
ಒಡಿಶಾ (ಜು.13): ದೇಶದ ಹಿಂದೂಗಳ ಪುರಾಣ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಪ್ರಸಿದ್ಧ ಕ್ಷೇತ್ರ ಪುರಿ ಜಗನ್ನಾಥ. ಒಡಿಶಾದ ಪುರಿಯಲ್ಲಿರುವ ಈ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ. ಕೋಟ್ಯಂತರ ಸಂಖ್ಯೆಯ ಭಕ್ತರನ್ನು ಹೊಂದಿರುವ ದೇವಾಲಯ ಜುಲೈ 14ರಂದು ಮತ್ತೊಂದು ಪವಾಡಕ್ಕೆ ಸಾಕ್ಷಿಯಾಗಲಿದೆ.
ಸಾಕಷ್ಟು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರೋ ಪುರಿ ಜಗನ್ನಾಥ ದೇವಾಲಯ ವಿಸ್ಮಯಗಳಿಗೆ ಸಾಕ್ಷಿಯಾಗಿರೋದು ಅಂತೂ ಸತ್ಯ. ಅಷ್ಟೇ ಅಲ್ಲ ಊಹೆಗೂ ನಿಲುಕದಷ್ಟು ಧನಕನಕ, ಸಂಪತ್ತುಗಳು ಈ ದೇವಸ್ಥಾನದಲ್ಲಿದೆ. ಇಂಥಾ ದೇಗುಲದಲ್ಲಿನ ರತ್ನ ಭಂಡಾರದ ಬಾಗಿಲು ತೆರೆಯುತ್ತಿರೋದು ಭಾರೀ ಸುದ್ದಿಯಾಗ್ತಿದೆ. 4 ದಶಕದ ಬಳಿಕ ಅಂದರೆ ಬರೋಬ್ಬರಿ 46 ವರ್ಷಗಳ ಬಳಿಕ ನಕಲಿ ಕೀ ಬಳಸಿ ರತ್ನಭಂಡಾರದ ಕೋಣೆ ಬಾಗಿಲು ತೆರೆಯಲು ಸಿದ್ಧತೆ ನಡೆದಿದೆ.
ತುಮಕೂರಿಗೂ ಮೆಟ್ರೋ 6 ತಿಂಗಳಲ್ಲಿ ವರದಿ, 3ನೇ ಹಂತದ ಯೋಜನೆಯಲ್ಲಿ ಡಬ್ಬಲ್ ಡೆಕ್ಕರ್ ಮಾದರಿ!
1978ರಲ್ಲಿ ಕೊನೆ ಬಾರಿಗೆ ರತ್ನಭಂಡಾರದ ಬಾಗಿಲು ತೆರೆಯಲಾಗಿತ್ತು. ಭಂಡಾರದಲ್ಲಿ 12,800 ಕ್ಕೂ ಹೆಚ್ಚು ರತ್ನಖಚಿತ ಚಿನ್ನದ ಆಭರಣ ಇದ್ದವು. ಈ ಎಲ್ಲಾ ಆಭರಣಗಳಲ್ಲೂ ಅಮೂಲ್ಯ ಹರಳುಗಳು ಇದ್ದವು ಜೊತೆಗೆ 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಇದ್ದವು. 2018ರಲ್ಲಿ ಮತ್ತೆ ಬಾಗಿಲು ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಲಾಗಿತ್ತು. 2018ರಲ್ಲಿ ಬಾಗಿಲು ತೆಗೆಯಲು ಮುಂದಾದಾಗ ಭಂಡಾರದ ಕೀಲಿ ಕೈ ಕಾಣೆಯಾಗಿತ್ತು. ಮೂಲ ಕೀಲಿ ಕೈ ಹುಡುಕುವ ಬಗ್ಗೆ ಪಟ್ನಾಯಕ್ ಸರ್ಕಾರ ಸಮಿತಿ ರಚಿಸಿತ್ತು. ಅದರ ವರದಿಯನ್ನು ತರಿಸಿಕೊಂಡರೂ ಈವರೆಗೂ ವರದಿ ಬಹಿರಂಗವಾಗಿಲ್ಲ. ಹೀಗಾಗಿ ಒಡಿಶಾ ಸರ್ಕಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೊನೆಗೆ ಮುಚ್ಚಿದ ಲಕೋಟೆಯಲ್ಲಿ ಡೂಪ್ಲಿಕೇಟ್ ಕೀಲಿ ಕೈ ನೀಡಿತ್ತು.
