'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ

By Santosh Naik  |  First Published Jul 30, 2024, 1:09 PM IST

20 ದಿನಗಳ ಹಿಂದೆ ಧಾರವಾಡದಲ್ಲಿ ಇದೇ ವಿಚಾರದ ಬಗ್ಗೆ ಹೇಳಿದ್ದೆ. ಇದು ಕ್ರೋಧಿನಾಮ ಸಂವತ್ಸರ, ಈ ಸಮಯದಲ್ಲಿ ಅನಾಹುತಗಳು ಆಗೋದು ಹೆಚ್ಚು ಎಂದು ಎಚ್ಚರಿಸಿದ್ದೆ ಎಂದು ಕೋಡಿಮಠ ಸ್ವಾಮೀಜಿ ತಿಳಿಸಿದ್ದಾರೆ.


ಬೆಳಗಾವಿ (ಜು.30): ಕೇರಳದಲ್ಲಿ ಭೂಕುಸಿತ ಪ್ರಕರಣದ ಬಗ್ಗೆ  ಬೆಳಗಾವಿಯಲ್ಲಿ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಇಪ್ಪತ್ತು ದಿನಗಳಿಂದ ಹಿಂದೆ ನಾನು ಧಾರವಾಡದಲ್ಲಿ ಇದೇ ರೀತಿ ಒಂದು ದುರ್ಘಟನೆ ಆಗಬಹುದು ಎಂದು ಎಚ್ಚರಿಸಿದ್ದೆ. 'ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ,  ರೋಗರುಜಿನಗಳು ಹೆಚ್ಚಾಗುತ್ತವೆ ಅಂತಾ ಹೇಳಿದ್ದೆ. ಕೇವಲ ಭಾರತದಲ್ಲಿ ಮಾತ್ರವೇ ಅಲ್ಲ. ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತಾ ಹೇಳಿದ್ದೆ. ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತೆ ಬಳಿಕ ಬೇರೆ ಭಾಗಕ್ಕೆ ಹೋಗುತ್ತೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧ ಅಂದರೆ ಸಿಟ್ಟು ಇದರಲ್ಲಿ ಒಳ್ಳೆಯದು ಕೆಟ್ಟದ್ದು ಇದೆ. ಆ ಪೈಕಿ ಕೆಟ್ಟದ್ದೆ ಜಾಸ್ತಿ ಇರುತ್ತೆ. ಇದು ಪ್ರಾಕೃತಿಕ ದೋಷ ಮುಂದುವರೆಯುತ್ತೆ ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮಳೆ ಅಮವಾಸ್ಯೆಯವರೆಗೆ ಒಂದು ಭಾಗಕ್ಕೆ ನಿಲ್ಲುತ್ತೆ ಮತ್ತೊಂದು ಭಾಗಕ್ಕೆ ಹೋಗುತ್ತೆ. ಮುಂದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಎಂದು ಸ್ವಾಮೀಜಿ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಬದಲಾವಣೆ ವಿಚಾರಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು,  ರಾಜ್ಯ ರಾಜಕೀಯದಲ್ಲಿ ಬದಲಾವಣೆ ವಿಚಾರಕ್ಕೆ "ಸನ್ಯಾಸಿ ಬೇಡನ" ಕಥೆ ಹೇಳಿದ್ದಾರೆ. ಒಬ್ಬ ಸನ್ಯಾಸಿ ತಪ್ಪಿಸಿಗೆ ಕುಳಿತಿದ್ದನಂತೆ, ಆಗ ಒಬ್ಬ ಬೇಡ ಬೇಟೆಗೆ ಜಿಂಕೆಯನ್ನ ಓಡಿಸಿಕೊಂಡು ಬಂದ. ಸ್ವಾಮೀಜಿ‌ ಮುಂದೆ ಜಿಂಕೆ ಹೋಯಿತಂತೆ ಆಗ ಸ್ವಾಮೀಜಿಯನ್ನ ಜಿಂಕೆ ಹೋಯಿತಾ ಅಂತ ಬೇಡ ಕೇಳಿದ್ದ. ಆಗ ಸನ್ಯಾಸಿ ಹೋಯಿತು ಅಂತಾ ಹೇಳಿದರೆ ಕೊಂದ ಪಾಪ ತಟ್ಟುತ್ತೆ, ಇಲ್ಲ ಅಂತಾ ಹೇಳಿದರೆ ಸುಳ್ಳು ಹೇಳಿದ ಪಾಪವೂ ತಟ್ಟುತ್ತೆ. ಹೀಗಿದ್ದಾಗ ಯಾವುದು ನೋಡ್ತು ಅದಕ್ಕೆ ಮಾತು ಬರಲ್ಲ, ಯಾವ್ದು ಮಾತನಾಡ್ತು ಅದಕ್ಕೆ ಮಾತನಾಡಕ್ಕೆ ಬರಲ್ಲ ಎಂದು ಸಂನ್ಯಾಸಿ ಹೇಳಿದ್ದ. ಕಣ್ಣು ನೋಡ್ತು ಕಣ್ಣಿಗೆ ಮಾತು ಬರಲ್ಲ, ನಾಲಿಗೆ ಮಾತಾಡ್ತು ಆದರೆ ಅದು ನೋಡಲಿಲ್ಲ ಎಂದು ಮಾರ್ಮಿಕವಾಗಿ ಕೋಡಿಮಠ ಸ್ವಾಮೀಜಿ ಹೇಳಿದ್ದಾರೆ.

