ಸೇಡು ತೀರಿಸಿಕೊಳ್ಳಲು ಆತ್ಮದ ಪುನರ್ಜನ್ಮ; ಇದು ವಿಜ್ಞಾನಿಗಳಿಗೂ ಅಚ್ಚರಿ..!

Published : Jul 11, 2023, 04:06 PM IST
ಸೇಡು ತೀರಿಸಿಕೊಳ್ಳಲು ಆತ್ಮದ ಪುನರ್ಜನ್ಮ; ಇದು ವಿಜ್ಞಾನಿಗಳಿಗೂ ಅಚ್ಚರಿ..!

ಸಾರಾಂಶ

ಪುನರ್ಜನ್ಮದ ಬಗೆಗಿರುವ ವಿಚಾರಗಳು ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ನಮ್ಮ ದೇಹಕ್ಕೆ ಸಾವು ಬಂದ ನಂತರ ಅದು ಇತರ ಜೀವಿಯನ್ನು ಸೇರುತ್ತದೆಯೇ ಎಂಬ ನಂಬಿಕೆ ಕುರಿತು ಅನೇಕ ಚರ್ಚೆ ನಡೆಯುತ್ತವೆ. ಕೆಲವು ಕಾರಣಗಳಿಂದ ಆತ್ಮವು ಪುನರ್ಜನ್ಮವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಪುನರ್ಜನ್ಮ (reincarnation) ದ ಬಗೆಗಿರುವ ವಿಚಾರಗಳು ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ನಮ್ಮ ದೇಹಕ್ಕೆ ಸಾವು ಬಂದ ನಂತರ ಅದು ಇತರ ಜೀವಿಯನ್ನು ಸೇರುತ್ತದೆಯೇ ಎಂಬ ನಂಬಿಕೆ ಕುರಿತು ಅನೇಕ ಚರ್ಚೆ ನಡೆಯುತ್ತವೆ. ಕೆಲವು ಕಾರಣಗಳಿಂದ ಆತ್ಮವು ಪುನರ್ಜನ್ಮವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಹುಟ್ಟಿದ ವ್ಯಕ್ತಿಗೆ ಸಾವು ಅನಿವಾರ್ಯ. ಆದಾಗ್ಯೂ, ಸಾವು ಮತ್ತು ಪುನರ್ಜನ್ಮದ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಆದರೆ ಸಾವಿನ ನಂತರ ಆತ್ಮವು ನಿಜವಾಗಿಯೂ ಮರುಹುಟ್ಟು (rebirth)  ಪಡೆಯುತ್ತದೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಎಲ್ಲಾ ಆತ್ಮ (soul) ಗಳು ಪುನರ್ಜನ್ಮ ಮಾಡುತ್ತವೆಯೇ ಎಂದು ಕೂಡ ಅನೇಕ ಜನರಿಗೆ ಪ್ರಶ್ನೆ ಇದೆ. ಸತ್ತ ನಂತರ ಆತ್ಮ ಎಲ್ಲಿ ಹೋಗುತ್ತದೆ, ಅದು ಇತರೆ ಜೀವಿಗಳಲ್ಲಿ ಸೇರಿಕೊಳ್ಳುತ್ತದೆಯೆ ಇವೇ ಮೊದಲಾದ ಪುನರ್ಜನ್ಮದ ಕುರಿತಾದ ಕುತೂಹಲಕಾರಿ ಪ್ರಶ್ನೆಗಳು ಶತ ಶತಮಾನಗಳಿಂದಲೂ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವೇದಗಳು ಪುನರ್ಜನ್ಮದ ಬಗ್ಗೆ ಏನು ಹೇಳುತ್ತವೆ?

