ಲಕ್ಷ್ಮಿದೇವಿಯ 18 ಮಕ್ಕಳ ಹೆಸರನ್ನು ಪಠಿಸಿದರೆ ನಿಲ್ಲುತ್ತೆ ಗರ್ಭ?!

By Suvarna News  |  First Published Dec 7, 2023, 12:45 PM IST

ಲಕ್ಷ್ಮಿ ಮಾತೆಗೂ (goddess Laxmi) 18 ಪುತ್ರರು ಇದ್ದಾರೆ ಎಂದು ನಿಮಗೆ ತಿಳಿದಿದೆಯೇ? ಇವರ ನಾಮ ಪಠಣ ಮಾಡುವುದರಿಂದ ಏನು ಲಾಭ ಎಂಬುದನ್ನೂ ಇಲ್ಲಿ ತಿಳಿಯಿರಿ.


ಸಿರಿಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯನ್ನು (Goddess Laxmi Devi) ನಾನಾ ರೂಪದಲ್ಲಿ ಎಲ್ಲರೂ ಪೂಜಿಸುತ್ತಾರೆ. ಹಿಂದೂಗಳಿಗಂತೂ ಈಕೆ ಎರಡನೇ ಮಾತೆಯೇ ಸರಿ. ಅಷ್ಟೊಂದು ಜನಪ್ರಿಯೆ. ಮೊನ್ನೆ ದೀಪಾವಳಿ ಸಂದರ್ಭದಲ್ಲಿ ಈಕೆಯನ್ನು ಎಲ್ಲರೂ ವ್ಯಾಪಕವಾಗಿ ಪೂಜಿಸಿದರು. ಇಂಥ ಲಕ್ಷ್ಮಿ ಮಾತೆಗೂ 18 ಪುತ್ರರು ಇದ್ದಾರೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಇಲ್ಲಿ ಓದಿ. ಇವರ ನಾಮ ಪಠಣ ಮಾಡುವುದರಿಂದ ಏನು ಲಾಭ ಎಂಬುದನ್ನೂ ಇಲ್ಲಿ ತಿಳಿಯಿರಿ.

ಲಕ್ಷ್ಮಿಯ 18 ಮಕ್ಕಳ ಹೆಸರು ಮತ್ತು ಅವುಗಳನ್ನು ಜಪಿಸುವ ಕ್ರಮ:

Tap to resize

Latest Videos

ಓಂ ದೇವಸಖಾಯ ನಮಃ
ಓಂ ಚಿಕ್ಲಿತಾಯ ನಮಃ
ಓಂ ಆನಂದಾಯ ನಮಃ
ಓಂ ಕರ್ದಮಾಯ ನಮಃ
ಓಂ ಶ್ರೀಪ್ರದಾಯ ನಮಃ
ಓಂ ಜಾತವೇದಾಯ ನಮಃ
ಓಂ ಅನುರಾಗಾಯ ನಮಃ
ಓಂ ಸಂವಾದಾಯ ನಮಃ
ಓಂ ವಿಜಯಾಯ ನಮಃ
ಓಂ ವಲ್ಲಭಾಯ ನಮಃ
ಓಂ ಮದಾಯ ನಮಃ
ಓಂ ಹರ್ಷಾಯ ನಮಃ
ಓಂ ಬಲಾಯ ನಮಃ
ಓಂ ತೇಜಸೇ ನಮಃ
ಓಂ ದಮಕಾಯ ನಮಃ
ಓಂ ಸಲಿಲಾಯ ನಮಃ
ಓಂ ಗುಲ್ಗುಲಾಯ ನಮಃ
ಓಂ ಕುರುಂತಕಾಯ ನಮಃ

ಈ ಮಕ್ಕಳ ಹಿಂದಿರುವ ಕಥೆ ಹೀಗಿದೆ: ಲೋಕದಲ್ಲಿ ಜಡಾಸುರರು ಎಂಬ ರಾಕ್ಷಸರು ಹುಟ್ಟಿಕೊಂಡು ಉಪಟಳ ಕೊಡತೊಡಗಿದರು. ಇವರು ಜನರಲ್ಲಿದ್ದ ಧನವನ್ನು ಅಪಹರಿಸುವುದಲ್ಲದೆ, ಜನರ ಶಕ್ತಿಯನ್ನೂ ಆತ್ಮವಿಶ್ವಾಸವನ್ನೂ ಕದ್ದು ಅವರನ್ನು ಹಸಿವಿನಿಂದ ಸಾಯುವಂತೆ ಮಾಡುತ್ತಿದ್ದರು. ಇದನ್ನು ಕಂಡು ದೇವತೆಗಳು ವಿಷ್ಣುವಿನಲ್ಲಿಗೆ ಬಂದು ಮೊರೆಯಿಟ್ಟರು. ಆಗ ಮಹಾವಿಷ್ಣು ಲಕ್ಷ್ಮಿಯ ಮುಖ ನೋಡಿದ. ಏನೆಂದು ಕೇಳಲಾಗಿ, ʼʼಇವರನ್ನು ಸಂಹರಿಸಲು ಶಕ್ತಿವಂತನಾದ ಮಗ ಹುಟ್ಟುವಂತೆ ನೀನು ಮನಸ್ಸು ಮಾಡಬೇಕುʼʼ ಎಂದ. ಹಾಗೇ ಆಗಲಿ ಎಂದಳು ಲಕ್ಷ್ಮಿದೇವಿ.

ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು ಎಚ್ಚರ...

