ಇಲ್ಲಿನ ಕುರುಡುಂಜೆ ಎಂಬಲ್ಲಿ ಕಾರ್ಮಿಕರೊಬ್ಬರು ಕಳೆದುಕೊಂಡ ಸಾವಿರಾರು ರು. ಹಣ ಕೊರಗಜ್ಜ ದೈವಕ್ಕೆ ಹರಕೆ ಹೇಳಿಕೊಂಡ ಕೆಲವೇ ಹೊತ್ತಿನಲ್ಲಿ ಮರಳಿ ಸಿಕ್ಕಿದ ಘಟನೆ ನಡೆದಿದೆ.
ಬ್ರಹ್ಮಾವರ (ಜು.13) : ಇಲ್ಲಿನ ಕುರುಡುಂಜೆ ಎಂಬಲ್ಲಿ ಕಾರ್ಮಿಕರೊಬ್ಬರು ಕಳೆದುಕೊಂಡ ಸಾವಿರಾರು ರು. ಹಣ ಕೊರಗಜ್ಜ ದೈವಕ್ಕೆ ಹರಕೆ ಹೇಳಿಕೊಂಡ ಕೆಲವೇ ಹೊತ್ತಿನಲ್ಲಿ ಮರಳಿ ಸಿಕ್ಕಿದ ಘಟನೆ ನಡೆದಿದೆ.
ಕುರುಡುಂಜೆಯ ರೈತರೊಬ್ಬರ ಗದ್ದೆ ಉಳುವುದಕ್ಕೆ ಶಿವಮೊಗ್ಗದ ಗಣೇಶ್ ಎಂಬವರು ತಮ್ಮ ಟ್ಯಾಕ್ಟರ್‌ನೊಂದಿಗೆ ಬಂದಿದ್ದರು. ಅವರು ಇದೇ ರೀತಿ ಬೇರೆ ರೈತರಲ್ಲಿ ಉಳುಮೆ ಮಾಡಿ ಸಂಪಾದಿಸಿದ್ದ ಸುಮಾರು 25 ಸಾವಿರ ರು.ಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿಟ್ರ್ಯಾಕ್ಟರ್ನಲ್ಲಿಟ್ಟಿದ್ದರು.
undefined
ಗದ್ದೆ ಉಳುಮೆ ಮಾಡಿದ ನಂತರ ನೋಡಿದಾಗ ಟ್ರ್ಯಾಕ್ಟರ್ನಲ್ಲಿ ಪ್ಲಾಸ್ಟಿಕ್ ಕವರ್ ಸಹಿತ ಹಣ ಇರಲಿಲ್ಲ. ಉಳುವಾಗ ಕೆಳಗೆ ಬಿದ್ದಿರಬಹುದು ಎಂದು ಸುತ್ತಮುತ್ತ ಹುಡುಕಿದರೂ ಸಿಗಲಿಲ್ಲ.
ಮಂಗಳೂರಿಗೆ ಬರ್ತಿದ್ದೆ ಕೊರಗಜ್ಜ ಪರಿಚಯ ಇರಲಿಲ್ಲ: ನಟಿ ರಚಿತಾ ರಾಮ್
ತೀವ್ರ ಆತಂಕಗೊಂಡ ಅವರಿಗೆ ಸ್ಥಳೀಯರಾದ ಮಹೇಶ್ ಶೆಟ್ಟಿಎಂಬವರು ಕೊರಗಜ್ಜನಿಗೆ ಹರಕೆ ಹೇಳುವಂತೆ ಸಲಹೆ ಮಾಡಿದರು, ತಕ್ಷಣ ಗಣೇಶ್ ತನ್ನ ಹಣ ಸಿಕ್ಕಿದರೆ 1 ಸಾವಿರ ರು. ಕೊರಗಜ್ಜ ಹುಂಡಿಗೆ ಹಾಕುವುದಾಗಿ ಹರಿಕೆÜ ಹೇಳಿದರು.
ಇದಾಗಿ ಕೆಲವೇ ಹೊತ್ತಿನಲ್ಲಿ ಉಳುಮೆ ಮಾಡಿದ ಗದ್ದೆಯ ಬಳಿ ಅವರ ಹಣ ಸಿಕ್ಕಿತು. ಹರಕೆ ಹೇಳಿದಂತೆ ಗಣೇಶ್ ಅವರು ಕೊರಗಜ್ಜನಿಗೆ ಕಳ್ಳು, ಬೀಡ, ಚಕ್ಕುಲಿಯೊಂದಿಗೆ ದೊರಕಿದ ಹಣದಲ್ಲಿ ಒಂದು ಸಾವಿರ ರು. ಕಾಣಿಕೆ ಹಾಕಿದರು. ಇದೀಗ ಈ ಘಟನೆ ವಿವರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಕೊರಗಜ್ಜನ ಪವಾಡ ಎಂದು ಭಕ್ತರು ಹೇಳುತ್ತಿದ್ದಾರೆ.
'ಕರಿ ಹೈದ ಕೊರಗಜ್ಜ' ಚಿತ್ರೀಕರಣ ವೇಳೆ ನಡೆಯಿತು ಪವಾಡ: ಚಿತ್ರತಂಡದಿಂದ ಕೊರಗಜ್ಜ ದೇವಾಲಯ ನಿರ್ಮಾಣ !