ಚಾತುರ್ಮಾಸ್ಯ ದೀಕ್ಷೆ ಸ್ವೀಕಾರ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೀಕ್ಷೆ ಸ್ವೀಕಾರಕ್ಕೂ ಪೂರ್ವದಲ್ಲಿ ಶ್ರೀಗಳು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಹಾಗೂ ಶ್ರೀವಾದೀಂದ್ರ ತೀರ್ಥರು ಸೇರಿದಂತೆ ಶ್ರೀಮಠದಲ್ಲಿರುವ ಎಲ್ಲ ಯತಿಗಳ ಬೃಂದಾವನಳಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಸ್ವಾಮಿಗಳು ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು.
ರಾಯಚೂರು(ಜು.16): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಮ್ಮ 11ನೇ ಚಾತುರ್ಮಾಸ ದೀಕ್ಷೆಯನ್ನು ಶನಿವಾರ ಸ್ವೀಕರಿಸಿದರು.
ಚಾತುರ್ಮಾಸ್ಯ ದೀಕ್ಷೆ ಸ್ವೀಕಾರ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೀಕ್ಷೆ ಸ್ವೀಕಾರಕ್ಕೂ ಪೂರ್ವದಲ್ಲಿ ಶ್ರೀಗಳು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಹಾಗೂ ಶ್ರೀವಾದೀಂದ್ರ ತೀರ್ಥರು ಸೇರಿದಂತೆ ಶ್ರೀಮಠದಲ್ಲಿರುವ ಎಲ್ಲ ಯತಿಗಳ ಬೃಂದಾವನಳಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಸ್ವಾಮಿಗಳು ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು.
undefined
ವಚನದ ಕಟ್ಟುಗಳಿದ್ದ ಪಲ್ಲಕ್ಕಿ ಹೊತ್ತ ಮಹಿಳೆಯರು: ಮೆರವಣಿಗೆಗೆ ಶ್ರೀಗಳಿಂದ ಚಾಲನೆ
ಚಾತುರ್ಮಾಸದ ನಿಮಿತ್ತ ಶ್ರೀಮಠದಲ್ಲಿ ನಿರಂತರವಾಗಿ ಆಧಾತ್ಮಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ವೇಳೆ ಕುಂದಾಪುರದ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಲಕ್ಷೀಂದ್ರ ತೀರ್ಥರು ಮಂತ್ರಾಲಯದಲ್ಲಿಯೇ ಚಾತುರ್ಮಾಸದ ದೀಕ್ಷೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಿದ್ದರು.