ವಿವಾಹ ಪೂರ್ವ ಕಾರ್ಯಕ್ರಮ ನಡೆದಿದ್ದು ಐಷಾರಾಮಿ ಹಡಗಲ್ಲಿ, ತೊಟ್ಟಿದ್ದು ಕೋಟಿ ಬೆಲೆ ಬಾಳೋ ವಡವೆ, ತೊಡುಗೆ, ಕೈಗೆ ಮಾತ್ರ ಕಪ್ಪು ದಾರ ಕಟ್ಟೋದ ಬಿಟ್ಟಿರಲಿಲ್ಲ ದೇಶದ ಸಿರವಂತ ಮುಖೇಶ್ ಅಂಬಾನಿ ಭಾವೀ ಸೊಸೆ ರಾಧಿಕಾ ಮರ್ಚೆಂಟ್!
'ದೊಡ್ಡೋರ ಮನೆ ನೋಟ ಚಂದ, ಬಡವರ ಮನೆ ಊಟ ಚಂದ' ಅನ್ನೋ ಗಾದೆ ಇರೋದು ಸುಮ್ಮನೆಯಲ್ಲ. ಈ ಗಾದೆಗೆ ಅನ್ವರ್ಥವೆಂಬಂತೆ ಸಿರಿವಂತ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳೇ ಸಾಕ್ಷಿ. ಮೊದಲು ದೇಶದ ಜಾಮ್‌ನಗರದಲ್ಲಿಯೇ ಅದ್ಧೂರಿ ಸೆಟ್ ಸೃಷ್ಟಿಸಿ ಮೊದಲ ಫಂಕ್ಷನ್ ಮಾಡಿದರೆ, ಮತ್ತೊಂದು ನಡೆದಿದ್ದು ದೂರದ ಯುರೋಪಿನಲ್ಲಿ. ಅದರಲ್ಲೂ ಐಷಾರಾಮಿ ಹಡಗಲ್ಲಿ ಮಾಡಿದ್ದು ಎಲ್ಲರ ಕಣ್ಣು ಕುಕ್ಕುವಂತಿತ್ತು.
ಅಂಬಾನಿ ಫ್ಯಾಮಿಲಿ ಅಂದ್ರೆ ಕೇಳಬೇಕಾ? ಊಟದಲ್ಲೂ ವೈವಿಧ್ಯತೆ ಇರುತ್ತೆ. ಜೊತೆಗೆ ಮುಖೇಶ್ ಮಡದಿ, ಮಕ್ಕಳು, ಸೊಸೆಯಂದಿರು ತೊಡೋ ಉಡುಗೆ, ತೊಡುಗೆ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತೆ. ಕೋಟಿಗಟ್ಟಲೆ ಬೆಲೆ ಬಾಳೋ ಪ್ರತಿಯೊಂದೂ ಆಭರಣವೂ ರಾಜ ವೈಭವವನ್ನು ನೆನಪಿಸುತ್ತೆ. ಆ ಬಟ್ಟೆ, ತೊಡೋ ಆಭರಣ ನೋಡಲು ಎರಡು ಕಣ್ಣು ಸಾಲದು. ಮಾಡಿದ ಹೇರ್ ಸ್ಟೈಲ್ ಅತ್ತಿತ್ತವಾಗದಂತೆ ನೋಡಿಕೊಳ್ಳಲೂ ಈ ಶ್ರೀಮಂತ ಕುಟುಂಬ ಜನರನ್ನೇ ಇಟ್ಟು ಕೊಂಡಿದೆ.
