ಒಬ್ಬೊಬ್ಬ ಅಮ್ಮಂದಿರು ಒಂದೊಂದು ರೀತಿಯಲ್ಲಿರುತ್ತಾರೆ. ಅಮ್ಮ ಹೇಗಿದ್ದರೂ ಮಕ್ಕಳಿಗೆ ಅಚ್ಚುಮೆಚ್ಚು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಅಮ್ಮನ ಗುಣ ರಾಶಿಚಕ್ರಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಇದಕ್ಕೆ ತಕ್ಕಂತೆ ಅಮ್ಮಂದಿರು ತಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತಾರೆ.
ಅಮ್ಮ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಪುಟ್ಟ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳು ಬೆಳೆಯುತ್ತಿರುವ ಸಮಯದಲ್ಲಿ ಅಮ್ಮನ ಪ್ರೀತಿ, ಬೆಂಬಲ ಬೇಕಾಗುತ್ತದೆ. ಆದರೆ, ಎಲ್ಲ ಅಮ್ಮಂದಿರೂ ಒಂದೇ ರೀತಿ ಇರುವುದಿಲ್ಲ. ಅಮ್ಮನಾಗಿ ಒಬ್ಬೊಬ್ಬ ಮಹಿಳೆಯರು ಒಂದೊಂದು ರೀತಿಯಲ್ಲಿರುತ್ತಾರೆ. ಕೆಲವು ಅಮ್ಮಂದಿರು ಮಕ್ಕಳ ಮೇಲೆ ಬಹಳ ಬೇಗ ಕೋಪಿಸಿಕೊಳ್ಳುತ್ತಾರೆ, ಕೆಲವರು ಯಾವುದಾದರೂ ಒಂದು ವಿಚಾರಕ್ಕೆ ಕಿರಿಕಿರಿ ಮಾಡುತ್ತಲೇ ಇರುತ್ತಾರೆ. ಮಕ್ಕಳಿಗೆ ಓದು-ಬರೆಯಲು ಒತ್ತಡ ಹಾಕುತ್ತಾರೆ, ಜೀವನದಲ್ಲಿ ಶಿಸ್ತು ಕಲಿಯುವಂತೆ ಪದೇ ಪದೆ ಹೇಳುತ್ತಲೇ ಇರುತ್ತಾರೆ. ಏನೇ ಆಗಿದ್ದರೂ ಮಕ್ಕಳ ಎಲ್ಲ ಉತ್ಸಾಹಭರಿತ ಕೆಲಸ ಕಾರ್ಯಗಳನ್ನೂ ತುಂಬು ಮನಸ್ಸಿನಿಂದ ಅಮ್ಮ ಪ್ರೋತ್ಸಾಹಿಸುತ್ತಾಳೆ. ಇಂತಹ ಅಮ್ಮ ಮಕ್ಕಳಿಗೆ ಬೇಕೇ ಬೇಕು. ಅಮ್ಮಂದಿರ ಈ ಗುಣ ಹೀಗೆ ಸುಮ್ಮನೆ ರೂಪುಗೊಳ್ಳುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದಕ್ಕೆ ಆಯಾ ರಾಶಿಗಳ ಪ್ರಭಾವ ಅಧಿಕವಾಗಿರುತ್ತದೆ. ಯಾವ ರಾಶಿಯ ಅಮ್ಮಂದಿರು ಯಾವ ರೀತಿಯಲ್ಲಿ ಮಕ್ಕಳಿಗೆ ಬೆಂಬಲ ನೀಡುತ್ತಾರೆ, ಮಕ್ಕಳ ಮೇಲೆ ಅಮ್ಮನ ಪ್ರಭಾವ ಹೇಗಿರುತ್ತದೆ ಎನ್ನುವುದನ್ನು ರಾಶಿಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯ.