ಮರಣಾನಂತರ ಆತ್ಮದ ಪುನರ್ಜನ್ಮವನ್ನು ಪೌರಾಣಿಕ (Legendary) ವೇದ ಯಜುರ್ವೇದದ ಶತಪಥ ಬ್ರಾಹ್ಮಣದಲ್ಲಿ ವಿವರವಾಗಿ ವಿವರಿಸಲಾಗಿದೆ. ಆತ್ಮವು ದೇಹವನ್ನು ತೊರೆದು ಒಂದು ಕ್ಷಣಕ್ಕಿಂತ ಕಡಿಮೆ ಅಥವಾ ಹೆಚ್ಚೆಂದರೆ 30 ಸೆಕೆಂಡುಗಳಲ್ಲಿ ಮತ್ತೊಂದು ದೇಹ (body) ವನ್ನು ಪಡೆದುಕೊಳ್ಳುತ್ತದೆ ಎಂದು ಉಪನಿಷತ್ತುಗಳು ಹೇಳುತ್ತವೆ.

ಸಾವಿನ ನಂತರ ಆತ್ಮವು ಹೊಸ ದೇಹವನ್ನು ಪಡೆದುಕೊಳ್ಳಲು 3 ದಿನಗಳು, 13 ದಿನಗಳು, ಒಂದು ತಿಂಗಳು ಅಥವಾ ಒಂದು ವರ್ಷದ ಕಾಲುಭಾಗವನ್ನು ತೆಗೆದುಕೊಳ್ಳುತ್ತದೆ. ಹೊಸ ದೇಹವನ್ನು ಪಡೆಯದ ಆತ್ಮಗಳು ಪಿತೃಲೋಕ ಮತ್ತು ಸ್ವರ್ಗ (heaven) ಲೋಕಕ್ಕೆ ಹೋಗುತ್ತವೆ ಅಥವಾ ಅಲೆದಾಡುತ್ತವೆ ಎಂದು ಗರುಡ ಪುರಾಣ ಹೇಳುತ್ತದೆ.

ವಿರಹ ನೂರು ನೂರು ತರಹ.. ಶ್ರಾವಣದಲ್ಲಿ ದೂರ ಹೋಗು ಓ ಜೊತೆಗಾರ..!

 

ಈ ಕಾರಣಗಳಿಂದ ಆತ್ಮವು ಮರುಹುಟ್ಟು ಪಡೆಯುತ್ತದೆ

ಸೇಡು ತೀರಿಸಿಕೊಳ್ಳಲು: ಒಬ್ಬ ವ್ಯಕ್ತಿಯು ಜೀವನ (life) ದಲ್ಲಿ ಬಹಳಷ್ಟು ಅನ್ಯಾಯಕ್ಕೆ ಒಳಗಾಗಿದ್ದರೆ ಮತ್ತು ಸತ್ತರೆ, ಸೇಡು ತೀರಿಸಿಕೊಳ್ಳಲು ಆತ್ಮವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ.

ಅಕಾಲಿಕ ಮರಣ: ಅಪಘಾತ ಅಥವಾ ಯಾವುದೇ ವಿಕೋಪದಿಂದ ಯಾರಾದರೂ ಅಕಾಲಿಕ ಮರಣ  (death) ಹೊಂದಿದರೆ, ಅಂತಹ ವ್ಯಕ್ತಿಯ ಕೆಲವು ಆಸೆಗಳು ಈಡೇರುವುದಿಲ್ಲ. ಅಂತಹ ಆತ್ಮಗಳು ತಮ್ಮ ಆಸೆಗಳನ್ನು ಪೂರೈಸಲು ಸಾವಿನ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ.

ಪುಣ್ಯ ಕಾರ್ಯಗಳನ್ನು ಆನಂದಿಸಲು: ತನ್ನ ಜೀವನದಲ್ಲಿ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿ, ಅವನ ಆತ್ಮವು ಮರಣದ ನಂತರ ಮರುಜನ್ಮವನ್ನು ಪಡೆಯುತ್ತದೆ. ಅಂತಹ ಆತ್ಮಗಳು ಪುಣ್ಯದ ಫಲ (Virtue) ವನ್ನು ಅನುಭವಿಸಲು ಹುಟ್ಟಿವೆ.

ಗಟ್ಟಿಮೇಳದ ಬಾಯ್ ಬಡ್ಕಿ ಅಮೂಲ್ಯನಂತಹ ಹೆಂಡತಿಯ ಬಾಯಿ ಮುಚ್ತಾರೆ ಈ ಚಾಣಾಕ್ಷರು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