Bengaluru: ನವರಾತ್ರಿಯಂದು ಬನಶಂಕರಿ ದೇವಸ್ಥಾನ, ಬಂಡೆ ಮಹಾಕಾಳಿ ದೇಗುಲದ ಪೂಜೆಗಳ ವಿವರ

By Santosh Naik  |  First Published Oct 2, 2024, 6:10 PM IST

ಬೆಂಗಳೂರಿನಲ್ಲಿ ನಾಳೆಯಿಂದ ನವರಾತ್ರಿ ಆರಂಭ. ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಏರ್ಪಡಿಸಲಾಗಿದೆ. ನವ ದುರ್ಗೆಯರ ಆರಾಧನೆಗೆ ಬೆಂಗಳೂರಿನ ದೇಗುಲಗಳು ಸಜ್ಜಾಗಿವೆ.


ಬೆಂಗಳೂರು (ಅ.2):  ನಾಳೆಯಿಂದ ನವರಾತ್ರಿ ಆರಂಭ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಏರ್ಪಡಿಸಲಾಗಿದೆ. ನವ ದುರ್ಗೆಯರ ಆರಾಧನೆಗೆ ಬೆಂಗಳೂರಿನ ದೇಗುಲಗಳು ಸಜ್ಜಾಗಿದೆ. ಶಕ್ತಿ ದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆ ಹೋಮ ಹವನ ಅಲಂಕಾರವನ್ನು ನಡೆಸಲಾಗುತ್ತಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ನಡೆಯಲಿದೆ. ನವರಾತ್ರಿಗಳಲ್ಲಿ ಬನಶಂಕರಿ ಅಮ್ಮನವರಿಗೆ ನಡೆಯುವ ವಿಶೇಷ ಅಲಂಕಾರ ಹೋಮಗಳ ಮಾಹಿತಿಯನ್ನೂ ನೀಡಲಾಗಿದೆ.

ಅಕ್ಟೋಬರ್‌ 10 ರಿಂದ ಅಕ್ಟೋಬರ್ 11 ರವರೆಗೆ ವಿಶೇಷ ಹೋಮ ಹವನಗಳು ನಡೆಯಲಿದೆ. ನವರಾತ್ರಿಯ ಎಲ್ಲ ದಿನಗಳಲ್ಲಿಯೂ ಭಕ್ತರಿಗೆ ಅನ್ನ ಸಂತರ್ಪಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
 

ದಿನ ಅಲಂಕಾರ ಹೋಮ
ಅಕ್ಟೋಬರ್ 3 ಅರಿಶಿನ ಕುಂಕುಮ ಅಲಂಕಾರ ಸಹಸ್ರ ಮೋದಕ ಮಹಾಗಣಪತಿ ಹೋಮ
ಅಕ್ಟೋಬರ್ 4 ಬಳೆ ಅಲಂಕಾರ ಸಹಸ್ರ ಕಮಲ ಶ್ರೀ ಸೂಕ್ತ ಹೋಮ
ಅಕ್ಟೋಬರ್ 5 ಅಕ್ಟೋಬರ್ 5 ಶ್ರೀ ರಾಮ ತಾರಕ ಹೋಮ
ಅಕ್ಟೋಬರ್‌ 6 ಹಣ್ಣಿನ ಅಲಂಕಾರ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಮಹಾ  ಸುದರ್ಶನ ಹೋಮ 
ಅಕ್ಟೋಬರ್ 7 ತರಕಾರಿ ಅಲಂಕಾರ ಶತ ರುದ್ರಾಭಿಶೇಕ ಹೋಮ
ಅಕ್ಟೋಬರ್ 8 ಗೋಮತಿ ಚಕ್ರ ಅಲಂಕಾರ ಲಲಿತಾ ಸಹಸ್ರನಾಮ
ಅಕ್ಟೋಬರ್ 9 ಸರಸ್ವತಿ ಅಲಂಕಾರ ಸರಸ್ವತಿ ಹೋಮ
ಅಕ್ಟೋಬರ್ 10 ಕಂಜುಕ ವಸ್ತ್ರ ಅಲಂಕಾರ ಮಹಾಮೃತ್ಯುಜಯ ಹೋಮ 
ಅಕ್ಟೋಬರ್ - 11 ಮಹಿಷ ಮರ್ದಿನಿ ಅಲಂಕಾರ ದುರ್ಗಾ ಹೋಮ
ಅಕ್ಟೋಬರ್ -12 ವಿಶೇಷ ಅಲಂಕಾರ ನವಚಂಡಿಕಾ ಹೋಮ

