ಅನ್ನಪೂರ್ಣೆಯ ವಾಸ ಸ್ಥಾನ ಅಡುಗೆ ಮನೆ ಕ್ಲೀನ್ ಇಲ್ಲವೆಂದರೆ ದುಡ್ಡಿಲ್ಲವಾಗುತ್ತಷ್ಟೇ!

By Suvarna NewsFirst Published Oct 2, 2023, 10:24 AM IST
Highlights

ಮನೆಯಲ್ಲಿ ನಾವು ಮಾಡುವ ಅನೇಕ ಎಡವಟ್ಟುಗಳು ನಮ್ಮ ಹಣಕಾಸಿನ ಪ್ರಗತಿಗೆ ತೊಂದರೆಯೊಡ್ಡಬಹುದು. ಮನೆಯ ಅಡುಗೆ ಕೋಣೆ ಹಣಕಾಸು ಅಭಿವೃದ್ಧಿಯ ದ್ಯೋತಕವಾಗಿದ್ದು, ಇದನ್ನು ಎಂದಿಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು. 
 

ಮನುಷ್ಯನ ನಿರ್ಧಾರಗಳೇ ಎಲ್ಲದಕ್ಕೂ ಮೂಲ ಎಂದು ಮೇಲ್ನೋಟಕ್ಕೆ ಭಾಸವಾದರೂ ನಮ್ಮ ಕೈ ಮೀರಿದ ಅದೆಷ್ಟೋ ಅಂಶಗಳ ಪ್ರಭಾವ ಇದ್ದೇ ಇರುತ್ತದೆ. ಅವುಗಳಿಂದಾಗಿಯೂ ನಮ್ಮ ಬದುಕಿನಲ್ಲಿ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಅವು ನಮ್ಮ ಅರಿವಿಗೆ ನಿಲುವುದಿಲ್ಲ. ಅಂತಹ ಸಮಯದಲ್ಲಿ ಸಹಾಯಕ್ಕೆ ಒದಗುವುದೇ ಜ್ಯೋತಿಷ್ಯ ಶಾಸ್ತ್ರ. ಸಂಕಷ್ಟಗಳಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರ ಸಾಕಷ್ಟು ನೆರವು ನೀಡುತ್ತದೆ. ಜೀವನದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ದಾರಿದೀಪದಂತೆ ಮಾರ್ಗದರ್ಶನ ಮಾಡುತ್ತದೆ. ಜತೆಗೆ, ನಮ್ಮ ಅಭ್ಯುದಯ, ಪ್ರಗತಿಗೆ ನಮ್ಮದೇ ಕಾರ್ಯಗಳ ಕೊಡುಗೆಯೂ ಸಾಕಷ್ಟಿರುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅವುಗಳ ಬಗ್ಗೆಯೂ ಈ ಶಾಸ್ತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಾವು ಮಾಡುವ ದೈನಂದಿನ ಕೆಲಸ ಕಾರ್ಯಗಳ ಫಲವಾಗಿ ನಮ್ಮ ಉನ್ನತಿ ಹಾಗೂ ಅವನತಿ ಉಂಟಾಗಬಹುದು. ಹಣಕಾಸು ಸಮಸ್ಯೆ ತಲೆದೋರಬಹುದು. ಮುಖ್ಯವಾಗಿ, ಕೆಲವು ಅಭ್ಯಾಸಗಳು ಹಣಕಾಸು ಬೆಳವಣಿಗೆಗೆ ತಡೆ ಒಡ್ಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನುಷ್ಯನ ಹಣಕಾಸು ಸ್ಥಿತಿಗತಿಯ ಪ್ರಗತಿಗೆ ಕೆಲವು ಸಂಗತಿಗಳು ಬಹುದೊಡ್ಡ ಕೊಡುಗೆ ನೀಡುತ್ತವೆ. ಅವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

•    ಮನೆಯ ನೈರುತ್ಯ (South-West) ದಿಕ್ಕನ್ನು ಕಡೆಗಣಿಸುವುದು
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ನೈರುತ್ಯ ದಿಕ್ಕು (Direction) ಮನೆಯ ಹಣಕಾಸು ಸ್ಥಿರತೆ (Financial Stability) ಮತ್ತು ಪ್ರಗತಿಯನ್ನು (Development) ಪ್ರತಿನಿಧಿಸುತ್ತದೆ. ಹೀಗಾಗಿ, ಈ ದಿಕ್ಕಿನ ಪ್ರಭಾವ ಹಣಕಾಸು ಸ್ಥಿತಿಗತಿಯ ಮೇಲೆ ಉಂಟಾಗುತ್ತದೆ. ಈ ದಿಕ್ಕಿನಲ್ಲಿ ಏನೇನು ಇರಿಸಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ.  ಈ ದಿಕ್ಕಿನಲ್ಲಿ ಹಳೆಯ ವಸ್ತುಗಳನ್ನು ಸೇರಿಸಿಡುವುದು, ಧೂಳು, ಕಸ ತುಂಬಿರುವುದು, ಸ್ವಚ್ಛತೆ ಇಲ್ಲದಿರುವುದರಿಂದ ಹಣಕಾಸು ಪ್ರಗತಿಗೆ (Prosperity) ಅಡ್ಡಿಯಾಗುತ್ತದೆ. ಹೀಗಾಗಿ, ನೈರುತ್ಯ ದಿಕ್ಕಿನಲ್ಲಿ ಅಡೆತಡೆಯಿಲ್ಲದೆ ಎನರ್ಜಿ (Energy) ಹರಿಯುವಂತಾಗಲು ಈ ಭಾಗವನ್ನು ಶುದ್ಧವಾಗಿಡಿ. ಬೆಳಕಿನಿಂದ (Lit) ಕೂಡಿರುವಂತೆ ನೋಡಿಕೊಳ್ಳಿ. ಭಾರದ ವಸ್ತುಗಳನ್ನು ಪೇರಿಸಿಡುವುದು ಬೇಡ. ಜತೆಗೆ, ಸಂಪತ್ತನ್ನು (Wealth) ಸೂಚಿಸುವ ಯಾವುದಾದರೂ ಸಂಕೇತವನ್ನು ಇಲ್ಲಿಡಿ. ಪಿಗ್ಗಿ ಬ್ಯಾಂಕ್, ಮನಿ ಪ್ಲಾಂಟ್ ಇಡಬಹುದು. ಇದರಿಂದ ಧನಾತ್ಮಕ (Positive) ಶಕ್ತಿ ಸಂಚಾರವಾಗಲು ಅನುಕೂಲ.

