Sunday born baby names: ಭಾನುವಾರ ಹುಟ್ಟಿದ ಮಗುವಿಗಿಡಿ ಸೂರ್ಯನ ಅಪರೂಪದ ಹೆಸರು

By Suvarna NewsFirst Published Mar 19, 2023, 8:36 AM IST
Highlights

ಭಾನುವಾರ ಹುಟ್ಟಿದ ನಿಮ್ಮ ಮಗುವಿಗೆ ಭಾನುವಾರದ ಅಧಿಪತಿ ಸೂರ್ಯನ ಹೆಸರಿಡುವುದು ಹೆಚ್ಚು ಸೂಕ್ತವಾಗಿದೆ. ನಿಮ್ಮ ಮಗುವಿಗೆ ಪರಿಗಣಿಸಬಹುದಾದ ಸೂರ್ಯನಿಂದ ಪ್ರೇರಿತವಾದ ಹೆಸರುಗಳು ಇಲ್ಲಿವೆ.

ಸೂರ್ಯನು ಕಣ್ಣಿಗೆ ಕಾಣುವ ಏಕೈಕ ದೇವರು. ಆತನಿಂದಲೇ ಈ ಭೂಮಿಯ ಸಕಲವೂ ನಡೆಯುತ್ತಿದೆ. ಭಾನು ಎಂದರೆ ಸೂರ್ಯ. ಭಾನುವಾರ ಸೂರ್ಯನಿಗೆ ಮೀಸಲಾಗಿದೆ. ಜಗತ್ತನ್ನಾಳುವ ಸೂರ್ಯನಿಗೆ ಸಾವಿರಾರು ಹೆಸರುಗಳಿವೆ. ವೇದಗಳು, ರಾಮಾಯಣ, ಮಹಾಭಾರತ ಎಲ್ಲದರಲ್ಲೂ, ಸೂರ್ಯ ಸಹಸ್ರನಾಮ ಸ್ತೋತ್ರ, ಸೂರ್ಯ ಅಷ್ಟಾಕಂ, ಆದಿತ್ಯ ಹೃದಯ ಸ್ತೋತ್ರ ಮುಂತಾದವುಗದಳಲ್ಲಿ ಸೂರ್ಯನ ಅಸಂಖ್ಯ ಹೆಸರುಗಳ ಉಲ್ಲೇಖವಿದೆ. ಸೂರ್ಯ ಎಂದರೆ ಶಕ್ತಿ, ಸಕರಾತ್ಮಕತೆ, ಆರೋಗ್ಯ, ತಂದೆಯ ಸ್ಥಾನದವನು.. ಹಾಗಾಗಿಯೇ ನಾವು ಅವನನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ಆತನ ಹೆಸರಲ್ಲಿ ಹಲವಾರು ಹಬ್ಬಗಳನ್ನೂ ಆಚರಿಸುತ್ತೇವೆ. ಭೂಮಿ ಮೇಲೆ ಕಾಲ ಬದಲಾಗಲು ಕೂಡಾ ಸೂರ್ಯನೇ ಕಾರಣ. ಆತನೆಂದರೆ ನಾವು ಮಾತ್ರವಲ್ಲ, ಪ್ರಕೃತಿಯೂ ನಲಿದಾಡುತ್ತದೆ, ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಇಂಥ ಸೂರ್ಯನು 9 ಗ್ರಹಗಳಲ್ಲಿಯೂ ನಾಯಕನ ಸ್ಥಾನ ಪಡೆದಿದ್ದಾನೆ. ಜನರು ತಮ್ಮ ದೋಷ ನಿವಾರಣೆಗಾಗಿಯೂ ಸೂರ್ಯನನ್ನು ಪೂಜಿಸುತ್ತಾರೆ. 

ಇಂಥ ಸೂರ್ಯನ ಹೆಸರನ್ನು ಭಾನುವಾರ ಜನಿಸಿದ ಮಕ್ಕಳಿಗೆ ಇಡುವುದು ಸೂಕ್ತವಾಗಿದೆ. ಇದರಿಂದ ಸೂರ್ಯನ ಆಶೀರ್ವಾದವೂ ನಿಮ್ಮ ಮಗು ಮೇಲೆ ಸದಾ ಇರುತ್ತದೆ. ನಿಮ್ಮ ಮಗು ಭಾನುವಾರ ಜನಿಸಿದ್ದರೆ, ಮಗುವಿಗೆ ಸೂರ್ಯನ ಯಾವೆಲ್ಲ ಹೆಸರುಗಳನ್ನು ಇಡಬಹುದೆಂಬ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. 

