ಶಿರಡಿ ಸಾಯಿಬಾಬ ಅವತಾರವೇ ಈ ಬಾಲಕ? ಮೈಸೂರು-ಮಂಡ್ಯ ನಡುವೆ ಜನಿಸಿದ್ದು ಹೌದಾ?

By Santosh Naik  |  First Published Aug 3, 2024, 5:41 PM IST


ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಇಹಲೋಕ ತ್ಯಜಿಸಿ ಹದಿಮೂರು ವರ್ಷಗಳಾಗಿವೆ. ಅವರೇ ಹೇಳಿದಂತೆ, ಪ್ರೇಮ್‌ ಸಾಯಿ ಆಗಿ ಸಾಯಿ ಬಾಬಾ ಅವರ ಮೂರನೇ ಅವತಾರ ಇರುತ್ತದೆ ಎಂದು ಹೇಳಿದ್ದರು. ಈಗ ಸಾಯಿ ಭಕ್ತರು ಈ ಹುಡುಗನನ್ನೇ ಪ್ರೇಮ್‌ ಸಾಯಿ ಎಂದು ನಂಬಲು ಆರಂಭಿಸಿದ್ದಾರೆ.
 



ಬೆಂಗಳೂರು (ಆ.3): ಸಾಯಿ ಬಾಬಾ ಅವತಾರಗಳ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಿವೆ. ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರೇ ಹೇಳುವ ಪ್ರಕಾರ ಸಾಯಿಬಾಬಾ ಅವರ ಮೂರು ಅವತಾರಗಳಲ್ಲಿ ತಾವು ಎರಡನೆಯವರು ಎಂದಿದ್ದರು. ಮೊದಲಿಗರು ಶಿರಡಿ ಸಾಯಿ ಬಾಬಾ ಆಗಿದ್ದರೆ, ಮೂರನೆಯವರು ಪ್ರೇಮ್‌ ಸಾಯಿ ಬಾಬಾ. ಇದರ ನಡುವೆ ಈ ಹುಡುಗನ್ನು ಶಿರಡಿ ಸಾಯಿ ಬಾಬ & ಸತ್ಯ ಸಾಯಿ ಬಾಬಾರ ಮೂರನೇ ಅವತಾರ ಪ್ರೇಮ್‌ ಸಾಯಿ ಬಾಬಾ ಎಂದು ಸಾಯಿ ಭಕ್ತರು ನಂಬಿದ್ದಾರೆ. ಪುಟ್ಟಪರ್ತಿ ಸಾಯಿಬಾಬಾ ಸಾಯುವ ಸಮಯದಲ್ಲಿ  ಮೈಸೂರು-ಮಂಡ್ಯ ನಡುವೆ ಮತ್ತೊಂದು ಜನ್ಮ ತಾಳುತ್ತೇನೆ ಎಂದಿದ್ದರು. 2012ರ ಜೂನ್‌ 28 ರಂದು ಜನಿಸಿದ ಪ್ರೀತಮ್‌ ಎನ್ನುವ ಹುಡುಗನೇ ಪ್ರೇಮ್‌ ಸಾಯಿ ಎಂದು ಹೇಳಿಕೊಳ್ಳುವಂಥ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮಾಡುತ್ತಿದ್ದಾರೆ. ಸ್ವ್ಯಾಟೋಸ್ಲಾವ್ ಡುಬಿಯಾನ್ಸ್ಕಿ ಎನ್ನುವ ವ್ಯಕ್ತಿ ಈ ಹುಡುಗನ ಪೋಸ್ಟ್‌ಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದು ಈತನೇ ಪ್ರೇಮ್‌ ಸಾಯಿ ಎಂದಿದ್ದಾರೆ. ತಮ್ಮನ್ನುನತಾವು ಸತ್ಯಸಾಯಿ ಬಾಬಾರ ಭಕ್ತರು ಎಂದು ಹೇಳುವ ಸ್ವ್ಯಾಟೋಸ್ಲಾವ್ ಡುಬಿಯಾನ್ಸ್ಕಿ ಈಗ  ಪ್ರೇಮ ಸಾಯಿಯ ಕುರಿತಾದ ಇಂಚಿಂಚೂ ವಿಚಾರಗಳನ್ನು ಜನರಿಗೆ ತಿಳಿಸುತ್ತಿದ್ದಾರೆ.

ಈ ಹಿಂದೆ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ, ಪ್ರೇಮ ಸಾಯಿಬಾಬಾ ಅವರ ಬಗ್ಗೆ ಹೇಳಿರುವ ಮಾಹಿತಿಗಳು ಅವರ ವೆಬ್‌ಸೈಟ್‌ನಲ್ಲಿಯೇ ಇದೆ. ಪ್ರೇಮ ಸಾಯಿ ಬಾಬಾ ಬೂಮಿಗೆ ಯಾವಾಗ ಬರುತ್ತಾರೆ ಎನ್ನುವುದಕ್ಕೆ ಸಾಕಷ್ಟು ಮೂಲಗಳ ಮಾಹಿತಿಗಳಿವೆ.