ಇತ್ತೀಚಿಗೆ ಒಡಿಶಾದ ಈಗಿನ ಸಿಎಂ ಮೋಹನ್ ಚರಣ್ ಮಾಜ್ಹಿ ಉನ್ನತ ಮಟ್ಟದ ಸಮಿತಿ ರಚಿಸಿದ್ರು, ನಾಳೆ ಭಂಡಾರ ತೆರೆಯಲಾಗುತ್ತಿದ್ದು, ಈ ಭಂಡಾರದಲ್ಲಿ ಅಮೂಲ್ಯ ಲೋಹಗಳು, ಅತೀ ಪುರಾತನ ಆಭರಣಗಳಿವೆ. ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಿವೆ. ಇವುಗಳೆಲ್ಲವನ್ನೂ ಸಮಿತಿ ಲೆಕ್ಕ ಹಾಕಲಿದೆ. ರಾಜ್ಯ ಸರ್ಕಾರ ರಚಿಸಿರುವ 16 ಸದಸ್ಯರ ಉನ್ನತ ಮಟ್ಟದ ಸಮಿತಿಯು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮೊದಲು ಜಗನ್ನಾಥನಿಗೆ ಪೂಜೆ ಮಾಡಿ ಭಂಡಾರವನ್ನು ಓಪನ್ ಮಾಡಲಿದೆ.
ಫ್ಲೆಕ್ಸ್ ಹಾಕಿಸಿದ್ದು ಯಾರು? ನಾನಲ್ಲ ಎಂದ ನಲಪಾಡ್ ವಿರುದ್ಧ ಡಿಕೆಶಿ ಗರಂ
ಕಳೆದ ವಿಧಾನಸಭೆ ಚುನಾವಣೆ ವೇಳೆ ಜಗನ್ನಾಥನ ರತ್ನಭಂಡಾರದ ವಿಚಾರ ಭಾರೀ ಸಂಚಲನ ಸೃಷ್ಟಿಸಿತ್ತು. ರತ್ನ ಭಂಡಾರದ ಕೀಲಿ ಕೈಗಳು 6 ವರ್ಷದ ಹಿಂದೆ ಕಳೆದು ಹೋಗಿದೆ, ಇನ್ನೂ ಪತ್ತೆಯಾಗಿಲ್ಲ, ಸಮಿತಿಯ ವರದಿಯನ್ನೂ ಪಟ್ನಾಯಕ್ ಸರ್ಕಾರ ಬಹಿರಂಗ ಪಡಿಸಲಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ ಪಟ್ನಾಯಕ್ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದರು. ಈ ಬಾರಿ ಗೆದ್ದರೆ ರತ್ನ ಭಂಡಾರದ ಕೋಣೆ ಬಾಗಿಲು ತೆರೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ನಾಳೆ ರತ್ನಭಂಡಾರದ ಕೋಣೆ ಬಾಗಿಲು ತೆರೆಯಲು ಸಿದ್ಧತೆ ನಡೆಸಲಾಗಿದೆ.
ಈ ಕೋಣೆಯ ಒರಿಜಿನಲ್ ಕೀ ಎಲ್ಲಿ ಹೋಯ್ತು ಅನ್ನೋ ಅನುಮಾನ ಎಲ್ಲರನ್ನೂ ಕಾಡ್ತಿದೆ. ನಿಜಕ್ಕೂ ಈ ನಿಧಿ ಇರುವ ಕೋಣೆ ಕೀ ಕಳೆದು ಹೋಗಿದ್ದಾ? ಅಥವಾ ಆ ಕೀ ಬಳಸಿ ಖಜಾನೆ ಲೂಟಿ ಮಾಡಲಾಗಿದ್ದಾ? ಅನ್ನೋ ಅನುಮಾನಗಳಿಗೆ ನಾಳೆ ಉತ್ತರ ಸಿಗಲಿದೆ. ಈ ರತ್ನ ಭಂಡಾರದ ಖಜಾನೆಗೆ ಸರ್ಪಗಾವಲಿದೆ. ಬಿಗಿ ಭದ್ರತೆ ಮಧ್ಯೆ ರತ್ನ ಭಂಡಾರದ ಬಾಗಿಲು ತೆರೆಯಲು ಸಿದ್ಧತೆ ನಡೆದಿದೆ.