Weekly Love Horoscope: ವೃಷಭಕ್ಕೆ ಸಂಗಾತಿಯೆಡೆ ಹೆಚ್ಚುವ ಆಕರ್ಷಣೆ

ಸೂರ್ಯನ ಹೆಸರುಗಳು ಮತ್ತು ಅರ್ಥ

ಅಭ್ಯುದಿತ್: ಉದಯಿಸುವ ಸೂರ್ಯ, ಮಗುವು ಉದಯಿಸುವ ಸೂರ್ಯನಂತೆ ಬೆಳಕನ್ನು ಹಿಗ್ಗಿಸಿಕೊಳ್ಳುತ್ತಾ ಹೋಗಲಿ ಎಂಬ ಆಶಯದಿಂದ ಇಡಬಹುದಾದ ಚೆಂದದ ಹೆಸರು.
ಆದಿತ್ಯ: ಸೂರ್ಯ
ಆಹಾನ್: ಸೂರ್ಯನು ದಾಟುತ್ತಿರುವ ಆಕಾಶ 
ಆರುಷ್: ಸೂರ್ಯ
ಆದಿದೇವ: ಸೂರ್ಯ; ಸರ್ವೋಚ್ಚ ದೇವರು
ಅಂಶುಲ್: ಬೆಳಕು, ಮನೆಯ ಬೆಳಕಾಗಿ ಸಮಾಜದ ಬೆಳಕಾಗಿ ಮಗು ಪ್ರಜ್ವಲಿಸಲಿ ಎಂಬ ಆಶಯದ ಹೆಸರು.
ಅಂಶುಮಾನ್: ಸೂರ್ಯ; ಚಂದ್ರ; ಕಾಂತಿ
ಅರುಣ್: ಬೆಳಗಿನ ಸೂರ್ಯ
ಆರ್ಯಮಾನ್: ಸೂರ್ಯ
ಅವಿರಾಜ: ಸೂರ್ಯನ ರಾಜ
ಅಯಾನ್: ಸೂರ್ಯ
ಭಾನು: ಸೂರ್ಯನ ಪ್ರಖರತೆ
ಭಾಸ್ಕರ್: ಸೂರ್ಯ
ಭುವನ್ಯು: ಸೂರ್ಯ; ಬೆಂಕಿ
ಈಶಾನ್: ಶಿವನ ರೂಪದಲ್ಲಿ ಕಾಣಿಸಿಕೊಳ್ಳುವ ಸೂರ್ಯ
ಗಗಂಧ್ವಜ: ಗಗನಕ್ಕೆ ಧ್ವಜಪ್ರಾಯನಾದವನು, ಆಕಾಶದ ಸಂಕೇತವಾದ ಸೂರ್ಯ
ಹರಿತ್: ಸೂರ್ಯನ ವೇಗದ ಕುದುರೆ
ಜಿಷ್ಣು: ದಿ ಸೂರ್ಯ; ಗೆಲುವು; ವಿಜಯೋತ್ಸವ
ಜ್ಯೋತಿರಾದಿತ್ಯ: ಸೂರ್ಯನ ತೇಜಸ್ಸು
ಕಪಿಲ್: ಸೂರ್ಯನ ಹೆಸರು
ಮಯೂಖಾದಿತ್ಯ: ಸೂರ್ಯನ ಒಂದು ರೂಪ

Hindu Baby Boy Names: ಬುಧವಾರ ಹುಟ್ಟಿದ ಗಂಡು ಮಗುವಿಗಿಡಿ ಗಣೇಶನ ವಿಶೇಷ ಹೆಸರು

ಮಿಹಿರ್ : ಸೂರ್ಯಚಂದ್ರ; ಮೋಡಗಳು
ಪ್ರತ್ಯೂಷ್: ಸೂರ್ಯೋದಯ
ರಶ್ಮಿವತ್: ರಶ್ಮಿಗಳ ಜನಕ, ಸೂರ್ಯ
ರವಿ: ಸೂರ್ಯ
ರವಿತೇಜಸ್: ಸೂರ್ಯನಂಥ ಕಾಂತಿ ಉಳ್ಳವನು
ರೋಹಿತ್: ಸೂರ್ಯ
ಶಾಶ್ವತ್: ಸೂರ್ಯ; ಸ್ವರ್ಗ; ಸೂರ್ಯನಂತೆ ಶಾಶ್ವತವಾದ
ಸೂರಜ್: ಸೂರ್ಯ
ಸೂರ್ಯ: ಒಂದು ಸೌರ ದೇವತೆ
ಆರುಣ್ಯ: ಅರುಣ್ಯ ಎಂದರೆ ಸಂಸ್ಕೃತದಲ್ಲಿ ಕೆಂಪು ಬಣ್ಣ. 
ಆರುಷ್: ಇದು ಟ್ರೆಂಡಿ ಹೆಸರು ಎಂದರೆ ಸೂರ್ಯನ ಮೊದಲ ಕಿರಣ ಅಥವಾ ಉತ್ತಮ ಸ್ವಭಾವದ ವ್ಯಕ್ತಿ ಅಥವಾ ಶಾಂತ ವ್ಯಕ್ತಿ.
ತರ್ಶ್: ಈ ಪದವು ತೃಷ್ಣ ಎಂಬ ಪದದಿಂದ ಬಂದಿದೆ, ಇದರರ್ಥ ಬಾಯಾರಿಕೆ ಅಥವಾ ಬಯಕೆ. ಸಂಸ್ಕೃತದಲ್ಲಿ, ಹೆಸರು ಸೂರ್ಯನನ್ನು ಸೂಚಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!