• ಮೇಷ (Aries)
ಮೇಷ ರಾಶಿಯ ಅಮ್ಮಂದಿರು (Mothers) ಸಿಕ್ಕಾಪಟ್ಟೆ ಧೈರ್ಯವಂತರು. ನೈಸರ್ಗಿಕವಾಗಿ ನಾಯಕತ್ವದ ಗುಣ ಹೊಂದಿದ್ದು, ಸ್ವತಂತ್ರ ಧೋರಣೆಯಿಂದ ವರ್ತಿಸುತ್ತಾರೆ. ಸವಾಲುಗಳನ್ನು ಧೈರ್ಯವಾಗಿ (Bold) ಸ್ವೀಕರಿಸಲು ಮಕ್ಕಳಿಗೆ ಉತ್ತೇಜನ ನೀಡುತ್ತಾರೆ.
ಕನ್ವರ್ಟಿಬಲ್ ಫರ್ನೀಚರ್ ಮನೆಯಲ್ಲಿಡುವಾಗ ಈ ಟಿಪ್ಸ್ ಪಾಲಿಸಿ!
• ವೃಷಭ (Taurus)
ಸ್ಥಿರತೆ ಮತ್ತು ವಿಶ್ವಾಸಾರ್ಹ ವೃಷಭ ರಾಶಿಯ ಅಮ್ಮಂದಿರು ತಾಳ್ಮೆಯಿಂದ, ಪ್ರಾಯೋಗಿಕ ಬುದ್ಧಿಯಿಂದ ಕೂಡಿರುತ್ತಾರೆ. ಕುಟುಂಬದಲ್ಲಿ ಸುರಕ್ಷಿತ (Secure) ಭಾವನೆ ಮೂಡಿಸಲು ಕಾರಣರಾಗುತ್ತಾರೆ.
• ಮಿಥುನ (Gemini)
ಸೋಷಿಯಲ್ ಬಟರ್ ಫ್ಲೈ ಆಗಿರುವ ಮಿಥುನ ರಾಶಿಯ ಅಮ್ಮಂದಿರು ಮಕ್ಕಳೊಂದಿಗೆ ಖುಷಿಯಾಗಿ (Happy) ವ್ಯವಹರಿಸುತ್ತಾರೆ. ಚುರುಕು ವಿನೋದದಿಂದ, ಎಲ್ಲ ಸನ್ನಿವೇಶಗಳಲ್ಲೂ ಒಳಗೊಳ್ಳುವ ಮೂಲಕ ಮಕ್ಕಳೊಂದಿಗೆ ನಿಲ್ಲುತ್ತಾರೆ.
• ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಅಮ್ಮಂದಿರು ಮಕ್ಕಳನ್ನು ಅದಮ್ಯವಾಗಿ ಪ್ರೀತಿಸುತ್ತಾರೆ, ಆರೈಕೆ ಮಾಡುತ್ತಾರೆ. ಮನೆಯಲ್ಲಿ ಸ್ನೇಹಮಯ ವಾತಾವರಣ ಮೂಡಿಸಿ, ಮಕ್ಕಳಲ್ಲಿ ಪ್ರೀತಿ (Love) ತುಂಬುತ್ತಾರೆ.
• ಸಿಂಹ (Leo)
ಸಿಂಹ ರಾಶಿಯ ಅಮ್ಮಂದಿರು ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ. ಇವರ ವೈಬ್ರಂಟ್ (Vibrant) ಗುಣದಿಂದಾಗಿ ಮಕ್ಕಳಿಗೆ ರೋಮಾಂಚಕ ಭಾವನೆ ಮೂಡಿಸುತ್ತಾರೆ.
• ಕನ್ಯಾ (Virgo)
ಪ್ರಾಯೋಗಿಕ ಸ್ವಭಾವದ, ಸಮಸ್ಯೆಗಳನ್ನು (Problem) ಪರಿಹರಿಸುವ ಗುಣದ ಕನ್ಯಾ ರಾಶಿಯ ಅಮ್ಮಂದಿರು ಮಕ್ಕಳಿಗೆ ಉತ್ತಮ ಸಲಹೆ ನೀಡುವಲ್ಲಿ ಮುಂದಿರುತ್ತಾರೆ. ಜೀವನದಲ್ಲಿ ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆ.
