ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

By Suvarna News  |  First Published Jul 27, 2020, 5:31 PM IST

ದಾರಿಯಲ್ಲಿ ಬೆಕ್ಕು ನೋಡಿ ಮನೆಗೆ ವಾಪಸ್ ಬರುವುದೋ ಅಥವಾ ಅಲ್ಲೇ ಕೆಲ ಸಮಯ ಕಾದು ಬಳಿಕ ಹೊರಡುವುದನ್ನೋ ಎಷ್ಟೋ ಬಾರಿ ಹಲವರು ಮಾಡಿರುತ್ತಾರೆ. ಕಾರಣ, ಪ್ರಯಾಣದಲ್ಲಿರುವಾಗ ಯಾವುದೇ ಕಷ್ಟಗಳು ಎದುರಾಗಬಾರದು, ಹೋಗುತ್ತಿರುವ ಕೆಲಸ ಸಮಸ್ಯೆಗಳಿಲ್ಲದೇ ಮುಗಿಯಬೇಕು ಎಂಬುದಾಗಿರುತ್ತದೆ. ಆದರೆ, ಇಲ್ಲಿ ಕೇವಲ ಬೆಕ್ಕು ಮಾತ್ರವಲ್ಲ, ಈ ಪ್ರಾಣಿಗಳು ನಿಮಗೆ ಮಾರ್ಗ ಮಧ್ಯೆ ಎದುರಾದರೂ ಅಪಶಕುನವೇ… ಅವು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…


ಹಿಂದೂ ಸಂಪ್ರದಾಯದಲ್ಲಿ ಕೆಲವು ನಂಬಿಕೆಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿವೆ. ಇವು ಇಂದಿಗೂ ಆಚರಣೆಗೊಳಪಟ್ಟಿವೆ. ಅವುಗಳಲ್ಲಿ ಅಪಶಕುನಗಳೂ ಒಂದು. ಯಾವುದೇ ಕೆಲಸ, ಕಾರ್ಯಗಳಿಗೆಂದು ಹೊರಹೋಗುವಾಗ ದಾರಿ ಮಧ್ಯೆ ಬೆಕ್ಕು ಅಡ್ಡಬಂದರೆ ಅದಕ್ಕೆ ಹಲವು ಅರ್ಥಗಳನ್ನು ಹೇಳಲಾಗುತ್ತದೆ. ಅದರಲ್ಲಿ ಅಪಶಕುನವೂ ಒಂದು.

ಇಲ್ಲಿ ಬೆಕ್ಕು ಎಡದಿಂದ ಬಲಕ್ಕೆ ಹೋದರೆ, ಬಲದಿಂದ ಎಡಕ್ಕೆ ಹೋದರೆ ಎಂಬ ಹಲವು ಶಕುನ-ಅಪಶಕುನಗಳಿವೆ. ಇಲ್ಲಿ ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಹೀಗೆ ಶುಭ ಕಾರ್ಯಗಳಿಗೆಂದು ಹೋಗುವಾಗ ದಾರಿ ಮಧ್ಯೆ ಬೆಕ್ಕು ಅಡ್ಡಬಂದರೆ ಮಾತ್ರವೇ ಅಪಶಕುನವೇ? ಬೇರೆ ಪ್ರಾಣಿಗಳು ಬಂದರೆ ಏನರ್ಥ ಗೊತ್ತೇ..?

ಇದನ್ನು ಓದಿ: ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ ! 

ಜ್ಯೋತಿಷ್ಯ ಶಾಸ್ತ್ರದ ಇಲ್ಲವೇ ಶಕುನ ಶಾಸ್ತ್ರದ ಪ್ರಕಾರ, ಬೇರೆ ಪ್ರಾಣಿಗಳು ಬಂದರೂ ಅಪಶಕುನ ಇದೆ. ಇಂತಹ ಸಂದರ್ಭದಲ್ಲಿ ಕೆಲ ಸಮಯ ಕುಳಿತು ಹೋಗುವುದು, ಇಲ್ಲವೇ ಅಲ್ಲೇ ಕಾದು ಹೋಗುವುದು, ಬೇರೆ ಮಾರ್ಗವನ್ನು ಆಯ್ದುಕೊಂಡು ಆ ಮೂಲಕ ಪ್ರಯಾಣ ಬೆಳೆಸಬೇಕು ಎಂಬಿತ್ಯಾದಿ ಪರಿಹಾರವಗಳನ್ನೂ ಸೂಚಿಸಲಾಗಿವೆ. ಕೆಲವು ಅಶುಭದ ಮುನ್ಸೂಚನೆ ನೀಡಿದರೆ, ಮತ್ತೆ ಕೆಲವು ತುಂಬಾ ಹಾನಿಯನ್ನುಂಟು ಮಾಡುತ್ತವೆ.  ಹಾಗಾದರೆ ಅಂತಹ ಪ್ರಾಣಿಗಳು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…



ಹಾವು ಕಂಡರೂ ಒಳ್ಳೆದಲ್ಲ
ಬಹಳಷ್ಟು ಸಮಯ ರಸ್ತೆಯಲ್ಲಿ ಪ್ರಯಾಣಿಸುವಾಗ ಹಾವು ಕಾಣಿಸಿಕೊಳ್ಳುವುದು ಸಹಜ. ಆದರೆ, ಹಾವುಗಳು ಎಡದಿಂದ ಬಲಭಾಗಕ್ಕೆ ಹಾದು ಹೋದರೆ ಅಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದು ನೀವು ಹೋಗುತ್ತಿರುವ ಕೆಲಸವು ಕಷ್ಟಕರ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಹಾವು ಶತ್ರು ಸೂಚಕವೂ ಹೌದು. 

