ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 300ರ ಗಡಿ ದಾಟಿದೆ. ಈ ಮಧ್ಯೆ ವಿದ್ಯಾರ್ಥಿನಿಯೊಬ್ಬಳ ಕಥೆ ವೈರಲ್ ಆಗಿದೆ. ಆಕೆಗೆ ಈ ಬಗ್ಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ ಎಂಬ ಅನುಮಾನವನ್ನು ಈ ಕಥೆ ಹುಟ್ಟುಹಾಕ್ತಿದೆ.
ಪ್ರಕೃತಿಯ ಕೋಪಕ್ಕೆ ವಯನಾಡಿನಲ್ಲಿ (Natural Disaster in Wayanad Kerala) ಹೆಣಗಳ ರಾಶಿ ಬಿದ್ದಿದೆ. ಅಕ್ಷರಶಃ ಸ್ಮಶಾನವಾಗಿರುವ ವಯನಾಡಿನಲ್ಲಿ ಹೀಗೊಂದು ಘಟನೆ ಘಟಿಸಲಿದೆ ಎಂದು 14 ವರ್ಷದ ಬಾಲಕಿ ಊಹಿಸಿದ್ದಳಾ? ವೈರಲ್ ಆಗಿರುವ ಆಕೆ ಕಥೆಯೊಂದು ಈಗ ಎಲ್ಲರಲ್ಲಿ ಈ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ. ಆಕೆ ತನ್ನ ಶಾಲೆ ಪತ್ರಿಕೆಗೆ ಬರೆದ ಕಾಲ್ಪನಿಕ ಕಥೆ ನಿಜವಾಗಿದೆ. 8ನೇ ತರಗತಿ ಹುಡುಗಿ ಬರೆದ ಕಥೆಯಲ್ಲಿ ಮುಂದೆ ಅನಾಹುತ ಸಂಭವಿಸಲಿದೆ, ಓಡಿ ಎಂಬ ಎಚ್ಚರಿಕೆ ಇತ್ತು.
ವಯನಾಡ್ (Wayanad) ದುರಂತದ ಬಗ್ಗೆ ಕೆಲವು ವರ್ಷಗಳ ಹಿಂದೆಯೇ ವ್ಯಕ್ತಿಯೊಬ್ಬ ಭವಿಷ್ಯ ನುಡಿದಿದ್ದನಂತೆ. ಮಾನಸಿಕ ಅಸ್ವಸ್ಥ ವ್ಯಕ್ತಿ, ಸಂಪಾದಿಸಿದ ಎಲ್ಲ ಆಸ್ತಿ ಮಣ್ಣು, ನೀರಿನ ಪಾಲಾಗುತ್ತದೆ ಎಂದಿದ್ದನಂತೆ. ಆದ್ರೆ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ವಯನಾಡ್ ದುರಂತ ಸಂಭವಿಸಿದ ಮೇಲೆ ಆತನ ವಿಡಿಯೋ (Video) ವೈರಲ್ ಆಗಿದೆ. ಅದ್ರ ಮಧ್ಯೆ ಈ ಬಾಲಕಿ ಕಥೆ ಕುತೂಹಲ ಹುಟ್ಟಿಸಿದೆ. ಬಾಲಕಿಗೆ ಮುಂದೆ ಏನಾಗುತ್ತೆ ಎನ್ನುವ ಸೂಚನೆ ಸಿಕ್ಕಿತ್ತಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಉತ್ತರ ನೀಡಬೇಕಾದ ಬಾಲಕಿ ತಮ್ಮವರು, ತನ್ನ ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿದ್ದಾಳೆ.
ವಯನಾಡಲ್ಲಿ 24 ಗಂಟೆಯೊಳಗೆ ಸೇತುವೆ ನಿರ್ಮಿಸಿದ ಭಾರತೀಯ ಸೇನೆ: ಮೇಲುಸ್ತುವಾರಿ ವಹಿಸಿದ್ದು ಮಹಿಳಾ ಮೇಜರ್
ವಿದ್ಯಾರ್ಥಿನಿ (Student) ಬರೆದ ಕಥೆ (story) ಯಲ್ಲಿ ಏನಿದೆ? : ಲಯಾ ಎಎಸ್ 14 ವರ್ಷದ ವಿದ್ಯಾರ್ಥಿನಿ. ಆಕೆ ವೆಲ್ಲರಾಮ ಸರ್ಕಾರಿ ಶಾಲೆಗೆ ಹೋಗ್ತಿದ್ದಳು. ಹಿಂದಿನ ವರ್ಷ, ಶಾಲೆಯ ಪತ್ರಿಕೆಗಾಗಿ ಕಥೆ ಬರೆದಿದ್ದಳು. ಆ ಕಥೆ ವಯನಾಡ ಭೂಕುಸಿತದ ಒಂದು ದಿನ ಮೊದಲು ಡಿಜಿಟಲ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಲಯಾ ʻಆಗ್ರಹತಿಂತೆ ದುರಾನುಭವಂ' (ಆಸೆಯ ಬಿಕ್ಕಟ್ಟು) ಹೆಸರಿನ ಶೀರ್ಷಿಕೆಯಲ್ಲಿ ತನ್ನ ಕಥೆಯನ್ನು ಬರೆದಿದ್ದಳು. ಪ್ರಕೃತಿ ಬದಲಾವಣೆಗೆ ಸಂಬಂಧಿಸಿದಂತೆ, ಈ ಕಥೆಯಲ್ಲಿ ಒಬ್ಬ ಸಣ್ಣ ಬಾಲಕಿ ಇದ್ದಾಳೆ. ಆಕೆ ಜಲಪಾತದಲ್ಲಿ ಬಿದ್ದು ಹೋಗ್ತಾಳೆ. ನಂತ್ರ ಒಂದು ಗುಬ್ಬಚ್ಚಿಯಾಗಿ ಹೊರಗೆ ಬರ್ತಾಳೆ.
