
ಬೆಂಗಳೂರು (ಏ.06): ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ಹಲವು ಉಪಯೋಗಗಳಿವೆ ಎನ್ನುವುದು ಎಲ್ಲರಿಗೂ ಗೊತ್ತು. ಹೀಗಾಗಿಯೇ ರುದ್ರಾಕ್ಷಿಯನ್ನು ಪವಿತ್ರ ಮತ್ತು ಶಕ್ತಿಯುತವಾದ ನೈಸರ್ಗಿಕ ಅಂಶ ಹಾಗೂ ಶಿವನ ಆಶೀರ್ವಾದವೆಂದು ಹೇಳಲಾಗುತ್ತದೆ. ಆದರೆ, ಇದೀಗ ರುದ್ರಾಕ್ಷಿ ಧರಿಸುವುದು ಮಾತ್ರವಲ್ಲ ಅದನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದಲೂ ಹತ್ತಾರು ಉಪಯೋಗಗಳಿವೆ ಎಂದು ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ.
ಜ್ಯೋತಿಷಿಯ ಪ್ರಕಾರ, ರುದ್ರಾಕ್ಷಿ ಧಾರಣೆ ಮತ್ತು ರುದ್ರಾಕ್ಷಿ ನೀರನ್ನು ಹೀಗೆ ಬಳಸುವುದರಿಂದ ಮಾನಸಿಕ ಶಾಂತಿ, ನೆಮ್ಮದಿ, ದೇಹದಲ್ಲಿ ಆರೋಗ್ಯ, ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಅವರು ತಿಳಿಸಿಕೊಟ್ಟ ಅಂಶಗಳು ಇಲ್ಲಿವೆ ನೋಡಿ. ರುದ್ರಾಕ್ಷಿಯು ಪವಿತ್ರ ಮತ್ತು ಶಕ್ತಿಯುತವಾದ ನೈಸರ್ಗಿಕ ಅಂಶವಾಗಿದೆ. ನಿರ್ದಿಷ್ಟ ರೀತಿಯ ಮರದಿಂದ ಬರುತ್ತದೆ ಮತ್ತು ವಿವಿಧ ಮುಖಗಳಲ್ಲಿ ಲಭ್ಯವಾಗುತ್ತದೆ. ಪ್ರತಿಯೊಂದು ಮುಖದ ರುದ್ರಾಕ್ಷಿಯು ತನ್ನದೇ ಶಕ್ತಿ ಮತ್ತು ಗುಣಲಕ್ಷಣ ಹೊಂದಿದೆ. ಹೀಗಾಗಿ, ರುದ್ರಾಕ್ಷಿ ಧಾರಣೆಯಿಂದ ಮಾನಸಿಕ ಶಾಂತಿ, ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಧನಾತ್ಮಕ ಶಕ್ತಿ ಹೆಚ್ಚಳ ಆಗುತ್ತದೆ. ಜೊತೆಗೆ, ರುದ್ರಾಕ್ಷಿ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇಲ್ಲಿ 4 ಮತ್ತು 6 ಮುಖಿ ರುದ್ರಾಕ್ಷಿಯಿಂದ ನೀರು ಕುಡಿಯುವುದು ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಪ್ರಯೋಜನಕಾರಿ ಎಂದು ಪಂಡಿತರು ತಿಳಿಸಿದ್ದಾರೆ.
ಇದನ್ನೂ ಓದಿ: ದೆವ್ವಗಳಿಂದ ಪಾರಾಗಲು ಈ ಜಪಮಾಲೆ ಧರಿಸಬೇಕಂತೆ!
ರುದ್ರಾಕ್ಷಿ ನೀರು ಯಾವ ಸಮಸ್ಯೆಗಳಿಗೆ ಪ್ರಯೋಜನಕಾರಿ?
ನಿಯಮಿತ ರುದ್ರಾಕ್ಷಿ ನೆನೆಸಿದ ನೀರಿನ ಸೇವನೆಯಿಂದ ಮಾನಸಿಕ ಒತ್ತಡ ಮತ್ತು ಆತಂಕದಿಂದ ಪರಿಹಾರ.
ನಾಲ್ಕು ಮುಖದ ರುದ್ರಾಕ್ಷಿ ನೀರನ್ನು ಕುಡಿಯುವುದರಿಂದ ಬುದ್ಧಿವಂತಿಕೆ ಮತ್ತು ತಾರ್ಕಿಕ ಶಕ್ತಿ, ಸ್ಮರಣಶಕ್ತಿ ಹೆಚ್ಚಾಗುತ್ತದೆ.
