ಹುಡುಗಿಯರಂತೂ ತಮ್ಮ ಹುಡುಗ ಹೀಗೇ ಇರಬೇಕು ಅಂತ ಫಿಕ್ಸ್ ಮಾಡಿಕೊಂಡು ಬಿಟ್ಟಿರುತ್ತಾರೆ. ಅಂತಹವರ ಜೊತೆಯಲ್ಲಿಯೇ ಲವ್ವಿಗೆ ಬೀಳುತ್ತಾರೆ. ಅವರ ಜೊತೆಯಲ್ಲಿಯೇ ಜೀವನ ಕಳೆಯಲು ಬಯಸುತ್ತಾರೆ. ಹಾಗಿದ್ದರೆ ಯಾವ ಜನ್ಮರಾಶಿಗೆ ಎಂಥ ಹುಡುಗನ ಮೇಲೆ ಕಣ್ಣು? ನಿಮ್ಮ ಗೆಳತಿಯ ಜನ್ಮರಾಶಿಗೂ ನಿಮ್ಮ ಸ್ವಭಾವಕ್ಕೂ ತಾಳಮೇಳ ಇದೆಯಾ? ಇಲ್ಲಿ ಚೆಕ್ ಮಾಡಿಕೊಳ್ಳಬಹುದಲ್ವೇ?
ಭಾರತೀಯ ಜ್ಯೋತಿಷ್ಯದ (Astrology) ಪ್ರಕಾರದ ಯಾವುದೇ ಜನ್ಮರಾಶಿಯವರಿಗೆ (zodiac) ಅವರದ್ದೇ ಆದ ಗುಣಗಳಿರುತ್ತವೆ. ಹಾಗೆಯೇ ತಮ್ಮ ಸಂಗಾತಿ ಹೇಗಿರಬೇಕು ಎಂಬುದರ ಬಗ್ಗೆ ಆಸೆ, ನಿರೀಕ್ಷೆಗಳಿರುತ್ತವೆ. ಇನ್ನು ಹುಡುಗಿಯರಂತೂ ತಮ್ಮ ಹುಡುಗ ಹೀಗೇ ಇರಬೇಕು ಅಂತ ಫಿಕ್ಸ್ ಮಾಡಿಕೊಂಡುಬಿಟ್ಟಿರುತ್ತಾರೆ. ಅಂತಹವರ ಜೊತೆಯಲ್ಲಿಯೇ ಲವ್ವಿಗೆ ಬೀಳುತ್ತಾರೆ. ಅವರ ಜೊತೆಯಲ್ಲಿಯೇ ಜೀವನ ಕಳೆಯಲು ಬಯಸುತ್ತಾರೆ. ಹಾಗಿದ್ದರೆ ಯಾವ ಜನ್ಮರಾಶಿಗೆ ಎಂಥ ಹುಡುಗನ ಮೇಲೆ ಕಣ್ಣು? ನಿಮ್ಮ ಗೆಳತಿಯ ಜನ್ಮರಾಶಿಗೂ ನಿಮ್ಮ ಸ್ವಭಾವಕ್ಕೂ ತಾಳಮೇಳ ಇದೆಯಾ? ಇಲ್ಲಿ ಚೆಕ್ ಮಾಡಿಕೊಳ್ಳಬಹುದಲ್ವೇ?
ಮೇಷ ರಾಶಿ (Aries)
ಮೇಷ ರಾಶಿಯ ಹುಡುಗಿಯರು ತುಂಬಾ ಉತ್ಸಾಹಿಗಳು. ತಮ್ಮ ಜೀವನದ ಪ್ರತಿ ನಿರ್ಧಾರಗಳ ಬಗ್ಗೆ ಗಂಭೀರವಾಗಿರುತ್ತಾರೆ. ಪ್ರತಿಯೊಂದು ಸಂಬಂಧಕ್ಕೂ ಬೆಲೆ ಕೊಡುತ್ತಾರೆ. ಸಮಯ ಹಾಳು ಮಾಡುವುದಿಲ್ಲ. ಹೀಗಾಗಿ ತಮಗೆ ಸಮಯ ಕೊಡುವ, ತಮ್ಮ ಸಂಬಂಧಕ್ಕೆ ಬೆಲೆ ಕೊಡುವ, ತಮ್ಮ ಜೀವನದ ನಿರ್ಧಾರಗಳ ಬಗ್ಗೆ ಗೌರವ ಇಟ್ಟುಕೊಂಡಿರುವ, ಉತ್ಸಾಹಿಗಳಾಗಿರುವ ಹುಡುಗರನ್ನು ಇಷ್ಟಪಡುತ್ತಾರೆ.
ವೃಷಭ ರಾಶಿ (Taurus)
ಇವರು ಮುಂದಿನ ಜೀವನದ ಬಗ್ಗೆ ಆಳವಾದ ಯೋಚನೆಯನ್ನು ಮಾಡುತ್ತಾರೆ. ಹೀಗಾಗಿ ಒಳ್ಳೆಯ ಕೆಲಸದಲ್ಲಿರುವ, ಉತ್ತಮ ಆದಾಯ ಹೊಂದಿರುವ ಅಥವಾ ಶ್ರೀಮಂತ ಹುಡುಗರನ್ನು ಬಲೆಗೆ ಹಾಕಿಕೊಳ್ಳಲು ನೋಡುತ್ತಾರೆ. ಅಥವಾ ಚೆನ್ನಾದ ಪ್ರತಿಭೆಯನ್ನು ಹೊಂದಿರುವ, ಭವಿಷ್ಯದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರಬಹುದು ಎಂಬ ಭರವಸೆ ಹೊಂದಿರುವ ಹುಡುಗರನ್ನು ಹುಡುಕಿಕೊಳ್ಳುತ್ತಾರೆ.
ಮಿಥುನ ರಾಶಿ (Gemini)
ಮಿಥುನ ರಾಶಿಯ ಹುಡುಗಿಯರು ತುಂಬಾ ಆಕರ್ಷಕ ಮತ್ತು ಆಕ್ಟಿವ್ ಆಗಿರುತ್ತಾರೆ. ಇವರು ಹಾಸ್ಯಪ್ರಜ್ಞೆ ಹೊಂದಿರುವ ಹುಡುಗರನ್ನು ಇಷ್ಟಪಡುತ್ತಾರೆ. ಆರ್ಥಿಕವಾಗಿಯೂ ಇವರು ಅದೃಷ್ಟವಂತರಾಗಿರುತ್ತಾರೆ. ಹೀಗಾಗಿ ಬಡ ಹುಡುಗರನ್ನು ಪ್ರೇಮಿಸಲು ಹಿಂಜರಿಯುವುದಿಲ್ಲ. ಬಡವನನ್ನು ಶ್ರೀಮಂತೆ ಮದುವೆಯಾದರೆ ಆತ ಖಂಡಿತವಾಗಿಯೂ ಜೀವನದಲ್ಲಿ ಮೇಲೆ ಬರುತ್ತಾನೆ.
ಕಟಕ ರಾಶಿ (cancer)
ಈ ರಾಶಿಯ ಹುಡುಗಿಯರು ತುಂಬಾ ಶಾಂತ ಸ್ವಭಾವದ ಮತ್ತು ಗಂಭೀರವಾದ ಹುಡುಗರನ್ನು ಇಷ್ಪಪಡುತ್ತಾರೆ. ತಮ್ಮ ಶಿಸ್ತು ಮತ್ತು ಶಾಂತ ಸ್ವಭಾವದಿಂದಲೇ ಎಲ್ಲರನ್ನು ಆಕರ್ಷಿಸುವ, ನಾಯಕತ್ವ ಗುಣಗಳನ್ನು ಹೊಂದಿರುವ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಹುಡುಗರನ್ನು ಮೆಚ್ಚಿಕೊಳ್ಳುತ್ತಾರೆ.
ಸಿಂಹ ರಾಶಿ (Leo)
ಸಿಂಹ ರಾಶಿಯ ಹುಡುಗಿಯರು ಬಲಿಷ್ಠ ವ್ಯಕ್ತಿತ್ವ ಹೊಂದಿರುವ, ಆಕರ್ಷಕವಾದ, ಪರಿಶ್ರಮಿಯಾದ, ಚೆನ್ನಾಗಿ ದುಡಿಯುವ ದೇಹಶಕ್ತಿ ಹೊದಿರುವ ಹುಡುಗರನ್ನು ಬಯಸುತ್ತಾರೆ. ಇವರಿಗೆ ತಮ್ಮ ಹುಡುಗ ಸ್ವಲ್ಪ ಒರಟನಾಗಿದ್ದರೂ ಪರವಾಗಿಲ್ಲ, ಮ್ಯಾನ್ಲಿಯಾಗಿರಬೇಕು ಎಂದುಕೊಳ್ಳುತ್ತಾರೆ. ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಇಷ್ಟಪಡುತ್ತಾರೆ.
