ಕರ್ಕ ಸಂಕ್ರಾಂತಿಯಂದು ಈ ಸೂರ್ಯ ಮಂತ್ರ ಪಠಣ ಮಾಡಿದ್ರೆ ಕಷ್ಟಗಳೆಲ್ಲ ಮಾಯ!

By Suvarna News  |  First Published Jul 15, 2022, 11:36 AM IST

ಜುಲೈ 16ರಂದು ಕರ್ಕ ಸಂಕ್ರಾಂತಿ. ಗ್ರಹಗಳ ರಾಜನಾದ ಸೂರ್ಯದೇವನು ಕರ್ಕಾಟಕ ರಾಶಿಗೆ ಕಾಲಿಡುತ್ತಿದ್ದಾನೆ. ಈ ದಿನ ಕೆಳಗೆ ನೀಡಿರುವ 12 ಸೂರ್ಯ ಮಂತ್ರಗಳನ್ನು ಜಪಿಸುವುದರಿಂದ ನಿಮ್ಮ ಕಷ್ಟಗಳೆಲ್ಲ ಮಾಯವಾಗಿ ಮನೆಯಲ್ಲಿ ಸುಖ ಸಮೃದ್ಧಿ ತುಂಬುತ್ತದೆ. 


ಸೂರ್ಯನು ಗ್ರಹಗಳ ರಾಜ. ಈ ನಮ್ಮ ಭೂಮಿಯನ್ನು ಪೊರೆಯುತ್ತಿರುವವನು. ಭೂಮಿ ಮೇಲಿನ ಪ್ರತಿಯೊಬ್ಬರ ಆರೋಗ್ಯ ಕಾಯುವವನು. ಸೂರ್ಯನ ಆಶೀರ್ವಾದವಿದ್ದರೆ ಆರೋಗ್ಯ, ಆಯಸ್ಸು, ಸಂಪತ್ತು ಎಲ್ಲವೂ ದೊರೆಯುತ್ತದೆ. ನಿಮ್ಮ ಎಲ್ಲ ಕೆಲಸಗಳಲ್ಲಿ ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ಮತ್ತು ದೇಹವನ್ನು ರೋಗ ಮುಕ್ತವಾಗಿಸಲು ಬಯಸಿದರೆ, ಆಗ ಸೂರ್ಯನ ಮಂತ್ರಗಳನ್ನು ನಿಯಮಿತವಾಗಿ ಜಪಿಸುವುದು ಉತ್ತಮ ಫಲಗಳನ್ನು ನೀಡುತ್ತದೆ. ಹಿಂದೂ ಧರ್ಮದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ಸೂರ್ಯನನ್ನು ನಿಯಮಿತವಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ದೇವತೆಯಾಗಿ ಪೂಜಿಸಲಾಗುತ್ತದೆ. ಸೂರ್ಯ ದೇವರನ್ನು ಮೆಚ್ಚಿಸಲು ಉತ್ತಮ ಮಾರ್ಗವೆಂದರೆ ಅವನಿಗೆ ನೀರನ್ನು ಅರ್ಪಿಸುವುದು ಎಂದು ನಂಬಲಾಗಿದೆ.
ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ಮತ್ತು ಸೂರ್ಯನ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಸೂರ್ಯನ ಮಂತ್ರಗಳನ್ನು ನಿಯಮಿತವಾಗಿ ಪಠಿಸುವವನು ಪಾಪಗಳಿಂದ ಮುಕ್ತಿಯೊಂದಿಗೆ ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. 
ಅದರಲ್ಲೂ ಜುಲೈ 16ರಂದು ಕರ್ಕಾಟಕ ಸಂಕ್ರಾಂತಿ. ಸೂರ್ಯನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಕಾಲಿಡುತ್ತಿದ್ದಾನೆ. ಈ ಸಂದರ್ಭದಲ್ಲಿ ಸೂರ್ಯನ ಈ 12 ಮಂತ್ರಗಳನ್ನು ಕರ್ಕ ಸಂಕ್ರಾಂತಿಯಂದು ಜಪಿಸುವ ಮೂಲಕ ಆತನ ಸಂಪೂರ್ಣ ಕೃಪೆಗೆ ಪಾತ್ರರಾಗಿ. 

ಓಂ ಹ್ಮ್ ಮಿತ್ರಯೇ ನಮಃ
ಸೂರ್ಯ ದೇವರ ಮೊದಲ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ, ಒಬ್ಬ ವ್ಯಕ್ತಿಯು ರೋಗಗಳಿಂದ ಮುಕ್ತನಾಗುತ್ತಾನೆ ಮತ್ತು ಧನಾತ್ಮಕ ಶಕ್ತಿಯು ದೇಹದಲ್ಲಿ ನೆಲೆಸುತ್ತದೆ.

Tap to resize

Latest Videos

ಈ ಐದು ರಾಶಿಗಳು ಬೆನ್ನ ಹಿಂದೆ ಮಾತಾಡೋದ್ರಲ್ಲಿ ಎಕ್ಸ್‌ಪರ್ಟ್ಸ್! ಕೊಂಚ ಹುಷಾರಾಗಿರಿ!

