ಹೆಣ್ಣಿನ ಕಡೆಗೆ ಹುಡುಗರ ಆಕರ್ಷಣೆ ಸಹಜ. ಆದರೂ ಕೆಲ ಹುಡುಗಿಯರು ಯಾವುದೋ ವಿಶೇಷ ಕಾರಣಗಳಿಂದಾಗಿ ಇತರ ಹುಡುಗಿಯರಿಗಿಂತ ಹೆಚ್ಚು ಆಕರ್ಷಕವಾಗಿರುತ್ತಾರೆ. ಇದಕ್ಕೆ ಅವರ ರಾಶಿಚಕ್ರವೂ ಕಾರಣವಿರಬಹುದು.
ಪುರುಷರು(men) ಮಹಿಳೆಯರ ಕಡೆಗೆ ಆಕರ್ಷಿತ(Attract)ರಾಗುವುದು ಸಹಜ. ಕೆಲ ಹುಡುಗಿಯರು ರೂಪದಿಂದ ಆಕರ್ಷಿಸಿದರೆ ಮತ್ತೆ ಕೆಲವರು ಗುಣದಿಂದ. ಇನ್ನೂ ಕೆಲವರಲ್ಲಿ ಈ ಎರಡೂ ಇರುತ್ತದೆ. ಮತ್ತೂ ಕೆಲ ಹೆಣ್ಣುಮಕ್ಕಳು ಈ ಗುಣಗಳೊಂದಿಗೆ ಅಗಾಧ ಪ್ರತಿಭೆ(talent) ಹೊಂದಿರುತ್ತಾರೆ. ಕೆಲ ಹುಡುಗಿಯರು ಅಂಥ ರೂಪವತಿಯರಲ್ಲದಿದ್ದರೂ ತಮ್ಮ ಪ್ರತಿಭೆ, ಆತ್ಮವಿಶ್ವಾಸ, ಸಾಮರ್ಥ್ಯದಿಂದ ಎಂಥವರನ್ನೂ ಸೆಳೆಯುತ್ತಾರೆ. ಮತ್ತೆ ಕೆಲವರು ಬುದ್ಧಿವಂತಿಕೆಯ ಕಳೆಯಿಂದ ಹೊಳೆಯುತ್ತಾರೆ. ಮತ್ತೆ ಕೆಲವರು ಏನೇ ಮಾಡಿದರೂ ನಡೆ ನುಡಿ ಪ್ರತಿಯೊಂದು ಅದು ಹೇಗೋ ಹೆಚ್ಚು ಆಕರ್ಷಕವೆನಿಸುತ್ತದೆ. ಒಟ್ನಲ್ಲಿ ಕೆಲ ಹುಡುಗಿಯರಿಗೆ ಬಹಳ ಹುಡುಗರು ಆಕರ್ಷಿತರಾಗುತ್ತಾರೆ. ಅಷ್ಟೇ ಅಲ್ಲ, ಅನಾಯಾಸವಾಗಿ ತಮ್ಮ ಜುಟ್ಟನ್ನು ಈ ಹುಡುಗಿಯರ ಕೈಗಿಡುತ್ತಾರೆ ಪುರುಷರು. ಅಂಥಾ ಸೆಳೆತ ಇವರಲ್ಲಿರುತ್ತದೆ. ಇದಕ್ಕೆ ಅವರ ರಾಶಿ ಚಕ್ರಗಳು(zodiac signs) ಕೂಡಾ ಕಾರಣವಾಗಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ?
ಜ್ಯೋತಿಷ್ಯದ ಆಧಾರದ ಮೇಲೆ, ಕೆಲವು ರಾಶಿಚಕ್ರ ಚಿಹ್ನೆಗಳ ಮಹಿಳೆಯರು ಬಹಳಷ್ಟು ಪುರುಷರನ್ನು ಆಕರ್ಷಿಸುತ್ತಾರೆ ಮತ್ತು ಅವರ ಹೃದಯವನ್ನು ಆಳುತ್ತಾರೆ. ಈ ಆಕರ್ಷಕ ಹೆಣ್ಣಿನ ರಾಶಿಗಳು ಯಾವುವು ನೋಡೋಣ.
ಈ ರಾಶಿಯವರಷ್ಟು ನಿಷ್ಠೆಯ ಸಂಗಾತಿ ಸಿಕ್ಕರೆ ಅಪನಂಬಿಕೆಯ ಮಾತೇ ಇಲ್ಲ!