ಹಳ್ಳಿಗೆ ಬರುವ ಈ ಗುಬ್ಬಚ್ಚಿ, ಶಾಲೆ ಮಕ್ಕಳ ಬಳಿ ಬಂದು, ನದಿ, ಕೆರೆ ಹೊಳೆ ಕಡೆ ಹೋಗ್ಬೇಡಿ. ಅದ್ರಿಂದ ದೂರವಿರಿ ಎನ್ನುತ್ತಾಳೆ. ಮಕ್ಕಳೇ ಹಳ್ಳಿಯಿಂದ ಓಡಿ ಹೋಗಿ. ಮುಂದೆ ಅಪಾಯವಿದೆ ಎಂದು ಹಕ್ಕಿ ಮಕ್ಕಳಿಗೆ ಎಚ್ಚರಿಸುತ್ತೆ. ಮಕ್ಕಳು ಅಲ್ಲಿಂದ ಓಡಿ ಹೋಗ್ತಾರೆ. ಆಕೆ ಆಕಾಶವನ್ನು ನೋಡ್ತಾಳೆ. ಆಗ ಆಕಾಶದಿಂದ ಮಳೆ ಹನಿ ಬೀಳಲು ಶುರುವಾಗುತ್ತದೆ. ಹಕ್ಕಿ ಸುಂದರವಾದ ಹುಡುಗಿಯಾಗಿ ಬದಲಾಗ್ತಾಳೆ.
ಲಯಾ ಈ ಕಥೆ ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಆದ ಮರುದಿನವೇ ಈ ದುರ್ಘಟನೆ ಸಂಭವಿಸಿದೆ. ಭೂಕುಸಿತದಲ್ಲಿ ಲಯಾ ತಂದೆ ಲೆನಿನ್ ಕೂಡ ಸಾವನ್ನಪ್ಪಿದ್ದಾರೆ. ಲಯಾ ಓದುತ್ತಿದ್ದ ವೆಲ್ಲರಾಮ ಶಾಲೆ ಕೂಡ ಕೊಚ್ಚಿ ಹೋಗಿದೆ. ಶಾಲೆಯಲ್ಲಿ ಓದುತ್ತಿದ್ದ 497 ಮಕ್ಕಳಲ್ಲಿ 32 ಮಕ್ಕಳು ಸಾವನ್ನಪ್ಪಿದ್ದಾರೆ. ದಿನ ದಿನಕ್ಕೂ ವಯನಾಡ್ ನಲ್ಲಿ ಸತ್ತವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಇನ್ನೂ ಅನೇಕರ ಪತ್ತೆಯಾಗಿಲ್ಲ. ಶಾಲೆಯ ಹೆಡ್ ಮಾಸ್ಟರ್ ಹಾಗೂ ಶಿಕ್ಷಕರು ಕೂದಲೆಳೆಯಲ್ಲಿ ಬಚಾವ್ ಆಗಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಎಚ್ಚರಿಕೆ: ದುರಂತ ಬೆನ್ನಲ್ಲೇ ಲಾ ನಿನಾ ಮಾರುತ!
ನಿನ್ನೆ ಶಿಕ್ಷಕಿಯೊಬ್ಬರು ಹಳೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದ್ರಲ್ಲಿ ಶಾಲೆ ಮಕ್ಕಳು ಸೈಕಲ್ ಓಡಿಸುತ್ತಿರುವುದನ್ನು ಕಾಣಬಹುದು. ವಯನಾಡಿನ ಮುಂಡಕ್ಕೈನಲ್ಲಿರುವ ಸರ್ಕಾರಿ ಶಾಲೆಯ ಒಂದು ವರ್ಷ ಹಿಂದಿನ ವಿಡಿಯೋ ಹಂಚಿಕೊಂಡಿದ್ದ ಶಿಕ್ಷಕಿ, ನನ್ನ ಡಾರ್ಲಿಂಗ್ಸ್ ಇಲ್ಲ ಎಂದು ಬರೆದಿದ್ದರು. ಸೈಕಲ್ ಓಡಿಸುತ್ತಿದ್ದ ಮೂವರು ಬಾಲಕಿಯರು ಭೂಕುಸಿತದಲ್ಲಿ ಬಲಿಯಾಗಿದ್ದಾರೆಂದು ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದರು.