
ಆಗಸ್ಟ್ 28ರಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ರೆ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಗ್ರಹಣದ ಪರಿಣಾಮ ಎಲ್ಲಾ 12 ರಾಶಿಗಳ ಮೇಲೂ ಬೀಳಲಿದೆ. ಜ್ಯೋತಿಷಿಗಳ ಪ್ರಕಾರ, ಗ್ರಹಣದ ಪರಿಣಾಮ ಕೆಲವು ದಿನಗಳಿಂದ ಒಂದು ತಿಂಗಳವರೆಗೂ ಪ್ರಭಾವ ಬೀರುತ್ತದೆ. ಚಂದ್ರಗ್ರಹಣದಿಂದ ಕೆಲ ರಾಶಿಯವರ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ.
ಕರ್ಕ ರಾಶಿ : ಈ ರಾಶಿಯ ಅಧಿಪತಿ ಚಂದ್ರ. ಹಾಗಾಗಿ ಚಂದ್ರಗ್ರಹಣದ ಪರಿಣಾಮ ಈ ರಾಶಿಯ ಮೇಲೆ ಹೆಚ್ಚಿರಲಿದೆ. ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಕುಟುಂಬದ ವಿಚಾರಗಳಲ್ಲಿ ತಾಳ್ಮೆಯಿಂದ ನಡೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳೊಂದಿಗೆ ಅನಗತ್ಯ ವಾದಕ್ಕೆ ಹೋಗದಿರುವುದು ಉತ್ತಮ. ದಾಂಪತ್ಯದಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಮುಖ್ಯ.
ಸಿಂಹ ರಾಶಿ : ಚಂದ್ರ ಗ್ರಹಣದ ಸಮಯದಲ್ಲಿ ಸೂರ್ಯನ ಮೇಲೂ ಪರಿಣಾಮ ಇರುತ್ತದೆ. ಹಾಗಾಗಿ ಸಿಂಹ ರಾಶಿಯವರೂ ಎಚ್ಚರಿಕೆಯಿಂದ ಇರಬೇಕು. ಹೊಸ ಕೆಲಸ ಆರಂಭಿಸುವ ಮೊದಲು ನೂರು ಬಾರಿ ಯೋಚಿಸುವುದು ಮುಖ್ಯ. ಗ್ರಹಣದ ಸಮಯದಲ್ಲಿ ಹೊಸ ಕೆಲಸಕ್ಕೆ ಕೈ ಹಾಕದಿರುವುದು ಉತ್ತಮ. ಸಿಂಹ ರಾಶಿಯವರ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಹೊಸ ಪ್ರಯತ್ನಕ್ಕೆ ಕೈ ಹಾಕದೆ, ಎಚ್ಚರಿಕೆಯಿಂದ ಖರ್ಚು ಮಾಡುವುದು ಮುಖ್ಯ. ಕುಟುಂಬ ಹಾಗೂ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರೋದ್ರಿಂದ ತಾಳ್ಮೆಯಿಂದ ನಡೆದುಕೊಳ್ಳುವುದು ಉತ್ತಮ.
ಕುಂಭ ರಾಶಿ : ಈ ಬಾರಿ ಚಂದ್ರಗ್ರಹಣ ಕುಂಭ ರಾಶಿಯಲ್ಲಿ ಸಂಭವಿಸುತ್ತಿದೆ. ಕುಂಭ ರಾಶಿಯವರ ಮೇಲೆ ಗ್ರಹಣದ ಪರಿಣಾಮ ಹೆಚ್ಚಿರಲಿದೆ. ಆರೋಗ್ಯ, ಹಣಕಾಸು ಮತ್ತು ಉದ್ಯೋಗದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆತ್ಮವಿಶ್ವಾಸ ಕಡಿಮೆಯಾಗದಂತೆ ಧೈರ್ಯದಿಂದ ಮುಂದುವರಿಯುವುದು ಒಳ್ಳೆಯದು.
ಭಾರತದಲ್ಲಿ ಗ್ರಹಣ
ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದಿಲ್ಲ. ಭಾರತದ ಕಾಲಮಾನ ಬೆಳಗ್ಗೆ 6.53ಕ್ಕೆ ಗ್ರಹಣ ಆರಂಭವಾಗಲಿದೆ. ಮಧ್ಯಾಹ್ನ 12.32ಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಆದರೆ ಆ ಸಮಯದಲ್ಲಿ ಚಂದ್ರ ಕಾಣಿಸುವುದಿಲ್ಲವಾದ್ದರಿಂದ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ.