
ಸಂಖ್ಯಾಶಾಸ್ತ್ರವು ಭಾರತೀಯರು ಅನುಸರಿಸಿಕೊಂಡು ಬಂದಿರುವ ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎನ್ನುವರು. ಇನ್ನೂ ಕೆಲವರು ಅಂಕಿಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಗಣಿತಶಾಸ್ತ್ರದ ಭಾಗವೆಂದೂ ಹೇಳುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ಕೆಲವು ಶಕ್ತಿ ಅಥವಾ ಶಕ್ತಿಯನ್ನು ಹೊಂದಿರುತ್ತದೆ ಅದು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವನ/ಅವಳ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರಬಹುದು. ನಮ್ಮ ಬದುಕು ಕೂಡ ಒಂದು ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತಿರುತ್ತದೆ. ಆದ್ದರಿಂದ ಸಂಖ್ಯಾಶಾಸ್ತ್ರವೆನ್ನುವುದು ನಿತ್ಯ ಬದುಕಿನ ಸೂಚಕವಾಗಿದೆ. ಹುಟ್ಟಿದ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ.
ಇದೀಗ ಇದೇ ಆಧಾರದ ಮೇಲೆ ನಿಮ್ಮ ಮೊಬೈಲ್ ನಂಬರ್ರ ಕೊನೆಯ ಸಂಖ್ಯೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಎನ್ನಲಾಗಿದೆ. ಅಷ್ಟಕ್ಕೂ ಈಗ ಫ್ಯಾನ್ಸಿ ನಂಬರ್ಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ತಮ್ಮ ಲಕ್ಕಿ ನಂಬರ್ ಎಂದು ಹಲವರು ತಮಗೆ ಬೇಕಾದ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ. ಆದರೆ ಹಿಂದೆಲ್ಲಾ ಏನು ಸಂಖ್ಯೆ ಇತ್ತೋ ಅದನ್ನೇ ಪಡೆದುಕೊಳ್ಳಬೇಕಿತ್ತು. ಅದೇನೇ ಇದ್ದರೂ ಆ ಸಂಖ್ಯೆಯ ಮೊಬೈಲ್ ನಂಬರ್ ನಿಮ್ಮ ಬಳಿ ಇದ್ದರೆ ಅದು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದೇ ನಂಬಲಾಗಿದೆ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
ಹಾಗಿದ್ದರೆ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಹಾಗೂ ಅನೇಕರು ನಂಬಿರುವ ಸಂಖ್ಯೆ ಯಾವ ರೀತಿ ಇದೆ ಎಂದು ಈ ಕೆಳಗೆ ನೀಡಲಾಗಿದೆ. ಇದು ನಿಮಗೆ, ನಿಮ್ಮವರಿಗೆ, ನೀವು ಬಲ್ಲವರಿಗೆ, ನಿಮ್ಮ ಸ್ನೇಹಿತರೆಲ್ಲಾ ಮ್ಯಾಚ್ ಆಗತ್ತಾ ಎನ್ನುವುದನ್ನು ಹೇಳಲು ಮರೆಯಬೇಡಿ.
ಕೊನೆಯ ಸಂಖ್ಯೆ 0: ಬುದ್ಧಿವಂತರು
ಕೊನೆಯ ಸಂಖ್ಯೆ 1: ಸ್ಟೈಲಿಶ್
ಕೊನೆಯ ಸಂಖ್ಯೆ 2: ಸುಂದರರು
ಕೊನೆಯ ಸಂಖ್ಯೆ 3: ಪ್ರಾಮಾಣಿಕರು
ಕೊನೆಯ ಸಂಖ್ಯೆ 4: ಪ್ರೇಮಿಗಳು
ಕೊನೆಯ ಸಂಖ್ಯೆ 5: ಮೊಂಡುತನ ಹೆಚ್ಚು
ಕೊನೆಯ ಸಂಖ್ಯೆ 6: ಮೋಸ ಮಾಡುವವರು
ಕೊನೆಯ ಸಂಖ್ಯೆ 7: ರೊಮ್ಯಾಂಟಿಕ್
ಕೊನೆಯ ಸಂಖ್ಯೆ 8: ಮಾಟಗಾರರು
ಕೊನೆಯ ಸಂಖ್ಯೆ 9: ಮಾನಸಿಕ
ಎರಡನೇ ಮಗು ಹೆಸರು ಬರೆದಿಟ್ಟ ಆಲಿಯಾ ಭಟ್ ಭವಿಷ್ಯವೇನು? ಸೆಲೆಬ್ರಿಟಿ ಸಂಖ್ಯಾಶಾಸ್ತ್ರಜ್ಞ ಹೇಳ್ತಿರೋದೇನು?