ಕಳೆದ 50 ವರ್ಷಗಳಿಂದ ಎತ್ತಿದ ಕೈ ಇಳಿಸೇ ಇಲ್ಲ ಈ ಹಠಯೋಗಿ! ಇದು ಶಿವನಿಗೆ ಶಾಶ್ವತ ನಮಸ್ಕಾರವಂತೆ!

By Suvarna News  |  First Published Jun 3, 2023, 12:49 PM IST

ಅಮರ್ ಭಾರತಿ ಎಂಬ ಈ ಸಾಧು ಶಿವನ ಮೇಲಿನ ಭಕ್ತಿಯಿಂದ 1973ರಲ್ಲಿ ಬಲಗೈ ಎತ್ತಿದವರು ಇಂದಿಗೂ ಒಮ್ಮೆಯೂ ಕೆಳಗಿಳಿಸಿಲ್ಲ. ಇದೆಂಥಾ ಹಠ? ಕೈಯ ಈಗಿನ ಅವಸ್ಥೆಯೇನು?


'ಯಾವುದೇ ಕೆಲಸ ಅದು ಆಗುವವರೆಗೆ ಅಸಾಧ್ಯವೆಂದೇ ತೋರುತ್ತದೆ' ಎಂದಿದ್ದಾರೆ ನೆಲ್ಸನ್ ಮಂಡೇಲಾ. ಈ ಸಾಧುವಿನ ಹಠ ಸಾಧನೆ ನೋಡಿದರೆ ನಿಮಗೆ ಈ ಮಾತು ಎಷ್ಟು ನಿಜವೆಂಬುದು ಅರ್ಥವಾದೀತು. ಈ ಸಾಧು ಮಾಡಿದ ಕೆಲಸವನ್ನು ನಾವ್ಯಾರೂ ಊಹಿಸಲೂ ಆಗದು. ಇನ್ನು ಅಂಥದೊಂದು ಕೆಲಸಕ್ಕೆ ಕೈ ಹಾಕುವುದಂತೂ ದೂರದ ಮಾತೇ ಸರಿ. ಇಷ್ಟಕ್ಕೂ ಈ ಸಾಧು ಮಾಡಿದ್ದೇನು ಅಂದ್ರಾ?

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 50 ವರ್ಷಗಳಿಂದ ಈ ಸಾಧು ತಮ್ಮ ಬಲಗೈಯನ್ನು ಎತ್ತಿ ಹಿಡಿದೇ ಇದ್ದಾರೆ. ಕಳೆದ 50 ವರ್ಷಗಳಲ್ಲಿ ಒಮ್ಮೆಯೂ ಇವರ ಕೈ ಕೆಳಗೆ ಇಳಿದಿಲ್ಲ. ಅರೆ ಇದೆಂಥಾ ವಿಚಿತ್ರ ಅನಿಸಬಹುದು. ಇದೆಲ್ಲೋ ಮರುಳು ಎನಿಸಬಹುದು. ಆದರೆ, ಇಂಥಾ ಹಠಯೋಗ ಸಾಧನೆ ಮತ್ಯಾರಿಂದ ಸಾಧ್ಯವೂ ಅಲ್ಲ ಎಂಬುದೂ ಅಷ್ಟೇ ನಿಜ. ಏಕೆಂದರೆ, ಅಂದುಕೊಂಡಂತೆ ಹಠ ಸಾಧಿಸುವುದು ಎಲ್ಲರಿಂದ ಸಾಧ್ಯವಿಲ್ಲ.

Tap to resize

Latest Videos

ಯಾರಿವರು?
ಇವರೇ ಯೋಗಿ ಅಮರ್ ಭಾರತಿ. 1973ರಲ್ಲಿ ಶಿವನ ಮೇಲಿನ ಭಕ್ತಿಗಾಗಿ ಕೈ ಎತ್ತಿದವರೂ ಇಂದಿಗೂ ಕೆಳಗಿಳಿಸಿಲ್ಲ. ಸಣ್ಣ ಸ್ಥಳೀಯ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ನಮ್ಮೆಲ್ಲರಂತೆ ಹೆಂಡತಿ ಮಕ್ಕಳೆಂದು ಸಂಸಾರದ ನೊಗ ಹೊತ್ತಿದ್ದ ಈ ವ್ಯಕ್ತಿಗೆ 1970ರ ಆರಂಭಿಕ ವರ್ಷಗಳಲ್ಲಿ ಪ್ರಾಪಂಚಿಕ ಜೀವನದ ಮೇಲೆ ಜಿಗುಪ್ಸೆ ಬರಲಾರಂಭಿಸಿತ್ತು. ಒಂದು ದಿನ ಧೈರ್ಯ ಮಾಡಿ ಅವರು ಮನೆ, ಮಡದಿ, ಮಕ್ಕಳು ಎಲ್ಲರನ್ನೂ ತೊರೆದು ಹೊರಟು ಹೋದರು. ಅವರೊಳಗಿನ ಕೂಗು ಎಷ್ಟು ಪ್ರಬಲವಾಗಿತ್ತೆಂದರೆ, ಅದು ಸಾಮಾನ್ಯ ವ್ಯಕ್ತಿಯಿಂದ ಯೋಗಿ ಅಮರ್ ಭಾರತಿಯ ಜನನವಾಗಿತ್ತು.

Ambubachi Mela: ಈ ದೇವಿಯ ಮುಟ್ಟಿನ ದಿನಗಳ ಹಬ್ಬಕ್ಕೆ ಹರಿದು ಬರುವ ಸಾಧುಸಂತರು!