ಕನ್ಯಾ ರಾಶಿ (virgo)
ಈ ಹುಡುಗಿಯ ಆತ್ಮೀಯರ ವಲಯಕ್ಕೆ ಕೆಲವರಿಗಷ್ಟೇ ಪ್ರವೇಶವಿರುತ್ತದೆ. ಒಮ್ಮೆ ಇವರ ಒಲವು ಗಳಿಸಿದರೆ ಮತ್ತೆಂದೂ ಯಾವುದೇ ಪರಿಸ್ಥಿತಿಯಲ್ಲೂ ಅಂಥವರನ್ನು ಇವರು ಬಿಟ್ಟು ಕೊಡೋದಿಲ್ಲ. ಇವರು ಬುದ್ಧಿವಂತಿಕೆ ಹಾಗೂ ಆಧುನಿಕ ಮನೋಭಾವದ ಪ್ರತಿಭೆಯನ್ನು ಪ್ರದರ್ಶಿಸುವ, ತನಗೆ ಸಮಾನತೆಯನ್ನು ಕಲ್ಪಿಸುವ, ತನ್ನ ನಿಲುವ ಸ್ವೀಕರಿಸುವ ವ್ಯಕ್ತಿಯನ್ನು ಹೊಂದುವ ಬಯಕೆ ಹೊಂದಿರುತ್ತಾರೆ.
ತುಲಾ ರಾಶಿ (Libra)
ಸೌಂದರ್ಯದತ್ತ ಹೆಚ್ಚಾಗಿ ಆಕರ್ಷಿತರಾಗುತ್ತಾರೆ ಇವರು. ತಮ್ಮ ಹುಡುಗ ಚೆಲುವಾಂತ ಚೆನ್ನಿಗ ಆಗಿರಬೇಕು ಎಂಬುದು ಇವರಿಚ್ಛೆ. ತಮ್ಮ ಗೆಳತಿಯರಿಗೆ, ಹಿತಶತ್ರುಗಳಿಗೆ ಸಿಗದ ಸೌಭಾಗ್ಯ ತಮ್ಮದಾಗಲಿ ಎಂಬ ಎಣಿಕೆ. ಕಾಲೇಜಿನಲ್ಲಿ ಸುಂದರ ಹುಡುಗರ ಹಿಂದೆ ಬಿದ್ದಿರುವ ಹುಡುಗಿಯರಲ್ಲಿ ಹೆಚ್ಚಿನವರು ಈ ರಾಶಿಯವರಾಗಿರುತ್ತಾರೆ. ಸೌಂದರ್ಯದ ಜತೆಗೆ ಬುದ್ಧಿಯನ್ನು ಬಯಸುವುದು ಕಡಿಮೆ.
ವೃಶ್ಚಿಕ ರಾಶಿ (Scorpio)
ಇವರು ಹೊರನೋಟವನ್ನೇ ನಿಜವಾದ ಸ್ವಭಾವ ಎಂದುಕೊಳ್ಳುವವರು. ಹೀಗಾಗಿ ಸುಮ್ಮನೇ ಫ್ಲರ್ಟಿಂಗ್ ಮಾಡುವವರನ್ನೂ ತಮ್ಮ ಜೀವನ ಸಂಗಾತಿಯಾಗಬಲ್ಲ ಎಂದುಕೊಂಡು ಮೋಸಹೋಗುತ್ತಾರೆ. ಮೊಗದಲ್ಲಿನ ಸುಂದರ ನಗು, ಹೃದಯಕ್ಕೆ ನಾಟಬಲ್ಲ ನೋಟ, ಒಳ್ಳೆಯ ನಾಲ್ಕು ಮಾತುಗಳು ಇವರನ್ನು ಥಟ್ಟನೆ ಸೆಳೆಯುತ್ತವೆ. ಒಮ್ಮೆ ಮೋಸ ಹೋದರೂ ಪಾಠ ಕಲಿಯುವುದಿಲ್ಲ.
ಧನು ರಾಶಿ (Sagittarius)
ವಿನೋದಪ್ರಿಯರು ಹಾಗೂ ಸಾಹಸಿಗಳನ್ನು ತಮ್ಮ ಬಾಳ ಸಂಗಾತಿಯಾಗಲು ಆಯ್ದುಕೊಳ್ಳುತ್ತಾರೆ. ತಮ್ಮ ಹಾಸ್ಯ ಚಟಾಕಿಗಳಿಂದಲೇ ಎದುರಿಗಿರುವ ವ್ಯಕ್ತಿಯ ಮನಸ್ಸು ಗೆಲ್ಲುವವರನ್ನು, ಆಕರ್ಷಕ ಜೀವನಶೈಲಿ ಹಾಗೂ ಉತ್ಸಾಹಭರಿತ ಮಾತುಗಳನ್ನು ಹೊಂದಿರುವವರನ್ನು, ಇತರರನ್ನು ಮಾತಿನ ಮೂಲಕ ಪ್ರಭಾವಿಸಬಲ್ಲವರನ್ನು ಸಂಗಾತಿಯಾಗಿ ಅಪ್ಪಿಕೊಳ್ಳುತ್ತಾರೆ.
zodiacs in bed: ಹಾಸಿಗೆಯಲ್ಲಿ ಯಾವ ರಾಶಿಯವರು ಹೇಗೆ ವರ್ತಿಸುತ್ತಾರೆ ತಿಳ್ಕೊಳೋ ಕುತೂಹಲನಾ?
