ಸುಮ್ ಸುಮ್ಮನೆ ಭಯ ಆಗುತ್ತಿದ್ಯಾ? ಈ ಗ್ರಹ ಗತಿಗಳೇ ಆಗಿರಬಹುದು ಕಾರಣ

By Suvarna NewsFirst Published Nov 23, 2022, 1:29 PM IST
Highlights

ಅಪರೂಪಕ್ಕೆ ಭಯ ಕಾಡೋದು ಸಾಮಾನ್ಯ ಸಂಗತಿ. ಆದ್ರೆ ಪ್ರತಿ ದಿನ, ಪ್ರತಿ ವಿಷ್ಯಕ್ಕೂ ಅಜ್ಞಾತ ಭಯ ಕಾಡಿದ್ರೆ ಅದು ಸಮಸ್ಯೆಯೇ ಸರಿ. ಅದ್ರಿಂದ ಹೊರ ಬರುವುದು ಬಹಳ ಮುಖ್ಯವಾಗುತ್ತದೆ. ವೈದ್ಯರ ಚಿಕಿತ್ಸೆ ಜೊತೆ ಗ್ರಹ ಬಲ ಇದಕ್ಕೆ ಅಗತ್ಯ.
 

ಯಾರಿಗೆ ಭಯವಿಲ್ಲ ಹೇಳಿ?. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷ್ಯಕ್ಕೆ ಭಯಪಟ್ಟುಕೊಳ್ತಾರೆ. ಆದ್ರೆ ಈ ಹೆದರಿಕೆ ವಿಪರೀತವಾದ್ರೆ ತೊಂದರೆ ಎದುರಾಗುತ್ತದೆ. ಕೆಲವರು ಅನವಶ್ಯಕ ಭಯಕ್ಕೊಳಗಾಗ್ತಾರೆ. ಅನೇಕ ಬಾರಿ ಈ ಸಮಸ್ಯೆ ವ್ಯಕ್ತಿಯ ದೈನಂದಿನ ಜೀವನದ ಮೇಲೂ ಪರಿಣಾಮ ಬೀರುತ್ತದೆ. ವ್ಯಕ್ತಿಯ ಜೀವನ ಅಸ್ತವ್ಯಸ್ತವಾಗುತ್ತದೆ. ಅಜ್ಞಾತ ಭಯದಿಂದಾಗಿ ವ್ಯಕ್ತಿಯ ಬೆಳವಣಿಗೆ ಕುಂಟಿತವಾಗುತ್ತದೆ.

ನಿಂತಲ್ಲಿ ಕುಳಿತಲ್ಲಿ ಭಯ (Fear) ಕಾಣಿಸಿಕೊಂಡಾಗ, ದಿನದ ಕೆಲಸ ಮಾಡಲೂ ಸಾಧ್ಯವಾಗ್ತಿಲ್ಲ ಎಂದಾಗ ವೈದ್ಯ (Doctor) ರ ಬಳಿ ತೋರಿಸುವುದು ಸೂಕ್ತ. ಇದ್ರ ಜೊತೆ ಕೆಲವೊಮ್ಮೆ ಗ್ರಹಗಳ ಅಶುಭ ಪರಿಣಾಮಗಳಿಂದ ಅಜ್ಞಾತ ಭಯ ವ್ಯಕ್ತಿಯನ್ನು ಕಾಡತೊಡಗುತ್ತದೆ. ಯಾವ ಗ್ರಹ (Planet) ದ ಕಾರಣದಿಂದಾಗಿ ಭಯ ಮತ್ತು ಭ್ರಮೆಯನ್ನು ಎದುರಿಸಬೇಕಾಗುತ್ತದೆ ಹಾಗೆ ಅದನ್ನು ತೊಡೆದು ಹಾಕುವುದು ಹೇಗೆ ಎಂಬುದನ್ನು ನಾವಿಂದು ಹೇಳ್ತೆವೆ.

ಅಜ್ಞಾತ ಭಯಕ್ಕೆ ಕಾರಣ ಯಾರು ? : 
ಚಂದ್ರ (Moon) ನಿಂದ ಕಾಡುತ್ತೆ ಭಯ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಜ್ಞಾತ ಭಯಕ್ಕೆ ಕಾರಣ ಚಂದ್ರ. ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಭ್ರಮೆ ಮತ್ತು ಭಯವು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಚಂದ್ರನು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದಾಗ ಮನಸ್ಸಿನ ಗೊಂದಲವು ಭ್ರಮೆ ಮತ್ತು ಭಯದಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರನು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾನೆ. ಚಂದ್ರನ ಮಹಾದಶಾ ನಡೆಯುತ್ತಿದ್ದರೆ ಅಥವಾ ಆತ ದುರ್ಬಲನಾಗಿದ್ದಾಗ ಸಮಸ್ಯೆ ಹೆಚ್ಚು. 
ಚಂದ್ರನ ಮೇಲೆ ಶನಿಯ ಪ್ರಭಾವವಿದ್ದರೆ ಅಥವಾ ಚಂದ್ರ ಮತ್ತು ಕೇತುಗಳ ನಡುವೆ ಸಂಬಂಧವಿದ್ದರೆ ಕೂಡ ಮನಸ್ಸಿನಲ್ಲಿ ಭಯ ಮತ್ತು ಗೊಂದಲ ಕಾಡುತ್ತದೆ. 