Latest Videos

undefined

ಸತ್ಯಸಾಯಿ ಬಾಬಾರವರ ಪ್ರೇಮ ಸಾಯಿಯವರ ಮೊದಲ ಉಲ್ಲೇಖವು 1963ರ ಜುಲೈ6ರ ಶಿವಶಕ್ತ ಪ್ರವಚನದಲ್ಲಿ ಬರುತ್ತದೆ.  ಭಾರದ್ವಾಜರು ಧಾರ್ಮಿಕ ಕ್ರಿಯೆಯನ್ನು ಮಾಡಿದ ನಂತರ ಶಿವ, ಶಕ್ತಿ ಮತ್ತು ಭಾರದ್ವಾಜರ ನಡುವಿನ ಸಂಭಾಷಣೆಯ ವೇಳೆ ಶಿವ ಹೀಗೇ ಹೇಳುತ್ತಾನೆ. ಮಾನವ ರೂಪವನ್ನು ಪಡೆದುಕೊಂಡ ಬಳಿಕ ಭಾರದ್ವಾಜ ವಂಶದಲ್ಲಿ ಮೂರು ಬಾರಿ ಜನಿಸುತ್ತಾರೆ. ಶಿವ ಒಬ್ಬನೇ ಆಗಿ ಶಿರಡಿ ಸಾಯಿಬಾಬಾ, ಶಿವ ಮತ್ತು ಶಕ್ತಿ ಒಟ್ಟಿಗೆ ಪುಟ್ಟಪರ್ತಿಯಲ್ಲಿ ಸತ್ಯಸಾಯಿ ಬಾಬಾ ಮತ್ತು ಶಕ್ತಿ ಮಾತ್ರವೇ ಆಗಿ ಪ್ರೇಮ ಸಾಯಿ ಎಂದು ಹೇಳಿದ್ದರು.

ವಿವಿಧ ಸಾಯಿ ಭಕ್ತರು ತಮ್ಮ ಬರಹಗಳಲ್ಲಿ ಪ್ರೇಮಾ ಸಾಯಿಯವರ ಕುರಿತು ಸಂದರ್ಶನಗಳಲ್ಲಿ ಹೇಳಿದ್ದು ಇತ್ಯಾದಿಗಳನ್ನು ವಿವರಿಸಿದ್ದಾರೆ. 

ಹೊವಾರ್ಡ್ ಮರ್ಫೆಟ್ ಅವರು ಬರೆದ Invitation to Glory ಎನ್ನುವ ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ಹೇಳುವಂತೆ, 'ಅಂತಿಮವಾಗಿ, ಸತ್ಯಸಾಯಿ ಹೇಳುವಂತೆ, ಪ್ರೇಮ ಸಾಯಿ ಅವರು ಸತ್ಯಸಾಯಿ ರೂಪವನ್ನು ತಳೆದ ಒಂದು ವರ್ಷದ ನಂತರ, ಕರ್ನಾಟಕದಲ್ಲಿ (ಹಳೆಯ ಮೈಸೂರು ರಾಜ್ಯ) ಬೆಂಗಳೂರು ಮತ್ತು ಮೈಸೂರು ನಗರದ ನಡುವಿನ ಸ್ಥಳದಲ್ಲಿ ಜನಿಸುತ್ತಾರೆ ಎನ್ನಲಾಗಿತ್ತು.

ಲಿವಿಂಗ್ ಡಿವಿನಿಟಿ ಪುಸ್ತಕದ 16 ನೇ ಪುಟದಲ್ಲಿ ಲೇಖಕಿ ಶಕುಂತಲಾ ಬಾಲು, 'ಪ್ರೇಮ ಸಾಯಿ ಎಂಬ ಇನ್ನೊಂದು ಸಾಯಿ ಅವತಾರ ಇರಲಿದೆ ಎಂದು ಶ್ರೀ ಸತ್ಯಸಾಯಿ ಬಾಬಾ ಹೇಳಿದ್ದಾರೆ. ಮೂರನೇ ಸಾಯಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುಣಪರ್ತಿ ಎಂಬ ಹಳ್ಳಿಯಲ್ಲಿ ಜನಿಸಲಿದ್ದಾರೆ. ಹೀಗಾಗಿ, ಶ್ರೀ ಸತ್ಯಸಾಯಿ ಬಾಬಾ ಅವರು ತಮ್ಮ ಭೂತಕಾಲವನ್ನು ಮಾತ್ರವಲ್ಲ, ಅವರು ಪ್ರೇಮ ಸಾಯಿ ಎಂದು ಭಾವಿಸುವ ಭವಿಷ್ಯದ ರೂಪವನ್ನೂ ಸಹ ಉಲ್ಲೇಖಿಸುತ್ತಾರೆ..' ಎಂದು ಬರೆದಿದ್ದಾರೆ.

ಸತ್ಯ ಸಾಯಿಬಾಬಾರ ಅವತಾರ ಪುರುಷ ಎಂದೇಳಿ ಕೋಟಿ ಕೋಟಿ ಪಂಗನಾಮ ಹಾಕಿದ ನಕಲಿ ಬಾಬ!

ಇದೇ ಕಾರಣಕ್ಕೆ ಈ ಹುಡುಗನನ್ನು ಜನ ಪ್ರೇಮ ಸಾಯಿ ಎಂದು ನಂಬಿದ್ದಾರೆ. ಸಾಯಿ ಭಕ್ತರು ಈತನಿಗೆ ಪಾದಪೂಜೆ ಮಾಡುವುದು, ಅಭಿಷೇಕ ಮಾಡುವುದು, ಅವರ ದಿನನಿತ್ಯದ ಕೆಲಸಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಅಮವಾಸ್ಯೆ ‌ದಿನ ಧಾರವಾಡದಲ್ಲಿ ಪವಾಡ: ಸಾಯಿಬಾಬಾ ಚಿತ್ರ ನೋಡಲು ಮುಗಿಬಿದ್ದ ಭಕ್ತರು!

 

 

click me!