ಮಕರ ರಾಶಿ (Capricorn)
ಈ ರಾಶಿಯವರು ತುಂಬಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಹೀಗಾಗಿ ತಮ್ಮ ಗುಣಗಳೇನು, ಅದಕ್ಕೆ ಈ ಹುಡುಗ ಸೂಟ್ ಆಗ್ತಾನಾ, ಇವನಿಗೆ ನನ್ನನ್ನು ಬಾಳಿಸುವ ಸಾಮರ್ಥ್ಯ ಇದೆಯಾ, ಇವನು ಚೆಲ್ಲುಚೆಲ್ಲಾದವನಾ ಅಥವಾ ದಾಂಪತ್ಯವನ್ನು ಸೀರಿಯಸ್ಸಾಗಿ ಪರಿಗಣಿಸುವವನಾ, ಇವೇ ಮುಂತಾದ ಅಂಶಗಳನ್ನು ಒಬ್ಬ ಹುಡುಗನಲ್ಲಿ ಪರಿಗಣಿಸಿ, ಅದನ್ನು ಒರೆಗೆ ಹಚ್ಚಿ ಪರೀಕ್ಷಿಸಿಯೇ ಅಂತಹವರನ್ನು ಒಪ್ಪಿಕೊಳ್ಳುತ್ತಾರೆ.
ಕುಂಭ ರಾಶಿ (Aquarius)
ಇವರು ಕಲೆಗೆ ಒಲಿಯುವವರು, ಕಲಾವಿದರನ್ನು ಕಲಾತ್ಮಕ ಸ್ವಭಾವದ ವ್ಯಕ್ತಿಗಳನ್ನು, ಸೃಜನಶೀಲ ಸ್ವಭಾವದವರನ್ನು ಹೆಚ್ಚಾಗಿ ಒಲಿಯುತ್ತಾರೆ. ಸಂಗೀತಗಾರರು, ಚಿತ್ರಕಲಾವಿದರು, ಸಾಹಿತಿಗಳು ಮುಂತಾದವರ ಸುತ್ತಮುತ್ತ ಇಂಥ ಹುಡುಗಿಯರ ಸಂತೆ ನೆರೆದಿರುತ್ತದೆ. ಹೊಸ ಬಗೆಯಲ್ಲಿ ಲೋಕವನ್ನು ತೋರಿಸುವವರು, ಇದ್ದಲ್ಲಿಯೇ ಭಾವುಕ ಮ್ಯಾಜಿಕ್ ಮಾಡುವವರಿ ಇವರಿಗೆ ಇಷ್ಟ.
ಮೀನ ರಾಶಿ (Pisces)
ಮೀನ ರಾಶಿಯ ಹುಡುಗಿಯರು ತುಂಬಾ ಸೂಕ್ಷ್ಮ ಸ್ವಭಾವದವರು. ಹೀಗಾಗಿ ಆಪ್ತರ ಸಂಕಷ್ಟದಲ್ಲಿ ಭಾಗಿಯಾಗುವ, ಇತರರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ, ಬಳಗದಲ್ಲಿ ಯಾರನ್ನೂ ಬಿಟ್ಟು ಕೊಡದ, ಯಾವಾಗಲೂ ಇತರರಿಗೆ ಒಳಿತನ್ನು ಬಯಸುವಂಥ ಹುಡುಗರನ್ನು ಇಷ್ಟಪಡುತ್ತಾರೆ. ಸಹನೆ ಹಾಗೂ ತಾಳ್ಮೆಯಿಂದ ಅಂಥವರಿಗಾಗಿ ಕಾಯುತ್ತಾರೆ.
ಸಂಪತ್ತನ್ನು ಆಕರ್ಷಿಸುವಲ್ಲಿ ಈ 5 ರತ್ನಗಳು ಬೆಸ್ಟ್, ಆದರೆ, ನಿಮ್ಮ ರಾಶಿಗಿದು ಹೊಂದುತ್ತದೆಯೇ ತಿಳಿಯಿರಿ..