ಬೆಳೆದು ನಿಂತ ಮಕ್ಕಳಿಗೆ ಮದ್ವೆ ಆಗ್ತಿಲ್ಲ, ಕೆಲಸ ಸಿಕ್ತಿಲ್ಲವೆಂದರೆ ಜ್ಯೋತಿಷ್ಯ ಪರಿಹಾರ ಇಲ್ಲಿವೆ!

By Suvarna News  |  First Published Oct 10, 2022, 3:20 PM IST

ಸಮುದ್ರ ಮಂಥನದ ವೇಳೆ ಪಾರಿಜಾತದ ಹೂ ಬಂತು ಎಂಬ ನಂಬಿಕೆಯಿದೆ. ಲಕ್ಷ್ಮಿಗಿಂತ ಮೊದಲು ಬಂದ ಪಾರಿಜಾತದ ಹೂವನ್ನು ಪರಮ ಪವಿತ್ರ ಹೂವೆಂದು ಭಾವಿಸಲಾಗುತ್ತದೆ. ದೇವರ ಪೂಜೆಗೆ ಇದನ್ನು ಬಳಸುವುದ್ರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ಹಾಗೆ ಮದುವೆ, ಆರ್ಥಿಕ ಸಮಸ್ಯೆ ಸೇರಿದಂತೆ ಅನೇಕ ಸಂಕಷ್ಟಕ್ಕೆ ಇದ್ರಲ್ಲಿ ಪರಿಹಾರವಿದೆ.
 


ಪಾರಿಜಾತದ ಹೂವಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಪಾರಿಜಾತದ  ಗಿಡವನ್ನು ಬೆಳೆಸಿದ ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪಾರಿಜಾತದ ಗಿಡವನ್ನು ಪ್ರತಿಯೊಬ್ಬರ ಮನೆಯಲ್ಲೂ ಬೆಳೆಸಲಾಗುತ್ತದೆ. ಮನೆಯ ಸರಿಯಾದ ದಿಕ್ಕಿನಲ್ಲಿ ಪಾರಿಜಾತದ ಗಿಡವನ್ನು ಬೆಳೆಸಲಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ ಎಂದು ನಂಬಲಾಗಿದೆ. ಈ ಪಾರಿಜಾತದ ಹೂವನ್ನು ಪೂಜೆಗೆ ಮುಖ್ಯವಾಗಿ ಬಳಸಲಾಗುತ್ತದೆ. ದೇವರ ಪೂಜೆಗೆ ಮಾತ್ರವಲ್ಲದೆ ಪಾರಿಜಾತ ಹೂವಿನಿಂದ ಅನೇಕ ಪ್ರಯೋಜನವಿದೆ. ಪಾರಿಜಾತವನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಹಾಗೆಯೇ ಪಾರಿಜಾತದ ಕೆಲ ಉಪಾಯಗಳಿಂದ ಆರ್ಥಿಕ ವೃದ್ಧಿಯಾಗುತ್ತದೆ. ಪಾರಿಜಾತದ ತಂತ್ರದಿಂದ ದಾಂಪತ್ಯ ಸಮಸ್ಯೆ ಕೂಡ ದೂರವಾಗುತ್ತದೆ. ಇಂದು ನಾವು ಪಾರಿಜಾತ ಹೂವಿನಿಂದ ಮಾಡಬಹುದಾದ ಪರಿಹಾರಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. 

ಪಾರಿಜಾತ (Parijat) ಹೂ (Flower) ವಿನಿಂದಾಗುವ ಲಾಭಗಳು :

Tap to resize

Latest Videos

ಆರ್ಥಿಕ ವೃದ್ಧಿ (Economic Growth) ಗೆ ಪಾರಿಜಾತದ ಹೂ : ಮನೆಯಲ್ಲಿ ಹಣದ ಸಮಸ್ಯೆ ಎದುರಾಗಿದ್ದರೆ, ನಿರುಪಯುಕ್ತ ಕೆಲಸಗಳಲ್ಲಿ ಹಣ ವ್ಯಯವಾಗ್ತಿದ್ದರೆ ಪಾರಿಜಾತ ಹೂಗಳನ್ನು ಬಳಸಿ ಹಣದ ಸಮಸ್ಯೆಯಿಂದ ಮುಕ್ತಿಪಡೆಯಬಹುದು. ಐದು ಪಾರಿಜಾತದ ಹೂವುಗಳನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ ಹಳದಿ ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಬೇಕು. ಮಂಗಳವಾರ (Tuesday) ದ ದಿನ ಬಟ್ಟೆಯಲ್ಲಿ ಪಾರಿಜಾತದ ಹೂವನ್ನು ಕಟ್ಟಿ ಇಟ್ಟರೆ ಒಳ್ಳೆಯ ಪರಿಣಾಮ ಕಾಣಬಹುದು. ಇದ್ರಿಂದ ಹಣದ ಮಳೆಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಮನೆಯಿಂದ ಹೊರಹೋಗುವಾಗ ಈ ಮಂತ್ರ ಪಠಿಸಿದ್ರೆ ಅದೃಷ್ಟ ನಿಮ್ಮದಾಗುತ್ತೆ!