ಭಯಕ್ಕೆ ಕಾರಣ ರಾಹು : ಚಂದ್ರನ ಜೊತೆ ರಾಹು ಗ್ರಹವೂ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹುವಿನ ದಶಾ ಸರಿಯಿಲ್ಲದಿದ್ದರೆ, ವ್ಯಕ್ತಿಯು ಭಯ, ಉದ್ವೇಗ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಚಂದ್ರ ಮತ್ತು ರಾಹು ಗ್ರಹದ ಸ್ಥಾನವು ಮನಸ್ಸಿನಲ್ಲಿ ವಿಚಿತ್ರ ಗೊಂದಲವನ್ನು ಸೃಷ್ಟಿಸುತ್ತದೆ. ಇದಲ್ಲದೆ ನಮ್ಮ ಜನನದ ಸಮಯ ಕೂಡ ಇಲ್ಲಿ ಮುಖ್ಯವಾಗುತ್ತದೆ.  ಸಾಯಂಕಾಲ ಹುಟ್ಟಿದವರಿಗೆ ಉಳಿದವರಿಗಿಂತ ಹೆಚ್ಚು ಭಯ ಮತ್ತು ಭ್ರಮೆಯ ಸಮಸ್ಯೆ ಕಾಡುತ್ತದೆ ಎಂದು ನಂಬಲಾಗಿದೆ.

Astrology Tips : ಮದುವೆಗೆ ಮುನ್ನ ಈ ಕೆಲಸ ಮಾಡಿದ್ರೆ ಕಾಡಲ್ಲ ಸಮಸ್ಯೆ

ಅಜ್ಞಾತ ಭಯಕ್ಕೆ ಇಲ್ಲಿದೆ ಪರಿಹಾರ : 
1. ಸೂರ್ಯನಿಗೆ ಜಲ ಅರ್ಪಣೆ : ಮುಂಜಾನೆ ಎದ್ದು ನಿತ್ಯ ಕರ್ಮವನ್ನು ಮುಗಿಸಿ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು. ಹೀಗೆ ಮಾಡಿದ್ರೆ ಭಯ ಕಡಿಮೆಯಾಗುತ್ತದೆ. ಸೂರ್ಯ ದೇವರ ಆರಾಧನೆಯಿಂದ ಶುಭ ಫಲಿತಾಂಶ ಸಿಗುತ್ತದೆ.   
2. ಶಿವನ ಪೂಜೆ : ಜಾತಕದಲ್ಲಿ ಚಂದ್ರ ಬಲ ಪಡೆಯುವುದು ಬಹಳ ಮುಖ್ಯ. ಜಾತಕದಲ್ಲಿ ಚಂದ್ರನ ಸ್ಥಾನ ದುರ್ಬಲವಾಗಿರುವವರು  ಸೋಮವಾರದಂದು ಶಿವನನ್ನು ಪೂಜಿಸಬೇಕು. ಸೋಮವಾರ ಶಿವನ ಪೂಜೆ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ.
3. ಭಯ ದೂರ ಮಾಡುತ್ತೆ ನೆಲ್ಲಿಕಾಯಿ ಬೇರು : ನಿತ್ಯ ಜೀವನವನ್ನು ಭಯ ಹಾಳು ಮಾಡ್ತಿದೆ ಎಂದಾದ್ರೆ ನೀವು ಭಯವನ್ನು ಹೋಗಲಾಡಿಸಲು ಆಶ್ಲೇಷ ನಕ್ಷತ್ರದಂದು ಬಲಗೈಗೆ, ನೆಲ್ಲಿಕಾಯಿ ಗಿಡದ ಬೇರನ್ನು ಧರಿಸಬೇಕು. ಇದು ಪ್ರಯೋಜನಕಾರಿ ಪರಿಹಾರವಾಗಿದೆ. ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವ ಎಲ್ಲಾ ಭಯಗಳು ದೂರವಾಗುತ್ತವೆ.
4. ಆಹಾರದ ಬಗ್ಗೆ ಇರಲಿ ಗಮನ : ನೀವು ಸೇವನೆ ಮಾಡುವ ಆಹಾರ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಹೆಚ್ಚು ಭಯ, ಆತಂಕ ಎನ್ನುವವರು ಮಾಂಸಾಹಾರ, ಅಮಲು ಪದಾರ್ಥಗಳು ಮತ್ತು ಅತಿಯಾದ ಎಣ್ಣೆ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.
5. ಉಪವಾಸ ಮಾಡಿ : ಆತಂಕವಿದೆ ಎನ್ನುವವರು ಪ್ರತಿ ತಿಂಗಳ ಎರಡೂ ಏಕಾದಶಿಯಂದು ಉಪವಾಸ ವೃತ ಮಾಡಬೇಕು.

ಪ್ರಯಾಣ ಪ್ರಾರಂಭಿಸುವ ಮೊದಲು ಜ್ಯೋತಿಷ್ಯ ಶಾಸ್ತ್ರದ ಈ ವಿಷಯ ನೆನಪಿಡಿ

6. ಹನುಮಂತನ ಸ್ಮರಣೆ : ಹನುಮಾನ್ ಚಾಲೀಸಾವನ್ನು ಪ್ರತಿ ದಿನ ಪಠಿಸುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿರುವ ಭಯ ಕಡಿಮೆಯಾಗುತ್ತದೆ. 

click me!