ವೃಷಭ ರಾಶಿ(Taurus)
ಈ ಚಿಹ್ನೆಯಡಿಯಲ್ಲಿ ಜನಿಸಿದ ಹೆಣ್ಣುಮಕ್ಕಳು ಬಹುಕಾಂತೀಯರಾಗಿರುತ್ತಾರೆ. ಇದು ಪುರುಷರನ್ನು ಹುರಿದುಂಬಿಸುತ್ತದೆ. ಈ ರಾಶಿಚಕ್ರ ಚಿಹ್ನೆಯ ಸ್ತ್ರೀಯರು ಆಕರ್ಷಕ ಮತ್ತು ಬುದ್ಧಿವಂತರು. ಅವರು ತಮ್ಮದೇ ಆದ ನೈತಿಕತೆಯನ್ನು ಹೊಂದಿರುತ್ತಾರೆ. ನೈತಿಕ ಪ್ರಜ್ಞೆ ಹೆಚ್ಚು. ಆದ್ದರಿಂದ ಬಹಳಷ್ಟು ಪುರುಷರು ಅವರೊಂದಿಗೆ ಬದುಕಲು ಸಾಧ್ಯವಿಲ್ಲ. ಅವರೊಂದಿಗೆ ಇರಲು, ನೀವು ಹೆಚ್ಚಿನ ತಿಳುವಳಿಕೆ ಮತ್ತು ಸ್ವಯಂ ನಿಯಂತ್ರಣವನ್ನು ತೋರಿಸಬೇಕು. ಅವರ ನಿರಾತಂಕದ ಜೀವನಶೈಲಿ ಪುರುಷರನ್ನು ಆಕರ್ಷಿಸುತ್ತದೆ. ಎಲ್ಲಿ ಹೇಗಿರಬೇಕೆಂಬ ಜ್ಞಾನ, ಯಾರೊಂದಿಗೆ ಹೇಗೆ ವರ್ತಿಸಬೇಕೆಂಬ ಪ್ರಜ್ಞೆ ಇವರಲ್ಲಿ ಚೆನ್ನಾಗಿರುತ್ತದೆ. ವೃಷಭ ರಾಶಿಯ ಸ್ತ್ರೀಯರು ತಮ್ಮನ್ನು ನಿಭಾಯಿಸುವ ಅಥವಾ ನಿಯಂತ್ರಿಸುವ ಪುರುಷರನ್ನು ಆಯ್ಕೆ ಮಾಡುತ್ತಾರೆ.
ಮಿಥುನ ರಾಶಿ(Gemini)
ಈ ಚಿಹ್ನೆಯಡಿಯಲ್ಲಿ ಜನಿಸಿದ ಹೆಣ್ಣುಮಕ್ಕಳನ್ನು ಅಪ್ಪಟ ರತ್ನವೆಂದು ಪರಿಗಣಿಸಲಾಗುತ್ತದೆ. ಅವರು ಬಹಳ ಸ್ನೇಹಪರ ನಡವಳಿಕೆಯನ್ನು ಹೊಂದಿರುತ್ತಾರೆ. ಸಂತರನ್ನೂ ಬಿಡದೆ ಕಾಡುವ, ವಶಪಡಿಸಿಕೊಳ್ಳುವ ಮೋಹಿನಿ ಮತ್ತು ರಂಭಾರಂತೆ, ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ಪುರುಷರನ್ನು ಆಕರ್ಷಿಸುತ್ತಾರೆ. ವಯಸ್ಸಾಗಿದ್ದರೂ, ಈ ಹೆಣ್ಣುಮಕ್ಕಳು ಬಹುಕಾಂತೀಯವಾಗಿ ಮತ್ತು ತಾರುಣ್ಯದಿಂದ ಕಾಣುತ್ತಾರೆ. ಇವರು ನೋಡಲು ಹೇಗೇ ಇದ್ದರೂ ತಮ್ಮ ಚಟಪಟ ಮಾತಿನಿಂದ, ಕಾರ್ಯವೈಖರಿಯಿಂದ, ಅಹಂ ಇಲ್ಲದ ನಡುವಳಿಕೆಯಿಂದ ಎಲ್ಲರಿಗೂ ಇಷ್ಟವಾಗುತ್ತಾರೆ.
Chanakya Niti : ಇಂಥ ಮಹಿಳೆಯರನ್ನು ಎಂದೂ ನಂಬಬೇಡಿ!
ವೃಶ್ಚಿಕ ರಾಶಿ(Scorpio)
ಈ ಚಿಹ್ನೆಯಡಿಯಲ್ಲಿ ಜನಿಸಿದ ಹೆಣ್ಣುಮಕ್ಕಳು ತಮ್ಮ ಸೊಬಗು, ವರ್ತನೆ ಮತ್ತು ಮಾತನಾಡುವ ವಿಧಾನದಿಂದ ಪುರುಷರನ್ನು ಆಕರ್ಷಿಸುತ್ತಾರೆ. ಈ ಗುಣಲಕ್ಷಣಗಳಿಂದಾಗಿ, ಅವರು ಪುರುಷರ ಹೃದಯವನ್ನು ಆಳುತ್ತಾರೆ. ಆದರೆ, ಅಂತಹ ಹೆಣ್ಣುಮಕ್ಕಳನ್ನು ಮೆಚ್ಚಿಸುವುದು ಕಷ್ಟ, ಏಕೆಂದರೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ, ಈ ಮಹಿಳೆಯರು ಸಾಕಷ್ಟು ತಾರ್ಕಿಕತೆಯ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಹೆಚ್ಚು ಗುಟ್ಟುಗಳನ್ನು ಒಳಗೇ ಕಾಪಾಡಿಕೊಳ್ಳುತ್ತಾರೆ. ತಮ್ಮ ಮನಸ್ಸನ್ನು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಇವರು ಸೌಮ್ಯವಾಗಿ ವರ್ತಿಸಿದರೂ ತಮ್ಮ ಮಾತೇ ನಡೆಯುವಂತೆ ಮಾಡುವ ಹುಟ್ಟಾ ಸ್ವಭಾವದವರು. ಇದೇ ಹುಡುಗರಲ್ಲಿ ಕುತೂಹಲ ಹೆಚ್ಚಿಸಿ ಆಕರ್ಷಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.