ಆಮೇಲೆ ವಿಷ್ಣು- ಲಕ್ಷ್ಮಿಯರ ಮಿಲನದಿಂದ ಲಕ್ಷ್ಮಿದೇವಿಗೆ ಗರ್ಭ ನಿಂತಿತು. ಹೆರಿಗೆಗೆ ತಾನು ತಂದೆ ಸಮುದ್ರರಾಜನಲ್ಲಿಗೆ ಹೋಗುವೆ ಎಂದು ಲಕ್ಷ್ಮಿ ಹೇಳಿದಳು. ಆಗಲಿ ಎಂದು ವಿಷ್ಣು ಕಳುಹಿಸಿಕೊಟ್ಟ. ನವಮಾಸಗಳು ತುಂಬಿದವು. ಹೆರಿಗೆಯಾಯಿತು. ಗಂಡು ಮಗು. ಮೂರು ತಿಂಗಳ ಬಾಣಂತನ ಮುಗಿಸಿ ಮರಳಿ ಬರುವಾಗ ಸಮುದ್ರದ ಮೇಲೆ ಜಡಾಸುರರು ಆಕ್ರಮಿಸಿದರು. ಲಕ್ಷ್ಮಿದೇವಿಯ ಜತೆಗಿದ್ದ ಮಗುವನ್ನು ಅಪಹರಿಸಿದರು. ಲಕ್ಷ್ಮಿ ದುಃಖದಿಂದ ವೈಕುಂಠಕ್ಕೆ ಬಂದಳು. ವಿಷಯ ತಿಳಿದು ಮಹಾವಿಷ್ಣು ಕ್ರೋಧತಪ್ತನಾಗಿ ಜಡಾಸುರರ ಬಳಿ ಯುದ್ಧಕ್ಕೆ ಹೋದ. ಲಕ್ಷ್ಮಿಯ ಮಗನಿಂದಲೇ ಜಡಾಸುರರಿಗೆ ಮರಣ ಎಂಬ ವರವಿತ್ತು. ಹೀಗಾಗಿ ಮಗನನ್ನು ಮೊದಲು ಪಡೆಯಬೇಕಿತ್ತು. ವಿಷ್ಣು ತನ್ನ ಮಾಯೆಯಿಂದ ಹದಿನೇಳು ಮಕ್ಕಳನ್ನು ಸೃಷ್ಟಿಸಿದ. ಅಸುರರು ಗೊಂದಲಗೊಂಡರು. ತಮ್ಮ ಬಳಿ ಇದ್ದ ಲಕ್ಷ್ಮಿಪುತ್ರನನ್ನು ಎದುರಿಗೆ ತಂದು ನಿಲ್ಲಿಸಿದರು. ನಂತರ ಹದಿನೆಂಟೂ ಮಂದಿ ಲಕ್ಷ್ಮಿಪುತ್ರರು ಸೇರಿಕೊಂಡು ಈ ರಾಕ್ಷಸರನ್ನು ಕೊಂದುಹಾಕಿದರು.

ಈ ಕಥೆಯ ಅರ್ಥ ಇಷ್ಟೆ. ಜಡತ್ವ ಎಂಬುದು ಸಂಪತ್ತಿಗೆ ಮಾರಕ. ಸಂಪತ್ತನ್ನು ಗಳಿಸಲು ಹಾಗೂ ಉಳಿಸಿಕೊಳ್ಳಲು ಜಡತ್ವ ತೊರೆದು ಸದಾ ಶ್ರಮಿಸುತ್ತಿರಬೇಕು. ಈ ಮಕ್ಕಳ ಹೆಸರುಗಳನ್ನು ಪಠಿಸುವುದರಿಂದ ಜಾತಕ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಶೇಷವಾಗಿ ಆರ್ಥಿಕ ಸಂಕಷ್ಟಗಳನ್ನು ಉಂಟುಮಾಡುವಲ್ಲಿ ಸಹಾಯವಾಗುತ್ತದೆ ಎಂದು ಭವಿಷ್ಯಕಾರರು ಹೇಳುತ್ತಾರೆ. ಲಕ್ಷ್ಮಿಯ 18 ಪುತ್ರರ ಹೆಸರನ್ನು 21 ಶುಕ್ರವಾರಗಳ ಕಾಲ 7 ಬಾರಿ ಜಪಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದಂತೆ. ಹಣದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದಂತೆ. ಆಸ್ತಿ ಸಮಸ್ಯೆಗಳಿಗೆ, ವ್ಯಾಜ್ಯಗಳಿಗೆ ಪರಿಹಾರ ದೊರೆಯುತ್ತದೆ. ಜಾತಕ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಪರಿಣಾಮಕಾರಿ ಮಂತ್ರವಿದು ಎನ್ನುತ್ತಾರೆ. ಹಾಗೆಯೇ ಮನುಷ್ಯನಲ್ಲಿರುವ ಜಡತ್ವವನ್ನು ಹೋಗಲಾಡಿಸಿ, ಹಣ ಸಂಪಾದಿಸಲು ಪ್ರೇರಣೆಯನ್ನು ಹಾಗೂ ಶಕ್ತಿಯನ್ನು ಈ ಮಂತ್ರ ನೀಡುತ್ತದೆ.

ಈ ಜನರ ಜೀವನದಲ್ಲಿ ಬರೀ ಅಲ್ಲೋಲ ಕಲ್ಲೋಲ ಎಂದಿಗೂ ಹಣ ನಿಲಲ್ಲ ಯಾಕೆ ಗೊತ್ತಾ..?
 

click me!