Pisces Personality: ರೊಮ್ಯಾಂಟಿಕ್, ಪ್ರಾಮಾಣಿಕ, ತ್ಯಾಗಿಗಳು ಮೀನ ರಾಶಿಯವರು..

By Suvarna NewsFirst Published Dec 10, 2022, 12:19 PM IST
Highlights

ಮೀನ ರಾಶಿಯವರು ಕಾಲ್ಪನಿಕ ಜಗತ್ತಿನಲ್ಲಿರುತ್ತಾರೆ  ಮತ್ತು ಅವರ ತಿಳುವಳಿಕೆ ಇತರ ಸಾಮಾನ್ಯ ಜನರಿಗಿಂತ ಉತ್ತಮವಾಗಿರುತ್ತದೆ. ಮೀನ ರಾಶಿಯ ವ್ಯಕ್ತಿತ್ವದ ಗುಣಲಕ್ಷಣಗಳೇನು ನೋಡೋಣ..

ಮೀನ ರಾಶಿಯವರು ಫೆಬ್ರವರಿ 19ರಿಂದ ಮಾರ್ಚ್ 20ರ ನಡುವೆ ಜನಿಸುತ್ತಾರೆ. ಈ ರಾಶಿಯ ಅಧಿಪತಿ ಗುರು. ಮೀನ ರಾಶಿಯವರು ತುಂಬಾ ಸಾಮಾಜಿಕವಾಗಿರುತ್ತಾರೆ. ಅವರು ತಮಗಿಂತ ಹೆಚ್ಚಾಗಿ ಇತರರನ್ನು ನೋಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ಜನರ ಹರ್ಷಚಿತ್ತ ಮತ್ತು ಬೆರೆಯುವ ಸ್ವಭಾವದಿಂದಾಗಿ ಅವರನ್ನು ಎಲ್ಲರೂ ಪ್ರೀತಿಸುತ್ತಾರೆ. ನೀವು ಅಥವಾ ನಿಮ್ಮ ಹತ್ತಿರವಿರುವ ಯಾರಾದರೂ ಮೀನ ರಾಶಿಯವರಾಗಿದ್ದರೆ, ನೀವು ಈ ಲೇಖನವನ್ನು ಓದಲು ಮತ್ತು ಅವರಿಗೆ ಕಳುಹಿಸಲು ಮರೆಯದಿರಿ. ಮೀನ ರಾಶಿಯವರ ಸ್ವಭಾವ ಇಲ್ಲಿದೆ.

ಮೀನ ರಾಶಿಯವರ ಗುಣಲಕ್ಷಣಗಳು(Pisces personality traits)

ಎಲ್ಲದರಲ್ಲೂ ಪರಿಣಿತ(Experts)
ಇತರ ರಾಶಿಚಕ್ರ ಚಿಹ್ನೆಗಳು ತೊಂದರೆಯಲ್ಲಿದ್ದಾಗ ಬಿಟ್ಟುಕೊಡುತ್ತವೆ. ಆದರೆ, ಮೀನ ರಾಶಿಯವರಿಗೆ ಪ್ರತಿ ಬಿಕ್ಕಟ್ಟಿನಿಂದ ಹೊರಬರಲು ಒಂದು ಮಾರ್ಗವಿರುತ್ತದೆ. ಈ ವ್ಯಕ್ತಿಗಳು ಇತರರು ಯೋಚಿಸದ ಪರಿಹಾರಗಳನ್ನು ಹೊಂದಿರುತ್ತಾರೆ. ಯಾವುದೇ ನೀರಸ ವಿಷಯವನ್ನು ಮೋಜಿನ ಸಂಗತಿಯಾಗಿಸುವುದು ಇವರಿಗೆ ಗೊತ್ತು.

ತಿರುಗಾಟ ಇಷ್ಟ
ಮೀನ ರಾಶಿಯವರು ಪ್ರಯಾಣ(travel) ಮಾಡಲು ಇಷ್ಟಪಡುತ್ತಾರೆ. ಎಷ್ಟೇ ದಣಿದಿದ್ದರೂ ತಿರುಗಾಡಲು ಸದಾ ಸಿದ್ಧರಿರುತ್ತಾರೆ. ಮೀನ ರಾಶಿಯವರು ತುಂಬಾ ಚುರುಕಾದವರು, ಆದ್ದರಿಂದ ಅವರು ಸುಲಭವಾಗಿ ಮೂರ್ಖರಾಗುವುದಿಲ್ಲ. ಎದುರಿಗಿರುವ ವ್ಯಕ್ತಿಯನ್ನು ನೋಡಿ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎಂದು ತಿಳಿಯಬಲ್ಲರು ಇವರು, ಜನರನ್ನು ಓದುವುದು ಹೇಗೆಂದು ಇವರಿಗೆ ಗೊತ್ತು.

2023ರಲ್ಲಿ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಗಳ ಲವ್‌ ಲೈಫ್ ಹೇಗಿರುತ್ತೆ?