Tap to resize

Latest Videos

undefined


ಬಂಡೆ ಮಹಾಕಾಳಿ ದೇವಸ್ಥಾನದಲ್ಲೂ ವಿಶೇಷ ಪೂಜೆ: ನವರಾತ್ರಿ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಠಿತ ಬಂಡೆ‌ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಅಕ್ಟೋಬರ್‌ 3 ರಿಂದ 12ರವರೆಗೆ 10 ದಿನಗಳ ಕಾಲ ವಿಶೇಷ ಪೂಜೆ, ಹೋಮ-ಹವನ ನಡೆಯಲಿದೆ. 10 ದಿನಗಳ ಕಾಲ ಬಂಡೆ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿದೆ. ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ನವ ದುರ್ಗಾ ಹೋಮ, ಸುದರ್ಶನ ಹೋಮ, ಮಹಾಲಕ್ಷ್ಮೀ ಹೋಮ, ಮಹಾಸರಸ್ವತಿ ಹೋಮ, ಮನ್ಯುಸೂಕ್ತ ಹೋಮ, ಚಂಡಿ ಹೋಮ, ಗಾಯತ್ರಿ ಹೋಮ, ಕುಂಭಾಭಿಷೇಕ, ನವವರ್ಣ ಅಭಿಷೇಕ, ಪಂಚಾಮೃತ ಅಭಿಷೇಕ, 9 ವಿಧವಾದ ಅಲಂಕಾರಗಳು ನಡೆಯಲಿದೆ. ಅನ್ನದಾನ ಮತ್ತು ನಿತ್ಯ ಪ್ರಸಾದ ವಿನಿಯೋಗ  ಇರಲಿದೆ. ಪ್ರತಿನಿತ್ಯ ಸಂಜೆ 6 ಗಂಟೆಗೆ ಲಲಿತ ಸಹಸ್ರನಾಮ ಕಾರ್ಯಕ್ರಮ ಇರಲಿದೆ. ನವರಾತ್ರಿಯ ವಿಶೇಷವಾಗಿ ರಾತ್ರಿ ಅಮ್ಮನವರ ಆರಾಧನೆ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಪ್ರವಚನ  ಹಾಗೂ ಪ್ರಸಾದ ವಿನಿಯೋಗ ಕೂಡ ಇರಲಿದೆ.

Navratri 2024: ಪವಿತ್ರ 9 ದಿನಗಳಂದು ದೇವಿಗೆ ಇಷ್ಟವಾಗುವ 9 ಬಣ್ಣಗಳು!

ಅಲಂಕಾರಗಳು: ಬಂಡೆ ಮಹಾಂಕಾಳಿಗೆ ಬೆಣ್ಣೆ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಅರಿಶಿನ-ಕುಂಕುಮ ಅಲಂಕಾರ, ಮಹಾಲಕ್ಷ್ಮೀ ಅಲಂಕಾರ, ಸರಸ್ವತಿ ಅಲಂಕಾರ,  ಕಾಮಾಕ್ಷಿ ಅಲಂಕಾರ, ಚಾಮುಂಡೇಶ್ವರಿ ಅಲಂಕಾರ, ಮೀನಾಕ್ಷಿ ಅಲಂಕಾರ, ವಜ್ರಾಭರಣ ಅಲಂಕಾರ ಇರಲಿದ್ದು.  ವಿಜಯ ದಶಮಿಯಂದು ಬಂಡಿಮಹಾಕಾಳಿ ಅಮ್ಮನವರಿಗೆ ಪಲ್ಲಕ್ಕಿ‌ ಉತ್ಸವ ಇರಲಿದೆ.

ಈ ವರ್ಷ ನವರಾತ್ರಿ ಆರಂಭ ಯಾವಾಗ? ದಿನಾಂಕ, ಮಹತ್ವ ಇಲ್ಲಿದೆ ನೋಡಿ

click me!