Mahashivratri : ಶಿವ ಒಲಿಬೇಕೆಂದ್ರೆ ಅಭಿಷೇಕ ಮಾಡುವಾಗ ಈ ತಪ್ಪು ಮಾಡ್ಬೇಡಿ!

By Suvarna News  |  First Published Feb 15, 2023, 5:31 PM IST

ಪ್ರತಿಯೊಂದು ದೇವರ ಪೂಜೆಗೂ ಬೇರೆ ವಿಧಾನಗಳಿವೆ. ಹಿಂದೂ ಧರ್ಮದಲ್ಲಿ ಪೂಜೆ ಸರಿಯಾಗಿಲ್ಲವೆಂದ್ರೆ ಪುಣ್ಯ ಪ್ರಾಪ್ತಿಯಾಗಲ್ಲ ಎಂದು ನಂಬಲಾಗಿದೆ. ಭಕ್ತರ ಕರೆಗೆ ಬಹುಬೇಗ ಓಗುಡುವ ಶಿವನ ಆರಾಧನೆ ವೇಳೆಯೂ ನಾವು ತಪ್ಪು ಮಾಡ್ಬಾರದು.
 


ಫೆಬ್ರವರಿ 18ರಂದು ಮಹಾಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಆ ದಿನ ಈಶ್ವರನ ಆರಾಧನೆ ಮಾಡಿದ್ರೆ ಎಲ್ಲ ಕಷ್ಟಗಳು ದೂರವಾಗುತ್ತವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಶಿವನ ಭಕ್ತರು ಶಿವರಾತ್ರಿ ದಿನ ಉಪವಾಸವಿದ್ದು, ಶಿವನ ನಾಮ ಸ್ಮರಣೆ ಮಾಡ್ತಾರೆ. ಶಿವನನ್ನು ಮೆಚ್ಚಿಸಲು ಆತನಿಗೆ ಇಷ್ಟವಾಗುವ ಕೆಲಸ ಮಾಡಲಾಗುತ್ತದೆ. ಪ್ರೀತಿಯ ಹೂವನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಶಿವರಾತ್ರಿಯಂದು ಜಲಾಭಿಷೇಕಕ್ಕೆ ವಿಶೇಷ ಮಹತ್ವವಿದೆ. 

ಮಹಾ ಶಿವರಾತ್ರಿ (Shivratri) ಯಂದು ಶಿವಲಿಂಗಕ್ಕೆ ಒಂದು ಬಿಂದಿಗೆಯಾದ್ರೂ ನೀರ (Water) ನ್ನು ಹಾಕ್ಬೇಕು ಎಂದು ಹಿರಿಯರು ಹೇಳ್ತಾರೆ. ಇದ್ರಿಂದ ಎಲ್ಲ ಪಾಪ ತೊಳೆದು, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಅನೇಕ ದೇವಾನುದೇವತೆಗಳಿವೆ. ಅವುಗಳ ಪೂಜೆ ಕೂಡ ಭಿನ್ನವಾಗಿಯೇ ನಡೆಯುತ್ತದೆ. ಕೆಲ ದೇವರಿಗೆ ಅರಿಶಿನ ಬಳಕೆ ಮಾಡೋದಿಲ್ಲ ಮತ್ತೆ ಕೆಲ ದೇವರ ಮುಡಿಗೆ ದೂರ್ವೆಯನ್ನು ಇಡೋದಿಲ್ಲ. ಹೀಗೆ ಶಾಸ್ತ್ರಗಳಲ್ಲಿ ಹೇಳಿದಂತೆ ಪೂಜೆ ಮಾಡಿದ್ರೆ ಮಾತ್ರ ಪೂಜೆಯ ಫಲ ಸಿಗಲು ಸಾಧ್ಯ. ಶಿವರಾತ್ರಿ ದಿನ ನೀವು ಜಲಾಭಿಷೇಕ ಮಾಡುವ ತಯಾರಿಯಲ್ಲಿದ್ದರೆ ಈ ವೇಳೆ ತಪ್ಪಾಗದಂತೆ ನೋಡಿಕೊಳ್ಳಿ. ನಿಮಗೆ ತಿಳಿಯದೆ ಅಭಿಷೇಕದ ವೇಳೆ ಮಾಡಿದ ತಪ್ಪು ಮುಂದೆ ಸಮಸ್ಯೆ ತರಬಹುದು. ಮಾಡಿದ ಪೂಜೆ ಫಲಿಸದೆ ಹೋಗ್ಬಹುದು. ನಾವಿಂದು ಶಿವರಾತ್ರಿ ಜಲಾಭಿಷೇಕ ಮಾಡುವಾಗ ಯಾವೆಲ್ಲ ತಪ್ಪು ಮಾಡ್ಬಾದರು ಎಂಬುದನ್ನು ನಿಮಗೆ ಹೇಳ್ತೆವೆ.