ಕಳೆದ ಇಪ್ಪತ್ತು ದಿನಗಳ ಹಿಂದೆ ಲೋಕಸಭಾ ಚುನಾವಣೆ ಕುರಿತಾಗಿ ಮಹಾಭಾರತದ ಸನ್ನಿವೇಶವನ್ನೂ ಧಾರವಾಡದಲ್ಲಿ ನಾನು ಹೇಳಿದ್ದೆ ಎಂದು ತಿಳಿಸಿದ್ದಾರೆ. ಅದರಲ್ಲಿ ಅಭಿಮನ್ಯುನನ್ನು ಎಲ್ಲರೂ ಕೂಡಿ ಮೋಸದಲ್ಲಿ ಕೊಲ್ಲುತ್ತಾರೆ ಎಂದು ಹೇಳಿದ್ದಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಅನೋ ಕಾರಣಕ್ಕೆ ಭೀಮ ಗೆದ್ದ ದುರ್ಯೋಧನ ಸೋತ. ಆದರೆ ಇಲ್ಲಿ ಕೃಷ್ಣ ಇಲ್ಲ, ದುರ್ಯೋಧನ ಗೆಲ್ತಾನೆ ಭೀಮ‌ ಸೋಲ್ತಾನೆ ಎಂದು ಸ್ವಾಮೀಜಿ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಸದ್ಯಕ್ಕೆ ಏನು ತೊಂದರೆ ಕಾಣ್ತಿಲ್ಲ ಎಂದ ಸ್ವಾಮೀಜಿ ಹೇಳಿದ್ದಾರೆ. ಮುಂದೆ ತೊಂದರೆ ಆಗುತ್ತಾ ಎಂಬ ವಿಚಾರಕ್ಕೆ ಮತ್ತೊಮ್ಮೆ "ಬೇಡ ಸನ್ಯಾಸಿ" ಕಥೆಯನ್ನು ಅವರು ಹೇಳಿದ್ದಾರೆ. ಏನಾದರೂ ಹೇಳಿದ್ರೆ ಮುಂದೆ ಓಡಾಡದ ಹಾಗೆ ಮಾಡಿಬಿಡುತ್ತೀರಾ ಎಂದು ತಮಾಷೆಯಾಗಿ ಹೇಳಿದ್ದಾರೆ.

ಜನರು ಎಲ್ಲವನ್ನೂ ಮನಶಾಂತಿಯಿಂದ ತೆಗೆದುಕೊಳ್ಳುತ್ತಿಲ್ಲ, ದ್ವೇಷ ಭಾಷೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿಯಾಗಿ ಜನರು‌ ಮತ ನೀಡಿತ್ತಿಲ್ಲ, ಎಲ್ಲಿಯವರೆಗೆ ಮತ ಮಾರಾಟ ಮಾಡಿಕೊಳ್ಳುತ್ತಾರೆ, ಅಲ್ಲಿಯವರೆಗೆ ಲಾಭ ನಷ್ಟ ಇರುತ್ತದೆ. ಹಿಂದಿನ‌ಕಾಲದಲ್ಲಿ ಧರ್ಮದ ಅನುಮತಿ ಪಡೆದು ರಾಜಕಾರಣ ಮಾಡುತ್ತಿದ್ದರು. ಈಗ ಧರ್ಮವೂ ಇಲ್ಲ ಗುರಿಯೂ ಇಲ್ಲ, ದುಡ್ಡು ಮಾಡೋದಷ್ಟೇ ಗುರಿ. ಹಾಗಾಗಿ ಬಹುಬೇಗ ಇವರಿಗೆ ಅಪಘಾತಗಳು ಆಗುತ್ತಿವೆ ಎಂದಿದ್ದಾರೆ.

Tap to resize

Latest Videos

ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ !

ಮನುಷ್ಯ ಯಾವುದೇ ಅಪೇಕ್ಷೆ ಇಲ್ಲದೇ ಮತ ಹಾಕುತ್ತಾನೋ ಅಲ್ಲಿಯವರೆಗೆ ರಾಮರಾಜ್ಯ ಸಿಗಲ್ಲ ಎಂದ ಸ್ವಾಮೀಜಿ ಹೇಳಿದ್ದಾರೆ. ಬರುವ ದಿನಗಳಲ್ಲಿ ರೋಗರುಜಿನಗಳು ಸ್ವಲ್ಪ ಜಾಸ್ತಿಯಾಗುತ್ತೆ, ಅಲ್ಪಾಯಸ್ಸು ಕಡಿಮೆ ಆಗುತ್ತೆ, ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಅಷ್ಟೊಂದು ಶುಭವಾಗಿಲ್ಲ. ಒಳ್ಳೆಯದು ಇದ್ದಾವೆ, ಆದರೆ, ಬೆಳಕು ಕಪ್ಪು ಓರೆ ಮಾಡಿದಾಗ ಕಪ್ಪೆ ಜಾಸ್ತಿ  ಎಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಟ್ರಂಪ್ ಹತ್ಯೆ ಯತ್ನ: ನಿಜವಾದ ಕೋಠಿ ಮಠದ ಶ್ರೀಗಳ ಭವಿಷ್ಯ!

click me!