ದನಗಳ ಹಿಂಡು ಕಂಡರೆ ಈ ಸೂಚನೆ ಇದೆ!
ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಜಾನುವಾರುಗಳು ಕಂಡುಬರುತ್ತಲೇ ಇರುತ್ತವೆ. ನಾವು ಯಾವುದಾದರೂ ಪ್ರಮುಖ ಕೆಲಸದ ಮೇಲೆ ಹೊರಟ ಸಂದರ್ಭದಲ್ಲಿ ದನಗಳ ಹಿಂಡು ಕಂಡುಬಂದರೆ, ನಿಮಗೆ ಅಶುಭ ಎಂದು ಭಾವಿಸುವುದು ಬೇಡವಾದರೂ, ಎಚ್ಚರಿಕೆ ವಹಿಸುವಂತಹ ಸೂಚನೆಯನ್ನು ಕೊಡುತ್ತದೆ. ಈ ಸಮಯದಲ್ಲಿ ಸ್ವಲ್ಪ ಸಮಯ ಕಾದು ಬಳಿಕ ಹೊರಟರೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ! 

ಕಾಗೆ ಕಾಣಿಸಿಕೊಂಡರೆ ಏನು ಕಥೆ?
ತಲೆ ಮೇಲೆ ಕಾಗೆ ಕುಳಿತುಕೊಂಡರೆ ಅಶುಭ. ಅದೇ ನಿಮ್ಮ ತಲೆಯನ್ನು ಮುಟ್ಟಿಕೊಂಡು ಹೋದರೆ ದೈಹಿಕ ಕಷ್ಟಗಳು ಬರುತ್ತವೆ ಎನ್ನುವುದರ ಮುನ್ಸೂಚನೆ. ಮತ್ತಿದರಿಂದ ಯಾವುದಾದರೂ ರೋಗಗಳಿಗೆ ತುತ್ತಾಗುವರು, ಜೊತೆಗೆ ಮೃತ್ಯುವೂ ಎದುರಾಗಬಹುದು ಎನ್ನಲಾಗುತ್ತದೆ. ಹೀಗಾಗಿ ಪ್ರಯಾಣ ಮಾಡುವಾಗ ಸ್ವಲ್ಪ ಎಚ್ಚರವಹಿಸುವುದು ಸೂಕ್ತ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭ ಬಂದರೆ ಜಾತಕವನ್ನು ತೋರಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ಜ್ಯೋತಿಷ್ಯ ಶಾಸ್ತ್ರಜ್ಞರದ್ದಾಗಿದೆ. 

ಮುಂಗುಸಿ ಕಂಡರೆ ಏನು ಅಶುಭ?
ಹಾವನ್ನು ಬೇಟೆಯಾಡುವ ಮುಂಗುಸಿ ಕಂಡರೂ ಅಶುಭ ಎನ್ನಲಾಗುತ್ತದೆ. ಹೀಗಾಗಿ ಶುಭ ಕಾರ್ಯಕ್ಕೆ ಹೋಗುವಾಗ ಇವುಗಳು ಕಾಣಿಸಿಕೊಳ್ಳಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕಾರಣ, ಆಗುವ ಕೆಲಸವೂ ಆಗದು, ಅದಕ್ಕೋಸ್ಕರ ಬಹಳ ಕಷ್ಟಪಡಬೇಕು  ಎಂಬ ನಂಬಿಕೆ ಇದೆ. 

ಇದನ್ನು ಓದಿ: ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..?

ಹಂದಿ ಅಡ್ಡಬಂದರೂ ಎದುರಾಗಲಿದೆ ಸಂಕಷ್ಟ
ಹೊರಗಡೆ ಹೋಗುತ್ತಿದ್ದಾಗ ವಾಹನಗಳಿಗೆ ಹಂದಿ ಡಿಕ್ಕಿ ಹೊಡೆದರೆ, ಆ ವಾಹನವನ್ನೇ ಮಾರಿಬಿಡುತ್ತಾರೆ. ಅಷ್ಟರಮಟ್ಟಿಗೆ ಹಂದಿ ಮೇಲೆ ಭಯ ಇದೆ. ಪ್ರಯಾಣಿಸುವಾಗ ಮಾರ್ಗ ಮಧ್ಯೆಯಲ್ಲಿ ಹಂದಿ ಕಂಡರೂ ಸಹ ಬಹಳ ಅಶುಭ ಎಂದೇ ಹೇಳಲಾಗುತ್ತದೆ. ಕಾರಣ, ಹಂದಿ ಕಾಣಿಸಿಕೊಂಡರೆ ಶತ್ರುಗಳಿಂದ ನಷ್ಟ ಸಂಭವಿಸುತ್ತದೆ ಎಂಬುದರ ಸಂಕೇತ ಎಂದು ನಂಬಲಾಗಿದೆ.

Tap to resize

Latest Videos

click me!