Tap to resize

Latest Videos

ದಿಕ್ಕಿ (Direction) ನ ಬಗ್ಗೆ ಇರಲಿ ಗಮನ : ಶಿವರಾತ್ರಿಯಂದು ಶಿವನ ಪೂಜೆಯನ್ನು ಭಕ್ತರೆ ಮಾಡ್ಬಹುದು. ಬಹುತೇಕ ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ. ನೀವು ಅಭಿಷೇಕ ಮಾಡುವ ವೇಳೆ ದಿಕ್ಕಿನ ಬಗ್ಗೆ ಗಮನಹರಿಸಿ. ದಕ್ಷಿಣ ಮತ್ತು ಪೂರ್ವಕ್ಕೆ ಮುಖ ಮಾಡಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬಾರದು. ಉತ್ತರಾಭಿಮುಖವಾಗಿರುವ ಶಿವಲಿಂಗಕ್ಕೆ ಯಾವಾಗಲೂ ನೀರನ್ನು ಅರ್ಪಿಸಿ. ಉತ್ತರ ದಿಕ್ಕನ್ನು ತಾಯಿ ಪಾರ್ವತಿ ನೆಲೆಸಿರುವ ಶಿವನ ಎಡಭಾಗವೆಂದು ಪರಿಗಣಿಸಲಾಗಿದೆ. ಈ ದಿಕ್ಕಿಗೆ ಮುಖಮಾಡಿ ನೀರನ್ನು ಅರ್ಪಿಸುವುದರಿಂದ ಶಿವ ಮತ್ತು ಪಾರ್ವತಿಯರ ಆಶೀರ್ವಾದ ನಿಮಗೆ ಸಿಗುತ್ತದೆ.

MahaShivratri 2023ಯಂದೇ ಶನಿ ಪ್ರದೋಷ ವ್ರತ; ಶನಿ ದೋಷ ನಿವಾರಣೆಗೆ ಸುದಿನ

ನಿಂತು ಅಭಿಷೇಕ ಮಾಡ್ಬೇಡಿ : ನೀವು ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡ್ತಿದ್ದರೆ ನಿಂತುಕೊಳ್ಳಬೇಡಿ. ನಿಂತು ಮಾಡುವ ಅಭಿಷೇಕ ಫಲ ನೀಡೋದಿಲ್ಲ. ನೀವು ಕುಳಿತುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡ್ಬೇಕು. 

ಅಭಿಷೇಕದ ವೇಳೆ ಈ ಪಾತ್ರೆ ಬಳಸಿ : ಶಿವಲಿಂಗಕ್ಕೆ ಅಭಿಷೇಕ ಮಾಡ್ಬೇಕು ಎನ್ನುವ ಕಾರಣಕ್ಕೆ ಮನೆಯಲ್ಲಿರುವ ಯಾವುದೋ ಪಾತ್ರೆ ತೆಗೆದುಕೊಂಡು ಹೋಗೋದು ಸೂಕ್ತವಲ್ಲ. ಉಕ್ಕಿನ ಅಥವಾ ಕಬ್ಬಿಣದ ಪಾತ್ರೆಯಿಂದ ಶಿವಲಿಂಗಕ್ಕೆ ನೀರನ್ನು ಅರ್ಪಿಸಬಾರದು. ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ತಾಮ್ರದ ಪಾತ್ರೆಯಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶುಭಕರವಾಗಿದೆ. ಶುದ್ಧವಾದ ಪಾತ್ರೆಯನ್ನು ನೀವು ಬಳಸಿ. ಹೊಸ ತಾಮ್ರದ ಪಾತ್ರೆಯಲ್ಲಿ ಅಭಿಷೇಕ ಮಾಡಿದ್ರೆ ಒಳ್ಳೆಯದು. ಜಲಾಭಿಷೇಕ ಮಾಡುವ ವೇಳೆ ನೀವು ನೀರನ್ನು ಬಿಟ್ಟು ಬಿಟ್ಟು ಹಾಕ್ಬಾರದು. ಒಂದೇ ಬಾರಿ ನೀರನ್ನು ಅರ್ಪಿಸಬೇಕು. ಹಾಗೆಯೇ ನೀವು ಹಾಲಿನ ಅಭಿಷೇಕ ಮಾಡ್ತಿದ್ದರೆ ಅದಕ್ಕೆ ತಾಮ್ರದ ಪಾತ್ರೆಯನ್ನು ಬಳಸಬೇಡಿ.

ಶಂಖ ಬಳಕೆ ಬೇಡ : ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ವೇಳೆ ಶಂಖ ಬಳಸಬೇಡಿ. ಶಂಖದಿಂದ ಶಿವಲಿಂಗಕ್ಕೆ ಎಂದೂ ನೀರನ್ನು ಹಾಕಬಾರದು. ದಂತಕಥೆಯ ಪ್ರಕಾರ ಶಿವನು ಒಮ್ಮೆ ಶಂಖಚೂಡ್ ಎಂಬ ರಾಕ್ಷಸನನ್ನು ಕೊಂದನು. ಶಂಖವು ಆ ರಾಕ್ಷಸನ ಮೂಳೆಗಳಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ.

Mahashivratri 2023: ಶಿವನ ನೆಚ್ಚಿನ ಈ ಹೂವಿನಿಂದ ಪೂಜಿಸಿದರೆ ಪಾಪ ದೋಷಗಳಿಂದ ಮುಕ್ತಿ

ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಈ ಸಮಯ ಬೆಸ್ಟ್ : ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ಮೊದಲು ಸಮಯದ ಬಗ್ಗೆ ಗಮನವಿರಲಿ. ಮುಂಜಾನೆ 5 ರಿಂದ 11 ಗಂಟೆಯವರೆಗೆ ಅಭಿಷೇಕ ಮಾಡಿದ್ರೆ ಫಲ ಸಿಗುತ್ತದೆ. ಸಾಯಂಕಾಲ ಯಾವುದೇ ಕಾರಣಕ್ಕೂ ನೀರನ್ನು ಅರ್ಪಿಸಬಾರದು. 
 

click me!