undefined
ಅಂಬಾನಿ ಸೊಸೆ ಕೈಯಲ್ಲಿ ಕಪ್ಪು ದಾರ:
ಇಷ್ಟೆಲ್ಲಾ ಬೆಲೆ ಬಾಳುವ ಆಭರಣ ತೊಟ್ಟರೂ, ಎಲ್ಲರ ಕೈಯಲ್ಲೂ ಕಪ್ಪು ದಾರ ಮಾತ್ರ ತಪ್ಪೋಲ್ಲ. ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿಯೂ ಅಂಬಾನಿ ಕುಟುಂಬಕ್ಕೆ ಕಿರಿ ಸೊಸೆಯಾಗಿ ಎಂಟ್ರಿ ಕೊಡುತ್ತಿರುವ ರಾಧಿಕಾ ಮರ್ಚೆಂಟ್ ಕೈಯಲ್ಲೂ ಈ ದೃಷ್ಟಿ ದಾರವಿತ್ತು.
ಅನಂತ್ ಅಂಬಾನಿ ಕೊಟ್ಟ ಲವ್ ಲೆಟರ್ ಪ್ರಿಂಟ್ ಆಗಿದ್ದ ಗೌನ್‌ನಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್
Robert Wun dressನಿಂದ ಹಿಡಿದು, blue Versace gown ಮತ್ತು Dior vintage dress ತೊಟ್ಟು ಕಂಗೊಳಿಸಿದ ರಾಧಿಕಾ, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಕತ್ತು, ಕೈ, ಕಿವಿಗೆ ಹಾಕಿದ ಆಭರಣ ಪ್ರತಿಯೊಂದೂ ಕೋಟಿ ಕೋಟಿ ಬೆಲೆ ಬಾಳುವಂಥದ್ದು ಅಂತ ಹೇಳುವುದ ಅಗತ್ಯವಿಲ್ಲ ಬಿಡಿ.
ಕಾರ್ಯಕ್ರಮದುದ್ದಕ್ಕೂ ತೊಟ್ಟ ಚಪ್ಪಲಿ, ಔಟ್‌ಫಿಟ್ ಒಂದಕ್ಕಿಂತ ಒಂದು ಅಮೋಘವಾಗಿತ್ತು. ಸ್ಪೆಷಲ್ ಫ್ಯಾಷನ್ ಆಯ್ದುಕೊಂಡಿದ್ದ ಅಂಬಾನಿ ಛೋಟಿ ಬಹು ಪ್ರತಿಯೊಂದೂ ಫೋಟೋದಲ್ಲಿಯೂ ಕೈಯಲ್ಲಿರೋ ಕಪ್ಪು ದಾರವೂ ಎದ್ದು ಕಾಣುತ್ತಿದೆ. ತಮ್ಮ ಎಡಗೈಗೆ ಈ ದೃಷ್ಟಿ ದಾರ ಕಟ್ಕೊಂಡಿದ್ದರು.
ಹಿಂದೂ ಸಂಸ್ಕೃತಿಯಲ್ಲಿ ಕಪ್ಪು ದಾರದ ಮಹತ್ವವೇನು?
ಭಾರತದ ಸಂಸ್ಕೃತಿಯಲ್ಲಿ ಕಪ್ಪು ದಾರಕ್ಕೆ ತನ್ನದೇ ಆದ ಮೌಲ್ಯವಿದೆ. ಯಾರ ಕೆಟ್ಟ ದೃಷ್ಟಿಯೂ ಬೀಳದಿರಲೆಂದು ಈ ದಾರವನ್ನು ಕಾಲಿಗೋ, ಕತ್ತಿಗೆ ಅಥವಾ ಕೈಗೆ ಕಟ್ಟಲಾಗುತ್ತದೆ. ಕೆಲವು ರೋಗಗಳಿಂದಲೂ ಈ ದಾರ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕೆ ಅಂಬಾನಿ ಕುಟುಂಬವೂ ಹೊರತಾಗಿಲ್ಲವೆನ್ನುವುದು ವಿಶೇಷ.
