ಪುರುಷರ ಬೆತ್ತಲೆ ಹಬ್ಬದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ, 1650ರ ಬಳಿಕ ಇದೇ ಮೊದಲು!

By Suvarna News  |  First Published Jan 24, 2024, 1:40 PM IST

ಪುರುಷರ ಬೆತ್ತಲೆ ಹಬ್ಬ ವಿಶ್ವ ವಿಖ್ಯಾತವಾಗಿದೆ. 1650ರಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ಪುರುಷರು ಬೆತ್ತಲೆಯಾಗಿ ಆಚರಿಸುವ ಈ ಹಬ್ಬದಲ್ಲಿ ಮಹಿಳೆಯರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
 


ಟೋಕಿಯೋ(ಜ.24) ವಿದೇಶಗಳಲ್ಲಿ ಹಲವು ಬೀಚ್‌ಗಳಲ್ಲಿ ಬೆತ್ತಲೆಯಾಗಿ ಕುಣಿಯುವುದು, ನ್ಯೂಡ್ ಬೀಚ್ ಸೇರಿದಂತೆ ಹಲವು ಪ್ರದೇಶದಲ್ಲಿ ಬೆತ್ತಲೆಯಾಗಿ ಪಾಲ್ಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಜಪಾನ್‌ನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರತಿ ವರ್ಷ ನಡೆಯುವ ಪುರುಷರ ಬೆತ್ತಲೆ ಹಬ್ಬದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಜಪಾನ್‌ನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ 1650ರಿಂದ ಪುರುಷರ ಬೆತ್ತಲೆ ಹಬ್ಬ ನಡೆದುಕೊಂಡು ಬರುತ್ತಿದೆ. ಈ ಹಬ್ಬವನ್ನು ಜಾಪನ್ ಸಾಂಪ್ರಾದಾಯಿಕ ಭಾಷೆಯಲ್ಲಿ ಹಡಕ ಮಟ್ಸುರಿ ಎಂದು ಕರೆಯುತ್ತಾರೆ. ಜಪಾನ್‌ನ ಆ್ಯಚಿ ಫ್ರೆಕ್ಷರ್ ಸಮೀಪದ ಇನಝವಾ ಪಟ್ಟಣದಲ್ಲಿ ಈ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿ ಭಾರಿ ಪರುಷರ ಬೆತ್ತಲೆ ಹಬ್ಬದಲ್ಲಿ ಸುಮಾರು 10,000ಕ್ಕೂ ಹೆಚ್ಚು ಪುರುಷರು ಬೆತ್ತಲೆಯಾಗಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಫೆಬ್ರವರಿ 22 ರಂದು   ಹಡಕ ಮಟ್ಸುರಿ ಹಬ್ಬ ಆಯೋಜಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ಪುರುಷರು ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ 40 ಮಹಿಳೆಯರಿಗೂ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕೊನೊಮಿಯಾ ಧಾರ್ಮಿಕ ಕೇಂದ್ರ ನೀಡಿದೆ.

Tap to resize

Latest Videos

ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

ಕೆಲ ಷರತ್ತುಗಳನ್ನು ವಿಧಿಸಿ ಮಹಿಳೆಯರಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. 1650ರಿಂದ ಈ ಧಾರ್ಮಿಕ ಹಬ್ಬ ಕೇವಲ ಪುರುಷರಿಗೆ ಮಾತ್ರ ಆಯೋಜಿಸಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಪುರುಷರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಲವು ವರ್ಷಗಳಿಂದ ಮಹಿಳೆಯರಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಅನ್ನೋ ಮನವಿಗಳಿತ್ತು. ಈ ಮನವಿ ಪುರಸ್ಕರಿಸಿರುವ ಕೊನೊಮಿಯಾ ಧಾರ್ಮಿಕ ಕೇಂದ್ರ, ಈ ವರ್ಷ 40 ಮಹಿಳೆಯರಿಗೆ ಅವಕಾಶ ನೀಡಿದ್ದು, ಹಂತ ಹಂತವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ಹೇಳಿದೆ.

ಕಳೆದ 3 ವರ್ಷಗಳಿಂದ ಕೊರೋನಾ ಕಾರಣದಿಂದ ಈ ಹಬ್ಬ ಆಯೋಜಿಸಲು ಸಾಧ್ಯವಾಗಲಿಲ್ಲ. 3 ವರ್ಷಗಳ ಬಳಿಕ ಹಬ್ಬ ಆಯೋಜಿಸಿರುವ ಕಾರಣ ಉತ್ಸಾಹ ಹೆಚ್ಚಾಗಿದೆ. ಸಂಪೂರ್ಣ ಬಟ್ಟೆ ಧರಿಸಿ ಮಹಿಳೆಯರು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ. ಇದು ಧಾರ್ಮಿಕ ಹಬ್ಬ, ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ ಎಂದು ಧಾರ್ಮಿಕ ಕೇಂದ್ರ ಸ್ಪಷ್ಟಪಡಿಸಿದೆ.

click me!