Latest Videos

ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!

•    ಸಂಘಟಿತ ಹಣಕಾಸು, ಅನಿಯಂತ್ರಿತ ವೆಚ್ಚ
ಜ್ಯೋತಿಷ್ಯ ಶಾಸ್ತ್ರದಲ್ಲೂ (Astrology) ಈ ಅಂಶಕ್ಕೆ ಒತ್ತು ನೀಡಲಾಗಿದೆ. ಅದೆಂದರೆ, ಹಣಕಾಸಿಗೆ ಸಂಬಂಧಿಸಿದ ಎಲ್ಲ ಲೆಕ್ಕಾಚಾರಗಳು ವ್ಯವಸ್ಥಿತವಾಗಿರಬೇಕು ಹಾಗೂ ಖರ್ಚು-ವೆಚ್ಚ, ಆದಾಯದಲ್ಲಿ ಸಮತೋಲನವಿರಬೇಕು. ಹಣಕಾಸು ಯೋಜನೆ ಅತ್ಯಗತ್ಯ. ಹಣಕಾಸು ಅಸ್ತವ್ಯಸ್ತವಾಗಿದ್ದರೆ (Disorganise) ಲಕ್ಷೀ ಪೂಜೆ ಮಾಡುವ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಬೇಕು. 

•    ಹರಡಿರುವ ಸಾಮಾನು (Cluttered Things)
ಕೆಲವರ ಮನೆಯಲ್ಲಿ ಎಲ್ಲ ಕಡೆಯಲ್ಲೂ ಸಾಮಾನುಗಳು ಹರಡಿರುತ್ತವೆ. ಇದರಿಂದ ಎನರ್ಜಿ ಹರಿಯುವಿಕೆಗೆ ಸಮಸ್ಯೆಯಾಗುತ್ತದೆ. ಬೇಡದ ವಸ್ತುಗಳನ್ನು ಇಟ್ಟುಕೊಳ್ಳುವುದು ಸರಿಯಲ್ಲ. ನೈಸರ್ಗಿಕವಾದ ಸಾಮರಸ್ಯ, ಹಣಕಾಸು ಪ್ರಗತಿಗೆ ವಾಸ್ತು ಶಾಸ್ತ್ರದ ಮೌಲ್ಯಗಳನ್ನು ಅನುಸರಿಸಬೇಕು. 

•    ಅಡುಗೆ ಮನೆಯ ಸ್ವಚ್ಛತೆ (Clean)
ಅಡುಗೆ ಮನೆ ಎಂದಿಗೂ ಸ್ವಚ್ಛವಾಗಿರಬೇಕು. ಅಲ್ಲಿ ಹೆಚ್ಚು ಬೆಳಕಿರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಡುಗೆ ಮನೆ ಪ್ರಗತಿ ಹಾಗೂ ಆರೈಕೆಯ ದ್ಯೋತಕ. ಇಲ್ಲಿ ಸ್ವಚ್ಛತೆಗೆ ಆದ್ಯತೆ ಇಲ್ಲವಾದರೆ, ಹಣಕಾಸು ಅಭಿವೃದ್ಧಿಯೂ (Growth) ಕುಂಠಿತವಾಗುತ್ತದೆ. 

ಯಾರು ಹೆಚ್ಚು ಮಹತ್ವಾಕಾಂಕ್ಷಿಗಳು? ನಿಮ್ಮ ಜನ್ಮರಾಶಿ ಪ್ರಕಾರ ಚೆಕ್‌ ಮಾಡಿ!

•    ಕನ್ನಡಿ (Mirror) ಮತ್ತು ನೀರಿನ ಚಿತ್ರಗಳಿಗೆ ತಪ್ಪು ಸ್ಥಳ
ತಪ್ಪಾದ ಸ್ಥಳದಲ್ಲಿ ಕನ್ನಡಿ ಮತ್ತು ನೀರಿನ ಚಿತ್ರಗಳನ್ನು (Watery Image) ಇಡುವುದರಿಂದ ಹಣಕಾಸು ಸ್ಥಿತಿಗತಿಯಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಕ್ವೇರಿಯಂ ಇಟ್ಟುಕೊಂಡಿದ್ದರೆ ಚೆನ್ನಾಗಿ ನೋಡಿಕೊಳ್ಳಬೇಕು. ಇವುಗಳ ಸ್ಥಾನ ಸರಿಯಾಗಿದ್ದರೆ ಮನೆಯಲ್ಲಿ ಧನಾತ್ಮಕ ಹಣಕಾಸು ಕಂಪನವಿರುತ್ತದೆ. 

click me!