ಪ್ರೀತಿಯಲ್ಲಿ ನಾಚಿಕೆ, ಆದರೆ ರೋಮ್ಯಾಂಟಿಕ್(romantic)
ಮೀನ ರಾಶಿಯವರು ಸ್ವಲ್ಪ ನಾಚಿಕೆ ಸ್ವಭಾವದವರು. ಆದರೆ ಅವರು ರೊಮ್ಯಾಂಟಿಕ್. ಈ ಜನರು ಯಾವಾಗಲೂ ಪ್ರೀತಿಯಲ್ಲಿ ಇರುತ್ತಾರೆ. ಈ ಜನರು ತಮ್ಮ ಸಂಗಾತಿಗೆ ತಮ್ಮ ಸಂಪೂರ್ಣ ಸೂಕ್ಷ್ಮತೆ ಮತ್ತು ಸ್ವಭಾವದಿಂದ ಪ್ರೀತಿ ನೀಡುತ್ತಾರೆ. ಪ್ರೀತಿಯಲ್ಲಿ ಎಲ್ಲವನ್ನೂ ತ್ಯಾಗ ಮಾಡುವ ಇವರ ಮನೋಭಾವವು ಕೆಲವೊಮ್ಮೆ ಅವರಿಗೆ ಅಪಾಯಕಾರಿಯಾಗುತ್ತದೆ. ಅದಕ್ಕಾಗಿಯೇ ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು. ಮೀನ ರಾಶಿಯವರು ನಿಮ್ಮ ಭಾವನೆಗಳನ್ನು ನೀವು ಹೇಳದೆಯೇ ಅರ್ಥ ಮಾಡಿಕೊಳ್ಳಬಲ್ಲರು.

ಭಾವನಾತ್ಮಕ ರಾಶಿಚಕ್ರ ಚಿಹ್ನೆಗಳು
ಮೀನ ಮತ್ತು ಕರ್ಕ ರಾಶಿಯ ಜನರು ಪರಿಪೂರ್ಣ ಹೊಂದಾಣಿಕೆಯನ್ನು ಮಾಡುತ್ತಾರೆ. ಏಕೆಂದರೆ ಈ ರಾಶಿಚಕ್ರದ ಎರಡೂ ಚಿಹ್ನೆಗಳು ತುಂಬಾ ಭಾವನಾತ್ಮಕವಾಗಿರುತ್ತವೆ(emotional). ಈ ರಾಶಿಚಕ್ರದವರು ಪರಸ್ಪರರ ನೋವನ್ನು ತ್ವರಿತವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದು ಜೋಡಿಯಾಗಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇಬ್ಬರೂ ತುಂಬಾ ರೋಮ್ಯಾಂಟಿಕ್ ಮತ್ತು ಪರಸ್ಪರ ಪರಿಪೂರ್ಣ. ಈ ರಾಶಿಯ ಜನರು ಕೆಟ್ಟ ಕೆಲಸ ಅಥವಾ ಕೆಟ್ಟ ಪದಗಳನ್ನು ಯಾವುದೇ ರೀತಿಯಲ್ಲಿ ಇಷ್ಟಪಡುವುದಿಲ್ಲ.

ಪ್ರಾಮಾಣಿಕ ಮತ್ತು ಸೂಕ್ಷ್ಮ
ತುಂಬಾ ಪ್ರಾಮಾಣಿಕ ಮತ್ತು ಸೂಕ್ಷ್ಮ ವ್ಯಕ್ತಿಗಳು(Honest and sensitive). ಅವರು ಯಾರನ್ನೂ ವಿರೋಧಿಸಲು ಸಾಧ್ಯವಿಲ್ಲ. ಎದುರಿಗಿರುವವರು ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದೆಂದು ಅವರು ಯಾವಾಗಲೂ ಭಯಪಡುತ್ತಾರೆ. 

Surya Gochar 2022: 3 ರಾಶಿಗಳಿಗೆ ಧನು ಸಂಕ್ರಾಂತಿ ತರಲಿದೆ ಅದೃಷ್ಟ

ಕಷ್ಟಪಟ್ಟು ದುಡಿಯುವ ಜನರು (Hard workers)
ಈ ಜನರು ತುಂಬಾ ಶ್ರಮಶೀಲರು ಮತ್ತು ಯಾವಾಗಲೂ ಕೆಲಸ ಮಾಡಲು ಉತ್ಸುಕರಾಗಿರುತ್ತಾರೆ. ಯಾವಾಗಲೂ ತಮ್ಮ ಕೆಲಸದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಈ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಮೀನ ರಾಶಿಯ ಜನರು ಉಳಿತಾಯ(savings)ದಲ್ಲಿ ತುಂಬಾ ಹಿಂದುಳಿಯುತ್ತಾರೆ, ಏಕೆಂದರೆ ಈ ಜನರು ದುಂದುವೆಚ್ಚ ಮಾಡುತ್ತಾರೆ. 

ನಿಗೂಢ ವಿಷಯಗಳಲ್ಲಿ ಆಸಕ್ತಿ
ಈ ಜನರು ನಿಗೂಢ ವಿಷಯಗಳಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಈ ಜನರು ಏನನ್ನಾದರೂ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಆದರೆ ಈ ಜನರನ್ನು ನಂಬುವುದು ಕಷ್ಟ, ಏಕೆಂದರೆ ಅವರು ಯಾವುದನ್ನೂ ರಹಸ್ಯವಾಗಿಡುವುದಿಲ್ಲ. 

click me!