ಓಂ ಹರಾಯೈ ನಮಃ
ಸೂರ್ಯ ದೇವರ ಮುಂದೆ ನಿತ್ಯವೂ ಈ ಮಂತ್ರವನ್ನು ಜಪಿಸಿದರೆ ಸಂಪತ್ತಿನ ದಾರಿಗಳು ತೆರೆದುಕೊಳ್ಳುತ್ತವೆ.

ಓಂ ಸೂರ್ಯಾಯ ನಮಃ
ಸೂರ್ಯ ದೇವರ ಈ ಮಂತ್ರದ ನಿಯಮಿತವಾದ ಪಠಣವು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.

ಓಂ ಭಾನವೇ ನಮಃ
ಈ ಮಂತ್ರವನ್ನು ಪಠಿಸುವುದರಿಂದ ದೈಹಿಕ ನೋವುಗಳಿಂದ ಮುಕ್ತಿ ಹಾಗೂ ರೋಗ ದೋಷಗಳಿಂದ ಮುಕ್ತಿ ಸಿಗುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸುವಾಗ ನೀವು ಈ ಮಂತ್ರವನ್ನು ಜಪಿಸಬೇಕು.

ಓಂ ಪ್ರಿಯ ಖಗೇ ನಮಃ
ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಬುದ್ಧಿಶಕ್ತಿಯು ಅಭಿವೃದ್ಧಿಗೊಳ್ಳುತ್ತದೆ ಮತ್ತು ದೇಹದ ಶಕ್ತಿಯು ಹೆಚ್ಚಾಗುತ್ತದೆ. ಈ ಮಂತ್ರವನ್ನು ಪಠಿಸುವ ಮೂಲಕ, ಒಬ್ಬ ವ್ಯಕ್ತಿಯು ಶತ್ರುಗಳ ವಿರುದ್ಧ ಸತತ ಗೆಲುವು ಕಾಣಬಹುದು.

ಓಂ ಹ್ರೀಂ ಪೂಷಣೇ ನಮಃ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಮಂತ್ರವನ್ನು ನಿಯಮಿತವಾಗಿ ಪಠಿಸುವ ವ್ಯಕ್ತಿಯ ಶಕ್ತಿ ಮತ್ತು ತಾಳ್ಮೆ ಹೆಚ್ಚುತ್ತದೆ. ಸೂರ್ಯದೇವನ ಕೃಪೆಯಿಂದ ಮನುಷ್ಯನ ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳತೊಡಗುತ್ತದೆ.

ಓಂ ಹಿರಣ್ಯಗರ್ಭಾಯ ನಮಃ
ಸೂರ್ಯದೇವನ ಈ ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಯು ಜ್ಞಾನವನ್ನು ಪಡೆಯುತ್ತಾನೆ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಈ ಮಂತ್ರವು ನಿಮಗೆ ಪ್ರಯೋಜನಕಾರಿಯಾಗಿದೆ.

ಓಂ ಮರೀಚೀ ನಮಃ
ಈ ಮಂತ್ರದ ಪಠಣವು ನಿಮ್ಮನ್ನು ಯಾವುದೇ ದೊಡ್ಡ ಅಡಚಣೆಯಿಂದ ಮುಕ್ತಗೊಳಿಸುತ್ತದೆ ಮತ್ತು ಯಾವುದೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಯನ್ನು ಹೊರಬರಲು ಸಹಾಯ ಮಾಡುತ್ತದೆ.

ಜುಲೈನಲ್ಲಿ ಗುರು ವಕ್ರಿ; ಈ ರಾಶಿಗಳಿಗೆ 4 ತಿಂಗಳು ಯಶಸ್ಸಿನ ಕಾಲ

ಓಂ ಆದಿತ್ಯಾಯ ನಮಃ
ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯು ತನ್ನ ದೊಡ್ಡ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಮಂತ್ರವು ವ್ಯಕ್ತಿಗೆ ಹಣ ಗಳಿಸುವ ಮಾರ್ಗವನ್ನು ತೆರೆಯುತ್ತದೆ.

ಓಂ ಸವಿತ್ರೇ ನಮಃ
ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಕೀರ್ತಿಯು ಹೆಚ್ಚಾಗುತ್ತದೆ ಮತ್ತು ಅವನು ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಈ ಮಂತ್ರವನ್ನು ಪಠಿಸುವುದರಿಂದ ಸೂರ್ಯದೇವನ ವಿಶೇಷ ಅನುಗ್ರಹ ದೊರೆಯುತ್ತದೆ.

ಓಂ ಅರ್ಕೇ ನಮಃ
ಸೂರ್ಯನ ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.

ಓಂ ಭಾಸ್ಕರಾಯೈ ನಮಃ
ಈ ಮಂತ್ರದ ಪಠಣವು ವ್ಯಕ್ತಿಯ ಎಲ್ಲಾ ಆಂತರಿಕ ಮತ್ತು ಬಾಹ್ಯ ದೇಹದ ಭಾಗಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಜಪಿಸುವ ವ್ಯಕ್ತಿಯು ರೋಗಗಳಿಂದ ಮುಕ್ತಿಯನ್ನು ಪಡೆಯುತ್ತಾನೆ.
 

click me!