• ತುಲಾ (Libra)
ತುಲಾ ರಾಶಿಯ ಅಮ್ಮಂದಿರು ಮನೆಯಲ್ಲಿ ಸದಾಕಾಲ ಸಾಮರಸ್ಯ (Harmony) ಬಯಸುತ್ತಾರೆ. ಹೀಗಾಗಿ, ಇವರು ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಮನೆಯ ಶಾಂತಿ ಕಾಪಾಡುತ್ತಾರೆ.
2024 ರಲ್ಲಿ ವೃತ್ತಿ ಜೀವನದಲ್ಲಿ ಸಕ್ಸ್‌ಸ್ ಪಡೆಯಲು ಹೀಗೆ ಮಾಡಿ
• ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಅಮ್ಮಂದಿರು ಮಕ್ಕಳಲ್ಲಿ ಆಳವಾದ ಮನೋಭೂಮಿಕೆ, ಭಾವನಾತ್ಮಕ (Emotional) ಶ್ರೀಮಂತಿಕೆ ತುಂಬಲು ಯತ್ನಿಸುತ್ತಾರೆ.
• ಧನು (Sagittarius)
ಸಾಹಸ, ಸ್ವತಂತ್ರ ಧೋರಣೆಯ ಧನು ರಾಶಿಯ ಅಮ್ಮಂದಿರು ಮಕ್ಕಳು ಹೊಸ ಹೊಸ ಅನುಭವಗಳನ್ನು ತಮ್ಮಗಾಗಿಸಿಕೊಳ್ಳಲು ಪ್ರೇರಣೆ, ಬೆಂಬಲ (Support) ನೀಡುತ್ತಾರೆ.
• ಮಕರ (Capricorn)
ಶಿಸ್ತುಬದ್ಧ, ಮಹತ್ವಾಕಾಂಕ್ಷೆಯ ಮಕರ ರಾಶಿಯ ಅಮ್ಮಂದಿರು ತಮ್ಮ ಮಕ್ಕಳಲ್ಲಿ ಉನ್ನತ ಗುಣಮಟ್ಟದ ನಡವಳಿಕೆ ಮೂಡಿಸಲು ಯತ್ನಿಸುತ್ತಾರೆ. ಸ್ಥಿರವಾಗಿ ಜೀವನವನ್ನು ಎದುರಿಸುವ ಮೌಲ್ಯಗಳನ್ನು (Value) ಮಕ್ಕಳಿಗೆ ತಿಳಿಸುತ್ತಾರೆ.
• ಕುಂಭ (Aquarius)
ಅಸಾಂಪ್ರದಾಯಿಕ ಚಿಂತನೆಯ ಕುಂಭ ರಾಶಿಯ ಅಮ್ಮಂದಿರು ಮುಕ್ತ (Open) ಮನಸ್ಸನ್ನು ಹೊಂದಿರುತ್ತಾರೆ. ಕ್ರಿಯಾಶೀಲತೆ ಮತ್ತು ವ್ಯಕ್ತಿಗತ ಚಿಂತನೆ ಬೆಳೆಸಿಕೊಳ್ಳಲು ಮಕ್ಕಳಿಗೆ ಉತ್ತೇಜನ ನೀಡುತ್ತಾರೆ.
• ಮೀನ (Pisces)
ಕನಸುಗಾರ ಮೀನ ರಾಶಿಯ ಅಮ್ಮಂದಿರು ಭಾರೀ ಕಂಪ್ಯಾಷನೇಟ್ ಆಗಿರುತ್ತಾರೆ. ಮಕ್ಕಳೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದು, ಒಂದು ರೀತಿಯ ಮ್ಯಾಜಿಕ್ (Magic) ಭಾವನೆ ಮೂಡಿಸುತ್ತಾರೆ. ಜೀವನದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಲು ನೆರವಾಗುತ್ತಾರೆ.