ಅಮರ್ ಭಾರತಿ 1973ರಲ್ಲಿ ಶಿವನಿಗೆತಮ್ಮ ಜೀವನವನ್ನು ಅರ್ಪಿಸಲು ನಿರ್ಧರಿಸಿದರು. ತಮ್ಮ ಸಮರ್ಪಣೆಯನ್ನು ಸಾಬೀತುಪಡಿಸಲು ಅವರು ತಮ್ಮ ಬಲಗೈಯನ್ನು ಮೇಲಕ್ಕೆತ್ತಿದರು, ಮತ್ತು ಅಂದಿನಿಂದ ಅದನ್ನು ಕೆಳಕ್ಕೆ ಇಳಿಸಲಿಲ್ಲ.

ದೃಢನಿಶ್ಚಯದಿಂದ ಕೂಡಿದ ಭಾರತಿಯ ಪ್ರಯಾಣದ ಮೊದಲ ಎರಡು ವರ್ಷಗಳು ತೀವ್ರವಾದ ನೋವಿನಿಂದ ಕೂಡಿದ್ದವು.  ಕೈಗಳು ಅದೆಷ್ಟು ನೋಯ್ದರೂ ಅವರದನ್ನು ಇಳಿಸಲಿಲ್ಲ. ಆದರೆ ಕೆಲವು ಹಂತದಲ್ಲಿ ನೋವು ಕಡಿಮೆಯಾಯಿತು ಮತ್ತು ಅಂತಿಮವಾಗಿ ಅವರು ತಮ್ಮ ತೋಳಿನ ಎಲ್ಲಾ ಸಂವೇದನೆಯನ್ನು ಕಳೆದುಕೊಂಡರು. 

ಕೆಳಗಿಳಿಸಲಾಗದೆ?
ಅವರ ಬಲಗೈಯಲ್ಲಿ ರಕ್ತ ಪರಿಚಲನೆಯು ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ಅವರು ಅದನ್ನು ಎಂದಿಗೂ ಕೆಳಗಿಳಿಸಲು ಸಾಧ್ಯವಾಗುವುದಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ಇತರರು ಅವರು ಬಯಸಿದಲ್ಲಿ ಅವರು ಇನ್ನೂ ತಮ್ಮ ತೋಳನ್ನು ಕೆಳಕ್ಕೆ ಇಳಿಸಬಹುದು ಎಂದು ವಾದಿಸುತ್ತಾರೆ.

ವೈದ್ಯಕೀಯವಾಗಿ ನೋಡಿದರೆ, ಅವರ ತೋಳಿನ ಸ್ನಾಯುಗಳು ಸರಿಪಡಿಸಲಾಗದಷ್ಟು ಕ್ಷೀಣಿಸಲ್ಪಟ್ಟಿವೆ. ಅವರ ಬೆರಳುಗಳು ವೈಕಲ್ಯವಾಗಿ ಹೋಗಿವೆ. ಈಗೇನಾದರೂ ಅದನ್ನು ಕೆಳಗಿಳಿಸಲು ಪ್ರಯತ್ನಿಸಿದರೆ ಅದು ಮುರಿದೇ ಹೋಗಬಹುದು. ಹೀಗಾಗಿ, ಅದನ್ನು ಹೇಗಿದೆಯೋ ಹಾಗೆಯೇ ಇರಲು ಬಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. 

'ನೀವು ಈ ಸಾಧುವಿನ ಕೈಯನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸಿದರೆ ನೀವು ಅವರಿಗೆ ನಿಜವಾದ ನೋವನ್ನುಂಟು ಮಾಡುತ್ತೀರಿ- ದೈಹಿಕವಲ್ಲ ಆದರೆ ಆಧ್ಯಾತ್ಮಿಕ. ಏಕೆಂದರೆ ಶಿವನಿಗೆ ಅವರ ಶಾಶ್ವತ ನಮಸ್ಕಾರವು ನಿಜವಾಗಿಯೂ ವಿಶ್ವಶಾಂತಿಯನ್ನು ಉತ್ತೇಜಿಸುತ್ತದೆ ಎಂದು ಅವರು ನಂಬುತ್ತಾರೆ' ಎನ್ನುತ್ತಾರೆ ಅವರ ಪರಿಚಯಸ್ಥರು.

ಬೋಳು ತಲೆ ಸಮಸ್ಯೆಯೇ? ಈ ಗ್ರಹವನ್ನು ಶಾಂತಗೊಳಿಸಿ ನೋಡಿ, ಕೂದಲು ಉದುರೋದು ನಿಂತೀತು!

ಶಿವನಲ್ಲಿ ಸಾಧುವಿನ ಪ್ರಾರ್ಥನೆಯೇನು?
'ನಾನು ಹೆಚ್ಚು ಕೇಳುವುದಿಲ್ಲ. ನಾವು ನಮ್ಮ ಮಕ್ಕಳೊಂದಿಗೆ ಏಕೆ ಜಗಳವಾಡುತ್ತಿದ್ದೇವೆ? ನಮ್ಮ ನಡುವೆ ಇಷ್ಟು ದ್ವೇಷ ಏಕೆ? ನನಗೆ ಎಲ್ಲಾ ಭಾರತೀಯರು ಬೇಕು ಮತ್ತು ಇಡೀ ಪ್ರಪಂಚವು ಪರಸ್ಪರ ಶಾಂತಿಯಿಂದ ಬದುಕಬೇಕು' ಎನ್ನುತ್ತಾರೆ ಸಾಧು ಅಮರ ಭಾರತಿ. 

click me!