ಚಿಕ್ಕಮಗಳೂರು: ಶೃಂಗೇರಿ, ಹೊರನಾಡಿನಲ್ಲೂ ನವರಾತ್ರಿ ಸಂಭ್ರಮ

By Girish Goudar  |  First Published Oct 17, 2023, 10:03 PM IST

ಶೃಂಗೇರಿ ಮಠದ ಶಾರದೆ ನವರಾತ್ರಿಯ ಮೂರನೇ ದಿನವಾದ ಇಂದು ವೃಷಭ ವಾಹನಾಲಂಕಾರದಲ್ಲಿ (ಮಾಹೇಶ್ವರೀ) ಆದಿ ಶಕ್ತಿಯು ಮಹೇಶ್ವರನ ಅರ್ಧಾಂಗಿಯಾಗಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ, ಚಂದ್ರರೇಖಾವಿಭೂಷಿತಳಾಗಿ, ವೃಷಭವಾಹನಾರೂಢಳಾಗಿಭಕ್ತರನ್ನು ಅನುಗ್ರಹಿಸಿದಳು. 


ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.17):  ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡಿನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿ ಮೂರನೇ ದಿನವಾದ ಇಂದು ಶೃಂಗೇರಿ ದೇವಸ್ಥಾನದ ಶಾರದೆ  ವೃಷಭ ಅಲಂಕಾರದಲ್ಲಿ ದರ್ಶನ ನೀಡಿದ್ರೆ ಹೊರನಾಡಿನ, ಅನ್ನಪೂಣೇಶ್ವರಿ ಸಿಂಹರೂಢಾ ಚಂದ್ರಘಂಟಾ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದಳು.

Latest Videos

undefined

ಮಾಹೇಶ್ವರೀ ಅಲಂಕಾರದಲ್ಲಿ ಶಾರದೆ : 

ಶೃಂಗೇರಿ ಮಠದ ಶಾರದೆ ನವರಾತ್ರಿಯ ಮೂರನೇ ದಿನವಾದ ಇಂದು (ಮಂಗಳವಾರ ) ವೃಷಭ ವಾಹನಾಲಂಕಾರದಲ್ಲಿ (ಮಾಹೇಶ್ವರೀ ) ಆದಿ ಶಕ್ತಿಯು ಮಹೇಶ್ವರನ ಅರ್ಧಾಂಗಿಯಾಗಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ, ಚಂದ್ರರೇಖಾವಿಭೂಷಿತಳಾಗಿ, ವೃಷಭವಾಹನಾರೂಢಳಾಗಿಭಕ್ತರನ್ನು ಅನುಗ್ರಹಿಸಿಳು. ಬೀದಿ ಇತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾದಿಗಳು ಭಾಗವಹಿಸಿದರು. ನವರಾತ್ರಿ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಪ್ರತಿದಿನದಂತೆ ಇಂದು ಕೂಡ ಪಾರಾಯಣ, ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ಬೀದಿ ಉತ್ಸವದ ಜೊತೆಗೆ ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ರಥೋತ್ಸವ ನಡೆಯುಲಿದೆ.ನವರಾತ್ರಿಯ ಅಂಗವಾಗಿ ಶೃಂಗೇರಿ ಶಾರದಾಂಭೆ ದೇಗುಲದ ಒಳಭಾಗದಲ್ಲಿ ಹೂವಿನ ಅಲಂಕಾರ ಭಕ್ತರನ್ನು ಆಕರ್ಷಣೆ ಮಾಡುತ್ತಿದೆ. 

ನವರಾತ್ರಿ ಸಂಭ್ರಮ: ಶಾರದೆಗೆ ಬ್ರಾಹ್ಮಿ ಅಲಂಕಾರ, ಅನ್ನಪೂಣೇಶ್ವರಿಗೆ ಗಜಾರೂಢಾ ಬ್ರಹ್ಮಚಾರಿಣೀ ರೂಪ

ಹೊರನಾಡಿನಲ್ಲಿ ಪುರುಷ ಸೂಕ್ತ ಹೋಮ : 

ನವರಾತ್ರಿಯ ಮೂರನೆಯ ದಿನವಾದ ಇಂದು ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯು ಸಿಂಹರೂಢಾ ಚಂದ್ರಘಂಟಾ ಅಲಂಕಾರಗೊಂಡು ಭಕ್ತರ ಭಕ್ತಿಯ ಪರಾಕಟಾಷ್ಟಕ್ಕೆ ಪಾತ್ರರಾದಳು. ಬೆಳಗ್ಗೆ ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರ ಕಾಂಡ ಪಾರಾಯಣ,ಕುಂಕುಮಾರ್ಚನೆ ಮತ್ತು ಪುರುಷ ಸೂಕ್ತ ಹೋಮ ನಡೆಯಿತು. ಇವಳ ಸಿಂಹರೂಢಾ ಚಂದ್ರಘಂಟಾ ಸ್ವರೂಪವೂ ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ದ ಚಂದ್ರನಿದ್ದಾನೆ. ಇವಳ ವಾಹನ ಸಿಂಹವಾಗಿದೆ. ಇದರಿಂದಲೆ ಇವಳನ್ನು ಸಿಂಹರೂಢ ಚಂದ್ರಘಂಟಾ ಎಂದು ಹೇಳಲಾಗುತ್ತದೆ. ಹತ್ತು ಕೈಗಳಿದ್ದೂ ಹತ್ತೂ ಕೈಗಳಲ್ಲಿ ಖಡ್ಗ ಶಸ್ತ್ರಗಳು ಹಾಗೂ ಭಾಣ ಇತ್ಯಾದಿ ಅಸ್ತ್ರಗಳು ವಿಭೂಷಿತವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ರೋಹಿತ್ ಅರಸ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸಂಜೆ ಸರಸ್ವತಿ ಕಲಾ ಟ್ರಸ್ಟ್ ಹೊಸಗದ್ದೆ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. 

ನಾಳೆ ಅನ್ನಪೂರ್ಣೇಶ್ವರಿಯು ಮೃಗಾರೂಢಾ ಕೂಷ್ಮಾಂಡ ಅಲಂಕಾರಗೊಳ್ಳಲಿದ್ದು,ಶ್ರೀ ಸೂಕ್ತ ಹೋಮ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಕ್ತಿ ಸಂಗೀತ ಸಂಜೆ ಭರತ ನಾಟ್ಯ ನಡೆಯಲಿದೆ.

click me!