ರುದ್ರಾಕ್ಷಿ ನೀರಿನ ಸೇವನೆಯಿಂದ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ, ಆತ್ಮವಿಶ್ವಾದ ಹೆಚ್ಚಾಗುತ್ತದೆ.
ದೀರ್ಘಕಾಲಿನ ಅನಾರೋಗ್ಯದಿಂದ ಬಳಲುತ್ತಿದ್ದರೂ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ.
ರುದ್ರಾಕ್ಷಿ ನೀರನ್ನು ಕುಡಿಯುವುದರಿಂದ ಕೆಲಸದಲ್ಲಿ ಯಶಸ್ಸು, ಸಕಾರಾತ್ಮಕ ಫಲಿತಾಂಶ ಲಭ್ಯವಾಗುತ್ತದೆ.
ದುಶ್ಚಟ ಹಾಗೂ ನಕರಾತ್ಮಕ ಗುಣಗಳಿದ್ದವರಿಗೆ ರುದ್ರಾಕ್ಷಿ ನೀರನ್ನು ಕುಡಿಸುವುದರಿಂದ ಸುಧಾರಣೆ ಸಾಧ್ಯವಾಗುತ್ತದೆ.
ಪುರಾಣಗಳಲ್ಲಿ ರುದ್ರಾಕ್ಷಿ ಬಗ್ಗೆ ಉಲ್ಲೇಖ: ಹಿಂದೂ ಧರ್ಮದಲ್ಲಿ ಭಾರೀ ಮಾನ್ಯತೆ ನೀಡಲಾಗಿದೆ. ರುದ್ರಾಕ್ಷಿಯನ್ನು ಶಿವನ ಕಣ್ಣೀರಿನ ರೂಪ ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ಅಸುರ ತ್ರಿಪುರನನ್ನು ಕೊಲ್ಲಲು ಮಾನಸಿಕವಾಗಿ ನೊಂದು ಕಣ್ಣೀರಿಟ್ಟಾಗ ಭೂಮಿಯ ಮೇಲೆ ಬಿದ್ದ ಕಣ್ಣೀರಿನ ಹನಿಯಿಂದ ರುದ್ರಾಕ್ಷಿ ವೃಕ್ಷ ಹುಟ್ಟಿದೆ. ಹೀಗಾಗಿ, ರುದ್ರಾಕ್ಷಿ ಹಲವು ಮುಖ, ಆಕಾರ ಹಾಗೂ ಬಣ್ಣಗಳನ್ನು ಹೊಂದಿದೆ. ರುದ್ರಾಕ್ಷಿಗಳು ಕೆಂಪು, ಹಳದಿ, ಬಾದಾಮಿ ಮತ್ತು ಕಂದು ಇತ್ಯಾದಿ ಬಣ್ಣಗಳಿಂದ ಕೂಡಿವೆ. ಇದೀಗ ಮಾರುಕಟ್ಟೆಗಳಲ್ಲಿ ಹಲವು ಬಗೆಯ ರುದ್ರಾಕ್ಷಿ ಮಾರುಕಟ್ಟೆಯಲ್ಲಿ ಲಭ್ಯವುದೆ. ಕೆಲವರು ನಕಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ: ರುದ್ರಾಕ್ಷಿ ಧರಿಸಿದ ನಂತರ ಈ ಕೆಲಸಗಳನ್ನ ಮಾಡಬೇಡಿ? ಧಾರಣೆ ಬಳಿಕ ಪಾಲಿಸಬೇಕಾದ ನಿಯಮಗಳು
ಮಕ್ಕಳ ಮನಸ್ಸು ಅಧ್ಯಯನದಲ್ಲಿ ತೊಡಗದೇ ಹೋದರೆ ಬುಧವಾರ ಗಣೇಶ ರುದ್ರಾಕ್ಷಿಯನ್ನು ಸರಿಯಾಗಿ ಧರಿಸಬೇಕು. ನೆನಪಿನ ಶಕ್ತಿ ಹೆಚ್ಚಳದ ಜೊತೆಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ಇನ್ನು ಬುಧ ಗ್ರಹವನ್ನು ಮಾತು ಮತ್ತು ಬುದ್ಧಿಶಕ್ತಿಯ ಅಂಶವೆಂದು ಹೇಳಲಾಘುತ್ತದೆ. ಬುಧ ದೇವರ ಆಶೀರ್ವಾದಕ್ಕೆ ಗಣೇಶ ರುದ್ರಾಕ್ಷಿ ಧರಿಸಲು ಸಲಹೆ ನೀಡಿದ್ದಾರೆ.
- ಜ್ಯೋತಿಷಿ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