ಬೇಗ ಮದುವೆ (Marriage) ಯಾಗ್ಬೇಕೆಂದ್ರೆ ಹೀಗೆ ಮಾಡಿ : ಈಗಿನ ದಿನಗಳಲ್ಲಿ ಮದುವೆಯಾಗೋದು ಸುಲಭವಲ್ಲ. ಮಂಟಪಕ್ಕೆ ಬಂದವರು ಬರಿಗೈನಲ್ಲಿ ಹೋಗಿರುವ ಅನೇಕ ಘಟನೆಯಿದೆ. ಶೀಘ್ರ ಮದುವೆಯಾಗ್ಬೇಕು ಎನ್ನುವುದಾದ್ರೆ ಪಾರಿಜಾತದ ಹೂವಿನ ತಂತ್ರವನ್ನು ಬಳಸಿ. ಮಂಗಳವಾರದಂದು ಕಿತ್ತಳೆ ಬಣ್ಣದ ಬಟ್ಟೆಯಲ್ಲಿ 7 ಪಾರಿಜಾತದ ಹೂವುಗಳೊಂದಿಗೆ ಅರಿಶಿನವನ್ನು ಗಂಟು ಹಾಕಿ ದೇವರ ಮನೆಯಲ್ಲಿರುವ ಗೌರಿಯ ಚಿತ್ರದ ಬಳಿ ಇರಿಸಿ. ಹೊರಗಿನಿಂದ ಬರುವವರಿಗೆ ಕಾಣಿಸದಂತಹ ಜಾಗದಲ್ಲಿ ಈ ಗಂಟನ್ನು ಇಡಿ. ಈ ಪರಿಹಾರದ ಜೊತೆಗೆ ನೀವು ತಾಯಿ ಗೌರಿಯನ್ನು ನಿಯಮಿತವಾಗಿ ಪೂಜಿಸಬೇಕು. ಈ ತಂತ್ರದಿಂದ ಶೀಘ್ರದಲ್ಲೇ ಮದುವೆ ಸಮಸ್ಯೆ ಬಗೆಹರಿಯುತ್ತದೆ. ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿಬರುತ್ತದೆ.

ಸಾಲದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ : ಮನೆಯಲ್ಲಿ ಅನಾವಶ್ಯಕವಾಗಿ ಹಣ ಹಾಳಾಗ್ತಿದ್ದರೆ, ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅದ್ರಿಂದ ಮುಕ್ತಿ ಪಡೆಯಲು ನೀವು ಪಾರಿಜಾತದ ಗಿಡವನ್ನು ಬಳಸಬಹುದು. ಸಾಲದಿಂದ ನೆಮ್ಮದಿ ಪಡೆಯಲು ಪಾರಿಜಾತ ಗಿಡದ ಬೇರಿನ ಸಣ್ಣ ತುಂಡನ್ನು ತೆಗೆದುಕೊಂಡು ಅದನ್ನು ಮನೆಯಲ್ಲಿ ಹಣವಿರುವ  ಜಾಗದಲ್ಲಿ ಇಡಿ. ಕಪಾಟಿನಲ್ಲಿ ಪಾರಿಜಾತದ ಬೇರಿನ ಸಣ್ಣ ತುಂಡನ್ನು ಇಡುವುದ್ರಿಂದ ಸಾಲದಿಂದ ಮುಕ್ತಿ ಸಿಗುತ್ತದೆ. ಪಾರಿಜಾತದ ಬೇರನ್ನು ನೀವು ಪರ್ಸ್‌ನಲ್ಲಿ ಕೂಡ ಇಟ್ಟುಕೊಳ್ಳಬಹುದು. ಹೀಗೆ ಮಾಡುವುದ್ರಿಂದಲೂ ನೀವು ಸಾಲದ ಹೊರೆಯಿಂದ ಹೊರಗೆ ಬರಬಹುದು.

ಒಳ್ಳೆಯ ಉದ್ಯೋಗಕ್ಕೆ ಪಾರಿಜಾತದ ತಂತ್ರ :  ಉದ್ಯೋಗ ಹುಡುಕುತ್ತಿದ್ದರೆ ಮತ್ತು ಕಷ್ಟಪಟ್ಟು ಕೆಲಸ ಮಾಡ್ತಿದ್ದರೂ ಯಶಸ್ಸು ಸಿಗದಿದ್ದರೆ  ಮಂಗಳವಾರದಂದು ಕೆಂಪು ಬಟ್ಟೆಯಲ್ಲಿ ಪಾರಿಜಾತದ  ಹೂವುಗಳನ್ನು ದೇವಸ್ಥಾನದಲ್ಲಿರುವ ಲಕ್ಷ್ಮಿ ದೇವಿಯ ಚಿತ್ರದ ಬಳಿ ಇಡಿ. ಇದ್ರಿಂದ ಶೀಘ್ರವೇ ನಿಮಗೆ ಕೆಲಸ ಲಭಿಸುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. 

ನಾಯಿ ಸಾಕುವುದು ಎಲ್ಲರಿಗೂ ಶುಭವಲ್ಲ, ಜ್ಯೋತಿಷ್ಯ ಏನನ್ನುತ್ತೆ ಕೇಳಿ!

ರೋಗಗಳಿಂದ ದೂರವಿರಲು ಪಾರಿಜಾತದ ಉಪಾಯ :  ದೇವಾಲಯದ ಸುತ್ತಲೂ ಪಾರಿಜಾತ ಗಿಡವನ್ನು ಬೆಳೆಸಿದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುವುದಿಲ್ಲ. ರೋಗದಿಂದ ದೇಹ ದೂರವಿರುತ್ತವೆ. ಮಂಗಳವಾರ ಹನುಮಂತನ ದೇವಸ್ಥಾನದ ಸುತ್ತಲೂ ಈ ಗಿಡವನ್ನು ನೆಡುವುದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.   
 

click me!