ಕಪ್ಪು ದಾರ ಕಟ್ಟಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯೂ ಇದೆ. ಯಶಸ್ಸಿನ ಬೆನ್ನತ್ತಿ ಹೋಗುವ ಅಂಬಾನಿ ಕುಟುಂಬಕ್ಕೂ ಇಂಥವುಗಳಲ್ಲಿ ನಂಬಿಕೆ ಇದೆ ಎನ್ನೋದು ಸ್ಪಷ್ಟ. ಅದಕ್ಕೆ ಯಾವಾಗಲೂ ಕಪ್ಪು ದಾರ ಕೈಯಲ್ಲಿ ತಪ್ಪದಂತೆ ಎಚ್ಚರವಹಿಸುತ್ತಾರೆ.
ಸದಾ ಅಂಬಾನಿ ಕುಟುಂಬದ ಮಹಿಳೆಯರ ಕೈಯಲ್ಲೂ ಕಪ್ಪು ದಾರ ತಪ್ಪೋಲ್ಲ. ಮನೆಯಿಂದ ಹೊರ ಹೋಗುವಾಗ ಕೈಯಲ್ಲಿ ಕಪ್ಪು ದಾರ ಇರೋದನ್ನು ಕನ್ಫರ್ಮ್ ಮಾಡಿಕೊಳ್ಳುತ್ತಾರಂತೆ. ನೀತಾ ಅಂಬಾನಿ, ಮಗಳು ಇಶಾ ಅಂಬಾನಿ ಸಾಂಪ್ರದಾಯಿಕ, ಪಾಶ್ಚಿಮಾತ್ಯ ಬಟ್ಟೆ ತೊಟ್ಟರೂ ಕೈಗೆ ಕಪ್ಪು ದಾರ ತಪ್ಪಿಸೋಲ್ವಂತೆ. ಕುಟುಂಬದ ಹಿರಿ ಸೊಸೆ, ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ ಸಹ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ತಪ್ಪದೇ ಫಾಲೋ ಮಾಡ್ತಾರಂತೆ. ಕಿರಿ ಸೊಸೆಯೂ ಅವರನ್ನೇ ಫಾಲೋ ಮಾಡುತ್ತಿದ್ದಾಳೆ.
ಅಂಬಾನಿ ಕಿರಿ ಸೊಸೆ ತಂದೆ ವಿರೆನ್ ಮರ್ಚೆಂಟ್ ನೆಟ್‌ವರ್ತ್ ಎಷ್ಷು ಗೊತ್ತಾ?
ಶನಿ ದೇವನ ಜೊತೆ ಸಂಬಂಧ ಇರೋ ಈ ಕಪ್ಪು ದಾರ ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂಬುವುದು ಭಾರತೀಯರಲ್ಲಿ ಇರೋ ನಂಬಿಕೆ. ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳೇ ಹೀಗೆ ಝಗಮಗಿಸುವಂತಿದ್ದರೆ, ಇನ್ನು ಅಂಬಾನಿ ಕುಟುಂಬದ ಕಡೇ ಮದುವೆ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ ಇದೆ. ಆಗ ತೊಡುವ ಬಟ್ಟೆ, ಆಭರಣಗಳು ಹೇಗಿರುತ್ತೋ ನೋಡುವ ಆತುರ ಎಲ್ಲರಿಗೂ.
ಮದ್ವೆ ಕಾರ್ಯಕ್ರಮದಲ್ಲಿಯೂ ಅಂಬಾನಿ ಕುಟುಂಬದ ಸದಸ್ಯರು, ಅದರಲ್ಲಿಯೂ ಮಹಿಳಾ ಮಣಿಯರು ಈ ಕಪ್ಪು ದಾರಿ ಕೈಗೆ ಕಟ್ಟಿರುತ್ತಾರೋ ಇಲ್ಲವೋ ನೋಡಬೇಕು. ಒಟ್ಟಿನಲ್ಲಿ ನಂಬಿಕೆ ಎನ್ನುವುದು ಎಲ್ಲರನ್ನೂ ಆಡಿಸುವುದು ಸುಳ್ಳಲ್ಲ.