೃತೀಯದ ಮೊದಲು,  ಒಣ ಹೂವಿನ ಗಿಡಗಳನ್ನು ಮನೆಯಿಂದ ತೆಗೆದು ಹಾಕಿ. ಈ ವಸ್ತುಗಳು ಮನೆಯಲ್ಲಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತವೆ. 
  • ಅಕ್ಷಯ ತೃತೀಯದಂದು ಹಳೆಯ ಪೊರಕೆಯನ್ನು ಬದಲಾಯಿಸಿ. ಮನೆಯಲ್ಲಿ ಇಟ್ಟಿರುವ ಪೊರಕೆ ಮುರಿದಿದ್ದರೆ ಅಕ್ಷಯ ತೃತೀಯದ ಮೊದಲು ಹೊರತೆಗೆಯಿರಿ. ಮುರಿದ ಪೊರಕೆಯನ್ನು ಮನೆಯಲ್ಲಿ ಇಡುವುದರಿಂದ ಬಡತನ ಬರುತ್ತದೆ. ಮನೆಯಲ್ಲಿ ಪೊರಕೆ ಒಡೆದರೆ ಲಕ್ಷ್ಮಿ ಮನೆಯಿಂದ ಹೊರ ಹೋಗುತ್ತಾಳೆ.
  • ಮನೆಯಲ್ಲಿರುವ ನಿಂತ ಗಡಿಯಾರ, ವಾಚ್ ಮುಂತಾದವು ಕೂಡಾ ಕೆಟ್ಟ ಸಮಯ ತರುತ್ತವೆ. ಅವನ್ನು ಹಬ್ಬಕ್ಕೂ ಮುನ್ನ ಹೊರ ಹಾಕಿ, ಇಲ್ಲವೇ ಸರಿಪಡಿಸಿಕೊಳ್ಳಿ.
  • ಮನೆಯ ಯಾವುದೇ ಮೂಲೆಯಲ್ಲಿ ಬಲೆ ಕಟ್ಟಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಕ್ಷಯ ತೃತೀಯಕ್ಕೆ ಮುನ್ನ ಇಡೀ ಮನೆಯ ಬಲೆ ಗುಡಿಸಿ..

    Panchak 2023: ಏ.15ರಿಂದ ಮೃತ್ಯು ಪಂಚಕ, ಈ ಕೆಲಸಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ..
     
  • ಮನೆಯಲ್ಲಿ ಒಡೆದ ಪಾತ್ರೆಗಳಿದ್ದರೆ, ಆ ಪಾತ್ರೆಗಳನ್ನು ಹೊರಗೆ ಎಸೆಯಿರಿ. ಮನೆಯಲ್ಲಿ ಒಡೆದ ಪಾತ್ರೆಯು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಮನೆಯಲ್ಲಿ ವೈಮನಸ್ಯ ಪರಿಸ್ಥಿತಿ ಮುಂದುವರಿಯುತ್ತದೆ. ಮನೆಯಲ್ಲಿ ಶಾಂತಿ ಇರುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ. ಸಂಪತ್ತಿನ ದೇವತೆ ಅಲ್ಲಿ ನೆಲೆಸುವುದಿಲ್ಲ.
  • ಸಾಮಾನ್ಯವಾಗಿ ಜನರು ಮನೆಯ ಮುಖ್ಯ ಬಾಗಿಲಲ್ಲಿ ಡಸ್ಟ್‌ಬಿನ್ ಇಡುತ್ತಾರೆ. ನೀವು ಮನೆಯ ಮುಖ್ಯ ಗೇಟ್‌ನಲ್ಲಿ ಡಸ್ಟ್‌ಬಿನ್ ಅನ್ನು ಇರಿಸಿದರೆ, ಅದನ್ನು ಅಲ್ಲಿಂದ ತೆಗೆಯಿರಿ. ಅಕ್ಷಯ ತೃತೀಯ ದಿನದಂದು ಡಸ್ಟ್ ಬಿನ್ ಅನ್ನು ಮುಖ್ಯ ಬಾಗಿಲಲ್ಲಿ ಇಡಬೇಡಿ. ಇಟ್ಟುಕೊಂಡರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
  • ಕೊಳಕು-ಒಗೆಯದ ಬಟ್ಟೆಗಳನ್ನು ಇಡಬೇಡಿ. ಇದು ದೇವಿಯನ್ನು ಕೆರಳಿಸುತ್ತದೆ.
  • ನಿಮ್ಮ ಮನೆಯಲ್ಲಿ ಹಳೆಯ ಹರಿದ ಬೂಟುಗಳು ಮತ್ತು ಚಪ್ಪಲಿಗಳಿದ್ದರೆ, ಅಕ್ಷಯ ತೃತೀಯದ ಮೊದಲು ಅವುಗಳನ್ನು ಹೊರ ತೆಗೆಯಿರಿ. 

ಹಬ್ಬದ ದಿನದಂದ ಮನೆಗೇನು ತರಬೇಕು?
ಅಕ್ಷಯ ತೃತೀಯದಂದು ಶುಭ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿ ಆಕರ್ಷಿತಳಾಗುತ್ತಾಳೆ. ತಾಯಿ ಲಕ್ಷ್ಮಿಗೆ ಸ್ವಚ್ಛತೆ ಎಂದರೆ ತುಂಬಾ ಇಷ್ಟ. ಅಕ್ಷಯ ತೃತೀಯ ದಿನದಂದು ಶುಚಿತ್ವವನ್ನು ಕಾಪಾಡಿಕೊಳ್ಳಿ, ಅಕ್ಷಯ ತೃತೀಯದಲ್ಲಿ ಹೊಸ ವಸ್ತುಗಳನ್ನು ಖರೀದಿಸಿ. ಈ ದಿನದಂದು ಚಿನ್ನಾಭರಣಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Marriage astrology: ಜಾತಕ ಹೀಗಿದ್ದರೆ ವಿಚ್ಚೇದನ ಆಗ್ಬೋದು!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
click me!

Recommended Stories

2026 ರಲ್ಲಿ ಶನಿಯ ಧನ ರಾಜಯೋಗ, ಈ 40 ದಿನ ಈ 3 ರಾಶಿಗೆ ಕರೆನ್ಸಿ, ನೋಟು ಮಳೆ
ಈ ರಾಶಿಗೆ ತೊಂದರೆ ಹೆಚ್ಚಾಗಬಹುದು, ರಾಹು ಕಾಟದಿಂದ ಉದ್ಯೋಗ, ವ್ಯವಹಾರದ ಮೇಲೆ ಪರಿಣಾಮ